ದೇಶದಲ್ಲಿ ಇಳಿಯುತ್ತಿದೆ ಕೊರೋನಾ : ಆದರೂ ಎಚ್ಚರ ತಪ್ಪದಿರಿ

  • ದೇಶದಲ್ಲಿ ಕೊರೋನಾ ಪ್ರಕರಣಗಳು ಇಳಿಕೆಯಾಗುತ್ತಿವೆ
  • ಕಳೆದ 24 ಗಂಟೆಯಲ್ಲಿ ಅತ್ಯಂತ ಕನಿಷ್ಟ ಪ್ರಕರಣಗಳು ದಾಖಲಾಗಿವೆ
India covid active caseload drops  snr

 ನವದೆಹಲಿ (ನ.06): ದೇಶದಲ್ಲಿ ಕೊರೋನಾ (Coronavirus) ಪ್ರಕರಣಗಳು ಇಳಿಕೆಯಾಗುತ್ತಿವೆ.  ಕಳೆದ 24 ಗಂಟೆಯಲ್ಲಿ ಅತ್ಯಂತ ಕನಿಷ್ಟ ಪ್ರಕರಣಗಳು ದಾಖಲಾಗಿವೆ. 10 929 ಪ್ರಕರಣಗಳು ಪತ್ತೆಯಾಗಿದ್ದು, 255 ದಿನಗಳಲ್ಲಿಯೇ ಇದು ಅತ್ಯಂತ ಕನಿಷ್ಟ ಸಂಖ್ಯೆಯಾಗಿದೆ. 

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ( Ministry of Health and Family Welfare ) ಮಾಹಿತಿ ಪ್ರಕರಾನ ಸದ್ಯ ದೇಶದಲ್ಲಿ ಸಕ್ರೀಯ ಪ್ರಕರಣಗಳಲ್ಲಿ ಶೇ.1ರಷ್ಟು  ಪ್ರಕರಣಗಳು ಪತ್ತೆಯಾಗಿವೆ. ಕಳೆದ  29 ದಿನಗಳಿಂದ  20 ಸಾವಿರಕ್ಕಿಂತಲೂ ಕಮ್ಮಿ ಪ್ರಕರಣಗಳು ದೇಶದಲ್ಲಿ ಪತ್ತೆಯಾಗುತ್ತಿವೆ. 

ಪ್ರತೀ ದಿನವೂ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ಪರೀಕ್ಷೆ (Covid Test) ಮಾಡಲಾಗುತ್ತಿದ್ದು, ಸದ್ಯ ದಿನದ ಪಾಸಿಟಿವಿಟಿ ರೇಟ್ ಶೇ. 1.35 ಇದ್ದು, ವಾರದ ಪಾಸಿಟಿವಿಟಿ ರೇಟ್ (positivity Rate) ಶೇ. 1.27 ರಷ್ಟಿದೆ. ಕಳೆದ 24 ಗಂಟೆಯಲ್ಲಿ 329  ಕೊರೋನಾ ಸಾವಿನ ಪ್ರಕರಣಗಳು ವರದಿಯಾಗಿದ್ದು, 12509 ಮಂದಿ ಗುಣಮುಖರಾಗಿದ್ದಾರೆ. 

ಕಳೆದ ಮೇ ತಿಂಗಳಲ್ಲಿ  ಎರಡು ಕೋಟಿ ಮಂದಿಗೆ ಕೊರೋನಾ ಸೋಂಕು ತಗುಲಿದ್ದು ಇದೀಗ ಕೊಂಚವೇ ಇಳಿಮುಖವಾಗುತ್ತಿದ್ದು, ನಿಟ್ಟುಸಿರು ಬಿಡುವಂತಾಗಿದೆ.

ಕರ್ನಾಟಕದಲ್ಲಿ ಕೊರೋನಾ ಸಂಖ್ಯೆ

 

 ಕರ್ನಾಟಕದಲ್ಲಿ (Karnataka) ಇಂದು (ನ. 5) ಹೊಸದಾಗಿ 214 ಜನರಿಗೆ ಕೊರೋನಾ ಸೋಂಕು (Coronavirus) ದೃಢಪಟ್ಟಿದ್ದು,  7 ಜನರು ಬಲಿಯಾಗಿದ್ದಾರೆ.

 ವಾಗಿದೆ. ಈ ಮೂಲಕ, ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 29,89,489 ಕ್ಕೆ ಏರಿಕೆಯಾಗಿದೆ. ಸೋಂಕಿತರ ಪೈಕಿ 29,43,170 ಜನ ಗುಣಮುಖರಾಗಿ ಡಿಸ್ಚಾರ್ಜ್ ಹೊಂದಿದ್ದಾರೆ.

Night Curfew: ನೈಟ್ ಕರ್ಫ್ಯೂ ಆದೇಶ ಹಿಂಪಡೆದ ರಾಜ್ಯ ಸರ್ಕಾರ

ಈವರೆಗೆ ಕೊರೊನಾದಿಂದ 38,102 ಜನ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ 8,188 ಕೊರೋನಾ  ಸಕ್ರಿಯ ಪ್ರಕಟರಣಗಳಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಬೆಂಗಳೂರಿನಲ್ಲಿ ಇಂದು (ಶುಕ್ರವಾರ) ಒಂದೇ ದಿನ 118 ಜನರಿಗೆ ಕೊವಿಡ್-19 ಸೋಂಕು ವಕ್ಕರಿಸಿದ್ದು. ಒಬ್ಬರು ಮೃತಪಟ್ಟಿದ್ದಾರೆ. ಮೂಲಕ ಬೆಂಗಳೂರಲ್ಲಿ ಕೊರೋ ನಾ ಸೋಂಕಿತರ ಸಂಖ್ಯೆ 12,52,532 ಕ್ಕೆ ಏರಿಕೆಯಾಗಿದೆ.

12,52,532 ಸೋಂಕಿತರ ಪೈಕಿ 12,29,857 ಜನರು ಗುಣಮುಖರಾಗಿದ್ದಾರೆ.  ನಗರದಲ್ಲಿ ಈವರೆಗೆ ಕೊರೋನಾದಿಂದ 16,293 ಜನ ಸಾವನ್ನಪ್ಪಿದ್ದಾರೆ. 6,381 ಕೊರೊನಾ ಸಕ್ರಿಯ ಪ್ರಕರಣಳಿವೆ. ಕೊರೋನಾ ಪಾಸಿಟಿವಿಟಿ ರೇಟ್ 0.26 ಇದ್ರೆ, ಸಾವಿ ಪ್ರಮಾಣ 3.27.

ಜಿಲ್ಲಾವಾರು ಕೊರೋನಾ ಪ್ರಕರಣಗಳ ಸಂಖ್ಯೆ 

ಬಾಗಲಕೋಟೆ 2, ಬಳ್ಳಾರಿ 0, ಬೆಳಗಾವಿ 3, ಬೆಂಗಳೂರು ಗ್ರಾಮಾಂತರ 3, ಬೆಂಗಳೂರು ನಗರ 118, ಬೀದರ್ 0, ಚಾಮರಾಜನಗರ 0, ಚಿಕ್ಕಬಳ್ಳಾಪುರ 4, ಚಿಕ್ಕಮಗಳೂರು 2, ಚಿತ್ರದುರ್ಗ 3, ದಕ್ಷಿಣ ಕನ್ನಡ 10, ದಾವಣಗೆರೆ 0, ಧಾರವಾಡ 3, ಗದಗ 0, ಹಾಸನ 3, ಹಾವೇರಿ 0, ಕಲಬುರಗಿ 0, ಕೊಡಗು 5, ಕೋಲಾರ 3, ಕೊಪ್ಪಳ 0, ಮಂಡ್ಯ 5, ಮೈಸೂರು 25, ರಾಯಚೂರು 1, ರಾಮನಗರ 0, ಶಿವಮೊಗ್ಗ 1, ತುಮಕೂರು 5, ಉಡುಪಿ 7, ಉತ್ತರ ಕನ್ನಡ 11, ವಿಜಯಪುರ 0, ಯಾದಗಿರಿ ಜಿಲ್ಲೆಯಲ್ಲಿ 0 ಕೊವಿಡ್ 19 ಪ್ರಕರಣಗಳು ದಾಖಲಾಗಿವೆ.

ಬೆಂಗಳೂರು ನಗರ ಜಿಲ್ಲೆಯಲ್ಲಿ ಕೊವಿಡ್19 ಸೋಂಕಿನಿಂದ ಒಬ್ಬರು ಮೃತಪಟ್ಟಿದ್ದಾರೆ. ದಕ್ಷಿಣ ಕನ್ನಡ, ಧಾರವಾಡ, ಕಲಬುರಗಿ, ಮಂಡ್ಯ, ಮೈಸೂರು ಹಾಗೂ ರಾಯಚೂರು ಜಿಲ್ಲೆಯಲ್ಲಿ ಕೊರೋನಾದಿಂದ ಒಬ್ಬರು ಸಾವನ್ನಪ್ಪಿದ್ದಾರೆ. ಉಳಿದ ಜಿಲ್ಲೆಗಳಲ್ಲಿ ಯಾವುದೇ ಸಾವು ಸಂಭವಿಸಿಲ್ಲ.

ನೈಟ್ ಕರ್ಫ್ಯೂ ಕ್ಯಾನ್ಸಲ್

ಕರ್ನಾಟಕ (Karnataka) ರಾಜ್ಯಾದ್ಯಂತ ವಿಧಿಸಿದ್ದ ನೈಟ್ ಕರ್ಫ್ಯೂ (Night Curfew) ಹಿಂಪಡೆದು ಸರ್ಕಾರ ಇಂದು (ನವೆಂಬರ್ 5) ಆದೇಶ ಹೊರಡಿಸಿದೆ. ರಾತ್ರಿ 10 ರಿಂದ ಬೆಳಗ್ಗೆ 5 ಗಂಟೆ ವರೆಗೆ ವಿದಿಸಿದ್ದ ಆದೇಶ ವಾಪಸ್​ ಪಡೆಯಲಾಗಿದೆ. 

ಕೊರೋನಾ ಸೋಂಕು (Coronavirus) ಪ್ರಕರಣಗಳ ಸಂಖ್ಯೆ ಕರ್ನಾಟಕದಲ್ಲಿ ಹಾಗೂ ದೇಶಾದ್ಯಂತ ಇಳಿಮುಖವಾಗಿ ಸಾಗುತ್ತಿರುವ ಹಿನ್ನೆಲೆಯಲ್ಲಿ ಆದೇಶ ವಾಪಸ್ ಪಡೆಯಲಾಗಿದೆ. ಅದರಂತೆ ಕೊರೋನಾ ಹಿನ್ನೆಲೆ ಜಾರಿಯಲ್ಲಿದ್ದ ನೈಟ್ ಕರ್ಫ್ಯೂ ಇಂದಿನಿಂದ ನವೆಂಬರ್ 05) ಇರುವುದಿಲ್ಲ.

Latest Videos
Follow Us:
Download App:
  • android
  • ios