ನವದೆಹಲಿ(ಮೇ.17): ಕೊರೋನಾ ವೈರಸ್‌ ಪ್ರಕರಣಗಳ ಸಂಖ್ಯೆ ಇದೀಗ 90 ಸಾವಿರ ಗಡಿ ದಾಟಿದೆ. ಗುರುವಾರ ಒಂದೇ ದಿನ 4788 ಪ್ರಕರಣಗಳು ದಾಖಲಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 90326ಕ್ಕೆ ಏರಿಕೆಯಾಗಿದೆ. ಇದೇ ವೇಳೆ ಸೋಂಕಿಗೆ 111 ಮಂದಿ ಸಾವಿಗೀಡಾಗಿದ್ದು, ಈವರೆಗೆ ಮೃತರಾದವರ ಸಂಖ್ಯೆ 2790ಕ್ಕೆ ಏರಿಕೆಯಾಗಿದೆ.

"

ಇದೇ ವೇಳೆ ಮಹಾರಾಷ್ಟ್ರದಲ್ಲಿ ಕೊರೋನಾ ವೈರಸ್‌ ನಿರಂತರವಾಗಿ ವ್ಯಾಪಿಸುತ್ತಲೇ ಇದ್ದು, ಸೋಂಕಿತ ಪ್ರಕರಣಗಳ ಸಂಖ್ಯೆ 30 ಸಾವಿರ ದಾಟಿದೆ. ಶನಿವಾರ ಒಂದೇ ದಿನ ಮಹಾರಾಷ್ಟ್ರದಲ್ಲಿ 1,606 ಪ್ರಕರಣಗಳು ಪತ್ತೆಯಾಗಿದ್ದು, 67 ಮಂದಿ ಸಾವಿಗೀಡಾಗಿದ್ದಾರೆ. ಇನ್ನು ಮುಂಬೈನಲ್ಲೂ ಕೊರೋನಾ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗಿದೆ. ಮುಂಬೈನಲ್ಲಿ ಒಂದೇ ದಿನ 884 ಪ್ರಕಣಗಳು ದಾಖಲಾಗಿದ್ದು, 41 ಮಂದಿ ಸಾವಿಗೀಡಾಗಿದ್ದಾರೆ.

ರಾಜ್ಯದಲ್ಲಿ ನಿನ್ನೆ 36 ಮಂದಿಗೆ ಕೊರೋನಾ, ಒಬ್ಬನಿಂದಲೇ 14 ಜನರಿಗೆ ಸೋಂಕು!

ಗುಜರಾತಿನಲ್ಲಿ 10 ಸಾವಿರ ದಾಟಿದ ಸೋಂಕು:

ಇದೇ ವೇಳೆ ಮಹಾರಾಷ್ಟ್ರ ಹಾಗೂ ತಮಿಳುನಾಡಿನ ಬಳಿಕ ಗುಜರಾತಿನಲ್ಲಿ ಸೋಂಕಿತರ ಸಂಖ್ಯೆ 10 ಸಾವಿರ ಗಡಿ ದಾಟಿದೆ. ಶನಿವಾರ ಹೊಸದಾಗಿ 709 ಪ್ರಕರಣಗಳು ದಾಖಲಾಗಿದ್ದು, ಪ್ರಕರಣಗಳ ಸಂಖ್ಯೆ 10989ಕ್ಕೆ ಏರಿಕೆಯಾಗಿದೆ.

ಶಿವಾಜಿನಗರಕ್ಕೆ ಕಂಟಕನಾದ ‘ಪಿ-653’!

30 ನಗರದಲ್ಲಿ ಶೇ.80ರಷ್ಟು ಸೋಂಕು:

ಇದೇ ವೇಳೆ ಕೊರೋನಾ ವೈರಸ್‌ ಯಾವ ರೀತಿ ವ್ಯಾಪಿಸಿದೆ ಎಂಬುದನ್ನು ಸಮೀಕ್ಷೆ ನಡೆಸಿದ ಸಂದರ್ಭದಲ್ಲಿ ದೇಶದ 30 ನಗರ ಪಾಲಿಕೆ ಪ್ರದೇಶಗಳಲ್ಲಿ ಶೇ.80ರಷ್ಟುಕೊರೋನಾ ವೈರಸ್‌ ಪ್ರಕರಣಗಳು ಇರುವುದು ಕಂಡು ಬಂದಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.