ಕಳೆದ ಸೆಪ್ಟೆಂಬರ್‌ನಲ್ಲಿ ಆಗಮಿಸಿದ್ದ 8 ಚೀತಾಗಳನ್ನು ಮಧ್ಯಪ್ರದೇಶಧ ಅರಣ್ಯಕ್ಕೆ ಬಿಟ್ಟು ಅವು ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುತ್ತಿರುವ ನಡುವೆಯೇ 2ನೇ ಹಂತದಲ್ಲಿ ಆಫ್ರಿಕಾ ಚೀತಾಗಳು ಈ ತಿಂಗಳೇ ಭಾರತಕ್ಕೆ ಆಗಮಿಸುವ ಸಾಧ್ಯತೆ ಇದೆ.
ನವದೆಹಲಿ: ಕಳೆದ ಸೆಪ್ಟೆಂಬರ್‌ನಲ್ಲಿ ಆಗಮಿಸಿದ್ದ 8 ಚೀತಾಗಳನ್ನು ಮಧ್ಯಪ್ರದೇಶಧ ಅರಣ್ಯಕ್ಕೆ ಬಿಟ್ಟು ಅವು ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುತ್ತಿರುವ ನಡುವೆಯೇ 2ನೇ ಹಂತದಲ್ಲಿ ಆಫ್ರಿಕಾ ಚೀತಾಗಳು ಈ ತಿಂಗಳೇ ಭಾರತಕ್ಕೆ ಆಗಮಿಸುವ ಸಾಧ್ಯತೆ ಇದೆ. ದಕ್ಷಿಣ ಆಫ್ರಿಕಾದಿಂದ 12 ಚೀತಾಗಳ ಎರಡನೇ ಬ್ಯಾಚ್ ಅನ್ನು ಇದೇ ಜನವರಿಯಲ್ಲಿ ಭಾರತದ ರಾಷ್ಟ್ರೀಯ ಉದ್ಯಾನವನ ಕುನೊಗೆ ಸ್ಥಳಾಂತರಿಸುವ ಸಾಧ್ಯತೆಗಳಿದ್ದು ಈ ಕುರಿತು ಆಫ್ರಿಕಾ ಅಧಿಕಾರಿಗಳೊಂದಿಗಿನ ಮಾತುಕತೆ ಮುಂದುವರೆದ ಹಂತದಲ್ಲಿದೆ ಎಂದು ಕೇಂದ್ರ ಪರಿಸರ ಸಚಿವಾಲಯದ ಮೂಲಗಳು ತಿಳಿಸಿವೆ. ಈ ಬಾರಿ ದ.ಆಫ್ರಿಕಾದಿಂದ 12-14 ಚೀತಾಗಳನ್ನು (8-10 ಗಂಡು, 4-6 ಹೆಣ್ಣು) ಆಮದು ಮಾಡಿಕೊಳ್ಳಲಾಗುತ್ತಿದೆ ಎನ್ನಲಾಗಿದೆ. ಚೀತಾಗಳ ಮೊದಲ ಬ್ಯಾಚನ್ನು ನಮೀಬಿಯಾದಿಂದ ಆಮದು ಮಾಡಿಕೊಳ್ಳಲಾಗಿತ್ತು. ಭಾರತದಲ್ಲಿ ಚೀತಾ ಸಂತತಿ ಅಳಿಸಿ 70 ವರ್ಷಗಳಾಗಿದ್ದು ಇವುಗಳ ಅಸ್ತಿತ್ವವನ್ನು ಮರುಪರಿಚಯಿಸಲು ವನ್ಯಜೀವಿ ಇಲಾಖೆಯು ಸಿದ್ಧಪಡಿಸಿದ ಕ್ರಿಯಾ ಯೋಜನೆ ಇದಾಗಿದೆ.
