ದೇಶದಲ್ಲಿ ಕೃಷಿ ಅವಲಂಬಿತರು ಹೆಚ್ಚಳ, ಕರ್ನಾಟಕದಲ್ಲಿ ಇಳಿಕೆ!
ನಬಾರ್ಡ್ ಕೆಲ ಮಾನದಂಡಗಳನ್ನು ಇಟ್ಟುಕೊಂಡು ಈ ವರದಿಯನ್ನು ಸಿದ್ದಪಡಿಸಿದೆ. ಅದರಲ್ಲಿ ಮುಖ್ಯವಾಗಿ, ಕೃಷಿ ಮೂಲಗಳಿಂದ ಮಾಸಿಕ 6,5000 ರು.ಗಿಂತ ಹೆಚ್ಚು ಆದಾಯ ಇದೆ ಎಂದವರು, ಕುಟುಂಬದಲ್ಲಿ ಕನಿಷ್ಠ ಒಬ್ಬರಾದರೂ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರನ್ನು ಕೃಷಿ ಅವಲಂಬಿತರು ಎಂದಿದೆ.
ನವದೆಹಲಿ(ಅ.22): ಜನತೆ ಕೃಷಿ ಚಟುವಟಿಕೆಯಿಂದ ದೂರ ಸರಿಯುತ್ತಿ ದ್ದಾರೆ. ಕೃಷಿ ಚಟುವಟಿಕೆ ಕಡಿಮೆಯಾಗುತ್ತಿದೆ ಎಂಬ ಆತಂಕಗಳ ನಡುವೆಯೇ, ಕಳೆದ ಕೆಲ ವರ್ಷಗಳಿಂದ ಭಾರತದ ಗ್ರಾಮೀಣ ಮತ್ತು ಅರೆ ನಗರ ಪ್ರದೇಶಗಳ ಜನತೆ ಕೃಷಿ ಚಟುವಟಿಕೆ ಮೇಲೆ ಅವಲಂಬಿತರಾಗುವ ಪ್ರಮಾಣ ಹೆಚ್ಚುತ್ತಿದೆ ಎಂದು ಕೇಂದ್ರ ಸರ್ಕಾ ರದ ವರದಿಯೊಂದು ಹೇಳಿದೆ. ಅದಕ್ಕೆ ವ್ಯತಿರಿಕ್ತವಾಗಿ ಕರ್ನಾ ಟಕದಲ್ಲಿ ಕೃಷಿ ಅವಲಂಬಿತರ ಪ್ರಮಾಣ ಕುಸಿದಿದೆ. ರಾಷ್ಟ್ರೀಯ ಕೃಷಿ ಬ್ಯಾಂಕ್ ಮತ್ತು ಗ್ರಾಮೀಣ ಅಭಿವೃದ್ಧಿ (ನಬಾರ್ಡ್) ಬಿಡುಗಡೆ ಮಾಡಿರುವ ಗ್ರಾಮೀಣ ಹಣಕಾಸು ಒಳಗೊಳ್ಳುವಿಕೆ ಸಮೀಕ್ಷೆ ವರದಿಯಲ್ಲಿ, 2016-17ರ ಅಂಕಿಅಂಶಕ್ಕೆ ಹೋಲಿ ಸಿದರೆ ದೇಶದಲ್ಲಿ 2021-22ರಲ್ಲಿ ಕೃಷಿಯಲ್ಲಿ ತೊಡಗಿಕೊಂಡಿರುವವರ ಪ್ರಮಾಣ ಹೆಚ್ಚಾಗಿದೆ ಎಂದಿದೆ.
ವರದಿ ಹೇಳಿದ್ದೇನು?:
ಕೃಷಿಯೇ ಮುಖ್ಯ ಕಸುಬಾಗಿದ್ದ ಭಾರತದಲ್ಲಿ ಕ್ರಮೇಣ ಕೃಷಿ ಕ್ಷೇತ್ರ ಕಳೆಗುಂದಲು ಆರಂಭವಾಗಿತ್ತು. ಆದರೆ ಜನರು ಮತ್ತೆ ಕೃಷಿಯತ್ತ ಮನಸ್ಸು ಮಾಡಿದ್ದಾರೆ. 2016-17ರಲ್ಲಿ ಗ್ರಾಮೀಣ ಪ್ರದೇಶಗಳು ಮತ್ತು 50000ಕ್ಕಿಂತ ಕಡಿಮೆ ಜನಸಂಖ್ಯೆ ಅರೆ ನಗರಗಳ ಶೇ.48ರಷ್ಟು ಜನರು ಕೃಷಿಕರಾಗಿದ್ದರೆ, 2021-22ರಲ್ಲಿ ಈ ಪ್ರಮಾಣ ಶೇ.57ಕ್ಕೆ ಏರಿದೆ. ಇನ್ನು 2018-19ರಲ್ಲಿ ಗ್ರಾಮೀಣ ಭಾಗದ ಶೇ.57.8ರಷ್ಟು ಜನರಿಗೆ ಕೃಷಿ ವಲಯ ಉದ್ಯೋಗ ನೀಡಿದ್ದರೆ, 2023-24ರಲ್ಲಿ ಅದು ಶೇ.59.8ಕ್ಕೆ ಏರಿದೆ. ಇನ್ನು 2016-17ರಲ್ಲಿ ಕೃಷಿ ಕುಟುಂಬ ಗಳ ಸರಾಸರಿ ಮಾಸಿಕ ಆದಾಯ 8931 ರು.ನಷ್ಟಿತ್ತು. ಆದರೆ 2021-22ರಲ್ಲಿ ಈ ಪ್ರಮಾಣ 13,661ಕ್ಕೇ ಏರಿಕೆಯಾಗಿದೆ. ಲಾಕ್‌ಡೌನ್ ಕೃಷಿ ಕ್ಷೇತ್ರದ ಮೇಲೆ ಹೆಚ್ಚಿನ ಪರಿಣಾಮ ಬೀರಿದೆ.
ಅಕಾಲಿಕ ಮಳೆಗೆ ರೈತರ ಬೆಳೆಹಾನಿ, ಉಡಾಫೆ ಉತ್ತರ ಕೊಟ್ಟ ಕೃಷಿ ಸಚಿವರಿಗೆ ತಿವಿದ ಆರ್. ಅಶೋಕ್!
ಕೆಲ ರಾಜ್ಯಗಳಲ್ಲಿ ಕುಂಠಿತ:
ಜಮ್ಮು ಕಾಶ್ಮೀರ (ಶೇ.77ರಿಂದ 73ಕ್ಕೆ) ಇಳಿದಿದೆ. ಹಿಮಾಚಲ (ಶೇ.70ರಿಂದ 63ಕ್ಕೆ), ಕರ್ನಾಟಕ (ಶೇ.59ರಿಂದ 55ಕ್ಕೆ) ಗುಜರಾತ್ (ಶೇ.59ರಿಂದ 55ಕ್ಕೆ), ಗುಜರಾತ್ (ಶೇ. 58ರಿಂದ ಶೇ.54ಕ್ಕೆ), ಪಂಜಾಬ್ (ಶೇ.42 ರಿಂದ ಶೇ.36ಕ್ಕೆ) ಇಳಿಕೆಯಾಗಿದೆ.
ಮಾನದಂಡಗಳೇನು?:
ನಬಾರ್ಡ್ ಕೆಲ ಮಾನದಂಡಗಳನ್ನು ಇಟ್ಟುಕೊಂಡು ಈ ವರದಿಯನ್ನು ಸಿದ್ದಪಡಿಸಿದೆ. ಅದರಲ್ಲಿ ಮುಖ್ಯವಾಗಿ, ಕೃಷಿ ಮೂಲಗಳಿಂದ ಮಾಸಿಕ 6,5000 ರು.ಗಿಂತ ಹೆಚ್ಚು ಆದಾಯ ಇದೆ ಎಂದವರು, ಕುಟುಂಬದಲ್ಲಿ ಕನಿಷ್ಠ ಒಬ್ಬರಾದರೂ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರನ್ನು ಕೃಷಿ ಅವಲಂಬಿತರು ಎಂದಿದೆ.