ತಿರುವನಂತಪುರಂ(ಸೆ.11)  ವಿವಾದಿತ ಭಾಷಣ ಮಾಡುವವರು, ಹೇಳಿಕೆ ಕೊಡುತ್ತಾ ಇರುವವರು ಸುಮ್ಮನೆ ಕೂರುವ  ಜಾಯಮಾನದವರಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಕೇರಳದ ಮುಸ್ಲಿಂ ಧರ್ಮಗುರು ಮುಜಾಹಿದ್ ಬಲುಸ್ಸೆರಿ, ಮುಂದಿನ 10 ವರ್ಷದೊಳಗೆ ಕೇರಳವನ್ನು ಮುಸ್ಲಿಂ ರಾಜ್ಯವನ್ನಾಗಿ ಮಾಡುತ್ತೇವೆ ಎಂದಿರುವುದು ಕಿಡಿ ಹೊತ್ತಿಸಿದೆ.

ಈ ರೀತಿ ಮಾತನಾಡುತ್ತಿರುವ  ವಿಡಿಯೋ ವೈರಲ್ ಆಗಿದ್ದು, ವಿಡಿಯೋದಲ್ಲಿ ಮುಸ್ಲಿ ಧರ್ಮ ಪ್ರಚಾರಕ ಮುಜಾಹಿದ್ ಹಿಂದೂ ಹಾಗೂ ಕ್ರಿಶ್ಚಿಯನ್ ಧರ್ಮಗಳ ಜನರಿಗೆ ಬೆದರಿಕೆ ಹಾಕಿದ್ದು ಇದೆ. . ಅಲ್ಲದೆ ಕೇರಳಕ್ಕೆ 'ಕ್ಯಾಲಿಫೇಟ್' ಎಂದು ಹೆಸರಿಡುವುದಾಗಿ ತಿಳಿಸಿದ್ದಾನೆ. ಕೇರಳವನ್ನು ಕ್ಯಾಲಿಫೇಟ್ ಆಗಿ ಪರಿವರ್ತಿಸುತ್ತೇವೆ. ಕೇರಳದ ಎಲ್ಲ ಮುಸ್ಲಿಮರನ್ನು ಶುಕ್ರವಾರದಂದು ಮುಜಾಹಿದ್ ಮಸೀದಿಗಳಿಗೆ ಕಳುಹಿಸಿ. 10 ವರ್ಷದೊಳಗೆ ಕೇರಳವನ್ನು ಇಸ್ಲಾಮಿಕ್ ರಾಜ್ಯವನ್ನಾಗಿ ಮಾಡಬಹುದು ಎಂಬ ಪುಕ್ಕಟೆ  ಸಲಹೆಯನ್ನು ನೀಡಿದ್ದಾನೆ.

ಕಾಂಗ್ರೆಸ್‌ ನ ರಾಜೀವ್ ಗಾಂಧಿ ಫೌಂಡೇಶನ್ ಗೆ ಝಾಕೀರ್ ನಾಯ್ಕನಿಂದ ಭಾರೀ ದೇಣಿಗೆ

ನಮ್ಮದು ಇಲ್ಲಿ ದೊಡ್ಡದಾದ ಕಾರ್ಯವೊಂದು ಮಾಡುವುದು ಬಾಕಿ ಇದೆ. ಇತರ ಮುಸ್ಲಿಂ ಧಾರ್ಮಿಕ ಶಾಖೆಗಳನ್ನು ಮುಚ್ಚಿ ಮುಜಾಹಿದ್‍ಗಳ ಅಡಿಯಲ್ಲಿ ತಂದರೆ ಮುಂದಿನ ಹತ್ತು  ವರ್ಷಗಳಲ್ಲಿ ಕೇರಳವನ್ನು ಇಸ್ಲಾಮಿಕ್ ಸ್ಟೇಟ್ ಆಗಿ ಪರಿವರ್ತನೆ ಮಾಡಬಹುದು ಎಂದದ್ದಾನೆ.

ಗುರುವಾಯೂರಪ್ಪ ನನ್ನನ್ನು ಉಳಿಸಿ ಎಂದು ಹೇಳುವುದು ನರಕಕ್ಕೆ ದಾರಿ.  ವ್ಯಭಿಚಾರ, ಸಲಿಂಗಕಾಮ ಅಥವಾ ಬಡ್ಡಿಗಾಗಿ ಸಾಲ ನೀಡುವುದಕ್ಕಿಂತ ದೊಡ್ಡ ಪಾಪಕಾರ್ಯ ಎಂದು ಬೇರೆಯವರ ನಂಬಿಕೆಯನ್ನು ಎಳೆದು ತಂದಿದ್ದಾನೆ.  ಇದೇ ರೀತಿ ಬಾಯಿಗೆ ಬಂದಂತೆ ಮಾತನಾಡಿ ಹಿಂದೂ ದೇವಾಲಯಗಳನ್ನು ವೇಶ್ಯಾಗೃಹಕ್ಕೆ ಹೋಲಿಸಿದ್ದ. ಸದ್ಯದವರೆಗೆ  ಈತನ ಮೇಲೆ ಯಾವ ದೂರು ದಾಖಲಾಗಿಲ್ಲ.