ಕಣ್ಣಿಗೆ ಕಾಣದ ಶತ್ರುವಿನ ಜೊತೆ ಅತೀ ದೊಡ್ಡ ಹೋರಾಟ ಸೋಂಕಿತರ ನೋವಿನಲ್ಲಿ ಸಮಾನ ಪಾಲುದಾರ ಎಂದ ಮೋದಿ ಶೀಘ್ರದಲ್ಲೇ ಎಲ್ಲರಿಗೂ ಲಸಿಕೆ ಸಿಗಲಿದೆ ಎಂದ ಪ್ರಧಾನಿ

ನವದೆಹಲಿ(ಮೇ.14): ಕೊರೋನಾದಿಂದ ಜನರು ಅನುಭವಿಸುತ್ತಿರುವ ನೋವು, ಕಷ್ಟಗಳನ್ನು ಅರಿತಿದ್ದೇನೆ, ಅನುಭವಸಿದ್ದೇನೆ. ಈ ನೋವು ಸಹಿಸಿಕೊಳ್ಳಲು ಅಸಾಧ್ಯ. ಆದರೆ ಕಣ್ಣಿಗೆ ಕಾಣಿಸಿದ ಅತೀ ದೊಡ್ಡ ಶತ್ರು ಕೋವಿಡ್ ಇಡೀ ವಿಶ್ವಕ್ಕೆ ಸವಾಲಾಗಿ ಪರಿಣಮಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಸಂಕಷ್ಟದಲ್ಲಿ ರೈತರ ಕೈಹಿಡಿದ PM ಕಿಸಾನ್; 8ನೇ ಕಂತಿನ 20 ಸಾವಿರ ಕೋಟಿ ರೂ ಬಿಡುಗಡೆ!

ಪಿಎಂ ಕಿಸಾನ್ ಸಮ್ಮಾನ್ ನಿಧಿ ಹಣ ಬಿಡುಗಡೆ ಮಾಡಿ, ರೈತರನ್ನುದ್ದೇಶಿಸಿ ಮಾತನಾಡಿದ ಮೋದಿ, ಜನರ ನೋವಿಗೆ ಸಮಾನ ಅನುಭವಿ ಎಂದಿದ್ದಾರೆ. ಕೊರೋನಾ ವೈರಸ್ ಕಾರಣ ನಾವು ಹತ್ತಿರದ, ಆಪ್ತರನ್ನು, ಸಂಬಂಧಿಕರನ್ನು ಕಳೆದುಕೊಂಡಿದ್ದೇವೆ. ನಾಗರೀಕರು ಅನುಭವಿಸಿದ ನೋವಿನಲ್ಲಿ ನಾನೂ ಪಾಲುದಾರ. ನನಗೂ ಅಷ್ಟೇ ನೋವಾಗುತ್ತಿದೆ. ಆದರೆ ಭಾರತ ಇಂತಹ ಕಠಿಣ ಸವಾಲುಗಳನ್ನು ಮೆಟ್ಟಿನಿಲ್ಲಲಿದೆ ಎಂದು ಮೋದಿ ಹೇಳಿದ್ದಾರೆ. 

ಸಭೆಗೆ ಬಾರದೆ 2ನೇ ಅಲೆಗೆ ಕೇಂದ್ರವೇ ಕಾರಣ ಅನ್ನುವರಿಗೆ ಬಿಜೆಪಿ ದಾಖಲೆ ಉತ್ತರ.

ಭಾರತ ಕಣ್ಣಿಗೆ ಕಾಣದ, ಪ್ರತಿ ಬಾರಿ ರೂಪ ಬದಲಿಸುವ ಶತ್ರುವಿನೊಂದಿಗೆ ಹೋರಾಡುತ್ತಿದೆ. ಹೀಗೆ ರೂಪ ಬದಲಾಯಿಸಿ ಬಂದ ಶತ್ರುಗಳೇ ಭಾರತದಲ್ಲಿ 2ನೇ ಅಲೆ ಸೃಷ್ಟಿಸಿದೆ. ಕಳೆದ 100 ವರ್ಷಗಳಲ್ಲಿ ಅಪ್ಪಳಿಸಿದ ಸಾಂಕ್ರಾಮಿಕ ರೋಗಗಳಲ್ಲಿ ಈ ಕೊರೋನಾ ಅತ್ಯಂತ ಕೆಟ್ಟದ್ದಾಗಿದೆ ಎಂದು ಮೋದಿ ಹೇಳಿದ್ದಾರೆ.

ಇಲ್ಲಿಯವರೆಗೆ ಸುಮಾರು 18 ಕೋಟಿ ಲಸಿಕೆ ನೀಡಲಾಗಿದೆ. ಸರ್ಕಾರಿ ಆಸ್ಪತ್ರೆಗಳು, ಕೋವಿಡ್ ಕೇಂದ್ರಗಳಲ್ಲಿ ಉಚಿತ ಲಸಿಕೆ ನೀಡಲಾಗುತ್ತಿದೆ. ತ್ವರಿತಗತಿಯಲ್ಲಿ ಗರಿಷ್ಠ ಮಂದಿಗೆ ಲಸಿಕೆ ನೀಡಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹೀಗಾಗಿ ನಿಮ್ಮ ಸರದಿ ಬಂದಾಗ ಲಸಿಕೆ ಪಡೆಯಿರಿ ಎಂದು ಮೋದಿ ಸಲಹೆ ನೀಡಿದರು.

ಲಸಿಕೆ ಪಡೆದ ಬಳಿಕವೂ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು ಅತೀ ಅಗತ್ಯವಾಗಿದೆ. ಎಲ್ಲು ಒಗ್ಗಟ್ಟಾಗಿ ಈ ಸಾಂಕ್ರಾಮಿಕ ಪಿಡುಗನ್ನು ಎದುರಿಸೋಣ. ಖಂಡಿತವಾಗಿಯೂ ಭಾರತ ಈ ಸಂಕಷ್ಟದಿಂದ ಶೀಘ್ರದಲ್ಲೇ ಪಾರಾಗಲಿದೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದರು.