ಭಾರತ - ಅಮೆರಿಕಾ ಶಸ್ತ್ರಾಸ್ತ್ರ ಒಪ್ಪಂದ: ಚೀನಾದ ಪ್ರಭಾವ ತಗ್ಗಿಸಲು ಕಾರ್ಯತಂತ್ರದ ನಡೆಯೇ?

ಇತ್ತೀಚೆಗೆ ಭಾರತ ಮತ್ತು ಅಮೆರಿಕಾ ನಡುವೆ ನಡೆದಿರುವ ಸರಣಿ ಶಸ್ತ್ರಾಸ್ತ್ರ ಒಪ್ಪಂದಗಳು ಭಾರತದ ರಕ್ಷಣಾ ಉಪಕರಣಗಳಿಗಾಗಿ ರಷ್ಯಾ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಪಾಶ್ಚಾತ್ಯ ರಾಷ್ಟ್ರಗಳ ಪ್ರಯತ್ನ ಎಂಬುದು ತಜ್ಞರ ಅಭಿಪ್ರಾಯ

India and US Arms Deal is this A Strategic Move to Reduce China's Influence kannada news gow

ಗಿರೀಶ್ ಲಿಂಗಣ್ಣ
ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ಇತ್ತೀಚೆಗೆ ಭಾರತ ಮತ್ತು ಅಮೆರಿಕಾ ನಡುವೆ ನಡೆದಿರುವ ಸರಣಿ ಶಸ್ತ್ರಾಸ್ತ್ರ ಒಪ್ಪಂದಗಳು ಭಾರತದ ರಕ್ಷಣಾ ಉಪಕರಣಗಳಿಗಾಗಿ ರಷ್ಯಾ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಪಾಶ್ಚಾತ್ಯ ರಾಷ್ಟ್ರಗಳ ಪ್ರಯತ್ನ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.

ಒಂದು ವೇಳೆ ಭಾರತವೇನಾದರೂ ರಷ್ಯಾ ಮೇಲಿನ ಅವಲಂಬನೆ ಕಡಿಮೆಗೊಳಿಸಿದರೆ ತನ್ನ ವಿದೇಶಾಂಗ ನೀತಿಯ ಆದ್ಯತೆಗಳನ್ನು ಬದಲಾಯಿಸಬಹುದು ಎಂದು ಪಾಶ್ಚಾತ್ಯ ಜಗತ್ತು ನಂಬಿಕೊಂಡಿದೆ. ಅದು ಪ್ರಸ್ತುತ ಮಾಸ್ಕೋ ಮತ್ತು ಬೀಜಿಂಗ್ ನಡುವಿನ ನಿಕಟ ಸ್ನೇಹವನ್ನು ಗಮನಿಸುತ್ತಿದೆ.

ಭಾರತ ಮತ್ತು ಅಮೆರಿಕಾಗಳು ತಮ್ಮ ಮಿಲಿಟರಿ ಸಹಯೋಗವನ್ನು ನೂತನ ರಕ್ಷಣಾ ಒಪ್ಪಂದಗಳ ಮೂಲಕ ಇನ್ನಷ್ಟು ಬಲಪಡಿಸುತ್ತಿವೆ. ಈ ಒಪ್ಪಂದಗಳು ಮಿಲಿಟರಿ ಉಪಕರಣಗಳ ಜಂಟಿ ಉತ್ಪಾದನೆ, ಯುದ್ಧ ವಿಮಾನಗಳ ತಂತ್ರಜ್ಞಾನಕ್ಕಾಗಿ ಸಂಭಾವ್ಯ ಆಯುಧ ಒಪ್ಪಂದಗಳನ್ನೂ ಒಳಗೊಂಡಿವೆ.

ಎರಡು ದಿನಗಳ ಭಾರತ ಭೇಟಿಯ ಸಂದರ್ಭದಲ್ಲಿ, ಅಮೆರಿಕಾದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಹಾಗೂ ಭಾರತೀಯ ಅಧಿಕಾರಿಗಳು ಒಂದು ರಕ್ಷಣಾ ಮಾರ್ಗಸೂಚಿಗೆ ಒಪ್ಪಿಗೆ ಸೂಚಿಸಿದ್ದು, ಇದರ ಪರಿಣಾಮವಾಗಿ ಭಾರತಕ್ಕೆ ಅಮೆರಿಕಾದಿಂದ ಹೈಟೆಕ್ ಆಯುಧಗಳ ಪೂರೈಕೆಯನ್ನು ತ್ವರಿತಗೊಳಿಸಿ, ರಕ್ಷಣಾ ಉಪಕರಣಗಳ ಜಂಟಿ ಉತ್ಪಾದನಾ ಸಾಧ್ಯತೆಗಳನ್ನೂ ತೆರೆದಿಡಲಿದೆ.

ಅಮೆರಿಕಾ ಮತ್ತು ಭಾರತಗಳು ಇಂಡಕ್ಸ್ ಎಕ್ಸ್ ಎಂಬ ಹೊಸ ಯೋಜನೆಯನ್ನು ನಿರ್ಮಿಸಿದ್ದು, ಇದು ಎರಡೂ ರಾಷ್ಟ್ರಗಳ ರಕ್ಷಣಾ ಉದ್ಯಮದ ಖಾಸಗಿ ಕಂಪನಿಗಳ ನಡುವಿನ ಆವಿಷ್ಕಾರಗಳನ್ನು ವೇಗಗೊಳಿಸಲಿದೆ.

ಈ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ವಾಷಿಂಗ್ಟನ್ ಭೇಟಿಯ ಸಂದರ್ಭದಲ್ಲಿ ಉನ್ನತ ಮಟ್ಟದ ರಕ್ಷಣಾ ಒಪ್ಪಂದಗಳು ಏರ್ಪಡುವ ಸಾಧ್ಯತೆಗಳಿವೆ. ಇದರಲ್ಲಿ ಭಾರತದಲ್ಲಿ ಯುದ್ಧ ವಿಮಾನಗಳ ಜಂಟಿ ನಿರ್ಮಾಣ ಮತ್ತು ಇಂಡಸ್ ಎಕ್ಸ್ ಅಧಿಕೃತ ಆರಂಭದ ಯೋಜನೆಗಳೂ ಸೇರಿವೆ.

ಕೆಲವು ವಿಶ್ಲೇಷಕರು ಭಾರತ ಮತ್ತು ಅಮೆರಿಕಾಗಳ ನಡುವಿನ ನೂತನ ಒಪ್ಪಂದಗಳು, ಆಯುಧಗಳು ಮತ್ತು ರಕ್ಷಣಾ ಉಪಕರಣಗಳು, ಬಿಡಿಭಾಗಗಳಿಗಾಗಿ ರಷ್ಯಾದ ಮೇಲಿನ ಭಾರತದ ಅವಲಂಬನೆಯನ್ನು ಕಡಿಮೆಗೊಳಿಸುವ ಪಾಶ್ಚಾತ್ಯ ರಾಷ್ಟ್ರಗಳ ಯೋಜನೆಯ ಭಾಗವಾಗಿರುವ ಸಾಧ್ಯತೆಗಳಿವೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

2022ರಲ್ಲಿ ಯುನೈಟೆಡ್ ಕಿಂಗ್‌ಡಮ್‌ನ ಆಗಿನ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಭಾರತಕ್ಕೆ ಸ್ವಂತ ಯುದ್ಧ ವಿಮಾನ ಅಭಿವೃದ್ಧಿ ಪಡಿಸಲು ಸಹಕಾರ ನೀಡುವುದಾಗಿ ತಿಳಿಸಿದ್ದರು. ಈ ವಾರ ಭಾರತಕ್ಕೆ ಭೇಟಿ ನೀಡಲಿರುವ ಜರ್ಮನಿಯ ರಕ್ಷಣಾ ಸಚಿವರಾದ ಬೋರಿಸ್ ಪಿಸ್ಟೋರಿಯಸ್ ಅವರು ಜರ್ಮನ್ ಕಂಪನಿಗಳು ಈಗಾಗಲೇ ಭಾರತಕ್ಕಾಗಿ 5.2 ಬಿಲಿಯನ್ ಡಾಲರ್ ಮೌಲ್ಯದ ಸಬ್‌ಮರೀನ್ ನಿರ್ಮಾಣ ಒಪ್ಪಂದಕ್ಕಾಗಿ ಪ್ರಯತ್ನ ನಡೆಸುತ್ತಿವೆ ಎಂದಿದ್ದರು.

ಭಾರತದ ಅತಿದೊಡ್ಡ ಆಯುಧ ಪೂರೈಕೆದಾರನಾಗಿರುವ ರಷ್ಯಾ ಈಗಾಗಲೇ ಉಕ್ರೇನ್ ಮೇಲಿನ ಯುದ್ಧದಲ್ಲಿ ವ್ಯಸ್ತವಾಗಿದೆ. ಆದ್ದರಿಂದ ರಷ್ಯಾದ ರಕ್ಷಣಾ ಅಗತ್ಯಗಳು ಇನ್ನಷ್ಟು ಹೆಚ್ಚಾಗಬಹುದೆಂದು ದೆಹಲಿಯ ಆಡಳಿತವರ್ಗದಲ್ಲಿ ಹಲವರು ಚಿಂತೆಗೊಳಗಾಗಿದ್ದಾರೆ.

ಆಯುಧ ಪೂರೈಕೆ ಮಾಡಲು ಅಮೆರಿಕಾ ಮುಂದೆ ಬಂದಿರುವುದು ಭಾರತ ಮತ್ತು ಅಮೆರಿಕಾಗಳ ನಡುವಿನ ರಕ್ಷಣಾ ಒಪ್ಪಂದಗಳ ಮೂಲಕ ಎರಡೂ ರಾಷ್ಟ್ರಗಳಿಗೆ ಲಾಭದಾಯಕವಾಗಬಹುದು ಎಂದು ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ.

ಉಕ್ರೇನ್ ಮೇಲಿನ ದಾಳಿಗೆ ಸಂಬಂಧಿಸಿದಂತೆ, ಭಾರತ ರಷ್ಯಾವನ್ನು ಟೀಕಿಸಲು ನಿರಾಕರಿಸಿರುವುದರಿಂದ ಅಸಮಾಧಾನಗೊಂಡಿರುವ ಅಮೆರಿಕಾ, ಭಾರತದ ನಿರ್ಧಾರವನ್ನು ಬದಲಾಯಿಸಲು ಇದನ್ನು ಒಂದು ಸೂಕ್ತ ಅವಕಾಶ ಎಂಬಂತೆ ಪರಿಗಣಿಸಬಹುದು ಎಂದು ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಸೆಂಟರ್ ಫಾರ್ ರಷ್ಯನ್ ಆ್ಯಂಡ್ ಸೆಂಟ್ರಲ್ ಏಷ್ಯನ್ ಸ್ಟಡೀಸ್ ವಿಭಾಗದ ಉಪನ್ಯಾಸಕರಾದ ರಜನ್ ಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ.

ಒಂದು ವೇಳೆ ರಷ್ಯಾದ ಮೇಲಿನ ಅವಲಂಬನೆ ಕಡಿಮೆಯಾದರೆ ಭಾರತದ ಆದ್ಯತೆಗಳು ಬದಲಾಗಬಹುದೆಂದು ಪಾಶ್ಚಾತ್ಯ ರಾಷ್ಟ್ರಗಳು ಅಭಿಪ್ರಾಯ ಹೊಂದಿವೆ. ಇದಕ್ಕೆ ಭಾರತ ರಷ್ಯಾವನ್ನು ಬಹಿರಂಗವಾಗಿ ಖಂಡಿಸಲು ನಿರಾಕರಿಸಿದ್ದೂ ಕಾರಣವಾಗಿದೆ.

ಕೆಲವು ತಜ್ಞರು, ಅಮೆರಿಕಾ ಮತ್ತು ಇತರ ಪಾಶ್ಚಾತ್ಯ ರಾಷ್ಟ್ರಗಳು ಅವುಗಳ ಮಿಲಿಟರಿ ಸಂಪನ್ಮೂಲಗಳನ್ನು ಭಾರತದೊಡನೆ ಹಂಚಿಕೊಂಡರೆ ರಷ್ಯಾ ಮೇಲಿನ ಭಾರತದ ಅವಲಂಬನೆ ಕಡಿಮೆಯಾಗುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ದೆಹಲಿಯ ಥಿಂಕ್ ಟ್ಯಾಂಕ್ ಸಂಸ್ಥೆಯಾಗಿರುವ ಅಬ್ಸರ್ವರ್ ರಿಸರ್ಚ್ ಫೌಂಡೇಶನ್‌ನ ಸೆಂಟರ್ ಫಾರ್ ಸೆಕ್ಯುರಿಟಿ, ಸ್ಟ್ರಾಟೆಜಿ, ಆ್ಯಂಡ್ ಟೆಕ್ನಾಲಜಿ ನಿರ್ದೇಶಕರಾಗಿರುವ ರಾಜೇಶ್ವರಿ ಪಿಳ್ಳೈ ರಾಜಗೋಪಾಲನ್ ಅವರು ಭಾರತವೇನಾದರೂ ರಷ್ಯಾ ಮೇಲಿನ ತನ್ನ ಆಯುಧ ಅವಲಂಬನೆಯನ್ನು ಕಡಿಮೆಗೊಳಿಸಬೇಕಾದರೆ ಪಾಶ್ಚಾತ್ಯ ರಾಷ್ಟ್ರಗಳು ಜಾಗರೂಕವಾಗಿ ಭಾರತದೊಡನೆ ರಕ್ಷಣಾ ತಂತ್ರಜ್ಞಾನ ಹಂಚಿಕೊಳ್ಳುವ ಕುರಿತು ನಿರ್ಧರಿಸಬೇಕಾಗುತ್ತದೆ ಎಂದಿದ್ದಾರೆ. ಅದರೊಡನೆ, ಈಗ ಅಮೆರಿಕಾಗೂ ರಷ್ಯಾ ಮೇಲಿನ ಭಾರತದ ಅವಲಂಬನೆಯನ್ನು ಕಡಿಮೆಗೊಳಿಸಬೇಕಾದ ಅವಶ್ಯಕತೆಯ ಅರಿವಾಗಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

Bengaluru: ಐಟಿಬಿಟಿ ಕಂಪನಿಗೆ ಬಾಂಬ್ ಬೆದರಿಕೆ ಕರೆ, ಬಾಂಬ್ ನಿಷ್ಕ್ರಿಯದಳ ದೌಡು

ವಿಳಂಬಗಳು, ಅಡಚಣೆಗಳು:
ವಾಷಿಂಗ್ಟನ್ ಮೂಲದ ಥಿಂಕ್ ಟ್ಯಾಂಕ್ ಸಂಸ್ಥೆಯಾಗಿರುವ, ಜಾಗತಿಕ ಶಾಂತಿ ಮತ್ತು ಭದ್ರತೆಗೆ ಗಮನ ಹರಿಸುವ ದ ಸ್ಟಿಮ್ಸನ್ ಸೆಂಟರ್ ತನ್ನ ವರದಿಯಲ್ಲಿ ಭಾರತದ 85% ಆಯುಧ ವ್ಯವಸ್ಥೆಗಳು ರಷ್ಯಾದಿಂದ ಬರುತ್ತಿವೆ ಎಂದಿದೆ. ರಷ್ಯನ್ ಆಯುಧಗಳ ಮೇಲಿನ ಅವಲಂಬನೆ ಭಾರತವೂ ಅಮೆರಿಕಾದ ನಿರ್ಬಂಧಗಳನ್ನು ಎದುರಿಸುವ ಅಪಾಯ ತರಬಲ್ಲದಾಗಿದೆ. ಇತ್ತೀಚಿನ ವರ್ಷಗಳಲ್ಲಿ ಭಾರತ ತನ್ನ ಆಯುಧ ಸಂಗ್ರಹಣೆಯನ್ನು ವಿವಿಧ ಮೂಲಗಳಿಗೆ ವಿಸ್ತರಿಸಿಕೊಂಡಿದೆಯಾದರೂ, ಪ್ರಮುಖ ಆಯುಧ ಪೂರೈಕೆದಾರನಾಗಿದೆ.

ಸ್ಟಾಕ್‌ಹೋಮ್ ಇಂಟರ್ನ್ಯಾಷನಲ್ ಪೀಸ್ ರಿಸರ್ಚ್ ಇನ್ಸ್ಟಿಟ್ಯೂಟ್ (ಸಿಪ್ರಿ) ನೀಡಿರುವ ವರದಿಯ ಪ್ರಕಾರ, 2018ರಿಂದ 2022ರ ನಡುವೆ ರಷ್ಯಾ ಭಾರತದ ಅತಿದೊಡ್ಡ ಆಯುಧ ಪೂರೈಕೆದಾರನಾಗಿತ್ತು. ಭಾರತದ ಆಯುಧ ಆಮದಿನ 45% ರಷ್ಯಾದಿಂದ ಆಮದಾಗಿತ್ತು. 29% ಆಯುಧ ಪೂರೈಸಿರುವ ಫ್ರಾನ್ಸ್ 2ನೇ ಸ್ಥಾನದಲ್ಲಿದ್ದರೆ, 11% ಆಯುಧ ಪೂರೈಸಿರುವ ಅಮೆರಿಕಾ ಮೂರನೇ ಸ್ಥಾನದಲ್ಲಿದೆ.

2013-2017 ಮತ್ತು 2018-2022ರ ನಡುವೆ ಭಾರತದ ರಕ್ಷಣಾ ಆಮದು 11% ಕಡಿಮೆಯಾಗಿದೆ ಎಂದು ಈ ವರದಿ ತಿಳಿಸಿದೆ. ಇದಕ್ಕೆ ಹಲವಾರು ಕಾರಣಗಳಿದ್ದು, ಹೆಚ್ಚಾಗಿರುವ ಭಾರತದ ದೇಶೀಯ ರಕ್ಷಣಾ ಉತ್ಪಾದನೆ ಮತ್ತು ಉಕ್ರೇನ್ ಯುದ್ಧ ಇದಕ್ಕೆ ಪ್ರಮುಖ ಕಾರಣಗಳಾಗಿವೆ.

ಆಮದಿನ ಪ್ರಮಾಣದಲ್ಲಿ ಕಡಿಮೆಯಾಗಿದ್ದರೂ, ಭಾರತ ಇಂದಿಗೂ ಜಗತ್ತಿನ ಅತಿದೊಡ್ಡ ಆಯುಧ ಆಮದುದಾರ ರಾಷ್ಟ್ರವಾಗಿದೆ. ಇದಕ್ಕೆ ಭಾರತದ ಅಪಾರ ಜನಸಂಖ್ಯೆ ಮತ್ತು ಹೆಚ್ಚುತ್ತಿರುವ ಮಿಲಿಟರಿ ಶಕ್ತಿಗಳು ಸೇರಿದಂತೆ ಹಲವು ಕಾರಣಗಳಿವೆ.

ಉಕ್ರೇನ್ ಮೇಲೆ ರಷ್ಯಾ ನಡೆಸಿರುವ ದಾಳಿ ಉಕ್ರೇನ್ ಮೇಲಿನ ಅದರ ಅವಲಂಬನೆಗೆ ತೊಂದರೆಗಳನ್ನು ಉಂಟುಮಾಡಿದೆ.

ರಷ್ಯಾದ ಉಕ್ರೇನ್ ಆಕ್ರಮಣ ರಷ್ಯಾ ಮತ್ತು ಭಾರತದ ರಕ್ಷಣಾ ಒಪ್ಪಂದಗಳಿಗೆ ಅಡಚಣೆ ಉಂಟುಮಾಡಿದೆ. ರಷ್ಯಾ ಭಾರತಕ್ಕೆ ಪೂರೈಸಬೇಕಾಗಿದ್ದ ಎರಡು ಯುದ್ಧನೌಕೆಗಳು ಇದರಿಂದಾಗಿ ಕನಿಷ್ಠ ಆರು ತಿಂಗಳು ತಡವಾಗುವ ಸಾಧ್ಯತೆಗಳಿವೆ.

ಮಾಧ್ಯಮ ವರದಿಗಳ ಪ್ರಕಾರ, ರಷ್ಯಾದಿಂದ ಪೂರೈಕೆಯಾಗಬೇಕಿದ್ದ ಎರಡು ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಗಳೂ ತಡವಾಗುವ ಸಾಧ್ಯತೆಗಳಿವೆ. ಈ ವಿಳಂಬಕ್ಕೆ ಸೂಕ್ತ ಕಾರಣಗಳು ಇನ್ನೂ ಸ್ಪಷ್ಟವಾಗಿಲ್ಲ.

ವಿಶ್ಲೇಷಕರ ಪ್ರಕಾರ, ರಷ್ಯಾದಿಂದ ಭಾರತಕ್ಕೆ ಮಿಲಿಟರಿ ಉಪಕರಣಗಳ ಪೂರೈಕೆಯಲ್ಲಿ ಆಗುತ್ತಿರುವ ವಿಳಂಬ ಭಾರತ ಸರ್ಕಾರಕ್ಕೆ ಕಳವಳಕಾರಿ ವಿಚಾರವಾಗಿದೆ. ಪಾಶ್ಚಾತ್ಯ ರಾಷ್ಟ್ರಗಳು ರಷ್ಯಾದ ಮೇಲೆ ಹೇರಿದ ನಿರ್ಬಂಧಗಳ ಪರಿಣಾಮವಾಗಿ ಎದುರಾದ ಪಾವತಿ ಸಮಸ್ಯೆಗಳು ಎರಡು ರಾಷ್ಟ್ರಗಳ ರಕ್ಷಣಾ ವಹಿವಾಟನ್ನು ಇನ್ನಷ್ಟು ಸಂಕೀರ್ಣಗೊಳಿಸಿವೆ.

ಪಾಶ್ಚಾತ್ಯ ರಾಷ್ಟ್ರಗಳ ನಿರ್ಬಂಧಗಳ ಪರಿಣಾಮವಾಗಿ ರಷ್ಯಾಗೆ ಡಾಲರ್ ಪಡೆಯುವುದು ಅತ್ಯಂತ ಕಷ್ಟಕರವಾಗಿದೆ. ಇದರ ಪರಿಣಾಮವಾಗಿ, ಭಾರತ ಮತ್ತು ರಷ್ಯಾಗಳು ರೂಪಾಯಿ ಅಥವಾ ರೂಬಲ್ ಮೂಲಕ ವ್ಯವಹಾರ ನಡೆಸುವ ಕುರಿತು ಮಾತುಕತೆ ನಡೆಸಿವೆ. ಆದರೆ ಈ ಕುರಿತು ಯಾವುದೇ ನಿರ್ಣಯ ಕೈಗೊಳ್ಳಲು ಇಂದಿಗೂ ಸಾಧ್ಯವಾಗಿಲ್ಲ.

ಮಾಸ್ಕೋದಲ್ಲಿ ಸಮಾವೇಶವೊಂದರಲ್ಲಿ ಭಾಗವಹಿಸಿ ಮಾತನಾಡಿದ ರಜನ್ ಕುಮಾರ್ ಅವರು, ಬಹಳಷ್ಟು ರಷ್ಯನ್ನರು ಈ ಹಣ ಪಾವತಿಯ ಸಮಸ್ಯೆಯ ಕುರಿತು ಆತಂಕ ಹೊಂದಿದ್ದಾರೆ ಎಂದಿದ್ದರು. ಭಾರತದ ಆಮದು ಬೆಲೆ ಹೆಚ್ಚುತ್ತಲೇ ಇದ್ದು, ಇದನ್ನು ಪಾವತಿಸಲು ಯಾವುದೇ ಸರಿಯಾದ ಪರಿಹಾರೋಪಾಯ ಮಾತ್ರ ಕಣ್ಣಿಗೆ ಕಾಣಿಸುತ್ತಿಲ್ಲ ಎಂದಿದ್ದಾರೆ.

ಪ್ರಯಾಣಿಕರೇ ಗಮನಿಸಿ, ಬಿಪೊರ್‌ಜಾಯ್ ಸೈಕ್ಲೋನ್‌ನಿಂದ ಜು.14, 15ರ 20ಕ್ಕೂ ಹೆಚ್ಚು ರೈಲು ಸಂಚಾರ ರದ್ದು!

ಚೀನಾದ ಅಂಶ:
ಬೀಜಿಂಗ್ ಮತ್ತು ಮಾಸ್ಕೋ ನಡುವೆ ದಿನೇ ದಿನೇ ಹೆಚ್ಚುತ್ತಿರುವ ಸ್ನೇಹ ದೆಹಲಿಗೆ ಕಳವಳಕಾರಿ ವಿಚಾರವಾಗಿದೆ. ಅವೆರಡು ರಾಷ್ಟ್ರಗಳು ತಮ್ಮ ಸಂಬಂಧವನ್ನು 'ಯಾವುದೇ ಮಿತಿಯಿಲ್ಲದ' ಸ್ನೇಹ ಎಂದು ಬಣ್ಣಿಸಿವೆ. ಚೀನಾ ಕಳೆದ ಮೂರು ವರ್ಷಗಳಿಂದ ಭಾರತೀಯ ಪಡೆಗಳೊಡನೆ ಲಡಾಖ್ ಗಡಿಯಲ್ಲಿ ಚಕಮಕಿಗಳಲ್ಲಿ ನಿರತವಾಗಿದ್ದು, ಇದನ್ನು ಸರಿಪಡಿಸಲು ಹಲವು ಪ್ರಯತ್ನಗಳನ್ನು ನಡೆಸಲಾಗಿದ್ದರೂ, ಅವು ಫಲ ನೀಡಿಲ್ಲ.

ರಾಜೇಶ್ವರಿ ಅವರು ರಷ್ಯಾ ಮತ್ತು ಚೀನಾಗಳ ನಡುವಿನ ಬಾಂಧವ್ಯ ದಿನೇ ದಿನೇ ಗಟ್ಟಿಯಾಗುತ್ತಿದ್ದು, ಇದರಿಂದಾಗಿ ಗಂಭೀರ ಪರಿಣಾಮಗಳು ಎದುರಾಗಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ. ರಷ್ಯಾ ಈಗ ಚೀನಾಗೆ ಹಿಂದೆಂದಿಗಿಂತಲೂ ಹೆಚ್ಚು ಅತ್ಯಾಧುನಿಕ ಆಯುಧಗಳನ್ನು ಒದಗಿಸುತ್ತಿದ್ದು, ಇದು ಚೀನಾವನ್ನು ಎದುರಿಸುವ ಭಾರತದ ಸಾಮರ್ಥ್ಯದ ಮೇಲೆ ನೇರ ಪರಿಣಾಮ ಬೀರಲಿದೆ ಎಂಸು ಅಭಿಪ್ರಾಯ ಪಟ್ಟಿದ್ದಾರೆ.

ಚೀನಾ ಈಗ ರಷ್ಯಾಗೆ ಅತ್ಯಂತ ನಿಕಟವರ್ತಿಯಾಗಿದೆ ಎನ್ನುವುದು ನವದೆಹಲಿಯ ಗಮನಕ್ಕೂ ಬಂದಿದೆ. ಪರಿಸ್ಥಿತಿಗಳು ಬದಲಾಗಿದ್ದು, ಇಂದಿನ ರಷ್ಯಾಗೂ, ಹಿಂದಿನ ರಷ್ಯಾಗೂ ಅಜಗಜ ವ್ಯತ್ಯಾಸವಿರುವುದು ದೆಹಲಿಗೆ ಅರಿವಿದೆ.

ಇಂದು ನಿರ್ಮಾಣವಾಗಿರುವ ಪರಿಸ್ಥಿತಿಗಳ ಕಾರಣದಿಂದ, ಭಾರತಕ್ಕೆ ಅಮೆರಿಕಾದೊಡನೆ ರಕ್ಷಣಾ ಸಂಬಂಧ ವೃದ್ಧಿಸುವ ಅವಕಾಶವಿದೆ. ಅದರಲ್ಲೂ ಈಗ ಭಾರತ ಮತ್ತು ಅಮೆರಿಕಾ ಸಂಬಂಧ ಚೀನಾವನ್ನು ನಿರ್ವಹಿಸುವ ಕುರಿತು ಕೇಂದ್ರಿತವಾಗಿದೆ ಎಂದು ರಾಜೇಶ್ವರಿ ಅಭಿಪ್ರಾಯ ಪಡುತ್ತಾರೆ.

ಆಸ್ಟಿನ್ ಅವರ ಭಾರತ ಭೇಟಿಯ ಸಂದರ್ಭದಲ್ಲಿ ಅವರು ದೆಹಲಿ ಮತ್ತು ವಾಷಿಂಗ್ಟನ್ ನಡುವಿನ ಸಹಯೋಗ ಸ್ವತಂತ್ರ ಮತ್ತು ಮುಕ್ತ ಇಂಡೋ ಪೆಸಿಫಿಕ್‌ಗೆ ಅಡಿಪಾಯವಾಗಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಒಂದಷ್ಟು ಜನರು ರಷ್ಯಾದಿಂದ ದೂರ ಸರಿಯುವ ಭಾರತದ ಪ್ರಯತ್ನಗಳು ಸುಲಭವಾದದ್ದಲ್ಲ ಎಂದು ಅಭಿಪ್ರಾಯ ಪಟ್ಟಿದ್ದು, ದಕ್ಷಿಣ ಏಷ್ಯಾದಲ್ಲಿ ಅಮೆರಿಕಾದ ಹಿತಾಸಕ್ತಿಗಳಿಗೆ ಪೂರಕವಾಗಿ ನಡೆದುಕೊಳ್ಳುವುದು ಭಾರತಕ್ಕೆ ತೊಂದರೆ ನೀಡಬಲ್ಲದು ಎಂದಿದ್ದಾರೆ.

ರಷ್ಯಾದಲ್ಲಿ ಭಾರತೀಯ ರಾಯಭಾರಿಯಾಗಿದ್ದ ಪ್ರಭಾತ್ ಶುಕ್ಲಾ ಅವರು ಭಾರತಕ್ಕೆ ಸಂಬಂಧಿಸಿದಂತೆ ಅಮೆರಿಕಾ ಒಂದು ವಿಶೇಷವಾದ ಇಕ್ಕಟ್ಟು ಹೊಂದಿದೆ ಎಂದಿದ್ದಾರೆ. ಅದೇನೆಂದರೆ, ಅಮೆರಿಕಾಗೆ ಭಾರತ ಚೀನಾವನ್ನು ತಡೆಯಲು, ಎದುರಿಸಲು ಸಾಕಷ್ಟು ಗಟ್ಟಿಯಾದ ಮಿಲಿಟರಿ ಹೊಂದಬೇಕೆಂಬ ಅಪೇಕ್ಷೆಯಿದೆ. ಅದೇ ಸಂದರ್ಭದಲ್ಲಿ, ಭಾರತ ಪಾಕಿಸ್ತಾನದ ಸೇನಾ ಮುಖ್ಯ ನೆಲೆ ರಾವಲ್ಪಿಂಡಿಯಲ್ಲಿ ನಡುಕ ಹುಟ್ಟಿಸುವಷ್ಟು ಶಕ್ತಿಶಾಲಿಯಾಗುವುದೂ ಅಮೆರಿಕಾಗೆ ಇಷ್ಟವಿಲ್ಲ.

ಕುಮಾರ್ ಅವರ ಪ್ರಕಾರ, ಭಾರತ ರಷ್ಯನ್ ಆಯುಧ ಖರೀದಿಯಿಂದ ದೂರ ಸರಿಯುವುದು ಒಂದು ಸುದೀರ್ಘ ಪ್ರಕ್ರಿಯೆಯಾಗಿರಲಿದೆ. ಭಾರತದ ಬಳಿ ಈಗಾಗಲೇ ಅಪಾರ ಸಂಖ್ಯೆಯಲ್ಲಿ ಸುಖೋಯಿ ಯುದ್ಧ ವಿಮಾನಗಳಿರುವುದರಿಂದ, ಎಫ್-16ಗೆ ಬದಲಾವಣೆ ಹೊಂದಲು ದೀರ್ಘಾವಧಿ ಬೇಕಾಗುತ್ತದೆ. ಭಾರತ ರಕ್ಷಣಾ ಆಮದಿಗೆ ಬೇರೆ ದೇಶಗಳ ಕಡೆಗೆ ಮುಖ ಮಾಡಿದರೂ, ಮುಂದಿನ ಐದರಿಂದ ಹತ್ತು ವರ್ಷಗಳ ಅವಧಿಗೆ ಭಾರತ ರಷ್ಯಾದ ಮೇಲೆ ಅವಲಂಬಿತವಾಗಿರುವ ಸಾಧ್ಯತೆಗಳಿವೆ.

Latest Videos
Follow Us:
Download App:
  • android
  • ios