ನವದೆಹಲಿ(ಜೂ.29): ದೇಶದ ಮಿಲಿಟರಿ ಮತ್ತು ಬಾಹ್ಯಾಕಾಶವನ್ನು ಹಂತಹಂತವಾಗಿ ಖಾಸಗಿ ವಲಯಕ್ಕೂ ಮುಕ್ತಗೊಳಿಸುತ್ತಿರುವ ಕೇಂದ್ರ ಸರ್ಕಾರ, ತನ್ನ ಮುಂದಿನ ಮಹತ್ವಕಾಂಕ್ಷೆಯ ಅತ್ಯಾಧುನಿಕ ಯುದ್ಧ ವಿಮಾನ ತಯಾರಿಕೆಗೆ ಖಾಸಗಿ ಸಹಭಾಗಿತ್ವ ಪಡೆಯಲು ನಿರ್ಧರಿಸಿದೆ.

5ನೇ ತಲೆಮಾರಿನ ಎಎಂಸಿಎ (ಅಡ್ವಾನ್ಸ್‌$್ಡ ಮೀಡಿಯಂ ಕಾಂಬ್ಯಾಟ್‌ ಏರ್‌ಕ್ರಾಫ್ಟ್‌) ತಯಾರಿಗೆ ಸರ್ಕಾರಿ ಸ್ವಾಮ್ಯದ ಎಚ್‌ಎಎಲ್‌ ಮತ್ತು ಏರೋನಾಟಿಕಲ್‌ ಡೆವಲಪ್‌ಮೆಂಟ್‌ ಏಜೆನ್ಸಿ ಸಿದ್ಧತೆ ಆರಂಭಿಸಿವೆ. ಜೊತೆಗೆ ಈ ಯೋಜನೆಯಲ್ಲಿ ಖಾಸಗಿ ಕಂಪನಿಯೊಂದರ ಸಹಭಾಗಿತ್ವ ಪಡೆಯಲು ನಿರ್ಧರಿಸಿದ್ದು, ಅರ್ಹ ಕಂಪನಿಗಳ ಆಯ್ಕೆಗೆ ಮಾನದಂಡಗಳನ್ನು ರಚಿಸುವ ಕೆಲಸ ಆರಂಭಿಸಿದೆ ಎಂದು ಮೂಲಗಳು ತಿಳಿಸಿವೆ. ಹೊಸ ಜಂಟಿ ಯೋಜನೆಯು ಎಚ್‌ಎಎಲ್‌, ಡಿಆರ್‌ಡಿಒ ಮತ್ತು ಖಾಸಗಿ ಕಂಪನಿಯೊಂದನ್ನು ಒಳಗೊಂಡಿರಲಿದೆ.

ಚೀನಾ ವಿಮಾನ ಶಂಕಾಸ್ಪದ ಹಾರಾಟ: ವಾಯುಪಡೆ

ಇದುವರೆಗೆ ಭಾರತದಲ್ಲಿ ಯುದ್ಧ ವಿಮಾನಗಳ ತಯಾರಿಕೆಯಲ್ಲಿ ಸಂಪೂರ್ಣ ಸರ್ಕಾರಿ ಸಂಸ್ಥೆಗಳದ್ದೇ ಅಧಿಪತ್ಯವಿತ್ತು. ಇದೇ ಮೊದಲ ಬಾರಿಗೆ ಇದೀಗ ಖಾಸಗಿ ಸಹಕಾರ ಪಡೆದುಕೊಳ್ಳಲಾಗುತ್ತಿದೆ. ಈ ಯೋಜನೆ ಅನ್ವಯ 5ನೇ ತಲೆಮಾರಿನ ಮೊದಲ ಮಾದರಿ ವಿಮಾನ 2026-27ರ ವೇಳೆಗೆ ಸಿದ್ಧಪಡಿಸುವ ಉದ್ದೇಶವಿದೆ.