ಕಾಶ್ಮೀರ ಮುಸ್ಲಿಮರಿಗಾಗಿ ಧ್ವನಿ ಎತ್ತುವ ಹಕ್ಕಿದೆ ಎಂದಿದ್ದ ತಾಲಿಬಾನ್ ತಾಲಿಬಾನ್ ಉಗ್ರರ ಹೇಳಿಕೆಗೆ ತಿರುಗೇಟು ನೀಡಿದ ಸಚಿವ ನಖ್ವಿ ಭಾರತದಲ್ಲಿ ಬಾಂಬ್ ದಾಳಿ, ಕ್ರೌರ್ಯವಿಲ್ಲ, ನಿಮ್ಮ ಧ್ವನಿ ಅಗತ್ಯವಿಲ್ಲ ಎಂದ ಸಚಿವ

ನವದೆಹಲಿ(ಸೆ.04): ತಾಲಿಬಾನ್ ಉಗ್ರರು ಆಫ್ಘಾನಿಸ್ತಾನದಲ್ಲಿ ಸರ್ಕಾರ ರಚಿಸಲು ಸರ್ಕಸ್ ಮಾಡುತ್ತಿದ್ದಾರೆ. ಇದರ ನಡುವೆ ಭಾರತದ ಆಂತರಿಕ ವಿಚಾರಕ್ಕೆ ಕೈಹಾಕಿ ಕೇಂದ್ರ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದೆ. ಕಾಶ್ಮೀರ ಮುಸ್ಲಿಮರ ಪರ ಧ್ವನಿ ಎತ್ತುವ ಹಕ್ಕು ತಾಲಿಬಾನ್ ಉಗ್ರರಿಗಿದೆ ಎಂಬ ತಾಲಿಬಾನ್ ಹೇಳಿಕೆಗೆ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ತಿರುಗೇಟು ನೀಡಿದ್ದಾರೆ.ಭಾರತೀಯ ಮುಸ್ಲಿಮರನ್ನು ಅವರ ಪಾಡಿಗೆ ಬಿಟ್ಟು ಬಿಡಿ ಎಂದು ನಖ್ವಿ ತಾಲಿಬಾನ್ ಉಗ್ರರಿಗೆ ಖಡಕ್ ಸಂದೇಶ ರವಾನಿಸಿದ್ದಾರೆ.

ಪಾಕ್ ಸೂಚನೆ ಬೆನ್ನಲ್ಲೇ ವರಸೆ ಬದಲಿಸಿದ ತಾಲಿಬಾನ್: ಕಾಶ್ಮೀರ ಮುಸ್ಲಿಮರಿಗೆ ಉಗ್ರರ ಬೆಂಬಲ!

ಭಾರತದ ಮುಸ್ಲಿಮರನ್ನು ಉಳಿಸಲು ಬಂದಿರುವ ತಾಲಿಬಾನ್ ಉಗ್ರರಿಗೆ ನಖ್ವಿ ದೇಶದಲ್ಲಿನ ಸೌಹಾರ್ಧತೆ, ಇಲ್ಲಿನ ನೀತಿ ನಿಯಮಗಳ ಕುರಿತು ವಿವರಿಸಿದ್ದಾರೆ. ಇಲ್ಲಿ ಧರ್ಮದ ಹೆಸರಿನಲ್ಲಿ ಯಾವುದೇ ಉಗ್ರ ಚಟುವಟಿಕೆ ದೌರ್ಜನ್ಯಗಳು ನಡೆಯುತ್ತಿಲ್ಲ. ಎಲ್ಲಾ ಧರ್ಮದವರು ಅನುಸರಿಸುವ ಏಕೈಕ ಧರ್ಮಗ್ರಂಥ ಸಂವಿಧಾನ. ಇಲ್ಲಿನ ಮಸೀದಿಗಳಲ್ಲಿ ಪ್ರಾರ್ಥಿಸುವ ಅಮಾಯಕರನ್ನು ಗುಂಡು, ಬಾಂಬ್‌ಗಳ ಮೂಲಕ ಕೊಲ್ಲುವುದಿಲ್ಲ. ಹುಡುಗಿಯರ ಶಾಲೆಗೆ ಹೋಗುವುದನ್ನು ತಡೆಯುವುದಿಲ್ಲ. ತಲೆ, ಕೈ ಕಾಲು ಕತ್ತರಿಸುವ ಸಂಪ್ರದಾಯಗಳು ಇಲ್ಲಿಲ್ಲ. ಇದು ಭಾರತ, ಇಲ್ಲಿ ನಿಮ್ಮ ಧ್ವನಿಯ ಅವಶ್ಯಕತೆ ಇಲ್ಲ ಎಂದು ನಖ್ವಿ ಹೇಳಿದ್ದಾರೆ.

ಭಾರತ ಹಾಗೂ ಆಫ್ಘಾನಿಸ್ತಾನಕ್ಕೆ ಅಜಗಜಾಂತರ ವ್ಯತ್ಯಾಸವಿದೆ. ಭಾರತದ ಮುಸ್ಲಿಮರ ತಾಲಿಬಾನ್ ಮಾತನಾಡಿರುವುದು ಒಳಿತು ಎಂದು ನಖ್ವಿ ಹೇಳಿದ್ದಾರೆ. ಭಾರತದ ಶಾಂತಿ ಸೌಹಾರ್ಧತೆ ಇದೆ. ಇದನ್ನು ಹಾಳುಮಾಡಲು ಯಾವುದೇ ಶಕ್ತಿಗೆ ಅವಕಾಶ ನೀಡುವುದಿಲ್ಲ ಎಂದು ನಿಖ್ವಿ ಹೇಳಿದ್ದಾರೆ.

ಪುಲ್ವಾಮಾ ದಾಳಿ ಕೋರರ ಜೊತೆ ಮಾತುಕತೆ; ಕಾಶ್ಮೀರ ಮುಸ್ಲಿಮರ ಪರ ಧ್ವನಿ ಎತ್ತುವ ಹಕ್ಕಿದೆ ಎಂದ ತಾಲಿಬಾನ್

ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ರಚನೆ ಸರ್ಕಸ್ ನಡುವೆ ತಾಲಿಬಾನ್ ಮಾಧ್ಯಮ ವಕ್ತಾರ ಸುಹೈಲ್ ಶಾಹಿನ್ ಬಿಬಿಸಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಕಾಶ್ಮೀರ ವಿಚಾರ ಕೆದಕಿ ಭಾರತದ ಆಕ್ರೋಶಕ್ಕೆ ಕಾರಣವಾಗಿದ್ದರು. ಆರಂಭದಲ್ಲಿ ಕಾಶ್ಮೀರ ಭಾರತದ ಆತಂರಿಕ ವಿಚಾರ ಎಂದಿದ್ದ ತಾಲಿಬಾನ್, ಸಂದರ್ಶನದಲ್ಲಿ ಕಾಶ್ಮೀರದ ಮುಸ್ಲಿಮರ ಪರ ಧ್ವನಿ ಎತ್ತುವ ಹಕ್ಕು ತಾಲಿಬಾನ್‌ಗಿದೆ ಎಂದಿತ್ತು.

ಕಾಶ್ಮೀರದಲ್ಲಿನ ಮುಸ್ಲಿಮರಿಗೆ ಅನ್ಯಾವಾಗುತ್ತಿದೆ. ಹೀಗಾಗಿ ಅವರ ಪರ ಧ್ವನಿ ಎತ್ತುವ ಹಕ್ಕು ನಮಗಿದೆ. ಯಾವುದೇ ದೇಶವಾದರೂ ಮುಸ್ಲಿಮರಿಗೆ ಕಾನೂನಿಡಿ ವಿಶೇಷ ಮಾನ್ಯತೆ ನೀಡಬೇಕು. ಅವರ ಹಕ್ಕುಗಳಿಗಾಗಿ ನಾವು ಹೋರಾಟ ಮಾಡುತ್ತೇವೆ ಎಂದು ತಾಲಿಬಾನ್ ಹೇಳಿತ್ತು.