ಕಠ್ಮಂಡು(ಜು.30):  ಭಾರತ ಹಾಗೂ ನೇಪಾಳ ಗಡಿ ಸಮಸ್ಯೆ ಶೀಘ್ರದಲ್ಲಿ ಪರಿಹಾರವಾಗುವ ಲಕ್ಷಣಗಳು ಕಾಣುತ್ತಿಲ್ಲ. ಇದರ ನಡುವೆ ಭಾರತದ ಗಡಿಯೊಳಗೆ ನೇಪಾಳ ಪ್ರಜೆಗಳ ಅಕ್ರಮ ಪ್ರವೇಶ ಪ್ರವೇಶ ಪರಿಸ್ಥಿತಿಯನ್ನು ಮತ್ತಷ್ಟು ಜಟಿಲವಾಗಿಸಿದೆ. ನೇಪಾಳಿ ಪ್ರಜೆಗಳು ಭಾರತದ ಗಡಿ ಗ್ರಾಮಗಳಾದ ಕಾಲಾಪಾನಿ, ಲಿಂಪಿಯಾಧುರ, ಲಿಪುಲೇಖ್ ಹಾಗೂ ಗುಂಜಿಗೆ ಅಕ್ರಮವಾಗಿ ಪ್ರವೇಶಿಸುತ್ತಿದ್ದಾರೆ. ಇದರಿಂದ ಎರಡು ದೇಶಗಳಗಿ ಸಮಸ್ಯೆಯಾಗುತ್ತಿದೆ ಎಂದು ಭಾರತ ಹೇಳಿದೆ.

ಮತ್ತೆ ಗಡಿಯಲ್ಲಿ ಸಂಘರ್ಷ: ಭಾರತ ನಿವಾಸಿಗಳ ಮೇಲೆ ನೇಪಾಳ ಪೊಲೀಸರಿಂದ ಹಲ್ಲೆ!

ಉತ್ತರಖಂಡದ ದಾರ್ಚುಲ ಜಿಲ್ಲೆ ಉಪ ಜಿಲ್ಲಾಧಿಕಾರಿ ಈ ಕುರಿತು ನೇಪಾಳಕ್ಕೆ ಪತ್ರ ಬರೆದಿದ್ದಾರೆ. ನೇಪಾಳಿ ಪ್ರಜೆಗಳ ಅಕ್ರಮ ಪ್ರವೇಶವನ್ನು ನೇಪಾಳ ಸರ್ಕಾರ ತಡೆಯಬೇಕು ಎಂದು ಪತ್ರ ಬರೆದಿದ್ದಾರೆ.  ಭಾರತ ನೀಡಿರುವ ಪತ್ರ ಸಿಕ್ಕಿರುವುದಾಗಿ ನೇಪಾಳ ಸ್ಪಷ್ಟಪಡಿಸಿದೆ. ಆದರೆ ಪತ್ರದಲ್ಲಿನ ಕೆಲ ವಿಚಾರಕ್ಕೆ ನೇಪಾಳ ಆಕ್ಷೇಪ ವ್ಯಕ್ತಪಡಿಸಿದೆ.

ನೇಪಾಳದ ವಧುವಿನ ಜೊತೆ ಬಂದ ಭಾರತದ ವರ: ನವವಿವಾಹಿತರಿಗೆ ಸೇತುವೆ ಬಾಗಿಲು ತೆರೆದ ಯೋಧರು

ನೇಪಾಳ ಇತ್ತೀಚೆಗೆ ಬಿಡುಗಡೆ ಮಾಡಿದ ಭೂಪಟದಲ್ಲಿ ಕಾಲಾಪಾನಿ ಸೇರಿದಂತೆ ಭಾರತದ ಗಡಿ ಗ್ರಾಮಗಳನ್ನು ನೇಪಾಳದ ಭಾಗವೆಂದು ಬಿಂಬಿಸಿತ್ತು. ಕಾಲಾಪಾನಿ ಸೇರಿದಂತೆ ಗಡಿ ಗ್ರಾಮಗಳು ನೇಪಾಳಕ್ಕೆ ಸೇರಿದೆ. ಇಲ್ಲಿ ನೇಪಾಳ ಪ್ರಜೆಗಳ ಓಡಾಟ ಸಾಮಾನ್ಯ ಎಂದು ನೇಪಾಳ ಹೇಳಿದೆ.

ಪತ್ರದ ಮೂಲಕ ಭಾರತ ತನ್ನ ಗಡಿಯೊಳಗೆ ಅಕ್ರಮ ಪ್ರವೇಶಕ್ಕೆ ಕಡಿವಾಣ ಹಾಕಲು ಸೂಚಿಸಿದ್ದರೆ, ಇದೀಗ ನೇಪಾಳ ಈ ಗಡಿ ಪ್ರದೇಶಗಳು ನೇಪಾಳದ ಭಾಗ ಎಂದು ವಾದಿಸಲು ಆರಂಭಿಸಿದೆ.