ನವದೆಹಲಿ(ಜು.25): ಕೊರೋನಾತಂಕದ ನಡುವೆಯೂ ಭಾರತ ಇತರ ರಾಷ್ಟ್ರಗಳಿಗೆ ತನ್ನಿಂದಾಗುವ ಸಹಾಯ ಮಾಡುವಲ್ಲಿ ಹಿಂದೆ ಸರಿದಿಲ್ಲ, ಅದು ಶತ್ರು ರಾಷ್ಟ್ರದ ಆತ್ಮೀಯ ರಾಷ್ಟ್ರಗಳಿಗೂ ನೆರವು ನೀಡಿದೆ. ಸದ್ಯ ಭಾರತ ಉತ್ತರ ಕೊರಿಯಾಗೆ 10 ಸಾವಿರ ಡಾಲರ್ ಮೌಲ್ಯದ ವೈದ್ಯಕೀಯ ನೆರವು ನೀಡಿದೆ. ವಿಶ್ವ ಆರೋಗ್ಯ ಸಂಸ್ಥೆ ಮನವಿ ಮೇರೆಗೆ ಭಾರತ ಈ ಸಹಾಯ ಮಾಡಿದೆ. ಉತ್ತರ ಕೊರಿಯಾ ಚೀನಾದ ಆಪ್ತ ರಾಷ್ಟ್ರಗಳಲ್ಲಿ ಒಂದು, ಸದ್ಯ ಚೀನಾ ಹಾಗೂ ಭಾರತ ನಡುವಿನ ಸಂಬಮಧ ಹೇಗಿದೆ ಎಂಬುವುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ.

ಈ ಸಂಬಂಧ ಪ್ರತಿಕ್ರಿಯಿಸಿರುವ ಸಚಿವಾಲಯ 'ಉತ್ತರ ಕೊರಿಯಾದಲ್ಲಿ ಎದುರಾಗಿರುವ ವೈದ್ಯಕೀಯ ಉಪಕರಣಗಳ ಕೊರತೆ ಹಾಗೂ ಅಲ್ಲಿನ ಪರಿಸ್ಥಿತಿ ಬಗ್ಗೆ ಭಾರತ ಸಂವೇದನಾಶೀಲವಾಗಿದೆ. ಹೀಗಾಗಿ ಟಿಬಿಯ ಔಷಧ ರೂಪವಾಗಿ ಹತ್ತು ಲಕ್ಷ ಡಾಲರ್‌ನಷ್ಟು ಮಾನವೀಯ ನೆರವು ನೀಡಲು ನಿರ್ಧರಿಸಿದೆ' ಎಂದಿದ್ದಾರೆ.

ಉ.ಕೊರಿಯಾದಲ್ಲಿಲ್ಲ ಒಂದೇ ಒಂದು ಕೊರೋನಾ ಕೇಸ್, ಸೀಕ್ರೆಟ್ ಬಿಚ್ಚಿಟ್ಟ ಕಿಮ್ ಜಾಂಗ್ ಉನ್!

ಔಷಧವನ್ನು ಭಾರತದ ರಾಯಭಾರಿ ಅತುಲ್ ಮಲ್ಹಾರಿ ವಿಶ್ವಸಂಸ್ಥೆ ಪ್ರತಿನಿಧಿಗಳ ಸಮ್ಮುಖದಲ್ಲಿ ಉತ್ತರ ಕೊರಿಯಾದ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ.

ಒಂದೂ ಕೊರೋನಾ ಕೇಸ್‌ ಇಲ್ಲ ಎಂದ ಉತ್ತರ ಕೊರಿಯ

ದೇಶಕ್ಕೆ ಸಂಬಂಧಿಸಿದ ಅನೇಕ ಮಾಹಿತಿಗಳನ್ನು ರಹಸ್ಯವಾಗಿಟ್ಟುಕೊಳ್ಳುವಲ್ಲಿ ಮುಂಚೂಣಿಯಲ್ಲಿರುವ ಉತ್ತರ ಕೊರಿಯಾ ತನ್ನ ದೇಶದಲ್ಲಿ ಒಂದೂ ಕೊರೋನಾ ಕೇಸ್‌ ಇಲ್ಲ ಎಂದಿದೆ. ಆದರೆ ಈ ಮಾತನ್ನು ಸಂಪೂರ್ಣವಾಗಿ ನಂಬವುದು ಸಾಧ್ಯವಿಲ್ಲ. ಕೆಲ ದಿನಗಳ ಹಿಂದಷ್ಟೇ ಮಾಸ್ಕ್ ಧರಿಸದವರಿಗೆ ಮೂರು ತಿಂಗಳು ಕೂಲಿ ಮಾಡು ಶಿಕ್ಷೆ ನೀಡಲಾಗುತ್ತಿದೆ ಎಂಬ ವಿಚಾರ ಭಾರೀ ಸದ್ದು ಮಾಡಿತ್ತು. ಒಂದು ವೇಳೆ ಕೊರೋನಾ ಪ್ರಕರಣಗಳೇ ಇಲ್ಲ ಎನ್ನುವುದಾದರೆ ಮಾಸ್ಕ್ ಧರಿಸದವರಿಗೆ  ಶಿಕ್ಷೆ ನೀಡುವ ಅಗತ್ಯವಾದರೂ ಏನಿದೆ?