ನವದೆಹಲಿ(ಸೆ.16): ಐಎಸ್ ಭಯೋತ್ಪಾದಕ ಸಂಘಟನೆಗೆ  ಕರ್ನಾಟಕ ಸೇರಿ ದಕ್ಷಿಣ ಭಾರತದ ಯುವಕರು ನೇಮಕವಾಗುತ್ತಿರುವ ಮಾಹಿತಿ ಇದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

'ಕೇರಳವನ್ನು 10 ವರ್ಷದಲ್ಲಿ ಸಂಪೂರ್ಣ ಇಸ್ಲಾಂ ರಾಜ್ಯ ಮಾಡ್ತೆವೆ'

ಹೌದು ಕೇಂದ್ರ ಸರ್ಕಾರ ಇಂತಹುದ್ದೊಂದು ಶಾಕಿಂಗ್ ಮಾಹಿತಿ ಬಯಲುಗೊಳಿಸಿದೆ. ಅದರಲ್ಲೂ ಕರ್ನಾಟಕ, ಕೇರಳ, ಆಂಧ್ರಪ್ರದೇಶ, ತೆಲಂಗಾಣ ಹಾಗು ತಮಿಳುನಾಡು ಈ ರಾಜ್ಯಗಳಿಂದ 17 ಪ್ರಕರಣಗಳನ್ನು ಎನ್‌ಐಎ ದಾಖಲಿಸಿರುವುದಾಗಿ ಹೇಳಿದೆ.

ಐಸಿಸ್‌ ಉಗ್ರರ ಚಿಕಿತ್ಸೆಗಾಗಿ ಬೆಂಗ್ಳೂರು ಡಾಕ್ಟರ್‌ ಆ್ಯಪ್‌: ಶಸ್ತ್ರಾಸ್ತ್ರ ಪೂರೈಕೆಗೂ ಬಳಕೆ!

ಈ ಉಗ್ರ ಸಂಘಟನೆಗೆ ದಕ್ಷಿಣ ಭಾರತದ ರಾಜ್ಯಗಳು ಸೇರಿ ವಿವಿಧ ರಾಜ್ಯಗಳಿಂದ ಯುವಕರೇ ನೇಮಕವಾಗುತ್ತಿದ್ದು, 122 ಮಂದಿ ಆರೋಪಿಗಳನ್ನು ಬಂಧಿಸಿರುವುದಾಗಿ ಗೃಹ ಇಲಾಖೆ ಹೇಳಿದೆ.