ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲೂ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಡಕೌಟ್ ಆಗಿದ್ದಾರೆ. ಟೆಸ್ಟ್ ಸರಣಿ ಬಳಿಕ ಇದೀಗ ಚುಟುಕು ಸರಣಿಯಲ್ಲಿ ಕೊಹ್ಲಿ ಶೂನ್ಯ ಸಂಪಾದನೆ ಮುಂದುವರಿದೆ. ಕೊಹ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನದಿಂದ ಇದೀಗ ಕೊಹ್ಲಿ ಟ್ರೋಲ್ ಆಗಿದ್ದಾರೆ.

ಅಹಮ್ಮದಾಬಾದ್(ಮಾ.12): ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನ ಮತ್ತೆ ಮುಂದುವರಿದಿದೆ. ಇದೀಗ ಟಿ20 ಸರಣಿಯಲ್ಲಿ ನಾಯಕ ಕೊಹ್ಲಿ ಶೂನ್ಯಕ್ಕೆ ಔಟಾಗಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇಷ್ಟೇ ಅಲ್ಲ ಇದಕ್ಕಾಗಿ ಕೊಹ್ಲಿ ಟ್ರೋಲ್ ಆಗಿದ್ದಾರೆ.

INDvsENG 1ನೇ ಟಿ20: ಇಂಗ್ಲೆಂಡ್‌ಗೆ ಸುಲಭ ಗುರಿ ನೀಡಿದ ಟೀಂ ಇಂಡಿಯಾ!

ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ವಿರಾಟ್ ಕೊಹ್ಲಿ ಸಾಕಷ್ಟು ಡಕ್ ಸಂಪಾದಿಸಿದ್ದಾರೆ. ಹೀಗಾಗಿ ಸರಣಿ ಮುಗಿದ ಬಳಿಕ ಡಕ್ ಮೃಗಾಲಯ ಆರಂಭಿಸಲು ಸಾಧ್ಯವಿದೆ ಎಂದು ಟ್ರೋಲ್ ಮಾಡಿದ್ದಾರೆ. ಟ್ರೋಲಿಗರು ಕೊಹ್ಲಿ ಬ್ಯಾಟಿಂಗ್ ಪ್ರದರ್ಶನವನ್ನು ಟೀಕಿಸಿದ್ದಾರೆ. 

5 ಎಸೆತ ಎದುರಿಸಿದ ವಿರಾಟ್ ಕೊಹ್ಲಿ ಒಂದು ರನ್ ಸಿಡಿಸದೇ ಔಟಾಗಿದ್ದಾರೆ. ಕೊಹ್ಲಿ ಸೇರಿದಂತೆ ಟಾಪ್ ಆರ್ಡರ್ ಬ್ಯಾಟ್ಸ್‌ಮನ್ ವೈಫಲ್ಯದಿಂದ ಟೀಂ ಇಂಡಿಯಾ ಕೇವಲ 124 ರನ್ ಸಿಡಿಸಿ ಸುಲಭ ಗುರಿ ನೀಡಿತು. ಶ್ರೇಯಸ್ ಅಯ್ಯರ್ ಹೊರತು ಪಡಿಸಿದರೆ ಇನ್ಯಾವ ಬ್ಯಾಟ್ಸ್‌ಮನ್ ಕೂಡ ಟೀಂ ಇಂಡಿಯಾ ಪರ ಅಬ್ಬರಿಸಲಿಲ್ಲ.

Scroll to load tweet…
Scroll to load tweet…
Scroll to load tweet…