ನವದೆಹಲಿ(ಸೆ.22):  ಭಾರತ ಹಾಗೂ ಚೀನಾ ಗಡಿಯಲ್ಲಿ ಪ್ರತಿ ವರ್ಷ ಚಳಿಗಾಲದ ಸಮಯದಲ್ಲಿ ಉಭಯ  ದೇಶಗಳು ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳುತ್ತದೆ. ಇದು ವಾಡಿಕೆ. ಚಳಿಗಾಲ ಮುಗಿದ ಬಳಿಕ ಮತ್ತೆ ಉಭಯ ದೇಶಗಳು ತಮ್ಮ ತಮ್ಮ ಗಡಿ ಪೋಸ್ಟ್ ವಶಪಡಿಸಿಕೊಂಡು ಪಹರೆ ಕಾಯುತ್ತದೆ. ಆದರೆ ಈ ಬಾರಿ ಪರಿಸ್ಥಿತಿ ಹಾಗಿಲ್ಲ. ಕಳೆದ ಕೆಲ ತಿಂಗಳುಗಳಿಂದ ಭಾರತ ಹಾಗೂ ಚೀನಾ ಗಡಿಯಲ್ಲಿ ಉದ್ವಿಘ್ನ ವಾತಾವರಣವಿದೆ. ಇದೀಗ ಚಳಿಗಾಲ ಸನಿಹವಾಗುತ್ತಿದ್ದು, ಭಾರತೀಯ ಸೇನೆ ಹಲವು ಸವಾಲು ಎದುರಿಸಲು ಸಜ್ಜಾಗಿದೆ.

ಲಡಾಖ್‌: 20 ಬೆಟ್ಟದಲ್ಲಿ ಭಾರತ ಪ್ರಾಬಲ್ಯ!.

ಚೀನಾ ಗಡಿ ಕಾಯುವು ಭಾರತೀಯ ಸೈನಿಕರಿಗೆ ಇದೀಗ ವಿಶೇಷ ಟೆಂಟ್ ನೀಡಲಾಗಿದೆ. ಚಳಿಗಾಲದಲ್ಲಿ ಗಡಿಯ ಕೆಲ ಭಾಗದಲ್ಲಿ -45 ಡಿಗ್ರಿ ಚಳಿ ದಾಖಲಾಗುತ್ತದೆ. ಇಷ್ಟೇ ಅಲ್ಲ ಎಲ್ಲಾ ಕಡೆ ಮಂಜುಗಡ್ಡೆ ಆವರಿಸುತ್ತದೆ. ಈ ವೇಳೆ ಪಹರೆ ಅತ್ಯಂತ ಸವಾಲಿನಿಂದ ಕೂಡಿದೆ. ಇದಕ್ಕಾಗಿ ಸೇನಗೆ ವಿಶೇಷ ಟೆಂಟ್ ನೀಡಲಾಗಿದೆ. ಈ ಟೆಂಟ್ ಮೈನಸ್ 40 ರಿಂದ ಮೈನಸ್ 50 ಡಿಗ್ರಿ ವರೆಗಿನ ಚಳಿಯನ್ನು ತಡೆಯಲಿದೆ. ಟೆಂಟ್ ಒಳಗಡೆ ಬೆಚ್ಚಿಗಿನ ವಾತಾವರಣ ಒದಗಿಸಲಿದೆ. 

ಲಡಾಖ್ ಗಡಿ ಸಂಘರ್ಷ; 6 ವಲಯ ಪ್ರದೇಶ ವಶಪಡಿಸಿಕೊಂಡ ಭಾರತೀಯ ಸೇನೆ!.

ಪ್ಯಾಂಗಾಂಗ್ ಲೇಕ್ ಸರೋವರ, ಗಲ್ವಾಣ್ ಕಣಿವೆ ಸೇರಿದಂತೆ ಭಾರತ ಚೀನಾದ 70 ಕಿಲೋಮೀಟರ್ ಗಡಿಯಲ್ಲಿ ಕಿರಿಕ್ ನಡೆಯುತ್ತಲೆ ಇದೆ. ಈ ಬಾರಿ ಚಳಿಗಾಲದಲ್ಲೂ ಹದ್ದಿನ ಕಣ್ಣಿಡಬೇಕಾದ ಪರಿಸ್ಥಿತಿ ಬಂದೊದಗಿದೆ. ಇದಕ್ಕಾಗಿ ಭಾರತೀಯ ಸೇನೆ ಈಗಲೇ ಸಿದ್ಧತೆ ಆರಂಭಿಸಿದೆ. ಟೆಂಟ್ ಜೊತೆಗೆ ಇತರ ಕೆಲ ಸೌಕರ್ಯಗಳನ್ನು ಒದಗಿಸಲು ಸೇನೆ ಮುಂದಾಗಿದೆ.