ಪ್ರಧಾನಿ ಮೋದಿ ಸ್ವಾತಂತ್ರ್ಯ ದಿನಾಚರಣೆ ಭಾಷಣಕ್ಕೆ ದೇಶ ವಿದೇಶಗಳಿಂದ ಭಾರಿ ಮೆಚ್ಚುಗೆ!
ಪ್ರಧಾನಿ ನರೇಂದ್ರ ಮೋದಿ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಕೆಂಪು ಕೋಟೆ ಮೇಲೆ ದೇಶವನ್ನುದ್ದೇಶಿ ಭಾಷಣ ಮಾಡಿದ್ದಾರೆ. ಸುದೀರ್ಘ 90ಕ್ಕೂ ಅಧಿಕ ನಿಮಿಷದ ಭಾಷಣದಲ್ಲಿ ಭಾರತದ ಅಭಿವೃದ್ಧಿ, ದೂರದೃಷ್ಟಿ, ವಿಶ್ವದಲ್ಲಿ ಭಾರತಕ್ಕಿರುವ ಸ್ಥಾನ ಸೇರಿದಂತೆ ಹಲವು ವಿಚಾರಗಳ ಕುರಿತು ಮಾತನಾಡಿದ್ದಾರೆ. ಮೋದಿ ಭಾಷಣಕ್ಕೆ ಇದೀಗ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ದೇಶದ ಗಣ್ಯರು, ತಜ್ಞರು, ಕ್ರೀಡಾಪಟುಗಳು, ವಿಶ್ಲೇಷಕರು ಸೇರಿದಂತೆ ಹಲವರು ಮೋದಿ ಭಾಷಣ ಶ್ಲಾಘಿಸಿದ್ದಾರೆ.

ನವದೆಹಲಿ(ಆ.15) ದೇಶದೆಲ್ಲೆಡೆ ಸ್ವಾತಂತ್ರ್ಯ ಸಂಭ್ರಮ. ಪ್ರಧಾನಿ ನರೇಂದ್ರ ಮೋದಿ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ಮಾಡಿ ದೇಶವನ್ನುದ್ದೇಶಿ ಭಾಷಣ ಮಾಡಿದ್ದಾರೆ. ಪ್ರಧಾನಿ ಮೋದಿ ಭಾಷಣಕ್ಕೆ ದೇಶ ವಿದೇಶಗಳ ಗಣ್ಯರು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಪದ್ಮಪುರಸ್ಕೃತರು, ಉದ್ಯಮಿಗಳು,ತಂತ್ರಜ್ಞಾನದ ದಿಗ್ಗಜರು, ಕ್ರೀಡಾಪಟುಗಳು, ಸೆಲೆಬ್ರೆಟಿ ಸೇರಿದಂತೆ ಹಲವು ಕ್ಷೇತ್ರದ ಗಣ್ಯರು ಹಾಗೂ ಸಾಮಾನ್ಯರು ಮೋದಿ ಭಾಷಣ ಕೊಂಡಾಡಿದ್ದಾರೆ. 90 ನಿಮಿಷಕ್ಕೂ ಅಧಿಕ ಕಾಲ ಭಾಷಣ ಮಾಡಿದ ಮೋದಿ ಎಲ್ಲಾ ಕ್ಷೇತ್ರಗಳಲ್ಲಿನ ಸಾಧನೆ ಹಾಗೂ ಮುಂದಿರುವ ಯೋಜನೆಗಳ ಕುರಿತು ಮಾತನಾಡಿದ್ದಾರೆ. ಇದೀಗ ಆಯಾ ಕ್ಷೇತ್ರದ ದಿಗ್ಗಜರು ಮೋದಿ ಮಾತನ್ನು ಶ್ಲಾಘಿಸಿದ್ದಾರೆ.
ದೇಶದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ತಡೆದು ಅಭಿವೃದ್ಧಿಗೆ ಹೆಚ್ಚಿನ ಗಮನಹರಿಸಲಾಗಿದೆ. ಸೋರಿಕೆ ತಡೆದು ಜನರ ತೆರಿಗೆ ಹಣವನ್ನು ಸಮರ್ಥವಾಗಿ ಬಳಸಿಕೊಂಡು ಮೂಲಭೂತ ಸೌಕರ್ಯ ಮೇಲ್ದರ್ಜೆಗೆ ಏರಿಸಲಾಗುತ್ತಿದೆ ಎಂದು ಮೋದಿ ಭಾಷಣದಲ್ಲಿ ಹೇಳಿದ್ದರು. ಅರ್ಜುನ ಪ್ರಶಸ್ತಿ ವಿಜೇತ ಆರ್ಚರ್ ಪಟು ಅಭಿಷೇಕ್ ವರ್ಮಾ ಮೋದಿ ಭ್ರಷ್ಟಾಚಾರ ರಹಿತ ಆಡಳಿತ ಹಾಗೂ ಮೋದಿ ಭಾಷಣವನ್ನು ಪ್ರಶಂಸಿಸಿದ್ದಾರೆ.
ಮುಂದಿನ ವರ್ಷಇದೇ ಸ್ಥಳ, ಇದೇ ಸಮಯ; ಕೆಂಪುಕೋಟೆಯಲ್ಲಿ ಮತ್ತೆ ಮೋದಿ ಸರ್ಕಾರದ ಭರವಸೆ!
ದೇಶ ಮೊದಲು ಅನ್ನೋ ಸಂದೇಶವನ್ನು ಮೋದಿ ತಮ್ಮ ಭಾಷಣದಲ್ಲಿ ಸಾರಿದ್ದಾರೆ. ಮೋದಿ ಭಾಷಣದಿಂದ ಸ್ಪೂರ್ತಿ ಪಡೆದಿದ್ದೇನೆ. ದೇಶ ಯಾವತ್ತೂ ನಮಗೆ ಮೊದಲು ಎಂದು ಅಂತಾರಾಷ್ಟ್ರೀಯ ಪದಕ ವಿಜೇತ ಕ್ರೀಡಾಪಡು ಗೌರವ್ ರಾನಾ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕರೆಕೊಟ್ಟ ದೇಶ ಮೊದಲು ಸಂದೇಶದಿಂದ ಹಲವು ಕ್ರೀಡಾಪಟುಗಳು ಪುಳಕಿತರಾಗಿದ್ದಾರೆ. ಫೆನ್ಸರ್ ಪಟು ಜಾಸ್ಮಿನ್ ಕೌರ್, ಅಂತಾರಾಷ್ಟ್ರೀಯ ಕ್ರೀಡಾಪಟು ನಿಹಾಲ್ ಸಿಂಗ್ ಸೇರಿದಂತೆ ಹಲವರು ಮೋದಿ ಮಾತುಗಳನ್ನು ಸ್ಪೂರ್ತಿಯಾಗಿ ತೆಗೆದುಕೊಂಡಿದ್ದಾರೆ.
ರೈತರು ದೇಶಕ್ಕೆ ನೀಡುತ್ತಿರುವ ಕೊಡುಗೆ ಹಾಗೂ ದೇಶದ ಅಭಿವೃದ್ಧಿಯಲ್ಲಿ ರೈತರ ಪಾತ್ರದ ಕುರಿತು ಮೋದಿ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದರು. ಮೋದಿ ಭಾಷಣವನ್ನು ಪದ್ಮಶ್ರೀ ಪ್ರಶಸ್ತಿ ಪರುಸ್ಕೃತ ತ್ಯಾಗಿ ಮುಕ್ತ ಕಂಠದಿಂದ ಹೊಗಳಿದ್ದಾರೆ. ದೇಶದಲ್ಲಿ ರೈತರ ಸಮಸ್ಯೆಗಳನ್ನು ಆಲಿಸಿ ಹಲವು ಯೋಜನೆಗಳನ್ನ ಜಾರಿಗೆ ತರಲಾಗಿದೆ.ಇದು ರೈತರಿಗೆ ಮತ್ತಷ್ಟು ಶಕ್ತಿ ನೀಡಿದೆ. ಕೆಂಪು ಕೋಟೆಯಲ್ಲಿ ರೈತರ ಕುರಿತು ಆಡಿದ ಮಾತುಗಳನ್ನು ನಿಜಕ್ಕೂ ಸಂತಸ ತಂದಿದೆ ಎಂದು ರೈತ ವೇದವೃತ ಆರ್ಯ ಹೇಳಿದ್ದಾರೆ.
ದೇಶ ಕಟ್ಟುವುದರಲ್ಲಿ ಮಹಿಳೆಯ ಪಾತ್ರದ ಕುರಿತು ಕೆಂಪುಕೋಟೆ ಮೇಲೆ ನಿಂತು ಮೋದಿ ಆಡಿದ ಮಾತುಗಳಿಂದ ಹಲವು ನಟಿಯರು ಸಂತಸಗೊಂಡಿದ್ದಾರೆ. ಈ ಕುರಿತು ಹಿರಿಯ ನಟಿ ಸರಿತಾ ಜೋಶಿ ದೇಶದಲ್ಲಿನ ಮಹಿಳೆಯರು ಅಭಿವೃದ್ಧಿಯಲ್ಲಿ ನೀಡುತ್ತಿರುವ ಕೊಡುಗೆ ಕುರಿತು ಮೆಚ್ಚುಗೆ ಮಾತಗನ್ನಾಡಿದ್ದಾರೆ. ಮೋದಿ ಭಾಷಣದಲ್ಲಿ ಈ ವಿಚಾರಗಳನ್ನು ಉಲ್ಲೇಖಿಸಿರುವುವು ಅತೀವ ಸಂತಸವಾಗಿದೆ ಎಂದಿದ್ದಾರೆ.
ಶೀಘ್ರದಲ್ಲೇ 6G ನೆಟ್‍ವರ್ಕ್ ಸೇವೆ ಆರಂಭ, ಕೆಂಪುಕೋಟೆ ಭಾಷಣದಲ್ಲಿ ಮೋದಿ ಭರವಸೆ!
ಭಾರತ 3ನೇ ಅತೀ ದೊಡ್ಡ ಆರ್ಥಿಕತೆಯಾಗಿ ಅಭವೃದ್ಧಿಯಾಗಲಿದೆ ಎಂದು ಮೋದಿ ದೇಶದ ಜನರಲ್ಲಿ ಪಾಸಿಟೀವ್ ಅಪ್ರೋಚ್ ತುಂಬಿದ್ದಾರೆ. ಈಗಾಗಲೇ 5ನೇ ಆರ್ಥಿಕತೆಯಾಗಿರುವ ಭಾರತ ಖಂಡಿತವಾಗಿ ನಿಗದಿತ ಸಮಯದೊಳಗೆ 3ನೇ ಆರ್ಥಿಕತೆಯಾಗಲಿದೆ. ಮೋದಿ ಸ್ಪೂರ್ತಿದಾಯಕ ಮಾತುಗಳಿಗೆ ಧನ್ಯವಾದ ಎಂದು CLSA ಸಂಶೋಧನಾ ಸಂಸ್ಥೆ ಮುಖ್ಯಸ್ಥ ಇಂದ್ರಾನಿಲ್ ಸೇನಾ ಗುಪ್ತ ಹೇಳಿದ್ದಾರೆ
ಖತಕ್ ಡ್ಯಾನ್ಸರ್ ನಳಿನಿ ಅಸ್ತಾನ, ಪದ್ಮಶ್ರೀ ಪುರಸ್ಕೃತ ವೈದ್ಯೆ ಅಲ್ಕಾ ಕೃಪ್ಲಾನಿ, ಗಾಯಕಿ ಕೆಎಸ್ ಚಿತ್ರ ಸೇರಿದಂತ ಹಲವು ಗಣ್ಯರು ಪ್ರಧಾನಿ ಮೋದಿ ಭಾಷಣವನ್ನು ಹೊಗಳಿದ್ದಾರೆ.