ಭಾವ್ 2025ರಲ್ಲಿ ಆರ್ಟ್ ಆಫ್ ಲಿವಿಂಗ್ 'ಸೀತಾಚರಿತಂ' ನ ಒಂದು ಇಣುಕು ನೋಟವನ್ನು ಬಿಡುಗಡೆಗೊಳಿಸಿತು. ಈ ಕಾರ್ಯಕ್ರಮದಲ್ಲಿ 500 ಕಲಾವಿದರು ಭಾಗವಹಿಸಿ, ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಪ್ರದರ್ಶಿಸಿದರು.

ಬೆಂಗಳೂರು (ಜ.25): ಭಾರತದ ಅತೀ ದೊಡ್ಡ ಕಲಾ ಮತ್ತು ಸಾಂಸ್ಕೃತಿಕ ಸಮಾವೇಶವಾದ ಭಾವ್ - ದಿ ಎಕ್ಸ್ಪ್ರೆಷನ್ಸ್ 2025ರ ಪ್ರಥಮ ದಿನದಂದು ಆರ್ಟ್ ಆಫ್ ಲಿವಿಂಗ್ "ಸೀತಾಚರಿತಂ" ನ ಒಂದು ಇಣುಕು ನೋಟವನ್ನು ಬಿಡುಗಡೆಗೊಳಿಸಿತು. ಇದು ಭಾರತದ ಅತೀ ದೊಡ್ಡ ನೇರ ಪ್ರದರ್ಶನವಾಗಿರಲಿದ್ದು, 500 ಕಲಾವಿದರು, 30 ನೃತ್ಯಗಳು, ಸಂಗೀತ ಮತ್ತು ಕಲಾರೂಪಗಳನ್ನು ಇದು ಒಳಗೊಂಡಿದೆ. ಈ ನೃತ್ಯ ರೂಪಕವು 180 ದೇಶಗಳಿಗೆ ತೆರಳಲಿದೆ. ಈ ಕಾಲಾತೀತವಾದ ಗ್ರಂಥದ 20 ವಿವಿಧ ಆವೃತ್ತಿಗಳ ಮೇಲೆ ಆಧಾರಿತವಾದ ಈ ಅನುಪಮವಾದ ಸ್ಕ್ರಿಪ್ಟ್ ಅನೇಕ ಸ್ಥಳೀಯ ಭಾಷೆಗಳ ಹಾಡುಗಳನ್ನು ಹೊಂದಿರಲಿದೆ.

ಅಷ್ಟೇ ಅಲ್ಲ, ಭಾರತದ ಶ್ರೀಮಂತ ಸಾಂಸ್ಕೃತಿಕ ಪುಷ್ಪಗುಚ್ಛದ ನಿಜವಾಗಿಯೂ ಎಲ್ಲರನ್ನೂ ಒಳಗೊಳ್ಳುವ ಪ್ರದರ್ಶನ ವಾದ ಭಾವ್ 2025, ಪ್ರಶಾಂತವಾದ ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಕೆಲವು ಭವ್ಯವಾದ ಪ್ರದರ್ಶನಗಳಿಗೆ ಸಾಕ್ಷಿಯಾಯಿತು. ಇದರಲ್ಲಿ ಪಶ್ಚಿಮ ಬಂಗಾಳದ 10 ಟ್ರಾನ್ಸ್‌ಜೆಂಡರ್ ಕಲಾವಿದರ ತಂಡವು, ದೇವಿಯ ಏಳು ರೂಪಗಳ ಗೌರವಾರ್ಥವಾಗಿ ದೃಶ್ಯ ರೋಮಾಂಚಕವಾದ ಭರತನಾಟ್ಯ ಪ್ರದರ್ಶನ ನೀಡಿತು ಮತ್ತು ಸುಧಾರಿತ ಮಾಜಿ ಸೆರೆಮನೆ ಖೈದಿಗಳನ್ನೊಳಗೊಂಡ ಆರ್ಟ್ ಆಫ್ ಲಿವಿಂಗ್‌ನ 'ಔಟ್ ಆಫ್ ಬಾಕ್ಸ್' ಮ್ಯೂಸಿಕ್ ಬ್ಯಾಂಡ್‌ ನೀಡಿದ ಪ್ರದರ್ಶನವು, ಜನಸಮೂಹವನ್ನು ಅವರ ರಾಗಗಳಿಗೆ ನರ್ತಿಸುವಂತೆ ಮಾಡಿತು.

ಇದನ್ನೂ ಓದಿ: ಶ್ರೀ ಶ್ರೀ ಶೈಕ್ಷಣಿಕ ಪ್ರಶಸ್ತಿಗಳು 2025: ಸಮಗ್ರ ಶಿಕ್ಷಣಕ್ಕೆ ಈ ಬಾರಿ ಪ್ರಶಸ್ತಿ ಪಡೆದವರು ಯಾರು?

ಜಾಗತಿಕ ಮಾನವತಾವಾದಿಗಳಾದ, ಆಧ್ಯಾತ್ಮಿಕ ಗುರುಗಳಾದ ಗುರುದೇವ್ ಶ್ರೀ ಶ್ರೀ ರವಿಶಂಕರರು ಸಂಸ್ಕೃತಿಗಳ ಬೃಹತ್ ಉತ್ಸವದ ಮಾರ್ಗದರ್ಶಕರಾಗಿದ್ದು, "ಒಂದು ಸಂಸ್ಕೃತಿ, ಧರ್ಮ ಅಥವಾ ನಾಗರಿಕತೆಯು ಮಾಯವಾದರೂ ಸಹ ಈ ಜಗತ್ತು ಬಡವಾಗುತ್ತದೆ. ಪ್ರತಿಯೊಂದು ಸಂಸ್ಕೃತಿಯೂ ಸಹ ಜಗತ್ತಿನ ಪರಂಪರೆಯ ಒಂದು ಭಾಗ ಮತ್ತು ಅವೆಲ್ಲವನ್ನೂ ಸಂರಕ್ಷಿಸಿ, ಉಳಿಸಬೇಕು" ಎಂದರು.

ಈ ವರ್ಷದ ಭಾವ್ ನಲ್ಲಿ ಭಾಗವಹಿಸಿದ ವೈವಿಧ್ಯಮಯ ಕಲಾವಿದರನ್ನು, ಅರಳುತ್ತಿರುವ ಪ್ರತಿಭೆಗಳನ್ನು, ವಿದ್ವಾನರನ್ನು ಶ್ಲಾಘಿಸಿದ ಭಾರತ ಸರ್ಕಾರದ ಕೇಂದ್ರ ಪ್ರವಾಸ ಹಾಗೂ ಸಂಸ್ಕೃತಿಯ ಮಂತ್ರಿಗಳಾದ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ರವರು, "ಕುಂಭದಲ್ಲಿ ಎಲ್ಲಾ ಜಾತಿಗಳ ಜನರು, ವಿವಿಧ ದೈವಗಳನ್ನು ಪ್ರಾರ್ಥಿಸುವವರು ಒಂದಾಗಿ ಸೇರಿದ್ದಾರೆ. ಈ ಸಾಂಸ್ಕೃತಿಕ ಸಭೆಯಲ್ಲಿ ನನಗೆ ಕಲಾವಿದರ, ಕಲಾ ಸಾಧಕರ ಕುಂಭವು ಕಾಣುತ್ತಿದೆ" ಎಂದರು.

ಈ ತಮ್ಮ ಚೈತನ್ಯಭರಿತವಾದ ಪ್ರದರ್ಶನವನ್ನು ಭಾವ್- ದಿ ಎಕ್ಸ್ಪ್ರೆಷನ್ಸ್ , 2025 ರ ಉದ್ಘಾಟನಾ ಸಮಾರಂಭದಲ್ಲಿ ನೀಡಿದ ನಂತರ ಸುಶಾಂತ್ ದಿವ್ಗಿಕರ್ ರವರು, "ಕಲೆಯು ಎಲ್ಲಾ ಜಾತಿಗಳ, ಧರ್ಮಗಳ ಮತ್ತು ಲಿಂಗದ ಬೇಧವನ್ನು ದಾಟುತ್ತದೆ" ಎಂದು ಹಂಚಿಕೊಂಡರು. ಇದಕ್ಕಿಂತಲೂ ಸತ್ಯವಾದ ಮಾತು ಬೇರೊಂದು ಇರಲು ಸಾಧ್ಯವಿಲ್ಲ.

ಆರ್ಟ್ ಆಫ್ ಲಿವಿಂಗ್ ನ ಅಂತಾರಾಷ್ಟ್ರೀಯ ಕೇಂದ್ರದ ಪ್ರಶಾಂತ ವಾತಾವರಣದಲ್ಲಿ ಭಾವ್ 2025ಯ ಆರಂಭವಾಯಿತು. ಕಾವ್ಯ ಮುರಳೀಧರನ್ ಮತ್ತು ತಂಡದವರಿಂದ ಭರತನಾಟ್ಯ ಪ್ರದರ್ಶನ, ಮೂರು ಪೀಳಿಗೆಗಳನ್ನು ಒಳಗೊಂಡ ಕಥಕ್ ನೃತ್ಯವನ್ನು ನಡೆಸಿಕೊಟ್ಟು, ಪ್ರತಿಯೊಂದು ಪೀಳಿಗೆಯೂ ವೇದಿಕೆಯ ಕೇಂದ್ರ ಭಾಗಕ್ಕೆ ಬಂದು ನರ್ತಿಸಲು ಅವಕಾಶವನ್ನು ಕೊಟ್ಟ ಕಥಕ್ ನೃತ್ಯಗಾರ್ತಿಯಾದ ಮನೀಷ ಸಾಥೆ, 30 ಕಲಾವಿದರನ್ನೊಳಗೊಂಡ ಸಂಗೀತ ಸಾಮ್ರಾಟ ಚಿತ್ರವೀಣ ಎನ್. ರವಿಕಿರಣ್ ರವರ ತಂಡವು ನಡೆಸಿದ ರಾಮಭಜನೆ, ಎಲ್ಲರೂ ನಿಂತು ನರ್ತಿಸುವಂತೆ ಮಾಡಿದ ದಂತೆಕಥೆಯಾದ ಅತುಲ್ ಪುರೋಹಿತ್ ರವರ ಗರ್ಭ ಜಾನಪದ ಸಂಗೀತ, ಹೀಗೆ ವರ್ಣರಂಜಿತವಾದ ಭಾವ್ 2025ರ ಉದ್ಘಾಟನಾ ಸಮಾರಂಭವು ನಡೆಯಿತು. ಇದರೊಡನೆ ಶಕ್ತಿಯುತವಾದ ಛೌನಿ ಯೋಜನೆಯವರಿಂದ ನಡೆದ ಯುದ್ಧಕಲೆ ಮತ್ತು ಜಾನಪದ ನೃತ್ಯದ ಸಂಗಮವಾದ ಮಯುರ್ಬಂಜ್ ಛೌ ನೃತ್ಯವು ಪ್ರತಿಯೊಬ್ಬರನ್ನು ಸೆರೆಹಿಡಿಯಿತು. ಆಯನ ನೃತ್ಯ ಅಕಾಡೆಮಿಯವರ ಮಿಶ್ರಿತ ನೃತ್ಯವು ಎಲ್ಲರ ಮನ ಸೂರೆಗೊಂಡಿತು.

ಈ ಸಮಾವೇಶದ ವೈಷಿಷ್ಟ್ಯತೆಯೆಂದರೆ ಕಲಾಲೋಕದ 600 ದಿಗ್ಗಜರು, ದಂತಕಥೆಗಳು, ಅರಳುತ್ತಿರುವ ಪ್ರತಿಭೆಗಳು, ಸಾಧಕರು, ಕಲಾವಿದರು, ತಮ್ಮ ವಯಸ್ಸು, ಪ್ರತಿಷ್ಠೆ ಎಂಬ ಬೇಧವಿಲ್ಲದೆ ಒಂದು ಕಲಾಸಮುದಾಯವಾಗಿ ಒಂದಾಗಿದ್ದು. ಇದು ಕೇವಲ ಆಧ್ಯಾತ್ಮಿಕತೆಯಿಂದ ಮಾತ್ರ ಸಾಧ್ಯ ಮತ್ತು ಭಾವ್ ಸಮಾವೇಶವು ಜೀವನದ ಈ ಅಂಶವನ್ನು ಶೋಧಿಸುವ ಅವಕಾಶವನ್ನು ನೀಡುತ್ತಿದೆ. 

ವರ್ಲ್ಡ್ ಫೋರಂ ಫಾರ್ ಆರ್ಟ್ಸ್ ಆಂಡ್ ಕಲ್ಚರ್ಸ್ ನ (ಡಬ್ಲ್ಯೂ ಎಫ್ ಎಸಿಯ) ನಿರ್ದೇಶಕಿಯಾದ ಶ್ರೀವಿದ್ಯಾ ವರ್ಚಸ್ವಿಯವರು, "ತಮ್ಮ ಶಕ್ತಿಯನ್ನು ಮತ್ತು ಅನುರಕ್ತಿಯನ್ನು ವಿನಿಯೋಗಿಸಿ ಸಂತೋಷವನ್ನು ಹರಡುವ ಕಲಾವಿದರಿಗೂ ಸಹ ಪುನಶ್ಚೇತನಗೊಳ್ಳಲು ಕೆಲವು ಕ್ಷಣಗಳು ಬೇಕು. ಭಾವ್ 2025 ಕಲಾವಿದರೆಲ್ಲರಿಗೂ ಈ ಅವಕಾಶವನ್ನು ಕೊಡುತ್ತದೆ ಮತ್ತು ಅವರು ಮತ್ತಷ್ಟು ಕೊಡುಗೆಯನ್ನು ನೀಡುವಂತಾಗುತ್ತದೆ. ಭಾವ್ ಕೇವಲ ಒಂದು ಭಾವನೆಯಲ್ಲ. ಅದೊಂದು ಸಂಕಲ್ಪ, ಒಂದು ಅಭಿವ್ಯಕ್ತಿ ಮತ್ತು ಒಂದು ಉತ್ಸವ" ಎಂದು ಹಂಚಿಕೊಂಡರು.

 ದಂತಕಥೆಗಳ, ಪರಂಪರೆಗಳ ಒಂದು ಸಂಭ್ರಮ 

ಈ ಹಬ್ಬದ ಭವ್ಯ ಉದ್ಘಾಟನೆಯು ದೀಪವನ್ನು ಬೆಳಗಿ, ಶ್ಲೋಕಗಳ ಪಠಣೆಯೊಂದಿಗೆ ಆರಂಭವಾಯಿತು. ಈ ಸಮಾರಂಭದಲ್ಲಿ ಉಪಸ್ಥಿತರಾಗಿದ್ದ ಗಣ್ಯರೆಂದರೆ, ಗುರುದೇವ್ ಶ್ರೀ ಶ್ರೀ ರವಿಶಂಕರ್, ಅಲ್ಪಸಂಖ್ಯಾತ ಕಲಾವಿದರ ದಾರಿದೀಪವಾದ ಪದ್ಮಶ್ರೀ ಮಂಜಮ್ಮ ಜೋಗತಿ, ಮಾಛ್ ರಂಗಮಂಚದಲ್ಲಿ ಕ್ರಾಂತಿಯನ್ನು ತಂದ ಪದ್ಮಶ್ರೀ ಓಂಪ್ರಕಾಶ್ ಶರ್ಮಾ, ಪದ್ಮಶ್ರೀ ಉಮಾ ಮಹೇಶ್ವರಿ, ಆಂಧ್ರದ ಹರಿಕಥಾ ದಿಗ್ಗಜರಾದ, ರಚನಾಕಾರರಾದ ಚಿತ್ರವೀಣಾ ಎನ್.ರವಿಕಿರಣ್.

ಸಮಾವೇಶದ ಮೊದಲನೆಯ ದಿನದಂದು ಡಾ. ಸೋನಲ್ ಮನ್ ಸಿಂಗ್ ರವರು ಪಾರಂಪರಿಕ ನೃತ್ಯದ ಪರಿಕಲ್ಪನೆಗಳ ಬಗ್ಗೆ ಒಳನೋಟವನ್ನು ನೀಡಿದರು. "ಆಶ್ರಮದಲ್ಲಿ ನನಗೆ ಅತ್ಯಂತ ಹಿತವಾದ ಅನುಭವವಾಯಿತು. ಪ್ರತಿ ವರ್ಷವೂ ನಾನು ಇಲ್ಲಿಗೆ ಮರಳಿ ಬರಬೇಕೆಂದು ಬಯಸುತ್ತೇನೆ! ಆಶ್ರಮದ ಗಿಡ ಮರಗಳನ್ನು ನಾನು ಬಹಳ ಆನಂದಿಸಿದೆ" ಎಂದರು ಸೋನಲ್ ಮನ್ ಸಿಂಗ್ ರವರು. ಅದಿತಿ ಮಂಗಳ್ ದಾಸ್ ರವರು ಸಂತ ಕಬೀರರ ಬೈಥಕ್ ಪ್ರದರ್ಶನ ನೀಡಿದರು. ಕೊಲ್ಕೊತ್ತಾದ 10 ತೃತೀಯಲಿಂಗಿ ಕಲಾವಿದರು ಜಗನ್ಮಾತೆಯ ಶಕ್ತಿಶಾಲಿ ರೂಪಗಳನ್ನು ಕುರಿತಾದ "ಸಪ್ತಮಾತೃಕ" ನೃತ್ಯವನ್ನು ಪ್ರದರ್ಶಿಸಿದರು.

ಇದನ್ನೂ ಓದಿ: ಗುರುದೇವ ಶ್ರೀಶ್ರೀ ರವಿಶಂಕರ್‌ ಅವರ 'ವಿಶ್ವ ಧ್ಯಾನ' ಕಾರ್ಯಕ್ರಮದಲ್ಲಿ 8.5 ಮಿಲಿಯನ್ ಜನರು ಭಾಗಿ, ಗಿನ್ನೆಸ್ ದಾಖಲೆ!

 ಕಲಾ ಪ್ರಶಸ್ತಿ 2025: ಭಾರತೀಯ ಸಂಸ್ಕೃತಿಯ ಸಂರಕ್ಷಕರಿಗೆ ಸನ್ಮಾನ 

ಪ್ರತಿಷ್ಠಿತ ಕಲಾ ಪ್ರಶಸ್ತಿ 2025 ರನ್ನು ಗುರುದೇವ್ ಶ್ರೀ ಶ್ರೀ ರವಿಶಂಕರರು ನೀಡಿದರು. ಖ್ಯಾತ ಕಲಾವಿದರು ಮಾಡಿರುವ ಜೀವಮಾನ ಸಾಧನೆಗಾಗಿ ಈ ಪ್ರಶಸ್ತಿಗಳನ್ನು ನೀಡಲಾಯಿತು. ಪ್ರಶಸ್ತಿ ಪಡೆದ ಕಲಾ ದಿಗ್ಗಜರೆಂದರೆ 94 ವರ್ಷ ವಯಸ್ಸಿನ ವೀಣಾ ವಿದ್ವಾನ್ ಆರ್. ವಿಶ್ವೇಶ್ವರನ್, ಮೃದಂಗಂ ವಿದ್ವಾನರಾದ ವಿದ್ವಾನ್ ಎ. ಆನಂದ್, ಯಕ್ಷಗಾನ ನಿಪುಣರಾದ ಬನ್ನಂಜೆ ಸುವರ್ಣ, ಗರ್ಭ ಹಾಡುಗಾರರಾದ ಅತುಲ್ ಪುರೋಹಿತ್, ಮತ್ತಿನ್ನಿತರರು.