ಬ್ರಹ್ಮಪುತ್ರ ನದಿಗೆ ಅಣೆಕಟ್ಟು ಕಟ್ಟುವ ವಿಚಾರವಾಗಿ  ಭಾರತ ಹಾಗೂ ಬಾಂಗ್ಲಾದೇಶದೊಂದಿಗೆ ಮಾತುಕತೆ ನಡೆಸಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡೆ ಈ ಯೋಜನೆ ಪ್ರಾರಂಭಿಸುವುದಾಗಿ ಚೀನಾ ಹೇಳಿದೆ. 

ಬೀಜಿಂಗ್‌ (ಡಿ.04): ಬ್ರಹ್ಮಪುತ್ರ ನದಿಗೆ ಅಣೆಕಟ್ಟು ನಿರ್ಮಾಣ ಮಾಡುವ ತನ್ನ ಘೋಷಣೆಗೆ ಪ್ರತಿಯಾಗಿ ಭಾರತವೂ ಡ್ಯಾಂ ಕಟ್ಟುವ ಘೋಷಣೆ ಮಾಡಿದ ಬಳಿಕ ಚೀನಾ ತಣ್ಣಗಾಗಿದೆ. ಭಾರತ ಹಾಗೂ ಬಾಂಗ್ಲಾದೇಶದೊಂದಿಗೆ ಮಾತುಕತೆ ನಡೆಸಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡೆ ಈ ಯೋಜನೆ ಪ್ರಾರಂಭಿಸುವುದಾಗಿ ಚೀನಾ ಹೇಳಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಳೆದ ಹಲವಾರು ವರ್ಷಗಳಿಂದ ಮೂರೂ ದೇಶಗಳು ನದಿಯಲ್ಲಿನ ಪ್ರವಾಹ ಹಾಗೂ ಇನ್ನಿತರ ಅಪಾಯಗಳ ಬಗ್ಗೆ ಪರಸ್ಪರ ಮಾಹಿತಿ ಹಂಚಿಕೊಳ್ಳುತ್ತಿವೆ. ಭವಿಷ್ಯದಲ್ಲಿ ಭಾರತ, ಬಾಂಗ್ಲಾ ಸಹಿತ ಇನ್ನಿತರ ದೇಶಗಳ ಜತೆ ಉತ್ತಮ ಮಾತುಕತೆಗಳು ಮುಂದುವರಿಯಲಿದೆ. ಈ ಬಗ್ಗೆ ಯಾವುದೇ ಆತಂಕ ಬೇಡ ಎಂದು ಚೀನಾ ವಿದೇಶಾಂಗ ಇಲಾಖೆಯ ವಕ್ತಾರೆ ಹುವಾ ಚುನಿಯಾಂಗ್‌ ಹೇಳಿದ್ದಾರೆ.

2 ವರ್ಷ ಬಳಿಕ ಭಾರತದ ಅಕ್ಕಿ ಖರೀದಿಸಿದ ಚೀನಾ! ...

ಇದೇ ವೇಳೆ ಬ್ರಹ್ಮಪುತ್ರ ನದಿ ಬಗ್ಗೆ ನಡೆಯುತ್ತಿರುವ ಎಲ್ಲಾ ಬೆಳವಣಿಗೆಗಳನ್ನು ಭಾರತ ಸೂಕ್ಷ್ಮವಾಗಿ ಗಮನಿಸುತ್ತಿದೆ. ಈ ವಿಚಾರದಲ್ಲಿ ನಮ್ಮ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಚೀನಾದೊಂದಿಗೆ ತೊಡಗಿಕೊಳ್ಳಲು ನಾವು ಉದ್ದೇಶಿಸಿದ್ದೇವೆ ಎಂದು ಭಾರತದ ವಿದೇಶಾಂಗ ಇಲಾಖೆಯ ವಕ್ತಾರ ಅನುರಾಗ್‌ ಶ್ರೀವಾಸ್ತವ ಹೇಳಿದ್ದಾರೆ.