* ನ್ಯಾ| ಮಳಿ​ಮಠ ಮ.ಪ್ರ. ಹೈಕೋರ್ಟ್‌ ಸಿಜೆ* ನ್ಯಾ| ಅರ​ವಿಂದ ಗುಜ​ರಾತ್‌ ಹೈಕೋರ್ಟ್‌ ಸಿಜೆ* ಇಬ್ಬರು ಕನ್ನ​ಡಿ​ಗರು ಸೇರಿ 8 ಸಿಜೆ​ಗಳ ನೇಮ​ಕ

ನವದೆಹಲಿ(ಅ.10): ಶನಿವಾರ ಇಬ್ಬರು ಕನ್ನ​ಡಿ​ಗರು(Kannadiga) ಸೇರಿ 8 ಜನ ನ್ಯಾಯಾಧೀಶರನ್ನು ವಿವಿಧ ಹೈಕೋರ್ಟ್‌ಗಳಿಗೆ(High Court) ಮುಖ್ಯ ನ್ಯಾಯಾಧೀಶರನ್ನಾಗಿ ಕೇಂದ್ರ ಕಾನೂನು ಸಚಿವಾಲಯ ನೇಮಿಸಿ ಆದೇಶ ಹೊರ​ಡಿ​ಸಿ​ದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕರ್ನಾಟಕ ಹೈಕೋರ್ಟ್‌ನ(Karnataka High Court) ನ್ಯಾಯಾಧೀಶರಾದ ನ್ಯಾ| ಅರವಿಂದ್‌ ಕುಮಾರ್‌ ಅವರನ್ನು ಗುಜರಾತ್‌ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯನ್ನಾಗಿ ನೇಮಕ ಮಾಡಲಾಗಿದೆ. ಹಿಮಾಚಲ ಪ್ರದೇಶ ಹೈಕೋರ್ಟ್‌ನ(Himachal Pradesh) ಹಂಗಾಮಿ ನ್ಯಾಯಾಧೀಶರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕರ್ನಾಟಕ ಮೂಲದ ಆರ್‌.ವಿ ಮಳಿಮಠ ಅವರನ್ನುಮಧ್ಯ ಪ್ರದೇಶ ಹೈಕೋರ್ಟ್‌ನ ಮುಖ್ಯನ್ಯಾಯಮೂರ್ತಿಯಾಗಿ ನೇಮಕ ಮಾಡಲಾಗಿದೆ. ಕರ್ನಾಟಕದ ಹೈಕೋರ್ಟ್‌ ಮುಖ್ಯನ್ಯಾಯಾಧೀಶರಾಗಿ ನ್ಯಾ| ರಿತುರಾಜ್‌ ಅವಸ್ಥಿ ನೇಮಕವಾಗಿದ್ದಾರೆ.

ಅಲಹಾಬಾದ್‌ ಹೈಕೋರ್ಟ್‌ ನ್ಯಾಯಾಧೀಶರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ನ್ಯಾ| ರಿತು ರಾಜ್‌ ಅವಸ್ಥಿ ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕವಾಗಿದ್ದಾರೆ. ಕರ್ನಾಟಕದ ಹಂಗಾಮಿ ಮುಖ್ಯನಾಯಾಧೀಶರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸತೀಶ್‌ ಚಂದ್ರ ಶರ್ಮಾ ಅವರನ್ನು ತೆಲಂಗಾಣ ಹೈಕೋರ್ಟ್‌ ಮುಖ್ಯನ್ಯಾಯಾಧೀಶರಾಗಿ ನೇಮಕವಾಗಿದ್ದಾರೆ.

ಇದೇ ವೇಳೆ, ಇದರೊಂದಿಗೆ 5 ಮುಖ್ಯನ್ಯಾಯಾಧೀಶರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಸೆಪ್ಟೆಂಬರ್‌ನಲ್ಲಿ ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ ಅವರ ಅಧ್ಯಕ್ಷತೆಯ ಸುಪ್ರೀಂ ಕೋರ್ಟ್‌ ಕೊಲಿಜಿಯಂ 13 ಹೈಕೋರ್ಟ್‌ಗಳಿಗೆ ನ್ಯಾಯಾಧೀಶರನ್ನು ನೇಮಕ ಮಾಡುವಂತೆ ಶಿಫಾರಸು ಮಾಡಿತ್ತು.