Asianet Suvarna News Asianet Suvarna News

ಲಸಿಕಾ ಅಭಿಯಾನ ಮತ್ತಷ್ಟು ಚುರುಕು; 41.78 ಕೋಟಿ ದಾಟಿದ ಡೋಸ್!

  • 41.78 ಕೋಟಿ ದಾಟಿದ ಭಾರತದ ಲಸಿಕಾ ಅಭಿಯಾನ 
  • ಚೇತರಿಕೆ ಪ್ರಮಾಣ 97.35% ಕ್ಕೆ ಏರಿಕೆ
  • ದೈನಂದಿನ ಪಾಸಿಟಿವಿಟಿ ದರ 2.41% ರಷ್ಟು
India administered over 41 78 crore total doses of the anti Covid vaccine ckm
Author
Bengaluru, First Published Jul 22, 2021, 10:05 PM IST

ನವದೆಹಲಿ(ಜು.22):  ಕೊರೋನಾ ವೈರಸ್ 2ನೇ ಅಲೆ ಎದುರಿಸಿದ ಭಾರತ, ಇದೀಗ 3ನೇ ಅಲೆಗೆ ಸಜ್ಜಾಗುತ್ತಿದೆ. ಇದಕ್ಕಾಗಿ ಲಸಿಕೆ ಅಭಿಯಾನಕ್ಕೆ ವೇಗ ಹೆಚ್ಚಿಸಲಾಗಿದೆ. ಇದೀಗ ಭಾರತ ಲಸಿಕೆ ಅಭಿಯಾನ ಇದೀಗ  41.78 ಕೋಟಿ ದಾಟಿದೆ. ಭಾರತದಲ್ಲಿ ಓಟ್ಟು 41,78,51,151 ಡೋಸ್ ಲಸಿಕೆ ಹಾಕಲಾಗಿದ್ದು, ಕಳೆದ 24 ಗಂಟೆಗಳಲ್ಲಿ 22,77,679 ಡೋಸ್ ಲಸಿಕೆ ನೀಡಲಾಗಿದೆ.

ಭಾರತದಲ್ಲಿ ಕೋವಿಡ್ – 19 ಲಸಿಕೆ ಪ್ರಮಾಣ 41.78 ಕೋಟಿ ದಾಟಿದೆ. ಇಂದು ಬೆಳಿಗ್ಗೆ ದೊರೆತ ತಾತ್ಕಾಲಿಕ ಮಾಹಿತಿಯಂತೆ 51,60,995 ಅವಧಿಗಳಲ್ಲಿ 41,78,51,151 ಡೋಸ್ ಲಸಿಕೆ ಲಸಿಕೆ ಹಾಕಲಾಗಿದೆ. ಕಳೆದ 24 ಗಂಟೆಗಳಲ್ಲಿ 22,77,679 ಡೋಸ್ ಲಸಿಕೆ ನೀಡಲಾಗಿದೆ. ಕೋವಿಡ್ – 19 ಲಸಿಕೆಯ ಸಾರ್ವತ್ರೀಕರಣದ ಹೊಸ ಹಂತ 2021 ರ ಜೂನ್ 21 ರಂದು ಪ್ರಾರಂಭವಾಗಿದೆ. ದೇಶಾದ್ಯಂತ ಕೋವಿಡ್ – 19 ಲಸಿಕೆಯ ವೇಗವನ್ನು ತ್ವರಿತಗೊಳಿಸುವ ಮತ್ತು ಲಸಿಕೆ ವ್ಯಾಪ್ತಿಯನ್ನು ವಿಸ್ತರಿಸಲು ಸರ್ಕಾರ ಬದ್ಧವಾಗಿದೆ. 

ಕೋವಿಡ್ – 19 ಸಾಂಕ್ರಾಮಿಕ ಪ್ರಾರಂಭವಾದ ನಂತರದಿಂದ ಈ ವರೆಗೆ 3,04,29,339 ಮಂದಿ ಚೇತರಿಸಿಕೊಂಡಿದ್ದಾರೆ ಮತ್ತು ಕಳೆದ 24 ಗಂಟೆಗಳಲ್ಲಿ 38,652 ಸೋಂಕಿತರು ಗುಣಮುಖರಾಗಿದ್ದಾರೆ. ಒಟ್ಟಾರೆ ಚೇತರಿಕೆ ದರ 97.35% ರಷ್ಟಿದೆ. ಕಳೆದ 24 ಗಂಟೆಗಳಲ್ಲಿ 41,383 ಹೊಸ ಸೋಂಕು ಪ್ರಕರಣಗಳು ವರದಿಯಾಗಿವೆ. ಸತತ 25 ದಿನಗಳಿಂದ 50,000 ಕ್ಕಿಂತ ಕಡಿಮೆ ಸೋಂಕು ಪ್ರಕರಣಗಳು ದಾಖಲಾಗುತ್ತಿವೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸುಸ್ಥಿರ ಮತ್ತು ಸಾಮೂಹಿಕ ಪ್ರಯತ್ನದಿಂದ ಈ ಫಲಿತಾಂಶ ಸಾಧ್ಯವಾಗಿದೆ.

ದೇಶದ ಒಟ್ಟಾರೆ ಪಾಸಿಟಿವ್ ಪ್ರಕರಣಗಳಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 4,09,394 ರಷ್ಟಿದ್ದು, ಒಟ್ಟಾರೆ ಸಕ್ರಿಯ ಪ್ರಕರಣಗಳ ಪ್ರಮಾಣ 1.31% ರಷ್ಟಿದೆ. ದೇಶಾದ್ಯಂತ ಸೋಂಕು ಪತ್ತೆ ಪರೀಕ್ಷೆ ಸಾಮರ್ಥ್ಯವನ್ನು ಹೆಚ್ಚಳ ಮಾಡಲಾಗಿದ್ದು, ಕಳೆದ 24 ಗಂಟೆಗಳಲ್ಲಿ ಒಟ್ಟು 17,18,439 ಪರೀಕ್ಷೆಗಳನ್ನು ನಡೆಸಲಾಗಿದೆ. ಈ ವರೆಗೆ ಭಾರತದಲ್ಲಿ ಒಟ್ಟು 45.09 ಕೋಟಿ (45,09,11,712) ಪರೀಕ್ಷೆಗಳನ್ನು ನಡೆಸಲಾಗಿದೆ.

ಒಂದು ಕಡೆ ದೇಶಾದ್ಯಂತ ಸೋಂಕು ಪತ್ತೆ ಪರೀಕ್ಷೆಯನ್ನು ಹೆಚ್ಚಿಸಲಾಗಿದ್ದು, ವಾರದ ಪಾಸಿಟಿವಿಟಿ ದರ 2.12% ರಷ್ಟಿದೆ ಮತ್ತು ದೈನಂದಿನ ಪಾಸಿಟಿವಿಟಿ ದರ 2.41% ರಷ್ಟಿದೆ. ದೈನಂದಿನ ಪಾಸಿಟಿವಿಟಿ ದರ ಸತತ 31 ದಿನಗಳಿಂದ 3% ರಲ್ಲಿದೆ ಮತ್ತು ನಿರಂತರ 45 ದಿನಗಳಲ್ಲಿ 5% ಕ್ಕೂ ಕಡಿಮೆ ಇದೆ.
 

Follow Us:
Download App:
  • android
  • ios