ನವದೆಹಲಿ(ಏ.18): ಕೊರೋನಾ ಆರ್ಭಟಕ್ಕೆ ಭಾರತ ತತ್ತರಿಸಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಲಸಿಕೆಯನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಲು ಸೂಚಿಸಿದ್ದಾರೆ. ಇದರ ಜೊತೆಗೆ ಲಸಿಕೆ ಉತ್ಪಾದನೆ ವೇಗವನ್ನೂ ಹೆಚ್ಚಿಸಲಾಗಿದೆ. ಇತ್ತೀಚೆಗಷ್ಟೆ ಲಸಿಕಾ ಉತ್ಸವ ಕೂಡ ಆಚರಿಸಲಾಗಿದೆ. ಇದರ ಪರಿಣಾಮ ಭಾರತ 92 ದಿನದಲ್ಲಿ 12 ಕೋಟಿ ಕೊರೋನಾ ಲಸಿಕೆ ನೀಡಿದೆ.

ಆತ್ಮನಿರ್ಭರ್ ಭಾರತ್: ಕೋವಾಕ್ಸಿನ್ ಸೇರಿ ಸ್ಥಳೀಯ ಲಸಿಕೆ ಉತ್ಪಾದನೆ ವೇಗ ಹೆಚ್ಚಿಸಿದ ಸರ್ಕಾರ!...

ಅತೀ ಕಡಿಮೆ ಅವದಿಯಲ್ಲಿ ಗರಿಷ್ಠ ಲಸಿಕೆ ನೀಡಿದ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಸದ್ಯದ ಪರಿಸ್ಥಿತಿದೆ ಇದು ಅನಿವಾರ್ಯವಾಗಿದೆ. ಭಾರತದಲ್ಲಿ ಒಟ್ಟು 12,26,22,590 ಡೋಸ್ ನೀಡಲಾಗಿದೆ. 

ಅತೀ ಕಡಿಮೆ ಅವಧಿಯಲ್ಲಿ 12 ಕೋಟಿ ಮಂದಿಗೆ ಲಸಿಕೆ
ಭಾರತ- 92 ದಿನದಲ್ಲಿ 12 ಕೋಟಿ ಲಸಿಕೆ
ಅಮೆರಿಕ- 97 ದಿನದಲ್ಲಿ 12 ಕೋಟಿ ಲಸಿಕೆ
ಚೀನಾಾ-  108 ದಿನದಲ್ಲಿ 12 ಕೋಟಿ ಲಸಿಕೆ

ಲಸಿಕೆಗಿಲ್ಲ ಕೊರತೆ, ವಿದೇಶೀ ವ್ಯಾಕ್ಸಿನ್ ತುರ್ತು ಬಳಕೆಗೆ ಅನುಮೋದನೆ!

ಭಾರತ 12 ಕೋಟಿ ಲಸಿಕೆ ನೀಡಲು 92 ದಿನ ತೆಗೆದುಕೊಂಡಿದೆ. ಆದರೆ ಅಮೆರಿಕ 97 ದಿನ ಹಾಗೂ ಚೀನಾ 108 ದಿನ ತೆಗೆದುಕೊಂಡಿದೆ. 

ಲಸಿಕೆ ಪಡೆದುಕೊಂಡವರ ವಿವರ:
91,28,146 ಆರೋಗ್ಯ ಸಿಬ್ಬಂದಿಗಳು ಮೊದಲ ಡೋಸ್ ಲಸಿಕೆ ಪಡೆದುಕೊಂಡಿದ್ದರೆ,  57,08,223 ಮಂದಿ ಎರಡನೇ ಡೋಸ್ ಪಡೆದುಕೊಂಡಿದ್ದಾರೆ. ಇನ್ನು 1,12,33,415 ಮಂದಿ ಫ್ರಂಟ್‌ಲೈನ್ ವಾರಿಯರ್ಸ್ ಮೊದಲ ಡೋಸ್ ಪಡೆದುಕೊಂಡಿದ್ದರೆ, 55,10,238 ಮಂದಿ 2ನೇ ಡೋಸ್ ಪಡೆದುಕೊಂಡಿದ್ದಾರೆ. 

ಇನ್ನು 60 ವರ್ಷ ಮೇಲ್ಪಟ್ಟವರಲ್ಲಿ 4,55,94,522 ಮಂದಿ ಮೊದಲ ಡೋಸ್ ಹಾಗೂ  38,91,294 ಮಂದಿ ಎರಡನೇ ಡೋಸ್ ಪಡೆದುಕೊಂಡಿದ್ದಾರೆ.  ಇನ್ನು 45 ರಿಂದ 60 ವರ್ಷದೊಳಗಿನವರಲ್ಲಿ 4,04,74,993 ಮಂದಿ ಮೊದಲ ಡೋಸ್ ಹಾಗೂ  10,81,759 ಮಂದಿ ಎರಡನೆ ಡೋಸ್ ಪಡೆದುಕೊಂಡಿದ್ದಾರೆ.