Asianet Suvarna News Asianet Suvarna News

ಹುಲಿ ಸಂಸತಿ ಆರೋಗ್ಯಕರ ಜೀವ ವೈವಿಧ್ಯತೆಯ ಸಾರ

ವಿಶ್ವದ ಶೇ.16 ರಷ್ಟು ಮಾನವ ಮತ್ತು ಜಾನುವಾರು ಜನಸಂಖ್ಯೆ ನಮ್ಮ ದೇಶದಲ್ಲಿದೆ. ಇವೆರಡಕ್ಕೂ ಆಹಾರ, ನೀರು ಮತ್ತು ಭೂಮಿ ಬೇಕು. ಆದರೂ ಭಾರತವು ವಿಶ್ವದ ಜೀವವೈವಿಧ್ಯತೆಯ 8 ಪ್ರತಿಶತವನ್ನು ಹೊಂದಿದೆ.

India accounts for 70 percent of World Tigers says Prakash Javadekar
Author
Bengaluru, First Published Jul 29, 2020, 4:30 PM IST

ನವದೆಹಲಿ (ಜು. 29): ಹುಲಿ ಸಂರಕ್ಷಣೆಯು ಆತ್ಮನಿರ್ಭರತೆಗೆ ಒಂದು ಉತ್ತಮ ಉದಾಹರಣೆ ಮತ್ತು ಭಾರತದ ಸಂಕಲ್ಪದಿಂದ ಸಿದ್ಧಿ ತತ್ವವನ್ನು ಪ್ರತಿಪಾದಿಸುತ್ತದೆ. ಪ್ರಕೃತಿ ಪ್ರಿಯ ರಾಷ್ಟ್ರವಾದ ಭಾರತವು ವಿಶ್ವದ ಅತಿ ಹೆಚ್ಚು ಹುಲಿಗಳ ಆವಾಸಸ್ಥಾನವಾಗಿದೆ. ಇಂದು ದೇಶವು ವಿಶ್ವದ ಹುಲಿಗಳ ಸಂಖ್ಯೆಯಲ್ಲಿ ಶೇ.70 ರಷ್ಟನ್ನು ಹೊಂದಿದೆ. ಒಟ್ಟು 2,967 ಹುಲಿಗಳು ಭಾರತದಲ್ಲಿವೆ. ಇದು ಜನರ ಮತ್ತು ದೇಶದ ಬಹುದೊಡ್ಡ ಸಂರಕ್ಷಣಾ ಯಶಸ್ಸು. ಸಾಂಸ್ಕೃತಿಕವಾಗಿ ಶ್ರೀಮಂತವಾದ ನಮ್ಮ ದೇಶವು ನಾಯಕತ್ವದ ಸ್ಥಾನವನ್ನು ಪಡೆದುಕೊಳ್ಳಲು ಇದು ಕಾರಣವಾಗುತ್ತಿದ್ದು, ಭಾರತದ ಅತ್ಯುತ್ತಮ ಜೀವ ವೈವಿಧ್ಯತೆಯನ್ನು ಸಾರುತ್ತದೆ.

ವಿಶ್ವ ಜೀವ ವೈವಿದ್ಯತೆಯ 8%

ನಾವು ವಿಶ್ವದ ಭೂ ಪ್ರದೇಶದಲ್ಲಿ ಕೇವಲ ಶೇ.2.5ರಷ್ಟನ್ನು ಮಾತ್ರ ಹೊಂದಿದ್ದೇವೆ. ಕೇವಲ ನಾಲ್ಕು ಪ್ರತಿಶತದಷ್ಟುಶುದ್ಧ ಮಳೆ ನೀರಿನ ಸಂಪನ್ಮೂಲಗಳನ್ನು ಮಾತ್ರ ಹೊಂದಿರುವ ನಮಗೆ ಇದೊಂದು ಪ್ರಮುಖ ಅಡಚಣೆ ಎಂದೇ ಪರಿಗಣಿಸಬಹುದು. ವಿಶ್ವದ ಶೇ.16ರಷ್ಟುಮಾನವ ಮತ್ತು ಜಾನುವಾರು ಜನಸಂಖ್ಯೆ ನಮ್ಮ ದೇಶದಲ್ಲಿದೆ.

ಇವೆರಡಕ್ಕೂ ಆಹಾರ, ನೀರು ಮತ್ತು ಭೂಮಿ ಬೇಕು. ಆದರೂ ಭಾರತವು ವಿಶ್ವದ ಜೀವವೈವಿಧ್ಯತೆಯ 8 ಪ್ರತಿಶತವನ್ನು ಹೊಂದಿದೆ. ಪ್ರಕೃತಿಯನ್ನು ಬದುಕಿನ ಭಾಗವಾಗಿ ಮತ್ತು ಮಾನವನ ಅಸ್ತಿತ್ವದೊಂದಿಗೆ ಜೋಡಿಸುವ ಭಾರತದ ನೀತಿಗಳು ಇದಕ್ಕೆ ಕಾರಣ. ನಮ್ಮ ದೇಶದ ಜನರು ಮರ ಮತ್ತು ಪ್ರಾಣಿಗಳನ್ನು ಪೂಜಿಸುತ್ತಾರೆ ಮತ್ತು ಪ್ರಕೃತಿಯನ್ನು ಬ್ರಹ್ಮಾಂಡದ ಒಂದು ಭಾಗವೆಂದು ಪರಿಗಣಿಸುತ್ತಾರೆ. ಪ್ರಾಣಿ ಮತ್ತು ಪಕ್ಷಿಗಳಿಗೆ ನೀರು, ಆಹಾರ ನೀಡುವುದನ್ನು ಪವಿತ್ರ ಕರ್ತವ್ಯವೆಂದು ತಿಳಿದಿದ್ದಾರೆ. ಆದ್ದರಿಂದ ಎಲ್ಲಾ ನಿರ್ಬಂಧಗಳ ಹೊರತಾಗಿಯೂ, ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವು ಜೀವವೈವಿಧ್ಯತೆಯಲ್ಲಿ ಸಮೃದ್ಧವಾಗಿದೆ.

ಅತಿ ಹೆಚ್ಚು ಹುಲಿ; 2 ನೇ ಸ್ಥಾನದಲ್ಲಿರುವ ಕರ್ನಾಟಕ ಶೀಘ್ರವೇ ನಂ 1

ಹುಲಿ ಗಣತಿಯಲ್ಲಿ ಗಿನ್ನೆಸ್‌ ದಾಖಲೆ

ಭಾರತದ ಇತ್ತೀಚಿನ ಹುಲಿಗಣತಿಯಯಲ್ಲಿ 25 ಸಾವಿರ ಕ್ಯಾಮೆರಾ ಟ್ರ್ಯಾಪ್‌ಗಳನ್ನು ಬಳಸಿ, 35 ದಶಲಕ್ಷಕ್ಕೂ ಹೆಚ್ಚು ಚಿತ್ರಗಳನ್ನು ತೆಗೆದಿರುವುದು ಗಿನ್ನೆಸ್‌ ದಾಖಲೆಯಾಗಿದೆ. ಕೃತಕ ಬುದ್ಧಿಮತ್ತೆಯ ನೆರವಿನಿಂದ ಎಲ್ಲವನ್ನೂ ಸ್ಥೂಲವಾಗಿ ಪರೀಕ್ಷಿಸಲಾಗಿದೆ. ಇದು ಜಗತ್ತಿನಾದ್ಯಂತ ದೇಶವೊಂದು ಕೈಗೊಂಡ ಅತಿದೊಡ್ಡ ಗಣತಿಯಾಗಿದೆ. ಹುಲಿಗಳ ಸಂಖ್ಯೆಯನ್ನು ದ್ವಿಗುಣಗೊಳಿಸುವುದಾಗಿ ಭಾರತವು 2010ರಲ್ಲಿ ಸೇಂಟ್‌ ಪೀಟರ್ಸ್‌ಬರ್ಗ್‌ ಘೋಷಣೆಯಲ್ಲಿ ಪ್ರತಿಜ್ಞೆ ಮಾಡಿತ್ತು. ಈ ಗುರಿಯನ್ನು ನಾಲ್ಕು ವರ್ಷಗಳ ಮುಂಚಿತವಾಗಿಯೇ ಸಾಧಿಸಲಾಗಿದೆ.

ದೇಶದಲ್ಲಿವೆ 50 ಹುಲಿ ಧಾಮಗಳು

1973ರಲ್ಲಿ ಕೇವಲ ಒಂಬತ್ತು ಹುಲಿ ಧಾಮಗಳೊಂದಿಗೆ ಹುಲಿ ಯೋಜನೆಯನ್ನು ಪ್ರಾರಂಭಿಸಲಾಯಿತು. ಇಂದು, ಭಾರತವು 72,000 ಚದರ ಕಿ.ಮೀ.ಗಳ 50 ಹುಲಿ ಧಾಮಗಳನ್ನು ಹೊಂದಿದೆ. ಈ ಎಲ್ಲಾ ಹುಲಿಧಾಮಗಳನ್ನು ಸ್ವತಂತ್ರ ನಿರ್ವಹಣೆಯ ಪರಿಣಾಮಕಾರಿತ್ವಕ್ಕಾಗಿ ಮೌಲ್ಯಮಾಪನ ಮಾಡಲಾಗುತ್ತದೆ. ಇತ್ತೀಚಿನ ಸಂಶೋಧನೆಯಲ್ಲಿ 50 ಹುಲಿಧಾಮಗಳಲ್ಲಿ 21 ಅತ್ಯುತ್ತಮವಾಗಿ ಕೆಲಸ ಮಾಡುತ್ತಿವೆ, 17 ಉತ್ತಮ ಮತ್ತು 12 ತೃಪ್ತಿಕರವಾಗಿವೆ ಎಂದು ಹೇಳಲಾಗಿದೆ. ಕಳಪೆ ವರ್ಗದಲ್ಲಿ ಯಾವುದೂ ಇಲ್ಲ ಎಂಬುದು ಇಲ್ಲಿ ಗಮನಾರ್ಹ. ವ್ಯವಸ್ಥಿತ ಮತ್ತು ವೈಜ್ಞಾನಿಕ ಹುಲಿ ಸಂರಕ್ಷಣಾ ವಿಧಾನಗಳು ಯಶಸ್ಸಿಗೆ ಬಹಳಷ್ಟುಕೊಡುಗೆ ನೀಡಿವೆ. ಇದಕ್ಕೆ ಮತ್ತೊಂದು ಪ್ರಮುಖ ಕಾರಣವೆಂದರೆ ಹೆಚ್ಚಿದ ಕಣ್ಗಾವಲು. ಬಹುತೇಕ ಎಲ್ಲಾ ಸಂಘಟಿತ ಬೇಟೆಯ ದಂಧೆಗಳನ್ನು ನಿರ್ಮೂಲನೆ ಮಾಡಲಾಗಿದೆ; ಮಧ್ಯ ಭಾರತದಲ್ಲಿ ಕಳೆದ ಆರು ವರ್ಷಗಳಲ್ಲಿ ಸಾಂಪ್ರದಾಯಿಕ ಗುಂಪುಗಳ ಸಂಘಟಿತ ಬೇಟೆಯು ಗಣನೀಯವಾಗಿ ಕಡಿಮೆಯಾಗಿರುವುದು ಇದಕ್ಕೆ ಉತ್ತಮ ಉದಾಹರಣೆಯಾಗಿದೆ.

ಹುಲಿ ಸಂತತಿ ಏರಿಕೆ ಕಾರಣ ಏನು?

ಅನುಕೂಲಕರ ವಾತಾವರಣದಲ್ಲಿ ಹುಲಿಗಳು ವೇಗವಾಗಿ ಸಂತಾನೋತ್ಪತ್ತಿ ಮಾಡುತ್ತವೆ. ಹೆಚ್ಚಿನ ರಕ್ಷಣೆಯು ಹುಲಿಗಳ ಸಂತಾನೋತ್ಪತ್ತಿಯನ್ನು ಪ್ರೋತ್ಸಾಹಿಸಿದೆ. ದೇಶದ ಅನೇಕ ಭಾಗಗಳಲ್ಲಿ ಮುಖ್ಯ ಪ್ರದೇಶಗಳ ಅಂಚಿನ ಹಳ್ಳಿಗಳ ಸ್ವಯಂಪ್ರೇರಿತ ಪುನರ್ವಸತಿ ಕೂಡ ಹುಲಿಗಳಿಗೆ ಹೆಚ್ಚಿನ ಸ್ಥಳಾವಕಾಶ ಲಭ್ಯವಾಗಲು ಕಾರಣವಾಗಿದೆ. ದೇಶದಲ್ಲಿರುವ ಹುಲಿಗಳ ಸಂಖ್ಯೆಯ ಆಧಾರದಲ್ಲಿ ಆಹಾರ ಸರಪಳಿಯಲ್ಲಿ ಹುಲಿಗಳು ತುತ್ತ ತುದಿಯಲ್ಲಿರುತ್ತವೆ. ಅವುಗಳ ಸಂರಕ್ಷಣೆ ದೃಢವಾದ ಜೀವವೈವಿಧ್ಯತೆಗೆ ಸಾಕ್ಷಿಯಾಗಿದೆ. ಹುಲಿಗಳ ಸಂಖ್ಯೆಯ ಹೆಚ್ಚಳವು ಅವುಗಳ ಬೇಟೆಯ ಪ್ರದೇಶಗಳು ಮತ್ತು ಆವಾಸಸ್ಥಾನಗಳು ಉತ್ತಮ ಸ್ಥಿತಿಯಲ್ಲಿವೆ ಎಂಬುದನ್ನು ತೋರಿಸುತ್ತದೆ.

ಹುಲಿ ಸಂಖ್ಯೆ: ನಾಗರಹೊಳೆ ನಂ 2, ಬಂಡೀಪುರ ನಂ 3 ನೇ ಸ್ಥಾನ!

ನಮ್ಮ ಕಾಡುಗಳಲ್ಲಿ ಐನೂರಕ್ಕೂ ಹೆಚ್ಚು ಸಿಂಹಗಳು, 3,000 ಏಕ ಕೊಂಬಿನ Nೕಂಡಾಮೃಗಗಳು, 30,000 ಆನೆಗಳು ಇವೆ. ಕಾಡು ಪ್ರಾಣಿಗಳನ್ನು ಸಾಕುವುದನ್ನು ನಾವು ಪ್ರೋತ್ಸಾಹಿಸುವುದಿಲ್ಲ. ಒಂದು ವಿಶಿಷ್ಟಕ್ರಮವಾಗಿ, ನಮ್ಮ ಕಾಡುಗಳಲ್ಲಿ ಅನಾಥವಾದ ಹುಲಿ ಮರಿಗಳು ಹಾಗೂ ವಯಸ್ಸಾದ ಮತ್ತು ಗಾಯಗೊಂಡ ಹುಲಿಗಳನ್ನು ನಿರ್ವಹಿಸಲು ಒಂದು ಸಾಮಾನ್ಯ ಕಾರ್ಯಾಚರಣಾ ವಿಧಾನವನ್ನು (ಎಸ್‌ಒಪಿ) ನೀಡಲಾಗಿದೆ. ಹುಲಿಗಳ ಜಾನುವಾರು ಬೇಟೆಯ ಸಮಸ್ಯೆಯನ್ನು ಎದುರಿಸಲೂ ಸಹ ಎಸ್‌ಒಪಿ ನೀಡಲಾಗಿದೆ.

ವಿದೇಶಗಳ ಎದುರಲ್ಲಿ ಭಾರತ ನಾಯಕ

ನಾವು ನಾಯಕನ ಸ್ಥಾನದಲ್ಲಿರುವುದರಿಂದ ಜಾಗತಿಕ ಹುಲಿ ವೇದಿಕೆಯ ಮೂಲಕ ನಮ್ಮ ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳುತ್ತೇವೆ. ಭಾರತವು ಥೈಲ್ಯಾಂಡ್‌, ಮಲೇಷ್ಯಾ, ಬಾಂಗ್ಲಾದೇಶ, ಭೂತಾತ್‌ ಮತ್ತು ಕಾಂಬೋಡಿಯಾದ ಕ್ಷೇತ್ರ ಅಧಿಕಾರಿಗಳಿಗೆ ಸಾಮರ್ಥ್ಯ ವೃದ್ಧಿ ಕಾರ್ಯಾಗಾರಗಳನ್ನು ನಡೆಸಿದೆ. ಹುಲಿ ಮರು ಪರಿಚಯದ ಅನುಭವಗಳನ್ನು ಕಾಂಬೋಡಿಯಾ ಮತ್ತು ರಷ್ಯಾದೊಂದಿಗೆ ಹಂಚಿಕೊಳ್ಳಲಾಗಿದೆ. ಅನೇಕ ಹುಲಿ ದೇಶಗಳು ನಮ್ಮ ದೇಶದ ವಿವಿಧ ಹುಲಿ ಧಾಮಗಳಿಗೆ ಭೇಟಿ ನೀಡಿವೆ.

ಎಲ್ಲಾ 13 ಹುಲಿ ಸಂತತಿ ದೇಶಗಳೊಂದಿಗೆ ನಾವು ಹಲವಾರು ತಿಳುವಳಿಕೆ ಒಪ್ಪಂದಗಳು ಮತ್ತು ಸಹಕಾರ ಒಪ್ಪಂದಗಳನ್ನು ಹೊಂದಿದ್ದೇವೆ. ಸುಂದರ್‌ಬನ್ಸ್‌ ಕಾಡುಗಳಲ್ಲಿ ಹುಲಿಗಳ ಸ್ಥಿತಿಯ ಮೌಲ್ಯಮಾಪನ ಕುರಿತು ಬಾಂಗ್ಲಾದೇಶ ಮತ್ತು ಭಾರತ ಜಂಟಿ ವರದಿಯನ್ನು ಹೊರತಂದಿವೆ. ಹುಲಿಗಳ ಸ್ಮಾರ್ಟ್‌ ಗಸ್ತು, ಶಿಷ್ಟಾಚಾರ, ಹುಲಿಗಳ ತೀವ್ರ ರಕ್ಷಣೆ ಮತ್ತು ಪರಿಸರ ಸ್ಥಿತಿಗತಿಯ ನಿರ್ವಹಣಾ ವ್ಯವಸ್ಥೆಗಾಗಿ ಮಹತ್ವಾಕಾಂಕ್ಷೆಯ ಡಿಜಿಟಲ… ಇಂಡಿಯಾ ಕಾರ್ಯಕ್ರಮವನ್ನು ಸರ್ಕಾರ ಪ್ರಾರಂಭಿಸಿದೆ. ಇದನ್ನು ಆಂಡ್ರಾಯ್ಡ್‌ ಪ್ಲಾಟ್‌ಫಾಮ್‌ರ್‍ಗೆ ಅಳವಡಿಸಲಾಗಿದೆ ಮತ್ತು ಎಲ್ಲಾ 50 ಹುಲಿ ಧಾಮಗಳಿಗೆ ಅದನ್ನು ವಿಸ್ತರಿಸಲಾಗಿದೆ. ನಾವು ಈಗ ಎತ್ತರದ ಪ್ರದೇಶಗಳಲ್ಲೂ ಹುಲಿಗಳು ವಾಸಿಸುವ ಬಗ್ಗೆ ಗಮನ ಹರಿಸುತ್ತಿದ್ದೇವೆ ಮತ್ತು ಅದರ ಫಲಿತಾಂಶಗಳು ಉತ್ತೇಜನಕಾರಿಯಾಗಿವೆ.

ಜೀವವೈವಿದ್ಯತೆಗೆ ಹುಲಿಗಳೇ ಸಾಕ್ಷಿ

ಹೆಚ್ಚಿನ ಸಂಖ್ಯೆಯ ಹುಲಿಗಳು ನಿಜವಾಗಿಯೂ ಶ್ರೀಮಂತ ಜೀವವೈವಿಧ್ಯತೆ ಮತ್ತು ವೈಜ್ಞಾನಿಕ ಸಂರಕ್ಷಣೆಯನ್ನು ಪ್ರಮಾಣೀಕರಿಸುತ್ತವೆ. ಹವಾಮಾನ ಬದಲಾವಣೆಯಂತಹ ಸವಾಲುಗಳನ್ನು ನಾವು ಎದುರಿಸುತ್ತಿರುವಾಗ, ನಮ್ಮ ಕೆಲಸಗಳಿಗೆ ಆಧಾರವಾಗಿ ಈ ಶ್ರೀಮಂತ ಜೀವವೈವಿಧ್ಯತೆಯನ್ನು ನಾವು ಹೊಂದಿರಬೇಕು. ಹತ್ತು ವರ್ಷಗಳಲ್ಲಿ 2.5 ಬಿಲಿಯನ್‌ ಟನ್‌ ಇಂಗಾಲ ಕಡಿಮೆ ಮಾಡಲು ನಿರ್ಧರಿಸಿದ್ದೇವೆ. ಇದೊಂದು ದೊಡ್ಡ ಗುರಿಯಾಗಿದೆ. ಕಾಡು ಮತ್ತು ಕಾಡಿನ ಹೊರಗೆ ಮರಗಳ ಹೊದಿಕೆ ಹೆಚ್ಚುತ್ತಿರುವ ಕೆಲವೇ ದೇಶಗಳಲ್ಲಿ ಭಾರತವೂ ಸೇರಿದೆ.

ಅತಿ ಹೆಚ್ಚು ಹುಲಿ; 2 ನೇ ಸ್ಥಾನದಲ್ಲಿರುವ ಕರ್ನಾಟಕ ಶೀಘ್ರವೇ ನಂ 1

ಭಾರತವು ಮಹತ್ವಾಕಾಂಕ್ಷೆಯ ನವೀಕರಿಸಬಹುದಾದ ಇಂಧನದ ಗುರಿಗಳನ್ನು ಘೋಷಿಸಿದೆ. ಇಂದು ಇದು ಶೇಕಡಾ 37ರಷ್ಟುನವೀಕರಿಸಬಹುದಾದ ಇಂಧನ ಸಾಮರ್ಥ್ಯದ ಮಿಶ್ರಣವನ್ನು ಸಾಧಿಸಿದೆ. ಸೌರ ಮತ್ತು ಗಾಳಿ ಮೂಲಗಳ ಮೂಲಕ 87 ಗಿಗಾ ವ್ಯಾಟ್‌ ಇಂಧನವನ್ನು ಉತ್ಪಾದಿಸಲಾಗುತ್ತಿದೆ. ನಾವು ಜೈವಿಕ ಇಂಧನದಲ್ಲಿ ಸಾಮಾನ್ಯ ಪ್ರಯಾಣಿಕ ವಿಮಾನವನ್ನು ಹಾರಿಸಿದ್ದೇವೆ. ಸರ್ಕಾರವು ಕಲ್ಲಿದ್ದಲು ಉತ್ಪಾದನೆಯ ಮೇಲೆ ಇಂಗಾಲ ತೆರಿಗೆಯನ್ನು ಪ್ರತಿ ಟನ್‌ಗೆ 6 ಡಾಲರ್‌ ದರದಲ್ಲಿ ವಿಧಿಸಿದೆ.

ನಾವು ಪೆಟ್ರೋಲ್ ಮತ್ತು ಡೀಸೆಲ್ ಮೇಲೂ ಒಂದು ರೀತಿಯ ಇಂಗಾಲ ತೆರಿಗೆಯನ್ನು ವಿಧಿಸಿದ್ದೇವೆ. ಈಗ ಎಲ್ಲಾ ಇಂಧನ ಮತ್ತು ವಾಹನಗಳು ಬಿಎಸ್‌-್ಖಐ ಮಾನದಂಡಕ್ಕೆ ಒಳಪಟ್ಟಿದ್ದು, ಇದರಿಂದ ವಾಹನ ಮಾಲಿನ್ಯ ಕಡಿಮೆಯಾಗುತ್ತದೆ. ಭಾರತವು ಒಂದು ದಶಕದಲ್ಲಿ ಬಂಜರು ಭೂಮಿಯ ಪುನರುಜ್ಜೀವನದ ಗುರಿಯನ್ನು 26 ದಶಲಕ್ಷ ಹೆಕ್ಟೇರ್‌ಗೆ ಏರಿಸಿದೆ. ಹೀಗಾಗಿ, ಭಾರತವು ಪ್ಯಾರಿಸ್‌ ಒಪ್ಪಂದದ ತನ್ನ ಹವಾಮಾನ ಬದ್ಧತೆಗಳಿಗೆ ಅನುಗುಣವಾಗಿ ನಡೆಯುತ್ತಿದೆ ಮತ್ತು ಇತರ ದೇಶಗಳು ಮಾಡಲಾಗದ್ದನ್ನು ಸಾಧಿಸುತ್ತಿದೆ.

- ಪ್ರಕಾಶ್‌ ಜಾವ್ಡೇಕರ್‌, ಕೇಂದ್ರ ಅರಣ್ಯ ಸಚಿವ

Follow Us:
Download App:
  • android
  • ios