ಅಹಮ್ಮದಾಬಾದ್(ಮಾ.12): ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್ ವೈಫಲ್ಯ ಅನುಭವಿಸಿದೆ. ಶಿಖರ್ ಧವನ್, ಕೆಎಲ್ ರಾಹುಲ್, ನಾಯಕ ವಿರಾಟ್ ಕೊಹ್ಲಿ ಕಳಪೆ ಪ್ರದರ್ಶನದಿಂದ ಟೀಂ ಇಂಡಿಯಾ ಕೇವಲ 124 ರನ್ ಸಿಡಿಸಿದೆ.

ಮಹಿಳಾ ಕ್ರಿಕೆಟ್‌: ಭಾರತದ ಗೆಲುವು ಕಸಿದ ಆಫ್ರಿಕಾದ ಲೀ

ಶಿಖರ್ ಧವನ್ 4, ಕೆಎಲ್ ರಾಹುಲ್ 1, ವಿರಾಟ್ ಕೊಹ್ಲಿ ಡಕೌಟ್ ಆದರೆ ರಿಷಬ್ ಪಂತ್ 21 ರನ್ ಸಿಡಿಸಿ ಔಟಾದರು. ಆದರೆ ಶ್ರೇಯಸ್ ಅಯ್ಯರ್ ಹೋರಾಟ ನೀಡಿದರು. ಅಯ್ಯರ್ ಹೋರಾಟದಿಂದ ಟೀಂ ಇಂಡಿಯಾ ಅಲ್ಪ ಮೊತ್ತ ಭೀತಿಯಿಂದ ಪಾರಾಯಿತು.

ಹಾರ್ದಿಕ್ ಪಾಂಡ್ಯ 19 ರನ್ ಸಿಡಿಸಿದರೆ, ಅಯ್ಯರ್ 67 ರನ್ ಸಿಡಿಸಿದರು. ಈ ಮೂಲಕ ಟೀಂ ಇಂಡಿಯಾ 7 ವಿಕೆಟ್ ನಷ್ಟಕ್ಕೆ 124 ರನ್ ಸಿಡಿಸಿತು ಇಂಗ್ಲೆಂಡ್ ಪರ ಜೋಫ್ರಾ ಆರ್ಚರ್ 3  ವಿಕೆಟ್ ಕಬಳಿಸಿ ಮಿಂಚಿದರು.