ಯೋಧರಿಂದ ಭಾರತ ಸದಾ ಸುರಕ್ಷಿತ; ಸೇನೆ ಜೊತೆ ಗಡಿಯಲ್ಲಿ ಮೋದಿ ದೀಪಾವಳಿ!
ಪ್ರತಿ ವರ್ಷದಂತೆ ಈ ವರ್ಷವೂ ಪ್ರಧಾನಿ ನರೇಂದ್ರ ಮೋದಿ ಭಾರತೀಯ ಸೇನಾ ಯೋಧರ ಜೊತೆ ದೀಪಾವಳಿ ಹಬ್ಬ ಆಚರಿಸಿದ್ದಾರೆ. ಈ ಬಾರಿ ಹಿಮಾಚಲ ಪ್ರದೇಶದ ಲೆಪ್ಚಾದಲ್ಲಿ ಯೋಧರ ಜೊತೆ ದೀಪಾವಳಿ ಆಚರಿಸಿದ್ದಾರೆ. ಇದೇ ವೇಳೆ ಆಯೋಧ್ಯೆಯಲ್ಲಿ ಶ್ರೀರಾಮನಿದ್ದಾನೆ. ಯೋಧರು ಇರವು ಸ್ಥಳ ದೇವಸ್ಥಾನಕ್ಕಿಂತ ಕಡಿಮೆ ಇಲ್ಲ ಎಂದು ಮೋದಿ ಹೇಳಿದ್ದಾರೆ.

ಲೆಪ್ಚಾ(ನ.12) ಪ್ರಧಾನಿ ನರೇಂದ್ರ ಮೋದಿ ಪ್ರತಿ ವರ್ಷ ದೀಪಾವಳಿ ಹಬ್ಬವನ್ನು ದೇಶದ ಗಡಿಯಲ್ಲಿರುವ ಯೋಧರ ಜೊತೆ ಆಚರಿಸುತ್ತಾರೆ. ಈ ಬಾರಿ ಹಿಮಾಚಲ ಪ್ರದೇಶದ ಗಡಿ ಭಾಗ ಲೆಪ್ಚಾದಲ್ಲಿ ಮೋದಿ ಯೋಧರ ಜೊತೆ ದೀಪಾವಳಿ ಆಚರಿಸಿದ್ದಾರೆ. ಯೋಧರಿಗೆ ಸಿಹಿ ಹಂಚಿ ದೀಪಾವಳಿ ಹಬ್ಬ ಆಚರಿಸಿದ್ದಾರೆ. ಯೋಧರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಆಯೋಧ್ಯೆಯಲ್ಲಿ ಶ್ರೀರಾಮನಿದ್ದಾನೆ. ನನಗೆ ಯೋಧರರಿರುವ ಸ್ಥಳ ದೇವಸ್ಥಾನಕ್ಕಿಂತ ಕಡಿಮೆ ಇಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಯೋಧರ ಸಮವಸ್ತ್ರದಲ್ಲಿ ತೆರಳಿದ ಮೋದಿ, ಗಡಿಯಲ್ಲಿ ದೀಪಾವಳಿ ಹಬ್ಬ ಆಚರಿಸಿದ್ದಾರೆ.ನಮ್ಮ ಯೋಧರು ಹಿಮಾಲಯ ರೀತಿಯ ಗಡಿ ಕಾಯುತ್ತಿರುವಾಗ ಭಾರತ ಯಾವತ್ತೂ ಸುರಕ್ಷಿತ ಎಂದು ಮೋದಿ ಹೇಳಿದ್ದಾರೆ. ಭಾರತ ಎಲ್ಲಾ ದೇಶದ ಜೊತೆ ಶಾಂತಿ ಬಯಸುತ್ತದೆ. ಇದರಲ್ಲಿ ನಮ್ಮ ಯೋಧರು ಪ್ರಮುಖ ಪಾತ್ರ ನಿರ್ವಹಿಸುತ್ತಾರೆ. ಕಳೆದ 30 ರಿಂದ 35 ವರ್ಷಗಳಿಂದ ನಾನು ಯೋಧರ ಜೊತೆಗೆ ಪ್ರತಿ ವರ್ಷ ದೀಪಾವಳಿ ಆಚರಿಸುತ್ತಿದ್ದೇನೆ. ನಾನು ಪ್ರಧಾನಿ ಅಥವಾ ಸಿಎಂ ಅಲ್ಲದಿದ್ದರೂ ಗಡಿಗೆ ತೆರಳಿ ಯೋಧರ ಜೊತೆ ದೀಪಾವಳಿ ಆಚರಿಸುತ್ತೇನೆ ಎಂದು ಮೋದಿ ಹೇಳಿದ್ದಾರೆ.
ತೆಲಂಗಾಣದಲ್ಲಿ ಮೋದಿ ಭಾಷಣ ಅಡ್ಡಿಪಡಿಸಿದ ಬಾಲಕಿ: ಪ್ರಧಾನಿ ಮನವಿ ಮಾಡಿದ್ದೇನು ನೋಡಿ..
500ಕ್ಕೂ ಹೆಚ್ಚಿನ ಮಹಿಳಾ ಯೋಧರಿಗೆ ಖಾಯಂ ಕಮಿಷನ್ ನೀಡಲಾಗಿದೆ. ಇಂದು ಮಹಿಳಾ ಪೈಲೆಟ್ ರಾಫೆಲ್ ಸೇರಿದಂತೆ ಯುದ್ಧ ವಿಮಾನಗಳ ಹಾರಾಟ ನಡೆಸುತ್ತಿದ್ದಾರೆ. ಭಾರತದ ಸ್ವಾತಂತ್ರ್ಯದ ಬಳಿಕ ದೇಶ ಹಲವು ಸವಾಲು ಎದುರಿಸಿದೆ. ಪ್ರಮುಖವಾಗಿ ಕೆಲ ಯುದ್ಧಗಳನ್ನು ಎದುರಿಸಬೇಕಾಗಿ ಬಂದಿತ್ತು. ಈ ಎಲ್ಲಾ ಯುದ್ಧದಲ್ಲಿ ನಮ್ಮ ಯೋಧರು ಕೆಚ್ಚೆದೆಯ ಹೋರಾಟ ನೀಡಿ ಗೆಲುವು ಸಾಧಿಸಿದ್ದಾರೆ. ಈ ಯೋಧರು ನಮ್ಮ ಹೃದಯ ಗೆದ್ದಿದ್ದಾರೆ. ಜಾಗತಿಕ ಮಟ್ಟದಲ್ಲಿ ಭಾರತದ ವರ್ಚಸ್ಸು ಹೆಚ್ಚಲು ಯೋಧರೇ ಕಾರಣ ಎಂದು ಮೋದಿ ಹೇಳಿದ್ದಾರೆ.
ಲೆಪ್ಚಾದಲ್ಲಿ ಮೋದಿ ಯೋಧರ ಜೊತೆ ಸಂವಾದವನ್ನೂ ನಡೆಸಿದ್ದಾರೆ. ಯೋಧರು ತಮ್ಮ ಕುಟುಂಬಸ್ಥರು, ಆಪ್ತರಿಂದ ದೂರವಿರುತ್ತಾರೆ. ದೇಶಕ್ಕಾಗಿ ಗಡಿಯಲ್ಲಿ ತಮ್ಮ ಪ್ರಾಣದ ಹಂಗು ತೊರೆದು ಹೋರಾಡುತ್ತಾರೆ. ಈ ದೇಶವನ್ನು, ನಮ್ಮನ್ನು ಸುರಕ್ಷಿತವಾಗಿಡಲು ಹಗಲು ರಾತ್ರಿ ಹೋರಾಡುತ್ತಾರೆ. ಈ ವೀರ ಪರಾಕ್ರಮಿಗಳಿಗೆ ನನ್ನ ನಮನಗಳು ಎಂದು ಮೋದಿ ಹೇಳಿದ್ದಾರೆ.
ಭಾರತದಿಂದ ಬರುವ ಚಂದ್ರಯಾನ-3 ಮಾಹಿತಿಗಾಗಿ ರಷ್ಯಾ, ಅಮೆರಿಕ ಕಾಯುತ್ತಿದೆ: ಜೀತೇಂದ್ರ ಸಿಂಗ್!