Asianet Suvarna News Asianet Suvarna News

ದೆಹಲಿ, ಮುಂಬೈ ಮತ್ತಷ್ಟು ನಿರಾಳ: ಹೊಸ ಕೇಸು, ಸಾವು ಎರಡರಲ್ಲೂ ಗಣನೀಯ ಇಳಿಕೆ!

* ದೆಹಲಿಯಲ್ಲಿ 12651, ಮುಂಬೈನಲ್ಲಿ 1782 ಪ್ರಕರಣ ದೃಢ

* ದೆಹಲಿ, ಮುಂಬೈ ಮತ್ತಷ್ಟು ನಿರಾಳ

* ಹೊಸ ಕೇಸು, ಸಾವು ಎರಡರಲ್ಲೂ ಗಣನೀಯ ಇಳಿಕೆ ದಾಖಲು

India COVID 19 count Steep fall in Delhi Mumbai pod
Author
Bangalore, First Published May 11, 2021, 9:51 AM IST

ನವದೆಹಲಿ/ಮುಂಬೈ(ಮೇ.11): ಕೊರೋನಾ 2ನೇ ಅಲೆ ನಿಗ್ರಹದಲ್ಲಿ ದೆಹಲಿ ಮತ್ತು ಮುಂಬೈ ಮತ್ತಷ್ಟುಸಾಧನೆ ಮಾಡಿದ್ದು, ಎರಡೂ ಕಡೆ ಸೋಮವಾರ ಹೊಸ ಸೋಂಕು, ಸಾವು ಎರಡರಲ್ಲೂ ಗಣನೀಯ ಇಳಿಕೆ ಕಂಡುಬಂದಿದೆ. ಇನ್ನು ಒಟ್ಟಾರೆ ಮಹಾರಾಷ್ಟ್ರದಲ್ಲೂ ಮಾ.31ರ ಬಳಿಕ ಮೊದಲ ಬಾರಿಗೆ ಹೊಸ ಸೋಂಕಿತರ ಸಂಖ್ಯೆ 40000ಕ್ಕಿಂತ ಕೆಳಗೆ ಇಳಿದಿದೆ.

ದೆಹಲಿಯಲ್ಲಿ ಸೋಮವಾರ 12,651 ಹೊಸ ಪ್ರಕರಣಗಳು ದಾಖಲಾಗಿದ್ದು, 319 ಮಂದಿ ಕೊರೋನಾದಿಂದ ಸಾವಿಗೀಡಾಗಿದ್ದಾರೆ. ಇದೇ ವೇಳೆ ಪಾಸಿಟಿವಿಟಿ ದರ 19.10ರಷ್ಟುದಾಖಲಾಗಿದೆ. ಇದು ಕಳೆದ 1 ತಿಂಗಳ ಕನಿಷ್ಠ ಕನಿಷ್ಠ ಎನಿಸಿಕೊಂಡಿವೆ. ಅಲ್ಲದೇ ಹೊಸ ಪ್ರಕರಣಗಳು ಏ.12ರ ಬಳಿಕದ ಕನಿಷ್ಠವೆನಿಸಿಕೊಂಡಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಇನ್ನು ಮಹಾರಾಷ್ಟ್ರದಲ್ಲಿ ಸೋಮವಾರ 37236 ಜನರಲ್ಲಿ ಸೋಂಕು ದೃಢಪಟ್ಟಿದ್ದು, 549 ಜನರು ಸಾವನ್ನಪ್ಪಿದ್ದಾರೆ. ಸೋಂಕಿನ ಪ್ರಮಾಣ 40000ಕ್ಕಿಂತ ಕೆಳಗೆ ಇಳಿದಿರುವುದು 40 ದಿನಗಳ ಬಳಿಕ. ಇದೇ ಮುಂಬೈನಲ್ಲಿ ಸೋಮವಾರ 1782 ಪ್ರಕರಣ ದಾಖಲಾಗಿದೆ. ಇದು ಮೊದಲ ಅಲೆ ವೇಳೆ ದಾಖಲಾಗಿದ್ದ ದೈನಂದಿನ ಗರಿಷ್ಠ ಪ್ರಮಾಣವಾದ 2400ಕ್ಕಿಂತಲೂ ಕಡಿಮೆ ಎಂಬುದು ಗಮನಾರ್ಹ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Follow Us:
Download App:
  • android
  • ios