ಖರಸಲ್ವಾ(ಜು.25):  ಭಾರತ -ಪಾಕಿಸ್ತಾನ, ಭಾರತ-ಚೀನಾ ಗಡಿ ಸಮಸ್ಯೆ ಇಂದು ನಿನ್ನೆಯದಲ್ಲ. ಆದರೆ ಭಾರತ-ಚೀನಾ ಗಡಿ ಸಮಸ್ಸೆ ತೀರಾ ಇತ್ತಿಚೆಗಿನ ಬೆಳವಣಿಗೆ. ಪೂರ್ವ ಲಡಾಖ್‌ನ ಗಲ್ವಾನ್ ಕಣಿವೆಯಲ್ಲಿ ಚೀನಾ ಸೇನೆ ಆಕ್ರಮಣದ ಬೆನ್ನಲ್ಲೇ ನೇಪಾಳ ಕೂಡ ಗಡಿ ಸಂಘರ್ಷ ಆರಂಭಿಸಿತ್ತು. ಭಾರತದ ಗ್ರಾಮಸ್ಥರ ಮೇಲೆ ಗುಂಡಿನ ಮಳೆಗೆರೆದಿತ್ತು. ಈ ಬೆಳವಣಿಗೆ ಬಳಿಕ ಮಾತುಕತೆ ಮೂಲಕ ಪರಿಸ್ಥಿತಿ ಶಾಂತಗೊಳಿಸುವ ಪ್ರಯತ್ನ ನಡೆದಿತ್ತು. ಭಾರತ-ನೇಪಾಳ ಗಡಿ ಶಾಂತವಾಯಿತು ಅನ್ನುವಷ್ಟರಲ್ಲೇ ಮತ್ತೆ ನೇಪಾಳ ಕಿರಿಕ್ ಆರಂಭಿಸಿದೆ.

'ಶ್ರೀರಾಮ ಭಾರತೀಯನಲ್ಲ, ಭಾರತದಿಂದ ನಕಲಿ ಅಯೋಧ್ಯೆ ಸೃಷ್ಟಿ

ಭಾರತ-ನೇಪಾಳ ಗಡಿಯಲ್ಲಿರುವ ಖರಸಲ್ವಾ ಗ್ರಾಮಸ್ಥರ ಮೇಲೆ ನೇಪಾಳ ಭದ್ರತಾ ಪೊಲೀಸ್ ಸೂಚನೆ ನೀಡದೆ ಹಲ್ಲೆ ಮಾಡಿದೆ. ರವೀಂದ್ರ ಪ್ರಸಾದ್ ಹಾಗೂ ಆತನ ಪತ್ನಿ ಸೀಮಾ ದೇವಿ ದನಗಳಿಗೆ ಮೇವು ತರಲು ನೇಪಾಳ ಗಡಿ ಸಮೀಪಕ್ಕೆ ತೆರಳಿದ್ದಾರೆ. ಈ ವೇಳೆ ಏಕಾಏಕಿ ನುಗ್ಗಿದ ನೇಪಾಳ ಪೊಲೀಸರು ಸೀಮಾ ದೇವಿಯನ್ನು ಹಿಡಿದು ಹಲ್ಲೆ ಮಾಡಿದ್ದಾರೆ. ತಲೆಗೆ ಗಂಭೀರವಾದ ಗಾಯದಿಂದ ಚೀರಿಕೊಂಡ ಪತ್ನಿಯನ್ನು ರಕ್ಷಿಸಲು ರವೀಂದ್ರ ಪ್ರಸಾದ್ ಮುಂದಾಗಿದ್ದಾರೆ.

ಭಾರತದ ನ್ಯೂಸ್‌ ಚಾನಲ್‌ಗಳಿಗೆ ನೇಪಾಳ ನಿಷೇಧ!.

ಈ ವೇಳೆ ರವೀಂದ್ರ ಪ್ರಸಾದ್ ಅವರ ಮೇಲೂ ನೇಪಾಳ ಪೊಲೀಸ್ ಹಲ್ಲೆ ಮಾಡಿದೆ. ಇಷ್ಟೇ ಅಲ್ಲ ರವೀಂದ್ರ ಪ್ರಸಾದ್ ಅವರನ್ನು ವಶಕ್ಕೆ ಪಡೆದಿದೆ.. ನೇಪಾಳ ಪೊಲೀಸರ ವಿರುದ್ಧ ಖರಸಲ್ವಾ ಗ್ರಾಮಸ್ಥರು ಪ್ರತಿಭಟನೆ ಆರಂಭಿಸಿದ್ದಾರೆ. ಗ್ರಾಮಸ್ಥರು ಜಮಾಯಿಸಿದ ಕಾರಣ ನೇಪಾಳ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿ ಬೆದರಿಸಿದ್ದಾರೆ. ಇದೇ ವೇಳೆ ಭಾರತದ ಗಡಿಯೊಳಕ್ಕೆ ಪ್ರವೇಶಿಸಿದ ನೇಪಾಳ ಭದ್ರತಾ ಪೊಲೀಸ್‌ನನ್ನು ಭಾರತೀಯ ಗ್ರಾಮಸ್ಥರು ಹಿಡಿದಿದ್ದಾರೆ. 

ಈ ಘಟನೆಯಿಂದ ಭಾರತ-ನೇಪಾಳ ಗಡಿಯಲ್ಲಿ ಪರಿಸ್ಥಿತಿ ಉದ್ವಿಘ್ನವಾಗಿದೆ. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಭಾರತೀಯ ಪೊಲೀಸ್ ಹಾಗೂ ಅಧಿಕಾರಿಗಳು ಪರಿಸ್ಥಿತಿ ಶಾಂತಗೊಳಿಸಿದ್ದಾರೆ. ಇಷ್ಟೇ ಅಲ್ಲ ಗ್ರಾಮಸ್ಥರ ವಶದಲ್ಲಿದ್ದ ನೇಪಾಳ ಪೊಲೀಸ್ ಬಿಡುಗಡೆ ಮಾಡಿದ್ದಾರೆ. ಇಷ್ಟೇ ಅಲ್ಲ ನೇಪಾಳ ಪೊಲೀಸ್ ವಶಕ್ಕೆ ಪಡೆದಿದ್ದ ರವೀಂದ್ರ ಪ್ರಸಾದ್ ಅವರನ್ನು ಬಿಡುಗಡೆ ಮಾಡಲಾಗಿದೆ.