77ನೇ ಸ್ವಾತಂತ್ರ್ಯ ದಿನಾಚರಿಸಿ ನಿದ್ರಿಸುವಂತಿಲ್ಲ, ನೆಮ್ಮದಿಯ ನಾಳೆಗಾಗಿ ಸಾಕಷ್ಟು ದೂರ ಸಾಗಬೇಕಿದೆ ಭಾರತ!
ಭಾರತ ಅದ್ಧೂರಿಯಾಗಿ 77ನೇ ಸ್ವಾತಂತ್ರ್ಯ ದಿನಾಚರಿಸಿದೆ. ಎಲ್ಲೆಡೆ ತಿರಂಗ ಹಾರಾಡಿದೆ. ಭಾರತದ ಸಾಧನೆ, ವಿಶ್ವಪಥದಲ್ಲಿ ಸಾಗುತ್ತಿರುವ ದಾರಿಯನ್ನು ನೋಡಿ ಹಿರಿ ಹಿರಿ ಹಿಗ್ಗಿದ್ದೇವೆ. ವಿಜ್ಞಾನ, ತಂತ್ರಜ್ಞಾನ, ಶಿಕ್ಷಣ, ಆರೋಗ್ಯ, ಮೂಲಸೌಕರ್ಯ, ಜನರ ಜೀವನ ಮಟ್ಟ ಸುಧಾರಣೆ ಕಂಡಿದೆ. ಹಲವು ಕ್ಷೇತ್ರದಲ್ಲಿ ಭಾರತ ಕ್ರಾಂತಿ ಮಾಡಿದೆ. ಈ ಸಾಧನೆ ನೋಡಿ ಭಾರತ ನೆಮ್ಮದಿಯಾಗಿ ನಿದ್ರಿಸುವಂತಿಲ್ಲ. ನೆಮ್ಮದಿಯ ನಾಳೆಗಾಗಿ ಭಾರತ ಇನ್ನೂ ಸಾಕಷ್ಟು ದೂರ ಸಾಗಬೇಕಿದೆ.
ಬೆಂಗಳೂರು(ಆ.16) ಭಾರತ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ಸಂಸತದಿಂದ ಆಚರಿಸಿದೆ. ದೇಶ ವಿದೇಶಗಳಲ್ಲಿ ಭಾರತದ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ ಮನೆ ಮಾಡಿತ್ತು. ಆದರೆ ಈ ಭಾರತ 1947ರ ನಂತರ ಕಟ್ಟಿದ ದೇಶ. ಕೇವಲ 77 ವರ್ಷಗಳಲ್ಲಿ ಭಾರತ ಈ ಮಟ್ಟಕ್ಕೆ ಬೆಳೆದ ನಿಂತಿದೆ. ಕಳೆದ 77 ವರ್ಷಗಳಲ್ಲಿ ಭಾರತ ನಡೆಸಿದ ಸತತ ಹೋರಾಟದ ಫಲದಿಂದ ವಿಶ್ವದ 5ನೇ ಅತೀ ದೊಡ್ಡ ಆರ್ಥಿಕತೆಯಾಗಿ ಭಾರತ ಬೆಳೆದಿದೆ. ಇದೀಗ ಭಾರತ ನೆಮ್ಮದಿಯಾಗಿ ನಿದ್ರಿಸುವಂತಿಲ್ಲ. ಭಾರತದ ನೆಮ್ಮದಿಯ ನಾಳೆಗಾಗಿ ಹಲವು ಅಡೆತಡೆಗಳನ್ನು ಎದುರಿಸಿ ಸಾಕಷ್ಟು ದೂರ ಸಾಗಬೇಕಿದೆ.
ಸಮದ್ಧಿ ತುಂಬಿದ, ಶೇಕಡಾ 97 ರಷ್ಟು ಅಕ್ಷರಸ್ತರಿದ್ದ, ಚಿನ್ನಾಭರಣಗಳಿಂದ ತುಂಬಿದ್ದ, ತಂತ್ರಜ್ಞಾನ, ಶಾಸ್ತ್ರ, ಧರ್ಮ, ಸತ್ಯ-ನ್ಯಾಯ, ಸಂಪ್ರದಾಯ, ಸಂಸ್ಕೃತಿಗಳಿಂದ ತುಂಬಿದ್ದ ಭಾರತದ ಮೇಲೆ ನಡೆದ ದಾಳಿಗಳು ಒಂದೆರಡಲ್ಲ. ಕೊನೆಗೆ ಬ್ರಿಟೀಷರ ಆಡಳತಿ ಬೇರೆ. ಇವರೆಲ್ಲಾ ದೋಚಿದ್ದು ಕೇವಲ ಭಾರತದ ಸಂಪತ್ತು ಮಾತ್ರವಲ್ಲ, ಇಲ್ಲಿನ ಆಚಾರ ವಿಚಾರ, ಸಂಸ್ಕೃತಿ, ಸಂಪ್ರದಾಯ ಜೊತೆಗೆ ಭಾರತೀಯತೆನ್ನೂ ದೋಚಿದ್ದಾರೆ. ಶತ ಶತಮಾನಗಳಿಂದ ಭಾರತ ದಾಳಿಕೋರರು, ಬ್ರಿಟಿಷರು ಕೈಗೆಳಗೆ ಗುಲಾಮರಾಗಿ ಬಾಳಿದ ಭಾರತೀಯರು ಸಂಪೂರ್ಣವಾಗಿ ವಸಾತುಶಾಹಿಯಿಂದ ಹೊರಬಂದಿಲ್ಲ ಅನ್ನೋ ಆರೋಪಗಳೂ ಇವೆ. ಇದಕ್ಕೆ ಹಲವು ಉದಾಹರಣೆ, ಸಾಕ್ಷ್ಯಗಳಿವೆ. ನಿಧಾನವಾಗಿ ಭಾರತ ನೈಜ ಭಾರತವಾಗುತ್ತಿದೆ. ವಿಶ್ವದಲ್ಲಿ ಶಕ್ತಿಯುತ ದೇಶವಾಗಿ ಹೊರಹೊಮ್ಮುತ್ತಿದೆ. ವಿಶ್ವದ ಬಲಿಷ್ಟ ರಾಷ್ಟ್ರಗಳು ಇದೀಗ ಭಾರತವನ್ನು ಬೆರಗುಗಣ್ಣಿನಿಂದ ನೋಡುತ್ತಿದೆ.
ಸ್ವಾತಂತ್ರ್ಯ ಸಂಭ್ರಮದಲ್ಲಿ ಮಣಿಪುರ, 20 ವರ್ಷದ ಬಳಿಕ ಬಾಲಿವುಡ್ ಚಿತ್ರ ಪ್ರದರ್ಶನ!
ಭಾರತ ಹಾವಾಡಿಗರ ದೇಶ, ಭಾರತ ಅನಕ್ಷರಸ್ಥರ ದೇಶ, ಭಾರತ ಗುಲಾಮರ ದೇಶ, ಭಾರತಕ್ಕೆ ಯಾವುದನ್ನು ಸ್ವಂತವಾಗಿ ಮಾಡುವ ಶಕ್ತಿ ಇಲ್ಲ. ತಂತ್ರಜ್ಞಾ, ವಿಜ್ಞಾನ ಭಾರತಕ್ಕೆ ಅರ್ಥವಾಗಲ್ಲ, ಕಾರಣ ಭಾರತ ಮೂಡನಂಬಿಕೆಯ ದೇಶ. ಹೀಗೆ ಭಾರತವನ್ನು ವಿಶ್ವದ ಎದುರು ಬ್ರಿಟಿಷರು ಬಿಂಬಿಸಿದ ಚಿತ್ರದಿಂದ ಹಂತ ಹಂತವಾಗಿ ದೇಶ ಹೊರಬಂದಿದೆ. ಜಗತ್ತನ್ನೇ ಬೆರಗೊಳಿಸುವ ರೀತಿಯಲ್ಲಿ ಭಾರತ ಮುಂದುವರಿಯುತ್ತಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ತಂತ್ರಜ್ಞಾನ ಚಂದ್ರನ ಅಂಗಳಕ್ಕೂ ತಲುಪಿದೆ.
ಭಾರತದ ರಸ್ತೆ ಹಾಗೂ ರೈಲ್ವೇ ಸಂಪರ್ಕವನ್ನು ಬ್ರಿಟಿಷರು ಹಾಕಿದ ಮಾರ್ಗಗಳಾಗಿತ್ತು. ಆದರೆ ಮೈಕೊಡವಿ ನಿಂತ ಭಾರತ ಇದೀಗ ದೇಶದ ಮೂಲೆ ಮೂಲೆಗೆ ಸಾರಿಗೆ ಸಂಪರ್ಕ ಕಲ್ಪಿಸಿದೆ. ಅತ್ಯುತ್ತಮ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಹೆದ್ದಾರಿಗಳನ್ನು ಭಾರತ ನಿರ್ಮಿಸಿದೆ. ಭಾರತೀಯ ರೈಲ್ವೇ ಅಧುನೀಕರಣಗೊಂಡಿದೆ. ವಂದೇ ಭಾರತ್ ಸೇರಿದಂತೆ ಸೂಪರ್ ಫಾಸ್ಟ್ ರೈಲುಗಳು ಓಡಾಡುತ್ತಿದೆ. ದೇಶದ ವಿಮಾನ ನಿಲ್ದಾಣಗಲ್ಲಿ ಕ್ರಾಂತಿಯಾಗಿದೆ. ವಿಮಾನಯಾನ ಪ್ರಯಾಣ ಕಬ್ಬಿಡಣ ಕಡಲೆಯಾಗಿ ಉಳಿದಿಲ್ಲ.
ಸಾಫ್ಟ್‌ವೇರ್, ಐಟಿ ಬಿಟಿ ಕ್ಷೇತ್ರದಲ್ಲಿ ಭಾರತ ಮುಂಚೂಣಿ ದೇಶದಲ್ಲಿ ಒಂದಾಗಿದೆ. ಐಟಿ ಸೇವೆಗಳನ್ನು ಭಾರತ ವಿದೇಶಕ್ಕೆ ರಫ್ತು ಮಾಡುತ್ತಿದೆ. ಸ್ಟಾರ್ಟ್ಅಪ್ ಕ್ಷೇತ್ರದಲ್ಲಿ ಭಾರತ ವಿಶ್ವದಲ್ಲೇ 3ನೇ ಸ್ಥಾ ಪಡೆದುಕೊಂಡಿದೆ. ವಿದ್ಯುತ್ ವಾಹನಗಳ ಬಳಕೆ, ನವಕರಿಸಬಹುದಾದ ಇಂಧನ ಬಳಕೆ, ಪರಿಸರ ಪೂರಕ ವಾತಾವರಣ ಸೃಷ್ಟಿಯಲ್ಲೂ ಭಾರತ ಮುಂದಿದೆ.
ಕೋವಿಡ್ ವರೆಗೆ ಭಾರತದ ಆರೋಗ್ಯ ಕ್ಷೇತ್ರದಲ್ಲಿನ ಮೂಲಭೂತ ಸೌಕರ್ಯ ಕೆಲವು ಭಾಗ, ಕೆಲವು ಆಸ್ಪತ್ರೆಗಳಿಗೆ ಸೀಮಿತವಾಗಿತ್ತು. ಆದರೆ ಕೋವಿಡ್ ಬಳಿಕ ಭಾರತ ಆರೋಗ್ಯ ಕ್ಷೇತ್ರದ ಮೂಲಭೂತ ಸೌಕರ್ಯ ಹೆಚ್ಚಿಸಲಾಗಿದೆ. ಪ್ರತಿ ಆಸ್ಪತ್ರೆಯಲ್ಲಿ ವೆಂಟಿಲೇಟರ್, ಆಕ್ಸಿಜನ್ ಸೇರಿದಂತೆ ಹಲವು ಸೌಕರ್ಯಗಳು ಇದೀಗ ಲಭ್ಯವಿದೆ. ಕೋವಿಡ್ ಎದುರಿಸಿದ ರೀತಿ ಇತರ ದೇಶಕ್ಕೆ ಮಾದರಿಯಾಗಿದೆ. ಬ್ರಿಟಿಷರು ವಿಶ್ವಕ್ಕೆ ಭಾರತದ ಕೈಯಲ್ಲಿ ಏನೂ ಆಗಲ್ಲ ಎಂದು ಬಿಂಬಿಸಿತ್ತು. ಆದರೆ ಕೋವಿಡ್ ಸಮಯದಲ್ಲಿ ವಿಶ್ವದ ಅತ್ಯುತ್ತಮ ಲಸಿಕೆ ಅಭಿವೃದ್ಧಿ ದೇಶದ ಜನರಿಗೆ ಉಚಿತವಾಗಿ ನೀಡಿತು. ಇಷ್ಟೇ ಅಲ್ಲ ಅಗತ್ಯವಿರುವ ದೇಶಗಳಿಗೆ ರಫ್ತು ಮಾಡಿತು. ಈ ಮೂಲಕ ವಸುದೈವ ಕುಟುಂಬಕಂ ಅನ್ನೋ ಮೂಲಮಂತ್ರದಂತೆ ವಿಶ್ವವನ್ನೇ ನಮ್ಮ ಪರಿವಾರ ಮಾಡಿಕೊಂಡು ಅವರ ಕಾಳಜಿಯನ್ನು ಮಾಡಿದ್ದೇವೆ.
ಪ್ರಧಾನಿ ಮೋದಿ ಸ್ವಾತಂತ್ರ್ಯ ದಿನಾಚರಣೆ ಭಾಷಣಕ್ಕೆ ದೇಶ ವಿದೇಶಗಳಿಂದ ಭಾರಿ ಮೆಚ್ಚುಗೆ!
ಹಲವು ದೇಶಗಳು ಕಳೆದ ಕೆಲ ವರ್ಷಗಳಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ದೇಶದ ಆರ್ಥಿಕತೆಯನ್ನು ಸರಿದಾರಿ ಸಾಗಿಸುತ್ತಿದೆ. ಹಲವು ಏರಿಳಿತ ಕಂಡರೂ ದೇಶದ ಆರ್ಥಿಕತೆಗೆ ಧಕ್ಕೆಯಾಗದಂತೆ ನೋಡಿಕೊಂಡಿದೆ. ಆರ್ಥಿಕತೆ ಬಿರುಗಾಳಿಗೆ ಸಿಲುಕಿಗೆ ಪಾಕಿಸ್ತಾನ, ಶ್ರೀಲಂಕಾ ಸೇರಿದಂತೆ ಹಲವು ದೇಶಗಳು ದಿವಾಳಿ ಅಂಚಿಗೆ ತಲುಪಿದೆ. ಇದರ ನಡುವೆ ಭಾರತ ದಿಟ್ಟ ಹೆಜ್ಜೆಗಳನ್ನಿಡುತ್ತಾ ಮೂರನೇ ಆರ್ಥಿಕತೆಯತ್ತ ಸಾಗುತ್ತಿದೆ.
ವಿದೇಶಿ ಬಂಡವಾಳ ಹೂಡಿಕೆ, ಖಾಸಗಿ ಕ್ಷೇತ್ರದಲ್ಲಿ ಹೂಡಿಕೆ ಹಾಗೂ ಪಾಲುದಾರಿಕೆ. ಬಲಿಷ್ಠ ರಾಷ್ಟ್ರಗಳೊಂದಿಗೆ ದ್ವಿಪಕ್ಷೀಯ ಸಂಬಂಧ ಸೇರಿದಂತೆ ಹಲವು ಕ್ರಮಗಳಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ಪ್ರಾಬಲ್ಯ ಹೆಚ್ಚಾಗಿದೆ. ಜಿ20 ಅಧ್ಯಕ್ಷತೆ ವಹಿಸಿಕೊಂಡಿರುವ ಭಾರತ ಜಮ್ಮು ಮತ್ತು ಕಾಶ್ಮೀರದಲ್ಲೂ ಸಭೆ ನಡೆಸಿ ವಿಶ್ವಕ್ಕೆ ಮಹತ್ವದ ಸಂದೇಶ ಸಾರಿದೆ.
ಭಾರತ ಎಲ್ಲವೂ ಸಾಧಿಸಿ ಆಗಿದೆ. ಇನ್ನು ಅದರ ಪಾಡಿಗೆ ಸಾಗಲಿದೆ ಅನ್ನೋ ಮನೋಭಾವನೆ ಆದರೆ ನಷ್ಟ ದೇಶಕ್ಕೆ ಆಗಲಿದೆ. ಭಾರತ ಇನ್ನಷ್ಟು ದೂರ ಸಾಗಬೇಕಿದೆ. ಶಿಕ್ಷಣ, ಆರೋಗ್ಯ ಹಾಗೂ ಮೂಲಭೂತ ಸೌಕರ್ಯದಲ್ಲೂ ಪ್ರಗತಿ ಸಾಧಿಸಬೇಕಿದೆ. ಉದ್ಯೋಗ, ಬಡತನ ಸೇರಿದಂತೆ ಹಲವು ಸವಾಲುಗಳು ಭಾರತದ ಮುಂದಿದೆ. ಕಳೆದ 77 ವರ್ಷದಲ್ಲಿ ಭಾರತ ಸಾಧಿಸಿದ ವೇಗಕ್ಕಿಂತ 100 ಪಟ್ಟು ವೇಗದಲ್ಲಿ ಭಾರತ ಸಾಗಬೇಕಿದೆ.