ಜೈಕೋವ್-ಡಿ ಕೋವಿಡ್ ಲಸಿಕೆ ತುರ್ತು ಬಳಕೆ ಅನುಮತಿಗೆ ಮೋದಿ ಸಂತಸ; 57.22 ಕೋಟಿ ದಾಟಿತು ವ್ಯಾಕ್ಸಿನ್!

  • ಭಾರತದ ಲಸಿಕಾ ಅಭಿಯಾನಕ್ಕೆ ಮತ್ತಷ್ಟು ವೇಗ, ಮತ್ತೊಂದು ಲಸಿಕೆ ತುರ್ತು ಬಳಿಕೆಗೆ ಅನುಮತಿ
  • ಭಾರತದಲ್ಲಿ 57.22 ಕೋಟಿ ಡೋಸ್ ದಾಟಿದ ಕೋವಿಡ್-19 ಲಸಿಕೆ ನೀಡಿಕೆ ಪ್ರಮಾಣ
  • ಕಳೆದ 24 ತಾಸುಗಳಲ್ಲಿ 36,571 ಹೊಸ ಕೊರೊನಾ ಪ್ರಕರಣಗಳು ಪತ್ತೆ
India Cumulative COVID 19 Vaccination Coverage exceeds 57 22 Cr ckm

ಬೆಂಗಳೂರು(ಆ.20): ಭಾರತದ ಕೊರೋನಾ ಲಸಿಕಾ ಅಭಿಯಾನಕ್ಕೆ ಮತ್ತಷ್ಟು ವೇಗ ನೀಡಲಾಗಿದೆ. ಭಾರತದಲ್ಲಿ ಮತ್ತೊಂದು ಲಸಿಕೆ ತುರ್ತು ಬಳಕೆಗೆ ಅನುಮತಿ ನೀಡಲಾಗಿದೆ. ಹೀಗಾಗಿ ಮುಂದಿನ ತಿಂಗಳಿನಿಂದ ಲಸಿಕೆ ವೇಗ ಮತ್ತಷ್ಟು ಹೆಚ್ಚಾಗಲಿದೆ. ದೇಶಾದ್ಯಂತ ಕಳೆದ 24 ತಾಸುಗಳಲ್ಲಿ 54,71,282 ಡೋಸ್ ಕೋವಿಡ್-19 ಲಸಿಕೆ ಹಾಕುವುದರೊಂದಿಗೆ, ಭಾರತದಲ್ಲಿ ಇದುವರೆಗೆ ಒಟ್ಟು 57.22 ಕೋಟಿಗಿಂತ ಹೆಚ್ಚಿನ ಲಸಿಕೆ ಡೋಸ್ ನೀಡಲಾಗಿದೆ. 

ಝೈಡಸ್ ಕ್ಯಾಡಿಲಾ ಸಂಸ್ಥೆಯ ಝೈಕೋವ್ ಡಿ ಲಸಿಕೆ ತುರ್ತು ಬಳಕೆಗೆ ಅನುಮತಿ ನೀಡಲಾಗಿದೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಸಂತಸ ಹಂಚಿಕೊಂಡಿದ್ದಾರೆ. ಭಾರತ ಶಕ್ತವಾಗಿ ಕೋವಿಡ್ ವಿರುದ್ಧ ಹೋರಾಡುತ್ತಿದೆ. ಮೊದಲ ಡಿಎನ್ಎ ಆಧಾರಿದ ಕೋವಿಡ್ ವಸಿಕೆ ಜೈಕೋವ್-ಡಿ ಲಸಿಕೆ ತುರ್ತು ಬಳಕೆಗೆ ಅನುಮತಿ ನೀಡಲಾಗಿದೆ.ಭಾರತ ವಿಜ್ಞಾನಿಗಳ ಈ ಸಾಧನೆ ಅತ್ಯಂತ ಮಹತ್ವದ್ದಾಗಿ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

 

ಲಸಿಕೆಗಳ ಮಿಶ್ರಣ ಒಳ್ಳೇ ನಿರ್ಧಾರವಾ ? ಸೀರಂ ಅಧ್ಯಕ್ಷ ಹೇಳಿದ್ದಿಷ್ಟು

ದೇಶವ್ಯಾಪಿ ಬೃಹತ್ ಕೋವಿಡ್-19 ಲಸಿಕೆ ಅಭಿಯಾನದ ವ್ಯಾಪ್ತಿ ಹೆಚ್ಚಿಸಲು ಮತ್ತು ಈ ಕಾರ್ಯಕ್ರಮದ ಗತಿಗೆ ವೇಗ ನೀಡಲು ಕೇಂದ್ರ ಸರ್ಕಾರ ಬದ್ಧವಾಗಿದೆ. ದೇಶಾದ್ಯಂತ ಕಳೆದ 24 ತಾಸುಗಳಲ್ಲಿ 36,555 ರೋಗಿಗಳು ಗುಣಮುಖರಾಗಿದ್ದು, ದೇಶದಲ್ಲಿ ಸಾಂಕ್ರಾಮಿಕ ಸೋಂಕು ಕಾಣಿಸಿಕೊಂಡ ಆರಂಭದಿಂದ ಇಲ್ಲಿಯ ತನಕ ಚೇತರಿಸಿಕೊಂಡವರ ಒಟ್ಟು ಸಂಖ್ಯೆ ಇದೀಗ 3,15,61,635ಕ್ಕೆ ಏರಿಕೆ ಕಂಡಿದೆ.

ಇದರ ಪರಿಣಾಮವಾಗಿ, ಭಾರತದ ಚೇತರಿಕೆ ದರ 97.54%ಗೆ ಸುಧಾರಣೆ ಕಂಡಿದೆ. 2020 ಮಾರ್ಚ್ ನಿಂದ ಇದುವರೆಗೆ ಆಗಿರುವ ಗರಿಷ್ಠ ಚೇತರಿಕೆ ದರ ಇದಾಗಿದೆ. ಕೇಂದ್ರ ಸರಕಾರ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸುಸ್ಥಿರ ಮತ್ತು ಜಂಟಿ ಸಹಭಾಗಿತ್ವದ ಪ್ರಯತ್ನಗಳ ಫಲವಾಗಿ, ಸತತ 54 ದಿನಗಳಿಂದ ದಿನನಿತ್ಯ ಕಾಣಿಸಿಕೊಳ್ಳುತ್ತಿರುವ ಹೊಸ ಕೊರೊನಾ ಪ್ರಕರಣಗಳ ಪ್ರಮಾಣ 50,000 ಮಟ್ಟದಿಂದ ಕೆಳಗಿದೆ.

ಕೋವಾಕ್ಸಿನ್ ಲಸಿಕೆಗೆ 210 ರೂ ಡಿಸ್ಕೌಂಟ್ ಘೋಷಿಸಿದ ಜಯನಗರ ಯುನೈಟೆಡ್‌ ಆಸ್ಪತ್ರೆ!

ದೇಶಾದ್ಯಂತ ಕಳೆದ 24 ತಾಸುಗಳಲ್ಲಿ 36,571 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಅತ್ಯಂತ ಹೆಚ್ಚಿನ ಚೇತರಿಕೆ ಪ್ರಕರಣಗಳು ಮತ್ತು ಕಡಿಮೆ ಪ್ರಮಾಣದಲ್ಲಿ ಪತ್ತೆಯಾಗುತ್ತಿರುವ ಹೊಸ ಕೊರೊನಾ ಪ್ರಕರಣಗಳಿಂದಾಗಿ, ಸಕ್ರಿಯ ಪ್ರಕರಣಗಳ ಸಂಖ್ಯೆ ಇದೀಗ 3,63,605ಕ್ಕೆ ಇಳಿಕೆ ಕಂಡಿದೆ, ಕಳೆದ 150 ದಿನಗಳಲ್ಲೇ ಅತ್ಯಂತ ಕನಿಷ್ಠ ಪ್ರಮಾಣ ಇದಾಗಿದೆ. ದೇಶದಲ್ಲಿರುವ ಒಟ್ಟು ಪಾಸಿಟಿವ್ ಪ್ರಕಣಗಳಿಗೆ ಹೋಲಿಸಿದರೆ, ಸಕ್ರಿಯ ಪ್ರಕರಣಗಳ ಪ್ರಮಾಣ ಪ್ರಸ್ತುತ 1.12%ಗೆ ತಗ್ಗಿದೆ. 2020 ಮಾರ್ಚ್ ನಿಂದ ಇದು ಅತ್ಯಂತ ಕನಿಷ್ಠ.

ದೇಶಾದ್ಯಂತ ಗಂಟಲು ಮತ್ತು ಮೂಗಿನ ದ್ರವ ಪರೀಕ್ಷಾ ಸಾಮರ್ಥ್ಯವನ್ನು ಹೆಚ್ಚಿಸಲಾಗುತ್ತಿದ್ದು, ಕಳೆದ 24 ತಾಸುಗಳಲ್ಲೇ ದೇಶಾದ್ಯಂತ 18,86,271 ಪರೀಕ್ಷೆಗಳನ್ನು ನಡೆಸಲಾಗಿದೆ. ಭಾರತದಲ್ಲಿ ಇದುವರೆಗೆ 50.26 ಕೋಟಿಗಿಂತ ಹೆಚ್ಚಿನ ಅಂದರೆ 50,26,99,702 ಪರೀಕ್ಷೆಗಳನ್ನು ನಡೆಸಲಾಗಿದೆ.

ದೇಶಾದ್ಯಂತ ಪರೀಕ್ಷಾ ಸಾಮರ್ಥ್ಯವನ್ನು ಹೆಚ್ಚಿಸಿರುವ ಪರಿಣಾಮ, ವಾರದ ಪಾಸಿಟಿವಿಟಿ ದರವೀಗ 1.93%ಗೆ ತಗ್ಗಿದೆ. ಕಳೆದ 56 ದಿನಗಳಿಂದ ಅದು 3% ಮಟ್ಟದಿಂದ ಕೆಳಗೆ ಕಾಯ್ದುಕೊಂಡಿದೆ. ಅಂತೆಯೇ, ದೈನಂದಿನ ಪಾಸಿಟಿವಿಟಿ ದರವೂ 1.94%ಗೆ ಇಳಿಕೆಯಾಗಿದೆ. ಸತತ 25 ದಿನಗಳಿಂದ ಅದು 3% ಮಟ್ಟದಿಂದ ಕೆಳಗಿದೆ ಹಾಗೂ ನಿರಂತರ 74 ದಿನಗಳಿಂದ 5% ಮಟ್ಟದ ಕೆಳಗೆ ಕಾಯ್ದುಕೊಂಡಿದೆ.

Latest Videos
Follow Us:
Download App:
  • android
  • ios