Hindi Language ವಿಶ್ವಸಂಸ್ಥೆಯಲ್ಲಿ ಹಿಂದಿ ಬಳಕೆ ಉತ್ತೇಜನಕ್ಕೆ ಕೇಂದ್ರದಿಂದ 6 ಕೋಟಿ ರೂ!
- ವಿಶ್ವಸಂಸ್ಥೆಗೆ 6 ಕೋಟಿ ರೂಪಾಯಿ ನೀಡಿದ ಕೇಂದ್ರ
- ವಿಶ್ವಸಂಸ್ಥೆಯಲ್ಲಿನ ಭಾರತದ ಉಪ ಕಾಯಂ ರಾಯಭಾರಿ ಚೆಕ್ ವಿತರಣೆ
- ವಿಶ್ವಸಂಸ್ಥೆ ರೇಡಿಯೋದಲ್ಲಿ ಹಿಂದಿ ವಾರ್ತೆ
ವಿಶ್ವಸಂಸ್ಥೆ(ಮೇ.12): ವಿಶ್ವಸಂಸ್ಥೆಯಲ್ಲಿ ಹಿಂದಿ ಬಳಕೆಯನ್ನು ಉತ್ತೇಜಿಸುವ ತನ್ನ ಯೋಜನೆಯ ಭಾಗವಾಗಿ ಭಾರತ ಸರ್ಕಾರ, ವಿಶ್ವಸಂಸ್ಥೆಗೆ 6 ಕೋಟಿ ರು. ನೀಡಿದೆ. ವಿಶ್ವಸಂಸ್ಥೆಯಲ್ಲಿನ ಭಾರತದ ಉಪ ಕಾಯಂ ರಾಯಭಾರಿ ಆರ್.ರವೀಂದ್ರ ಅವರು ಈ ಕುರಿತ ಚೆಕ್ ಅನ್ನು, ವಿಶ್ವಸಂಸ್ಥೆಯ ಜಾಗತಿಕ ಸಂಪರ್ಕ ಇಲಾಖೆಯ ಮಿತಾ ಹೊಸಲಿ ಅವರಿಗೆ ಹಸ್ತಾಂತರಿಸಿದರು. ವಿಶ್ವದೆಲ್ಲೆಡೆ ಇರುವ ಹಿಂದಿ ಭಾಷಿಕರಿಗೆ ಜಾಗತಿಕ ವಿಷಯಗಳ ಕುರಿತು ಹಿಂದಿ ಮೂಲಕ ಅರಿವು ಮೂಡಿಸಲು 2018ರಲ್ಲಿ ಭಾರತ ಸರ್ಕಾರ ಈ ಯೋಜನೆ ಆರಂಭಿಸಿತ್ತು. ಇದರ ಭಾಗವಾಗಿ ಪ್ರತಿವಾರ ವಿಶ್ವಸಂಸ್ಥೆ ರೇಡಿಯೋದಲ್ಲಿ ಹಿಂದಿ ವಾರ್ತೆ ಇರುತ್ತದೆ. ಇದಲ್ಲದೆ ಸಾಮಾಜಿಕ ಜಾಲತಾಣಗಳ ಮೂಲಕವೂ ಸುದ್ದಿ ಬಿತ್ತರಿಸಲಾಗುತ್ತದೆ.
ರಾಜ್ಯದಲ್ಲಿ ಹಿಂದಿ ಹೇರಿಕೆ ಇಲ್ಲ: ಸಿಎಂ
ಹಿಂದಿ ಭಾಷೆ ವಿಚಾರಕ್ಕೆ ಸಂಬಂಧಿಸಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ. ಕರ್ನಾಟಕದಲ್ಲಿ ಎಂದಿಗೂ ಹಿಂದಿ ಹೇರಿಕೆ ಆಗುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ರಾಷ್ಟ್ರಭಾಷಾ ಚರ್ಚೆ ನಡುವೆ ಗಮನ ಸೆಳೆದ ಅನೇಕ್ ಟ್ರೈಲರ್; ಆಯುಷ್ಮಾನ್ ಮಾತಿಗೆ ಭಾರಿ ಪ್ರಶಂಸೆ
‘ಹಿಂದಿ ಹೇರಿಕೆ ಗುಲಾಮಗಿರಿಯ ಹೆಗ್ಗುರುತು’ ಎಂಬ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಶನಿವಾರ ಪ್ರತಿಕ್ರಿಯಿಸಿದ ಅವರು, ಅಮಿತ್ ಶಾ ಅವರು ಹಿಂದಿ ಹೇರುವಂತೆ ಅಥವಾ ಹಿಂದಿಯನ್ನು ಕಡ್ಡಾಯ ಮಾಡುವಂತೆ ಎಲ್ಲೂ ಹೇಳಿಲ್ಲ. ಅವರ ಮಾತನ್ನು ಅನಗತ್ಯವಾಗಿ ಕೆಲವರು ತಪ್ಪಾಗಿ ಅರ್ಥೈಸಿ ಜನರ ಮುಂದಿಡುತ್ತಿದ್ದಾರೆ ಎಂದರು.
ಬಿಜೆಪಿಯವರಿಗೆ ಮಾತ್ರ ಹಿಂದಿ ಬೇಕು: ವಾಟಾಳ್
ರಾಜ್ಯದಲ್ಲಿ ಹಿಂದಿ ಭಾಷೆ ಹೇರಲು ಬಿಡುವುದಿಲ್ಲ. ಹಿಂದಿ ರಾಷ್ಟ್ರಭಾಷೆ ಎಂದು ಹೇಳುತ್ತಿರುವ ಬಿಜೆಪಿಯವರಿಗೆ ಮಾತ್ರ ಹಿಂದಿ ಬೇಕಾಗಿದೆ ಎಂದು ಕನ್ನಡ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ವಾಗ್ದಾಳಿ ನಡೆಸಿದರು.
ಶುಕ್ರವಾರ ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಹಿಂದಿ ಹೇರಿಕೆ ವಿರುದ್ಧ ಪ್ರತಿಭಟನೆ ನಡೆಸಿದ ಅವರು, ಕರ್ನಾಟಕದಲ್ಲೂ ಬಿಜೆಪಿಗೆ ಹಿಂದಿ ಬೇಕಾಗಿದೆ. ಅವರು ಹಿಂದಿಯನ್ನು ರಾಷ್ಟ್ರ ಭಾಷೆಯೆಂದು ಕರೆಯುತ್ತಿದ್ದು ಹಿಂದಿ ರಾಷ್ಟ್ರ ಭಾಷೆಯಾಗಲು ಸಾಧ್ಯವಿಲ್ಲ. ಸಂವಿಧಾನಿಕವಾಗಿ ಮಾನ್ಯತೆ ಪಡೆದಿರುವ ಪ್ರತಿಯೊಂದು ಭಾಷೆಯೂ ರಾಷ್ಟ್ರಭಾಷೆಯಾಗಿದ್ದು ಕನ್ನಡವೂ ರಾಷ್ಟ್ರಭಾಷೆಯೇ ಎಂದು ಹೇಳಿದರು.
ರಾಜ್ಯದ ಶಾಸಕರುಗಳಿಗೆ ಕನ್ನಡದ ಬಗ್ಗೆ ಪ್ರಾಮಾಣಿಕತೆ ಇದ್ದರೆ ರಾಜ್ಯಪಾಲರ ಹಿಂದಿ ಭಾಷಣವನ್ನು ತಿರಸ್ಕಾರ ಮಾಡಬೇಕು. ರಾಜ್ಯಪಾಲರು ಕರ್ನಾಟಕದಲ್ಲಿ ಹಿಂದಿಯಲ್ಲಿ ಭಾಷಣ ಮಾಡದೇ ಕನ್ನಡದಲ್ಲೇ ಮಾತನಾಡುವಂತೆ ಪ್ರೇರೇಪಿಸಬೇಕು. ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಪ್ರತಿಯೊಬ್ಬ ಕನ್ನಡಿಗರ ಉಸಿರು ಎಂದ ಅವರು, ಕೇಂದ್ರ ಸರ್ಕಾರದ ಬ್ಯಾಂಕ್, ಅಂಚೆ, ರೈಲ್ವೆ ಇಲಾಖೆಗಳು ಹಿಂದಿ ಮಯವಾಗಿವೆ. ಹಿಂದಿ ಹೇರಲು ಮುಂದಾದರೆ ಹಿಂದಿ ಮತ್ತು ಬಿಜೆಪಿಯವರ ವಿರುದ್ಧವೂ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ಹಿಂದಿ ಹೇರಿಕೆಯಿಂದ ದೇಶದಲ್ಲಿ ಬಿರುಕು: ಸೋನು ನಿಗಮ್
ಭಾರತೀಯ ಭಾಷೆಗಳೆಲ್ಲವೂ ಭಾರತೀಯ ಸಂಸ್ಕೃತಿಯ ಪ್ರತೀಕ
ಬಹುಭಾಷೆ ಮತ್ತು ಬಹುಸಂಸ್ಕೃತಿ ಭಾರತದ ಪರಂಪರೆಯ ಗುರುತಾಗಿದೆ. ಭಾರತೀಯ ಭಾಷೆಗಳೆಲ್ಲವೂ ಭಾರತೀಯ ಸಂಸ್ಕೃತಿಯ ಪ್ರತೀಕ ಎಂದು ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಮುಖ್ಯಕಾರ್ಯನಿರ್ವಾಹಕ ಪ್ರೊ.ಬಿ.ವಿ. ಸಾಂಬಶಿವಯ್ಯ ತಿಳಿಸಿದರು.
ಮೈಸೂರಿನ ಊಟಿ ರಸ್ತೆಯಲ್ಲಿರುವ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಸೋಮವಾರ ನಡೆದ ಮಾತೃಭಾಷಾ ದಿವಸ ಕಾರ್ಯಕ್ರಮದಲ್ಲಿ ಮಾತನಾಡಿ ಅವರು, ಭಾಷೆ ಎಂಬುದು ಆಲೋಚನೆ- ಅಭಿಪ್ರಾಯಗಳ ಅಭಿವ್ಯಕ್ತಿಯ ಮಾಧ್ಯಮ. ಮಾತೃವಿನ ಮೂಲಕ ಮಗು ಭಾಷೆಯನ್ನು ಕಲಿಯುತ್ತದೆ. ಇಂದಿನ ಸಂದರ್ಭದಲ್ಲಿ ಮಾತೃಭಾಷೆ ಮತ್ತು ವ್ಯವಹಾರಿಕ ಭಾಷೆಯನ್ನು ಒಂದಾಗಿ ಕೊಂಡುಯ್ಯುವುದು ಒಂದು ಕಲೆ. ಮಾತೃಭಾಷೆಯನ್ನು ಉಳಿಸಬೇಕೆಂದರೆ ಅವಕಾಶ ಸಿಕ್ಕಾಗಲೆಲ್ಲಾ ಮಾತೃಭಾಷೆಯನ್ನು ಹೆಚ್ಚಾಗಿ ಬಳಸಬೇಕು. ಇದರಿಂದ ಸಂಸ್ಕೃತಿಯೂ ಕೂಡ ಬೆಳೆಯುತ್ತದೆ ಎಂದು ಹೇಳಿದರು.