Asianet Suvarna News Asianet Suvarna News

'ವೀರಯೋಧನ ಛಿದ್ರ ದೇಹ ನನ್ನಲ್ಲಿ ಕಿಚ್ಚು ಹಚ್ಚಿತು'; ಯುದ್ಧದ ಮೆಲುಕು ಹಾಕಿದ ದಕ್ಷಿಣ ಕನ್ನಡದ ಯೋಧ

‘ಕಾರ್ಗಿಲ್‌ ವಿಜಯ ದಿವಸ್‌(ಜು.26) ಆಚ​ರ​ಣೆಯ ಈ ಸಂದ​ರ್ಭ​ದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಯೋಧ ಪ್ರವೀಣ್‌ ಶೆಟ್ಟಿಅವರು ಆ ಯುದ್ಧದ ಕುರಿತ ರೋಚಕ ಕ್ಷಣ​ಗ​ಳನ್ನು ಬಿಚ್ಚಿ​ಟ್ಟಿದ್ದು ಹೀಗೆ. 21 ವರ್ಷಗಳ ಹಿಂದಿನ ಆ ಯುದ್ಧದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಭಾರತೀಯ ಸೇನೆಯಲ್ಲಿದ್ದ ವಿಶ್ವದ ಏಕೈಕ ಹೆವಿ ಮೋಟಾರ್‌ ರೆಜಿಮೆಂಟ್‌ನ ಯೋಧ ಇವ​ರು. ಉಳ್ಳಾಲದ ಪಿಲಾರು ಮೇಗಿನಮನೆಯವರಾದ ಪ್ರವೀಣ್‌ ಶೆಟ್ಟಿಶತ್ರು​ಗಳ ವಿರು​ದ್ಧ ಕೆಚ್ಚೆದೆಯ ಹೋರಾಟ ಮಾಡಿ ‘ಆಪರೇಶನ್‌ ವಿಜಯ್‌ ಸ್ಟಾರ್‌’ ಪದಕದ ಗೌರ​ವಕ್ಕೆ ಪಾತ್ರ​ರಾ​ದವರು.

Kargil Vijay diwas mangaluru Soldier recalls indo pak war
Author
Bengaluru, First Published Jul 26, 2020, 9:20 AM IST

ಮಂಗಳೂರು (ಜು. 26): ‘ಬಾರಾಮುಲ್ಲಾದಿಂದ ಶ್ರೀನಗರಕ್ಕೆ ಹೋಗೋ ದಾರಿಯಲ್ಲಿ ಸೈನಿಕರ ಮೃತದೇಹಗಳನ್ನು ಹೊತ್ತ ಸೇನಾ ವಾಹನ ಬಂತು. ಇಣುಕಿ ನೋಡಿದ್ರೆ ನನ್ನದೇ ರೆಜಿಮೆಂಟ್‌ನ ಕಾಮರಾಜ್‌ ದೇಹ ಛಿದ್ರ ಛಿದ್ರವಾದ ಸ್ಥಿತಿಯಲ್ಲಿತ್ತು. ಕಾಲು ಮತ್ತು ತಲೆ ಭಾಗ​ವಷ್ಟೇ ಇತ್ತು. ಅದನ್ನು ಕಂಡಿದ್ದೇ ತಡ ನನ್ನ​ಲ್ಲಿದ್ದ ಯುದ್ಧದ ಕುರಿತ ಅವ್ಯಕ್ತ ಭಯ​ವೆಲ್ಲ ಹೊರಟುಹೋಯ್ತು, ಹೋರಾಡುವ ಕೆಚ್ಚು ಹುಟ್ಟಿತು. ಕೊನೆ​ಗೆ ಯುದ್ಧ ಮುಗಿಯುವವರೆಗೂ ಭಯವೆಂಬುದು ನನ್ನತ್ತ ಸುಳಿ​ಯಲೇ ಇ​ಲ್ಲ!’

‘ಕಾರ್ಗಿಲ್‌ ವಿಜಯ ದಿವಸ್‌(ಜು.26) ಆಚ​ರ​ಣೆಯ ಈ ಸಂದ​ರ್ಭ​ದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಯೋಧ ಪ್ರವೀಣ್‌ ಶೆಟ್ಟಿಅವರು ಆ ಯುದ್ಧದ ಕುರಿತ ರೋಚಕ ಕ್ಷಣ​ಗ​ಳನ್ನು ಬಿಚ್ಚಿ​ಟ್ಟಿದ್ದು ಹೀಗೆ. 21 ವರ್ಷಗಳ ಹಿಂದಿನ ಆ ಯುದ್ಧದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಭಾರತೀಯ ಸೇನೆಯಲ್ಲಿದ್ದ ವಿಶ್ವದ ಏಕೈಕ ಹೆವಿ ಮೋಟಾರ್‌ ರೆಜಿಮೆಂಟ್‌ನ ಯೋಧ ಇವ​ರು. ಉಳ್ಳಾಲದ ಪಿಲಾರು ಮೇಗಿನಮನೆಯವರಾದ ಪ್ರವೀಣ್‌ ಶೆಟ್ಟಿಶತ್ರು​ಗಳ ವಿರು​ದ್ಧ ಕೆಚ್ಚೆದೆಯ ಹೋರಾಟ ಮಾಡಿ ‘ಆಪರೇಶನ್‌ ವಿಜಯ್‌ ಸ್ಟಾರ್‌’ ಪದಕದ ಗೌರ​ವಕ್ಕೆ ಪಾತ್ರ​ರಾ​ದವರು. ಸೇನೆಯಿಂದ ನಿವೃತ್ತರಾದ ಬಳಿಕ ಪ್ರವೀಣ್‌ ಅವ​ರು ಮಂಗಳೂರಿನ ಕೆನರಾ ಬ್ಯಾಂಕ್‌ನಲ್ಲಿ ಸೆಕ್ಯೂರಿಟಿ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಹುತಾತ್ಮ ಯೋಧರ ಹೆಸರಲ್ಲಿ 800 ಗಿಡಗಳ 'ಕಾರ್ಗಿಲ್ ವನ'

ಆಗಿನ್ನೂ 18: ಕಾರ್ಗಿಲ್‌ ಯುದ್ಧದ ವೇಳೆ ನನಗಿನ್ನೂ 18 ವರ್ಷ. ರಜೆಯಲ್ಲಿ ಊರಿಗೆ ಬಂದಿದ್ದೆ. ಮರುದಿನವೇ ಸೇನೆಯಿಂದ ಕರ್ತವ್ಯಕ್ಕೆ ಹಾಜರಾಗಲು ಸೂಚನೆ ಬಂತು. ಮಾರನೇ ದಿನವೇ ಹೊರಟಿದ್ದೆ. ಹೆಚ್ಚಾಗಿ ರಾತ್ರಿ ಹೊತ್ತೇ ಯುದ್ಧ ನಡೆಯುತ್ತಿತ್ತು. ಒಂದೊಂದೇ ಪ್ರದೇಶಗಳನ್ನು ಆಕ್ರಮಿಸುತ್ತ ಮುನ್ನುಗ್ಗುತ್ತಿದ್ದೆವು. ನಮ್ಮ ರೆಜಿಮೆಂಟ್‌ ಮೊದಲು ಶತ್ರುಗಳತ್ತ ಮುನ್ನುಗ್ಗಿ ಇನ್ಫ್ರೆಂಟ್ರಿ ದಾಳಿಗೆ ಗ್ರೌಂಡ್‌ ಕ್ಲಿಯರ್‌ ಮಾಡಬೇಕಿತ್ತು. ನಮ್ಮ ರೆಜಿಮೆಂಟ್‌ ಶ್ರೀನಗರದಿಂದ ಸೋನಾಮಾರ್ಗ್‌, ನಂತರ ಮಂದ್ರಾಸ್‌ ತಲುಪಿತು. ನಂತರ ಯುದ್ಧ ಭೂಮಿಯ ಅತಿ ಮುಖ್ಯಭಾಗವಾದ ಪೊಲೊಲಿಂಗ್‌ ಪ್ರದೇಶಕ್ಕೆ ತೆರ​ಳಿತು. ಅಲ್ಲಿಂದ ಗುಡ್ಡದ ಮೇಲೆ ಬೀಡುಬಿಟ್ಟಿದ್ದ ಶತ್ರು ಸೈನಿಕರ ಮೇಲೆ ದಾಳಿ ನಡೆಸಬೇಕಿತ್ತು. ರಾತ್ರಿ ಹೊತ್ತು ವೀರಾವೇಶದ ಯುದ್ಧ ನಡೆಯಿತು. ಶತ್ರು​ಗಳ ವಶ​ದ​ಲ್ಲಿದ್ದ ‘ತ್ರಿಬಲ್‌ ಮಂಜಿಲ್‌’ ಪ್ರದೇ​ಶ​ದಲ್ಲಿ ನಡೆದ ಕಾದಾ​ಟ​ದಲ್ಲಿ ನಮ್ಮ ತಂಡ 47 ಪಾಕಿ​ ಸೈನಿಕರನ್ನು ಹೊಡೆ​ದು​ರು​ಳಿಸಿ ವಿಜ​ಯ​ಸಾ​ಧಿ​ಸಿತು. ಆದರೆ, ಆ ಹೋರಾ​ಟ​ದ​ಲ್ಲಿ ನಮ್ಮ ಕಣ್ಣೆದುರೇ ಇಬ್ಬರು ಅಧಿಕಾರಿಗಳು, ಒಬ್ಬರು ಜೆಸಿಒ, 6 ಜವಾನರು ಹುತಾತ್ಮರಾದರು.

ಮುಂದಿನ ಗುರಿ ಬೆಟಾಲಿಕ್‌, ಮಸ್ಕೊವಲಿ. ಕೊಡಗಿನ ಯೋಧ ಕಾವೇರಪ್ಪ ಜತೆ​ಗಿ​ದ್ದ​ರು. ಸ್ಲೀಪ್‌ ಆ್ಯಂಡ್‌ ಸಚ್‌ರ್‍ ಯುದ್ಧಕ್ಕೆ ನಮ್ಮನ್ನು ನಿಯೋಜಿಸಲಾಗಿತ್ತು. ನಾವು 10 ಮಂದಿ ತೆವಳುತ್ತ ಮುನ್ನಡೆಯುತ್ತಿದ್ದೆವು. ಆಗಲೇ ಶತ್ರು ಸೈನಿಕರಿಂದ ಏರ್‌ ಬ್ಲಾಸ್ಟ್‌ ಆಗತೊಡಗಿತು. ಅದರ ತೀವ್ರತೆಗೆ ಒಂದ​ಷ್ಟುಮಂದಿ ಕಲ್ಲಿನ ಎಡೆಗೆ ನಿಂತು ರಕ್ಷಿಸಿಕೊಂಡೆವು. ವಾಹ​ನದ ಅಡಿ​ಯ​ಲ್ಲಿದ್ದ ಕಾವೇರಪ್ಪ ಗಂಭೀರ ಗಾಯ​ಗೊಂಡರೆ, ರಾಜಸ್ಥಾನದ ದಶರಥ್‌ ಸ್ಥಳದಲ್ಲೇ ಹುತಾತ್ಮರಾದರು.

11 ಸಾವಿರ ಅಡಿ ಎತ್ತರದಲ್ಲಿರುವ ನೀಮು: ಕಾರ್ಗಿಲ್ ಯುದ್ಧ ವೇಳೆ ಪ್ರಮುಖ ಪಾತ್ರ ವಹಿಸಿದ್ದ ತಾಣ!

ಬಟ್ಟೆಯೂ ಇರಲಿಲ್ಲ: ಕೊನೇ ಯುದ್ಧ ನಡೆ​ದ​ದ್ದು ‘ಟೈಗರ್‌ ಹಿಲ್‌’ ಪ್ರದೇ​ಶ​ದ ಸನಿಹವೇ ಇದ್ದ ಸ್ಯಾಂಡೊನಾಳದಲ್ಲಿ. ಎರಡೂ ಕಡೆ ಗುಡ್ಡ, ನಡುವೆ ನದಿಯಿರು​ವ ಪ್ರದೇಶ ಅದು. ಅಲ್ಲಿ ಬೀಡುಬಿಟ್ಟಿದ್ದ ಶತ್ರುಗಳ ಪೋಸ್ಟ್‌ನ್ನು ವೀರಾ​ವೇ​ಶ​ದಿಂದ ಪುಡಿಗಟ್ಟಿದೆವು. ಬೆಟ್ಟದ ಮೇಲೂ ಯುದ್ಧ ಸಾಗಿತ್ತು. ಇನ್ನು ‘ಟೈಗರ್‌ ಹಿಲ್‌’ ಮೇಲೆ ಹೋರಾಡಿ ಸಾಯುತ್ತಿದ್ದ ನಮ್ಮ ಯೋಧರ ಮೃತ​ದೇ​ಹ​ಗ​ಳನ್ನು ಸುತ್ತಲೂ ಬಟ್ಟೆಯಿರಲಿಲ್ಲ. ನಮ್ಮಲ್ಲಿದ್ದ ಸ್ಲೀಪಿಂಗ್‌ ಬ್ಯಾಗ್‌, ಬೆಡ್‌ಶೀಟ್‌ಗಳಲ್ಲಿ ಸುತ್ತಿ ಪಾರ್ಥಿವ ಶರೀ​ರ​ವ​ನ್ನು ವಾ​ಪಸ್‌ ಕಳು​ಹಿ​ಸಿ​ಕೊ​ಡ​ಲಾ​ಯಿ​ತು. ಯುದ್ಧ​ದಲ್ಲಿ ಪ್ರತಿ ಸಲ ನಮ್ಮ​ವರು ಶತ್ರು​ಗಳ ಗುಂಡಿಗೆ ಬಲಿ​ಯಾ​ದಾಗ ನಮ್ಮ ರೋಷ ಉಕ್ಕುತ್ತಲೇ ಇತ್ತು ಎಂದು ಹೇಳು​ತ್ತಾರೆ ಪ್ರವೀ​ಣ್‌.

ಆಪ​ರೇ​ಷನ್‌ ವಿಜಯ್‌ ಯಶ​ಸ್ವಿ​ಯಾದ ಬಳಿಕ ನಾವು 7 ಮಂದಿ ಕೆಲ​ದಿ​ನ​ಗಳ ನಂತರ ಉರಿ ಬಳಿ ಬರುತ್ತಿದ್ದಾಗ ನಮ್ಮ ವಾಹನ ನೆಲಬಾಂಬ್‌ ಸಿಡಿದು ಛಿದ್ರವಾಯಿತು. ಐವರು ಸ್ಥಳದಲ್ಲೇ ಹುತಾತ್ಮರಾದರು. ಉಳಿದದ್ದು ನಾನು, ಮತ್ತೊ​ಬ್ಬ​ರು. ನನ್ನ ಹೆಗಲು ಛಿದ್ರಗೊಂಡಿತ್ತು. ಮೂಗು, ಕಿವಿ ತುಂಡಾಗಿತ್ತು. ಹೊಟ್ಟೆ, ಕೈ ಮತ್ತಿತರ ಭಾಗಗಳಿಗೆ ಮಾರಣಾಂತಿಕ ಏಟು ಬಿದ್ದಿತ್ತು. ಬಾರಾಮುಲ್ಲಾದಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬದು​ಕಿ​ದೆ. ಇದಾಗಿ 21 ವರ್ಷ ಕಳೆ​ದಿದೆ. ಆದರೂ ಅಂದಿನ ರಕ್ತಸಿಕ್ತ ದೇಹಗಳು, ಛಲಬಿಡದ ಕೆಚ್ಚು ಇನ್ನೂ ಕಣ್ಣೆ​ದುರು ಬರು​ತ್ತಲೇ ಇರು​ತ್ತದೆ ಎಂದು ಸ್ಮರಿಸುತ್ತಾರೆ ಪ್ರವೀಣ್‌ ಶೆಟ್ಟಿ.

- ಸಂದೀಪ್‌ ವಾಗ್ಲೆ

Follow Us:
Download App:
  • android
  • ios