Asianet Suvarna News Asianet Suvarna News

ರಾಮಮಂದಿರ ಹೋರಾಟದ ಇಬ್ಬರು ಅದ್ವೈರ್ಯು ಗಳು, ಎಂದೂ ಮರೆಯದ ಚೇತನ

ರಾಮ ಮಂದಿರ ಹೋರಾಟದ ಇಬ್ಬರು ಅದ್ವೈರ್ಯು ಗಳು/ ಇಬ್ಬರು ವ್ಯಕ್ತಿಗಳು ನೆನಪಾಗುತ್ತಾರೆ/ ಒಂದಷ್ಟು ಇತಿಹಾಸದ ಪುಟಗಳು/ ರಾಮಮಂದಿರ ಹೋರಾಟದ ದಿನಗಳು

India Gate ram mandir in ayodhya history two unforgettable personality
Author
Bengaluru, First Published Aug 4, 2020, 8:34 PM IST

ಇವತ್ತು ಸುಪ್ರೀಂ ಕೋರ್ಟ್ ತೀರ್ಪಿನ ಪರಿಣಾಮವಾಗಿ ಅಯೋಧ್ಯೆಯ ಜನ್ಮ ಭೂಮಿಯಲ್ಲಿ ಪ್ರಭು ಶ್ರೀ ರಾಮ ಚಂದ್ರನ ಮಂದಿರದ ಅಡಿಗಲ್ಲು ನಡೆಯುತ್ತಿರುವಾಗ ಈ ಹೋರಾಟವನ್ನು ಜನ ಮಾನಸಕ್ಕೆ ತೆಗೆದು ಕೊಂಡು ಹೋದ ಇಬ್ಬರು ವ್ಯಕ್ತಿ ಗಳು ನೆನಪಾಗುತ್ತಾರೆ.

ಮೊದಲನೇ ಯವರು ನಿಸ್ಸಂದೇಹವಾಗಿ ಅಶೋಕ ಸಿಂಘಾಲ.1984 ರಲ್ಲಿ ಹಿಂದೂತ್ವದ ಪುನರುತ್ಥಾನ ಕ್ಕಾಗಿ ರಾಮ ಮಂದಿರ ಹೋರಾಟವನ್ನು ಕೈಗೆತ್ತಿ ಕೊಳ್ಳಬೇಕು ಎಂದು ಸೂಚಿಸಿದವರೇ ಅಶೋಕ ಸಿಂಘಾಲ.ಬನಾರಸ್ ಹಿಂದೂ ವಿಶ್ವ ವಿದ್ಯಾಲಯ ದಿಂದ 1940 ರಲ್ಲಿ ಎಂಜಿನಿಯರಿಂಗ್ ಪದವಿ ಪಡೆದ ಪ್ರತಿಭಾವಂತ.ತಂದೆ ಆಗಿನ ಕಾಲದಲ್ಲಿ ಯು ಪಿ ಯ ಚೀಫ್ ಎಂಜಿನಿಯರ್ ಆಗಿ ಶ್ರೀಮಂತ ಪರಿವಾರದಿಂದ ಬಂದು ಕೂಡ ಎಲ್ಲವನ್ನು ಬದಿಗಿಟ್ಟು ಸಂಘದ ಪ್ರಚಾರಕರಾದವರು.ರಾಮ ಮಂದಿರ ಆಂದೋಲನವನ್ನು 1984 ರಲ್ಲಿ ದಿಲ್ಲಿಯಲ್ಲಿ ಸಂತ ಸಮಾವೇಶ ನಡೆಸಿ ಮೊದಲು ಘೋಷಿಸಿದವರೆ ಅಶೋಕ ಸಿಂಘಾಲರು.ವಿಶ್ವ ಹಿಂದೂ ಪರಿಷತ್ ನ ಹೋರಾಟದ ಕಾರಣದಿಂದಲೇ ಬಿಜೆಪಿ ಮತ್ತು ಅಡ್ವಾಣಿ ರಾಮ ಮಂದಿರ ಹೋರಾಟದಲ್ಲಿ ಧುಮುಕಿದರು.ಪೇಜಾವರ ಶ್ರೀ ಗಳಿಂದ ಹಿಡಿದು ರಾಮ ಚಂದ್ರ ಪರಮ ಹಂಸರವರೆಗೆ ದೇಶದ ಉದ್ದಗಲಕ್ಕೂ ಸಾಧು ಸಂತರನ್ನು ರಾಮ ಮಂದಿರ ಹೋರಾಟಕ್ಕೆ ಕರೆದು ಕೊಂಡು ಬಂದವರು ಸಿಂಘಾಲರು.ಒಂದು ಕಡೆ ಬಿಜೆಪಿ ಹೋರಾಟದ ಚುಕ್ಕಾಣಿ ಹಿಡಿದಾಗ ಅಯೋಧ್ಯೆಯಲ್ಲಿ ಕಾರಸೇವಕ ಪುರಂ ನಲ್ಲಿ ಶಿಲ್ಪಿ ಗಳನ್ನು ಕರೆದು ಕೊಂಡು ಬಂದು ಕಂಬ ಗಳನ್ನು ತಯಾರಿಸಿ ಇನ್ನೊಂದು ಕಡೆ ಅಲಹಾಬಾದ್ ಹೈ ಕೋರ್ಟ್ ಸುಪ್ರೀಂ ಕೋರ್ಟ್ ನಲ್ಲಿ ಕಾನೂನು ಹೋರಾಟ ರೂಪಿಸಿದ್ದು ಅಶೋಕ ಸಿಂಘಾಲರು.

ರಾಮಮಂದಿರ ಹೋರಾಟ ಶುರುವಾಗಿದ್ದು ಹೇಗೆ?

ಆದರೆ ಅಶೋಕ ಸಿಂಘಾಲರು ಮತ್ತು ವಾಜಪೇಯಿ ಅವರಿಗೆ ಅಷ್ಟಕಷ್ಟೇ.ಅಟಲ್ ಜಿ ಪ್ರಧಾನಿ ಆಗಿದ್ದಾಗ ಮಂದಿರಕ್ಕಾಗಿ ಆಮರಣ ಉಪವಾಸ ಕುಳಿತ ಅಶೋಕ ಸಿಂಘಾಲರನ್ನು ಬಲವಂತವಾಗಿ ಅಲ್ಲಿಂದ ಎಬ್ಬಿಸಲಾಯಿತು ಅನ್ನುವ ಕಾರಣಕ್ಕೆ ಸಿಂಘಾಲ ತೀರ ಸಿಟ್ಟು ಗೊಂಡಿದ್ದರು.ಅಷ್ಟೇ ಅಲ್ಲ ನೇರವಾಗಿ ಅಟಲ್ ಜಿ ನಿವೃತ್ತಿಯಾಗಿ ಅಡ್ವಾಣಿ ಅವರಿಗೆ ಅಧಿಕಾರ ಬಿಟ್ಟು ಕೊಡಬೇಕು ಎಂದು ಹೇಳಿದ್ದರು.

ರಾಮ ಮಂದಿರ ಹೋರಾಟದ ಇನ್ನೊಬ್ಬರು ಅದ್ವೈರ್ಯು ಎಂದರೆ ರಾಮ ಜನ್ಮ ಭೂಮಿ ನ್ಯಾಸನ ಅಧ್ಯಕ್ಷರಾಗಿದ್ದ ಹಿಂದೂ ಸಂತ ರಾಮ ಚಂದ್ರ ಪರಮ ಹಂಸ.ಪ್ರಭು ಶ್ರೀ ರಾಮನ ಅಪರಿಮಿತ ಭಕ್ತರು.ರಾಮ ಮಂದಿರ ನಿರ್ಮಾಣಕ್ಕೆ ಮೂಲ ಕಾರಣ ಸ್ವಾತಂತ್ರ್ಯ ಸಿಕ್ಕ ನಂತರ 1949 ರಲ್ಲಿ ವಿವಾದಿತ ಕಟ್ಟಡದಲ್ಲಿ ಇಡಲಾದ ಪ್ರಭು ಶ್ರೀ ರಾಮ ಚಂದ್ರ ಮತ್ತು ಸೀತಾ ಮಾತೆಯ ವಿಗ್ರಹಗಳು.ಇದನ್ನು ಇಟ್ಟಿರುವ ಸಂತ ರಲ್ಲಿ ರಾಮ ಚಂದ್ರ ಪರಮ ಹಂಸರು ಕೂಡ ಇದ್ದರು.

ಅಟಲ್ ಜಿ ಸರ್ಕಾರದ ಕಾಲದಲ್ಲಿ ಅಶೋಕ ಸಿಂಘಾಲ ಮತ್ತು ರಾಮಚಂದ್ರ ಪರಮ ಹಂಸರು ಕರಸೇವೆ ಮಾಡಿಯೇ ಮಾಡುತ್ತೇವೆ ಎಂದು ಹಠ ಹಿಡಿದು ಕುಳಿತಾಗ ಕೊನೆಗೆ ಪರಮ ಹಂಸರನ್ನು ಒಪ್ಪಿಸಲು ಸ್ವಯಂ ಪ್ರಧಾನಿ ವಾಜಪೇಯಿ ಈ ಸಂತನ ಜೊತೆ ಮಾತನಾಡಿ ಸಮಾಧಾನ ಪಡಿಸಬೇಕಾಯಿತು

ಕಾಲು ನೋವಿದ್ದರೂ ರಾಜ್ ನಾಥ್ ಲಡಾಖ್ ಪ್ರವಾಸ

ಪರಮ ಹಂಸರು ಅನ್ಸಾರಿಯ ಗೆಳೆತನ 

ಅಯೋಧ್ಯೆಯಲ್ಲಿ ಆಗ ವಿವಾದಿತ ಎನಿಸಿ ಕೊಂಡಿದ್ದ ಭೂಮಿಯಲ್ಲಿ ಮಂದಿರ ನಿರ್ಮಿಸಬೇಕೋ ಬೇಡವೋ ಎಂಬ ಚರ್ಚೆ ದೇಶದ ಬಹುತೇಕ ನಗರಗಳಲ್ಲಿ ಹಿಂಸಾಚಾರಕ್ಕೆ ಕಾರಣವಾಯಿತು.ಆದರೆ 1949 ರಿಂದ ಕೋರ್ಟ್ ನಲ್ಲಿ ಎದುರು ಬದರು ಹೋರಾಡಿದ ರಾಮ ಚಂದ್ರ ಪರಮ ಹಂಸರು ಮತ್ತು ಹಾಶಿಮ್ ಅನ್ಸಾರಿ ನಡುವಿನ ಗೆಳೆತನ ಕ್ಕೆ ಮಾತ್ರ ಕೊನೆಯ ಗಳಿಗೆ ಯ ವರೆಗೂ ಕುಂದು ಬರಲಿಲ್ಲ.

1949 ರಲ್ಲಿ ರಾಮ ಚಂದ್ರ ಪರಮ ಹಂಸರ ನೇತೃತ್ವದಲ್ಲಿ ರಾಮ ಸೀತೆಯರ ಮೂರ್ತಿಗಳು ಆಗಿನ ವಿವಾದಿತ ಕಟ್ಟಡದಲ್ಲಿ ಕಾಣಿಸಿ ಕೊಂಡಾಗ ಮೊಟ್ಟ ಮೊದಲು ಫೈಜಾಬಾದ್ ಕೋರ್ಟ್ ಮೆಟ್ಟಿಲು ಹತ್ತಿದವರು ಹಾಶಿಮ್ ಅನ್ಸಾರಿ.ಆಗ ಹಿಂದುಗಳ ಪರವಾಗಿ ರಾಮ ಲಲ್ಲಾ ನ ಪರವಾಗಿ ಕೋರ್ಟ್ ನಲ್ಲಿ ನಿಂತವರು ರಾಮ ಚಂದ್ರ ಪರಮ ಹಂಸರು.

ಇಬ್ಬರು ಅಯೋಧ್ಯೆಯಿಂದ ಮೊದಲು ಟಾಂಗಾ ನಂತರ ರಿಕ್ಷಾ ದಲ್ಲಿ ಒಟ್ಟಿಗೆ ಫೈಜಾಬಾದ್ ಗೆ ಬರುತ್ತಿದ್ದರಂತೆ.ಕೋರ್ಟ್ ನ ವಾದ ಪ್ರತಿವಾದ ದೇಶದಲ್ಲಿ ಹಿಂದೂ ಮುಸ್ಲಿಮರ ನಡುವೆ ತ್ವೇಶ ಕ್ಕೆ ಕಾರಣವಾದರೂ ಈ ಇಬ್ಬರು ಕಕ್ಷಿದಾರರ ಗೆಳೆತನ ಎಂದು ಮುರಿಯಲಿಲ್ಲ.ಪರಮ ಹಂಸರು ಮುಂದೆ ಭಕ್ತರ ನೆರವಿನಿಂದ ಕಾರು ತೆಗೆದು ಕೊಂಡರು ಕೂಡ ಹಾಶಿಮ್ ಅನ್ಸಾರಿ ಯನ್ನು ಜೊತೆಗೆ ಕರೆದು ಕೊಂಡೆ ಕೋರ್ಟ್ ಗೆ ಹೋಗುತ್ತಿದ್ದರು.

ಮೂಲ ದಾವೇದಾರರಾದ ಹಾಶಿಮ್ ಅನ್ಸಾರಿ ಮತ್ತು ರಾಮ ಚಂದ್ರ ಪರಮ ಹಂಸ ಇಬ್ಬರು ಕೂಡ ಈಗಿಲ್ಲ.ಆದರೆ ಅವರಿಬ್ಬರ ನಡುವಿನ ಕಾನೂನು ಹೋರಾಟ ಇವತ್ತು ಸರ್ವೋಚ್ಚ ನ್ಯಾಯಾಲಯದ ತೀರ್ಪಿನಿಂದ ಸುಖಾಂತ್ಯ ಕಾಣುತ್ತಿದೆ.

 

ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ಇಂಡಿಯಾ ಗೇಟ್, ರಾಮ ಮಂದಿರ ಹೋರಾಟದ ಇಬ್ಬರು ಅದ್ವೈರ್ಯು ಗಳು

 

 

 

Follow Us:
Download App:
  • android
  • ios