ನವದೆಹಲಿ (ಜು. 24): ರಕ್ಷಣಾ ಮಂತ್ರಿ ರಾಜನಾಥ ಸಿಂಗ್‌ ಅವರಿಗೆ ಹೆಚ್ಚು ಚಳಿ ಇರುವ ಪ್ರದೇಶಕ್ಕೆ ಹೋಗಬೇಡಿ, ಮೊಣಕಾಲು ನೋವು ಉಲ್ಬಣ ಆಗಬಹುದು ಎಂದು ವೈದ್ಯರು ಹೇಳಿದ್ದರಂತೆ. 2 ವರ್ಷದ ಹಿಂದೆ ರಾಜನಾಥ್‌ಗೆ ವಿಪರೀತ ಕಾಲು ನೋವು ಬಂದು 21 ದಿನ ಮನೆಯಲ್ಲೇ ಕುಳಿತು ಕೊಳ್ಳಬೇಕಾಗಿತ್ತು.

ವಿಕಾಸ್ ದುಬೆ ಎನ್‌ಕೌಂಟರ್‌ ನಂತರ ಬದಲಾದ ಉ.ಪ್ರ ರಾಜಕೀಯ; ಬ್ರಾಹ್ಮಣರ ಓಲೈಕೆಯಲ್ಲಿ ಪ್ರಿಯಾಂಕ ಗಾಂಧಿ

ಆದರೆ ಈಗ ವೈದ್ಯರು ಬೇಡ ಎಂದರೂ ಕೇಳದೆ ರಾಜನಾಥ್‌ ಮೊದಲು ಲಡಾಖ್‌ಗೆ ಹೋಗಿ ಆಮೇಲೆ ಅಮರನಾಥಕ್ಕೂ ಹೋಗಿ ಬಂದಿದ್ದಾರೆ. ಅವರೇ ಪತ್ರಕರ್ತರ ಬಳಿ ಹೇಳಿಕೊಂಡಿರುವ ಪ್ರಕಾರ ಚಳಿಯಿಂದ ಕಾಲಿಗೆ ಯಾವುದೇ ಸಮಸ್ಯೆ ಆಗಿಲ್ಲ. ಸ್ವಯಂ ಪ್ರಧಾನಿಯೇ ಲೇಹ್‌ಗೆ ಹೋಗಿ ಬಂದ ಮೇಲೆ ರಾಜನಾಥ್‌ ಸಿಂಗ್‌ ಹೋಗಿ ಬರುವುದು ಅನಿವಾರ್ಯವಾಗಿತ್ತು.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ