Asianet Suvarna News Asianet Suvarna News

ಚೀನಾ ವಸ್ತು, ಸೇವೆ ಪಡೆಯಲು ಭಾರತದಿಂದ ಮತ್ತಷ್ಟು ನಿಷೇಧ!

ಚೀನಾ ವಸ್ತು, ಸೇವೆ ಪಡೆಯಲು ಭಾರತದಿಂದ ಮತ್ತಷ್ಟು ನಿಷೇಧ|  ಸಾಮಾನ್ಯ ಹಣಕಾಸು ಕಾಯ್ದೆ 2017ಕ್ಕೆ ತಿದ್ದುಪಡಿ|  ವೈದ್ಯಕೀಯ ಸಾಮಗ್ರಿಗಳು ಆಮದಿಗೆ ಪೂರ್ಣ ವಿನಾಯ್ತಿ 

India builds a huge wall to stop Chinese firms from getting govt contracts
Author
Bangalore, First Published Jul 25, 2020, 12:45 PM IST

ನವದೆಹಲಿ(ಜು.25): ಭಾರತದೊಂದಿಗೆ ಗಡಿ ಹೊಂದಿಕೊಂಡಿರುವ ಯಾವುದೇ ದೇಶದಿಂದ ದೇಶದ ಯಾವುದೇ ಸರ್ಕಾರಿ ಸ್ವಾಮ್ಯದ ಕಂಪನಿಗಳು ಯಾವುದೇ ವಸ್ತು ಅಥವಾ ಸೇವೆಯನ್ನು ಪಡೆಯುವುದನ್ನು ನಿಷೇಧಿಸಿ ಭಾರತ ಸರ್ಕಾರ ಹೊರಡಿಸಿದೆ. ಸಾಮಾನ್ಯ ಹಣಕಾಸು ಕಾಯ್ದೆ 2017ಕ್ಕೆ ತಿದ್ದುಪಡಿ ಮಾಡಿ ಕೇಂದ್ರ ಸರ್ಕಾರ ಶುಕ್ರವಾರ ತಡರಾತ್ರಿ ಆದೇಶ ಹೊರಡಿಸಿದೆ.

ರಹಸ್ಯ ಕಾದಿಡಲು ಇನ್ನಷ್ಟು ಚೀನಾ ರಾಯಭಾರ ಕಚೇರಿ ಬಂದ್‌: ಟ್ರಂಪ್‌

ಆದೇಶದಲ್ಲಿ ಯಾವುದೇ ದೇಶಗಳ ಹೆಸರು ಹೇಳದೇ ಇದ್ದರೂ, ಅದು ನೇರವಾಗಿ ಚೀನಾ ದೇಶದ ಕಂಪನಿಗಳು ಭಾರತಕ್ಕೆ ಯಾವುದೇ ವಸ್ತುಗಳನ್ನು ರಫ್ತು ಮಾಡುವುದನ್ನು ತಡೆಯುವ ಉದ್ದೇಶ ಹೊಂದಿದೆ ಎನ್ನಲಾಗಿದೆ.

ಅದರೆ ಈ ತಿದ್ದುಪಡಿಯಲ್ಲಿ ಕೆಲವೊಂದು ವಿನಾಯ್ತಿ ನೀಡಲಾಗಿದೆ. ವೈದ್ಯಕೀಯ ಸಾಮಗ್ರಿಗಳು ಆಮದಿಗೆ ಪೂರ್ಣ ವಿನಾಯ್ತಿ ನೀಡಲಾಗಿದೆ. ಜೊತೆಗೆ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನಾ ಮಂಡಳಿಯಲ್ಲಿ ನೊಂದಾಯಿತ ಕಂಪನಿಗಳಿಗೆ ರಫ್ತು ಮಾಡಲು ಅವಕಾಶ ಕಲ್ಪಿಸಲಾಗಿದೆ.

Follow Us:
Download App:
  • android
  • ios