Bengaluru: ಐಟಿಬಿಟಿ ಕಂಪನಿಗೆ ಬಾಂಬ್ ಬೆದರಿಕೆ ಕರೆ, ಬಾಂಬ್ ನಿಷ್ಕ್ರಿಯದಳ ದೌಡು
ಬೆಂಗಳೂರಿನಲ್ಲಿರುವ ಐಟಿಬಿಟಿ ಕಂಪನಿ ಬೆಳ್ಳಂದೂರಿನ ಇಕೋ ಸ್ಪೇಸ್ ನ IBDO ಅನ್ನೋ ಕಂಪನಿಗೆ ಬಾಂಬ್ ಹಾಕುವುದಾಗಿ ಬೆದರಿಕೆ ಕರೆ ಬಂದಿದೆ.
ಬೆಂಗಳೂರು (ಜೂ.13): ಬೆಂಗಳೂರಿನಲ್ಲಿರುವ ಐಟಿಬಿಟಿ (ITBT) ಕಂಪನಿಯೊಂದಕ್ಕೆ ಬಾಂಬ್ ಬೆದರಿಕೆ ಕರೆ ಬಂದಿದೆ. ಬೆಳ್ಳಂದೂರಿನ ಇಕೋ ಸ್ಪೇಸ್ ನ (Ecospace Business Park) IBDO ಅನ್ನೋ ಕಂಪನಿಗೆ ಬಾಂಬ್ ಹಾಕುವುದಾಗಿ ಬೆದರಿಕೆ ಕರೆ ಬಂದಿದ್ದು, 2 ಗಂಟೆ ಸುಮಾರಿಗೆ ಅನಾಮಧೇಯ ವ್ಯಕ್ತಿಯಿಂದ ಫೋನ್ ಕರೆ ಬಂದಿದೆ. ಬಾಂಬ್ ಇಟ್ಟಿದ್ದೀವಿ ಸ್ವಲ್ಪ ಸಮಯದಲ್ಲಿ ಬ್ಲಾಸ್ಟ್ ಆಗುತ್ತೆ ಅಂತ ಕರೆ ಮಾಡಿ ತಿಳಿಸಿದ್ದಾನೆ. ಕರೆ ಬಂದಿದ್ದೇ ಸ್ಥಳೀಯ ಪೊಲೀಸರಿಗೆ ಕಂಪನಿ ಮಾಹಿತಿ ನೀಡಿದೆ. ಈ ಹಿನ್ನೆಲೆಯಲ್ಲಿ ಬೆಳ್ಳಂದೂರು ಪೊಲೀಸರು ಸ್ಥಳಕ್ಕೆ ದೌಡಾಯಿಸಿದರು. ಶ್ವಾನದಳ ಹಾಗೂ ಬಾಂಬ್ ನಿಷ್ಕ್ರಿಯದಳ ಕೂಡ ಸ್ಥಳಕ್ಕೆ ದೌಡಾಯಿಸಿದರು. ಐಎಸ್ ಡಿ ಅಧಿಕಾರಿಗಳು ಕೂಡ ಸ್ಥಳಕ್ಕೆ ಧಾವಿಸಿದರು.
ಮಹಿಳೆಯರಿಗೆ ಉಚಿತ ಪ್ರಯಾಣ: ರಶ್ ಆದ ಬಸ್‌ನಲ್ಲಿ ಅಜ್ಜಿಯ 30,000 ಹಣ ದೋಚಿದ ಕಳ್ಳರು
ಕೆಲಸ ಬಿಟ್ಟ ಉದ್ಯೋಗಿಯ ಮೇಲೆ ಅನುಮಾನ ಹೆಚ್ಚಿದ್ದು, ಇತ್ತೀಚೆಗಷ್ಟೇ ಈತನನ್ನು ಕೆಲಸದಿಂದ ತೆಗೆದುಹಾಕಲಾಗಿತ್ತು. ಆತನೇ ಬಾಂಬ್ ಬೆದರಿಕೆ ಕರೆ ಮಾಡಿರೋ ಶಂಕೆ ವ್ಯಕ್ತವಾಗಿದೆ. ಫೋನ್ ಕರೆ ಸ್ವೀಕರಿಸಿದ ಉದ್ಯೋಗಿಯಿಂದಲೂ ಹಳೇ ಉದ್ಯೋಗಿಯ ಹೆಸರು ಹೇಳಿದ್ದಾನೆ. ಹೀಗಾಗಿ ಹಳೇ ಉದ್ಯೋಗಿಯ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಮಾರತ್ ಹಳ್ಳಿ, ಬೆಳ್ಳಂದೂರು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಮುಂಜಾಗ್ರತೆ ಹಿನ್ನೆಲೆ ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ದೌಡಾಯಿಸಿದ್ದಾರೆ. ಹುಸಿ ಬಾಂಬ್ ಕರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಪೊಲೀಸರು ಹಳೇ ಉದ್ಯೋಗಿಯ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಸಚಿವ ಬಿ.ನಾಗೇಂದ್ರ, ಜನಾರ್ಧನರೆಡ್ಡಿಗೆ ಮತ್ತೆ ಅಕ್ರಮ ಗಣಿಗಾರಿಕೆ ಉರುಳು: ಸಮನ್ಸ್ ನೀಡಿದ ಕೋರ್ಟ್
ಕಂಪನಿಯ ಹಳೇ ಉದ್ಯೋಗಿಯಿಂದ ಹುಸಿ ಬಾಂಬ್ ಕರೆ ಬಂದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಕೆಲವೇ ದಿನಗಳ ಹಿಂದೆ ನವನೀತ್ ಪ್ರಸಾದ್ ಎಂಬಾತನನ್ನು ಅಸಭ್ಯ ವರ್ತನೆ ಹಿನ್ನಲೆ ಕೆಲಸದಿಂದ ವಜಾ ಮಾಡಲಾಗಿತ್ತು. ಇದೇ ಕಾರಣಕ್ಕೆ ಆರೋಪಿ ಹುಸಿ ಬಾಂಬ್ ಬೆದರಿಕೆ ಕರೆ ಮಾಡಿದ್ದಾನೆ. ಹೀಗಾಗಿ ಇಡೀ ಕಟ್ಟಡವನ್ನು ಪೊಲೀಸರು,ಬಾಂಬ್ ಸ್ಕ್ವಾಂಡ್ ಚೆಕ್ ಮಾಡುತ್ತಿದ್ದಾರೆ.