Asianet Suvarna News Asianet Suvarna News

ಚೀನಾ ವಿಮಾನ ಶಂಕಾಸ್ಪದ ಹಾರಾಟ: ವಾಯುಪಡೆ

ಗಲ್ವಾನ್‌ ಸಂಘರ್ಷದ ಬಳಿಕ ಲಡಾಖ್‌ ಗಡಿ ಚೀನಾ ವಿಮಾನ ಶಂಕಾಸ್ಪದ ಹಾರಾಟ| ಪೀಪಲ್ಸ್‌ ಲಿಬರೇಷನ್‌ ಆರ್ಮಿಯ ವಿಮಾನಗಳ ಹಾರಾಟ: ವಾಯುಪಡೆ

Air Force Chief Visits Ladakh Fighter Jets Choppers Seen Over Leh
Author
Bangalore, First Published Jun 22, 2020, 2:56 PM IST

ಹೈದರಾಬಾದ್(ಜೂ.22): ಗಲ್ವಾನ್‌ ಸಂಘರ್ಷದ ಬಳಿಕ ಲಡಾಖ್‌ ಗಡಿಯಲ್ಲಿ ಚೀನಾದ ಪೀಪಲ್ಸ್‌ ಲಿಬರೇಷನ್‌ ಆರ್ಮಿಯ ವಿಮಾನಗಳು ಅನುಮಾನಾಸ್ಪದವಾಗಿ ಹಾರಾಡುತ್ತಿರುವುದು ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಗಡಿಯಲ್ಲಿ ಎದುರಾಗಬಹುದಾದ ಯಾವುದೇ ಸನ್ನಿವೇಶವನ್ನು ಎದುರಿಸಲು ಭಾರತೀಯ ವಾಯು ಪಡೆ ಕೂಡ ಸಜ್ಜಾಗಿದೆ ಎಂದು ವಾಯು ಪಡೆ ಮುಖ್ಯಸ್ಥ ಆರ್‌.ಕೆ.ಎಸ್‌. ಭದೌರಿಯಾ ಹೇಳಿದ್ದಾರೆ.

ಸ್ಥಳೀಯರಿಗೆ ಉದ್ಯೋಗ; ಭಾರತದಲ್ಲಿರುವ ಚೀನಾ ಕಂಪನಿಗಳ ಪ್ಲಾನ್!

ಹೈದಾರಾಬಾದ್‌ನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಬೇಸಿಗೆಯಲ್ಲಿ ಚೀನಾದ ಯುದ್ಧ ವಿಮಾನಗಳು ಅನಿರೀಕ್ಷಿತವಾಗಿ ಹಾರಾಟ ನಡೆಸುತ್ತವೆ. ಆದರೆ, ಈ ಬಾರಿ ಚೀನಾದ ಅನುಮಾನಾಸ್ಪದ ನಡೆ ಹೆಚ್ಚಾಗಿ ಕಂಡು ಬರುತ್ತಿದೆ. ಈ ಬೆಳವಣಿಗೆಯ ಬಗ್ಗೆ ವಾಯುಪಡೆಗೆ ಅರಿವಿದೆ ಎಂದಿದ್ದಾರೆ.

ಅಲ್ಲದೇ ಚೀನಾವನ್ನು ಎದುರಿಸಲು ಕಾರ್ಯತಂತ್ರವನ್ನು ರೂಪಿಸಲಾಗಿದೆ. ಹಿಗಾಗಿ ವಾಯು ಪಡೆಯ ವಿಮಾನಗಳನ್ನು ಮುಂಚೂಣಿ ನೆಲೆಗಳಿಗೆ ಕಳಹಿಸಲಾಗಿದೆ ಎಂದು ಹೇಳಿದ್ದಾರೆ.

Follow Us:
Download App:
  • android
  • ios