ಬೆಂಗಳೂರು(ಮಾ.22): ಕೊರೋನಾ ವಿರುದ್ಧ ಸಂಪೂರ್ಣ ಭಾರತ ಇಂದು ಒಂದಾಗಿ ಹೋರಾಡಿತ್ತು. ಭಾರತದ ಯಾವುದೇ ಬಂದ್, ಪ್ರತಿಭಟನೆ, ಸಂಭ್ರಮಾಚರಣೆ ಈ ಮಟ್ಟಿಗೆ ಯಶಸ್ಸು ಕಂಡಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿ ನೀಡಿದ ಜನತಾ ಕರ್ಫ್ಯೂಗೆ ಭಾರತ ಕಂಡು ಕೇಳರಿಯದ ರೀತಿಯಲ್ಲಿ ಸ್ಪಂದನೆ ನೀಡಿದೆ. ಈ ಮೂಲಕ ಕೊರೋನಾ ವೈರಸ್ ವಿರುದ್ಧ ಹೋರಾಡಲು ಸಂಪೂರ್ಣ ಭಾರತ ಒಗ್ಗಟ್ಟಾಗಿದೆ ಎಂಬ ಸಂದೇಶ ಸಾರಿದೆ. 

ಜನತಾ ಕರ್ಫ್ಯೂ ವ್ಯಾಪಕ ಬೆಂಬಲ: ಮೋದಿ ಫಸ್ಟ್ ರಿಯಾಕ್ಷನ್.

ಭಾರತೀಯರ ಆರೋಗ್ಯ ಹಾಗೂ ಸುರಕ್ಷತೆಗಾಗಿ ಹಗಳಿರುವು ಶ್ರಮಿಸುತ್ತಿರುವ ವೈದ್ಯರು, ದಾದಿಯರು, ನರ್ಸ್, ಆಸ್ಪತ್ರೆ ಸಿಬ್ಬಂಧಿ ಸೇರಿದಂತ ಹಲವರಿಗೆ ಚಪ್ಪಾಳೆಯ ಕೃತಜ್ಞತೆ ಸಲ್ಲಿಸಲಾಯಿತು. ಇಡೀ ದೇಶವೆ ಸಂಜೆ 5 ಗಂಟೆಗೆ ಚಪ್ಪಾಳೆ, ಜಾಗಟೆ, ತಮಟೆ, ಗಂಟೆ ಮೂಲಕ ಕೃತಜ್ಞತೆಯನ್ನು ಸಲ್ಲಿಸಿದರು. ರಕ್ಷಣಾ ಸಚಿವರಾಜನಾಥ್ ಸಿಂಗ್, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಬಾಲಿವುಡ್ ಸೆಲೆಬ್ರೆಟಿಗಳು ಸೇರಿದಂತೆ ಬಹುತೇಕರು ಚಪ್ಪಾಳೆ ತಟ್ಟಿ ಕೃತಜ್ಞತೆ ಸಲ್ಲಿಸಿದರು. ಈ ಚಪ್ಪಾಳೆಯಲ್ಲಿ ಚಿಂದಿ ಆಯುವವನ ಚಪ್ಪಾಳೆ ಇಡೀ ದೇಶದ ಗಮನಸೆಳೆದಿದೆ.

"
ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಕೂಡ ಇದೇ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ.  ಬೀದಿ ಬದಿಯ ಗುಡಿಸಲಿನಲ್ಲಿನ ಅಜ್ಜಿಯೊಬ್ಬರು ತಟ್ಟೆಗೆ ಬಡಿಯುತ್ತಾ ಕೃತಜ್ಞತಾ ಚಪ್ಪಾಳೆ ಸಲ್ಲಿಸಿರಿವುದು ಮನಕಲುಕುವಂತಿದೆ. ಕುಳಿತಲ್ಲಿಂದರೆ ಕೃತಜ್ಞತಾ ಚಪ್ಪಾಳೆ ಎಲ್ಲರ ಮನ ಗೆದ್ದಿದೆ.

"

ಒಂದೆಡೆ ಚಿಂದಿ ಆಯುವವನ ಚಪ್ಪಾಳೆ ವೈರಲ್ ಆಗಿದ್ದರೆ, ಇತ್ತ ತಮಟೆ, ಊಟದ ತಟ್ಟೆ ಹಿಡಿದು ಮಹಿಳೆಯರ ಕೃತಜ್ಞತೆ ವಿಡಿಯೋ ಕೂಡ ವೈರಲ್ ಆಗಿದೆ.

"