ಭಾರತ ಈಗ ವಿಶ್ವದ 3ನೇ ಅತೀ ದೊಡ್ಡ ಮೆಟ್ರೋ ಜಾಲ ಹೊಂದಿರುವ ದೇಶ
ಪ್ರಧಾನಿ ಮೋದಿ ಇಂದು ದೆಹಲಿ-ಗಾಜಿಯಾಬಾದ್-ಮೀರತ್ ನಮೋ ಭಾರತ್ ಕಾರಿಡಾರ್‌ನ 13 ಕಿ.ಮೀ ವಿಭಾಗವನ್ನು ಉದ್ಘಾಟಿಸಲಿದ್ದಾರೆ. ಇದರೊಂದಿಗೆ ಭಾರತದ ಮೆಟ್ರೋ ಜಾಲ 1000 ಕಿ.ಮೀ. ತಲುಪಲಿದ್ದು, ವಿಶ್ವದ 3ನೇ ಅತಿದೊಡ್ಡ ಮೆಟ್ರೋ ನೆಟ್‌ವರ್ಕ್ ಎನಿಸಿಕೊಳ್ಳಲಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಇಂದು 11 ಗಂಟೆಗೆ ದೆಹಲಿಯ ಸಾಹಿಬಾಬಾದ್ ಮತ್ತು ನ್ಯೂ ಅಶೋಕ್ ನಗರ ನಡುವಿನ ನಮೋ ಭಾರತ್ ಕಾರಿಡಾರ್‌ನ ಹೆಚ್ಚುವರಿ 13 ಕಿಲೋಮೀಟರ್ ದೆಹಲಿ ವಿಭಾಗವನ್ನು ಉದ್ಘಾಟಿಸಲಿದ್ದಾರೆ. ಇದರೊಂದಿಗೆ ಭಾರತದ ಮೆಟ್ರೋ ಜಾಲ 1000 ಕಿ.ಮೀ ಗಳಷ್ಟು ದೊಡ್ಡ ವ್ಯಾಪ್ತಿಯನ್ನು ತಲುಪಿದ್ದು, ಈ ಮೂಲಕ ವಿಶ್ವದ 3ನೇ ಅತೀ ದೊಡ್ಡ ಮೆಟ್ರೋ ನೆಟ್‌ವರ್ಕ್ ಜಾಲ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಹೌದು ಭಾರತವು ಈಗ ವಿಶ್ವದ 3 ನೇ ಅತಿದೊಡ್ಡ ಮೆಟ್ರೋ ಜಾಲವನ್ನು ಹೊಂದಿದ ದೇಶ ಎನಿಸಿದೆ. ಭಾರತದಲ್ಲಿ ಮೆಟ್ರೋ ರೈಲು ಜಾಲ 1000 ಕಿ.ಮೀ.ಗೆ ವಿಸ್ತರಣೆಯಾಗಿದ್ದು, ಇಷ್ಟು ದೊಡ್ಡ ಮೆಟ್ರೋ ನೆಟ್‌ವರ್ಕ್ ಹೊಂದಿರುವ ಭಾರತವು ಚೀನಾ ಮತ್ತು ಅಮೆರಿಕದ ನಂತರ ವಿಶ್ವದ ಮೂರನೇ ಅತಿದೊಡ್ಡ ಮೆಟ್ರೋ ರೈಲು ಜಾಲವನ್ನು ಹೊಂದಿರುವ ದೇಶವೆನಿಸಿದೆ. ದೆಹಲಿ ಮೆಟ್ರೋದ ಮೆಜೆಂಟಾ ಲೈನನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಉದ್ಘಾಟಿಸಲಿದ್ದಾರೆ.
ಉತ್ತರ ಪ್ರದೇಶದ ಸಾಹಿಬಾಬಾದ್ ಮತ್ತು ದೆಹಲಿಯ ನ್ಯೂ ಅಶೋಕ್ ನಗರ ನಡುವೆ ನಿರ್ಮಿಸಲಾದ ಈ ದೆಹಲಿ-ಗಾಜಿಯಾಬಾದ್-ಮೀರತ್ ನಮೋ ಭಾರತ್ ಕಾರಿಡಾರ್‌ನ (ಮೆಜೆಂಟಾ ಲೈನ್)13 ಕಿಮೀ ಉದ್ದದ ವಿಭಾಗವನ್ನು ಇಂದು ಪ್ರಧಾನಿ ಉದ್ಘಾಟಿಸಲಿದ್ದಾರೆ. ಇಂದು ಭಾನುವಾರ(5/01/2025) ಈ ಮಾರ್ಗವನ್ನು ಉದ್ಘಾಟಿಸಲಿರುವ ಪ್ರಧಾನಿ ಮೋದಿ ನಂತರ ಅದೇ ರೈಲಿನಲ್ಲಿ ಸಾಹಿಬಾಬಾದ್‌ನಿಂದ ನ್ಯೂ ಅಶೋಕ ನಗರಕ್ಕೆ ಸಂಚರಿಸಲಿದ್ದಾರೆ.
ಇಂದು ಸಂಜೆ 5 ಗಂಟೆಯ ನಂತರ ಈ ಮಾರ್ಗವೂ ಸಾರ್ವಜನಿಕರ ಪ್ರಯಾಣಕ್ಕೆ ತೆರೆದುಕೊಳ್ಳಲಿದೆ. 15 ನಿಮಿಷಗೊಮ್ಮೆ ಈ ಮಾರ್ಗದಲ್ಲಿ ರೈಲುಗಳು ಸಂಚರಿಸಲಿವೆ. ನ್ಯೂ ಅಶೋಕ್ ನಗರ ನಿಲ್ದಾಣದಿಂದ ಮೀರತ್ ಸೌತ್‌ಗೆ ಸ್ಟ್ಯಾಂಡರ್ಡ್ ಕೋಚ್‌ಗೆ 150 ರೂ ಮತ್ತು ಪ್ರೀಮಿಯಂ ಕೋಚ್‌ಗೆ 225 ರೂ. ದರ ನಿಗದಿ ಮಾಡಲಾಗಿದೆ. ಹೊಸದಾಗಿ ಉದ್ಘಾಟನೆಗೊಂಡ 13 ಕಿಮೀ ವಿಭಾಗದಲ್ಲಿ, ಆರು ಕಿಮೀ ಅಂಡರ್‌ಗ್ರೌಂಡ್ ಪ್ರಯಾಣವಾಗಿದ್ದು, ಕಾರಿಡಾರ್, ಆನಂದ್ ವಿಹಾರ್‌ನಲ್ಲಿ ಪ್ರಮುಖ ನಿಲ್ದಾಣವನ್ನು ಒಳಗೊಂಡಿದೆ. ನಮೋ ಭಾರತ್ ರೈಲುಗಳು ಅಂಡರ್‌ಗ್ರೌಂಡ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವುದು ಇದೇ ಮೊದಲು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಮೋ ಭಾರತ್ ರೈಲುಗಳು ಇದುವರೆಗೆ 50 ಲಕ್ಷ ಪ್ರಯಾಣಿಕರಿಗೆ ಸೇವೆ ಸಲ್ಲಿಸಿವೆ. ಈಗ ಈ ಹೊಸ ಮಾರ್ಗದ ಉದ್ಘಾಟನೆಯೊಂದಿಗೆ ನಮೋ ಭಾರತ್ ರೈಲುಗಳು ಈಗ ದೆಹಲಿಗೆ ಆಗಮಿಸಲಿವೆ. ಪ್ರಧಾನಮಂತ್ರಿಯವರು ಕಳೆದ ವರ್ಷ ಅಕ್ಟೋಬರ್ 20 ರಂದು ಸಾಹಿಬಾಬಾದ್ ಮತ್ತು ದುಹೈ ಡಿಪೋ ನಡುವಿನ 17 ಕಿಮೀ ಆದ್ಯತಾ ವಿಭಾಗವನ್ನು ಉದ್ಘಾಟಿಸಿದರು.