Asianet Suvarna News Asianet Suvarna News

ಕೋವಿಡ್ ಲಸಿಕೆ ಅಭಿಯಾನದಲ್ಲಿ ಭಾರತ ಮತ್ತೊಂದು ಮೈಲಿಗಲ್ಲು, 90 ಕೋಟಿ ಡೋಸ್!

  • ಕೋವಿಡ್ ಹೋರಾಟದಲ್ಲಿ ಮಹತ್ವದ ಮೈಲಿಗಲ್ಲು ನಿರ್ಮಿಸಿದ ಭಾರತ 
  • 90 ಕೋಟಿ ಲಸಿಕೆ ಡೋಸ್ ಪೂರೈಸಿದ ಭಾರತ
  • ಸಂತಸ ಹಂಚಿಕೊಂಡ ಕೇಂದ್ರ ಆರೋಗ್ಯ ಸಚಿವ
India administered 90 crore covid vaccine Health Minister Mansukh Mandaviya share vaccination drive update ckm
Author
Bengaluru, First Published Oct 2, 2021, 5:43 PM IST
  • Facebook
  • Twitter
  • Whatsapp

ನವದೆಹಲಿ(ಅ.02): ಕೊರೋನಾ(Coronavirus) ವಿರುದ್ಧದ ಹೋರಾಟದಲ್ಲಿ ಭಾರತ(India) ಇತರ ದೇಶಗಳಿಂದ ಮುಂಚೂಣಿಯಲ್ಲಿದೆ. ಭಾರತದಿಂದ ಕೊರೋನಾ ಮುಕ್ತ ಮಾಡಲು ಕೇಂದ್ರ ಸರ್ಕಾರ ಲಸಿಕೆ ಅಭಿಯಾನದ(Vaccination Drive) ವೇಗ ಹೆಚ್ಚಿಸಿದೆ. ಇದೀಗ ಭಾರತ ಲಸಿಕೆ ಅಭಿಯಾನದಲ್ಲಿ ಮತ್ತೊಂದು ಮೈಲಿಗಲ್ಲು ನಿರ್ಮಿಸಿದೆ. ದೇಶದಲ್ಲಿ 90 ಕೋಟಿ ಲಸಿಕೆ ಡೋಸ್(Dose) ಹಾಕಲಾಗಿದೆ. ಈ ಮೂಲಕ ಅತ್ಯಲ್ಪ ಅವದಿಯಲ್ಲಿ ಗರಿಷ್ಠ ಲಸಿಕೆ ಹಾಕಿದ ಹೆಗ್ಗಳಿಕೆಗೆ ಪಾತ್ರವಾಗಿದೆ.

ಬ್ರಿಟನ್‌ಗೆ ಭಾರತ ತಿರುಗೇಟು: ಅಲ್ಲಿಂದ ಬಂದರೆ ಕ್ವಾರಂಟೈನ್‌!

90 ಕೋಟಿ ಲಸಿಕಾ ಡೋಸ್ ಪೂರೈಸಿದ ಸಂತಸವನ್ನು ಕೇಂದ್ರ ಆರೋಗ್ಯ ಸಚಿವ ಮನ್ಸುಕ್ ಮಾಂಡವಿಯಾ(Mansukh Mandaviya) ಹಂಚಿಕೊಂಡಿದ್ದಾರೆ. ಕೋವಿನ್‌ನಲ್ಲಿ ಲಭ್ಯವಿರುವ ಮಾಹಿತಿ ಪ್ರಕಾರ ಭಾರತ 90,10,04,270 ಡೋಸ್ ಲಸಿಕೆ ಹಾಕಿದೆ. ಇದರಲ್ಲಿ 65,69,56,299 ಮೊದಲ ಡೋಸ್ ಹಾಗೂ 24,40,47,971 ಎರಡನೇ ಡೋಸ್ ಹಾಕಲಾಗಿದೆ.

ತ್ವರಿತ ಲಸಿಕೆ ಪೂರೈಸಿದ ಭಾರತಕ್ಕೆ ವಿಶ್ವಸಂಸ್ಥೆಯಲ್ಲಿ ಭಾರೀ ಮೆಚ್ಚುಗೆ!

ಲಾಲ್ ಬಹದ್ದೂರ್ ಶಾಸ್ತ್ರಿ ಜೈ ಜವಾನ್, ಜೈಕಿಸಾನ್ ಎಂದರು, ಅಟಲಜಿ ಜೈ ವಿಜ್ಞಾನ್ ಸೇರಿಸಿದರು, ಇದೀಗ ಮೋದಿ ಜೈ ಅನುಸಂದಾನ್ ಸೇರಿಸಿದ್ದಾರೆ. ಇಂದು ಅನುಸಂದಾನ ಫಲಿತಾಂಶ ಕೊರೋನಾ ಲಸಿಕೆಯಾಗಿದೆ. 90 ಕೋಟಿ ಡೋಸ್ ಸಾಧನೆ ಎಂದು ಮನ್ಸುಕ್ ಮಾಂಡವಿಯಾ ಟ್ವೀಟ್ ಮಾಡಿದ್ದಾರೆ.

 

ಲಸಿಕೆ: ದ.ಭಾರತದಲ್ಲಿ ಕರ್ನಾಟಕ ರಾಜ್ಯ ನಂ.1!

ಜನವರಿ 16, 2021ರಿಂದ ದೇಶದಲ್ಲಿ ಲಸಿಕಾ ಅಭಿಯಾನ ಆರಂಭಗೊಂಡಿದೆ. ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರು, ಫ್ರಂಟ್‌ಲೈನ್ ವರ್ಕಸ್‌ಗೆ ನೀಡಲಾಯಿತು. ಬಳಿಕ ಹಿರಿಯರು, ಆರೋಗ್ಯ ಸಮಸ್ಯೆ ಇದ್ದವರಿಗೆ ಲಸಿಕೆ ನೀಡಲಾಯಿತು. ಜೂನ್ 21 ರಿಂದ ಲಸಿಕಾ ಅಭಿಯಾನದ ವೇಗ ಹೆಚ್ಚಿಸಲಾಯಿತು. 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಲಸಿಕಾ ಅಭಿಯಾನ ಹೊಸ ರೂಪದೊಂದಿದೆ ಮುಂದುವರಿಯಿತು.

ಕೋವಿ​ಶೀಲ್ಡ್‌ ಪಡೆ​ದ​ವ​ರಿ​ಗೆ ಅನೇಕ ದೇಶ​ಗಳ ಕೆಂಪು​ಹಾ​ಸಿನ ಸ್ವಾಗ​ತ!

ಇತರ ದೇಶಗಳಿಗೆ ಹೋಲಿಸಿದರೆ ಭಾರತ ಅತೀ ಕಡಿಮೆ ಅವಧಿಯಲ್ಲಿ ಗರಿಷ್ಠ ಲಸಿಕಾ ಡೋಸ್ ನೀಡಿದೆ. ಭಾರತದ ಸಾಧನೆಯನ್ನು ವಿಶ್ವ ಆರೋಗ್ಯ ಸಂಸ್ಥೆ ಹೊಗಳಿದೆ. ಇದೀಗ 90 ಕೋಟಿ ದಾಟಿರುವ ಭಾರತ ಇದೀಗ 100 ಕೋಟಿ ಲಸಿಕೆ ಗುರಿ ಇಟ್ಟುಕೊಂಡಿದೆ. ಶೀಘ್ರದಲ್ಲೇ ಭಾರತ 100 ಕೋಟಿ ಲಸಿಕೆ ಹಾಕಿದ ಸಾಧನೆ ಮಾಡಲಿದೆ.
 

Follow Us:
Download App:
  • android
  • ios