ಡೆಹ್ರಾಡೂನ್(ಜ.25)‌: ಸೃಷ್ಟಿ ಗೋಸ್ವಾಮಿ ಎಂಬ 19 ವರ್ಷದ ಯುವತಿ ಭಾನುವಾರ ಒಂದು ದಿನದ ಮಟ್ಟಿಗೆ ಉತ್ತರಾಖಂಡದ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದರು!

- ಹೌದು. ರಾಷ್ಟ್ರೀಯ ಹೆಣ್ಣುಮಕ್ಕಳ ದಿನದ ಅಂಗವಾಗಿ ಈ ಗೌರವವನ್ನು ಉತ್ತರಾಖಂಡ ಸರ್ಕಾರವು ಅವರಿಗೆ ನೀಡಿತು.

ಭಾನುವಾರ ಮುಖ್ಯಮಂತ್ರಿಗಳ ಅಧಿಕೃತ ಸಭೆಯಲ್ಲಿ ಭಾಗಿಯಾಗಿ ಅಟಲ್‌ ಆಯುಷ್ಮಾನ್‌ ಯೋಜನೆ, ಸ್ಮಾರ್ಟ್‌ ಸಿಟಿ ಯೋಜನೆ ಮತ್ತು ಹೋಂ ಸ್ಟೇ ಯೋಜನೆ ಸೇರಿದಂತೆ ರಾಜ್ಯ ಸರ್ಕಾರದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಪರಿಶೀಲಿಸಿದರು.

ಹರಿದ್ವಾರದ ದೌಲಾತ್‌ಪುರ ಮೂಲದ ಸೃಷ್ಟಿರೂರ್ಕೆ ಬಿಎಸ್‌ಎಂ ಕಾಲೇಜಿನಲ್ಲಿ ಪದವಿ ಓದುತ್ತಿದ್ದಾರೆ. ಆಕೆಯ ತಂದೆ ಪ್ರವೀಣ್‌ ಉದ್ಯಮಿ. ತಾಯಿ ಸುಧಾ ಗೋಸ್ವಾಮಿ. 2018ರಲ್ಲಿ ಸೃಷ್ಟಿಉತ್ತರಾಖಂಡದ ‘ಬಾಲ ವಿಧಾನಸಭೆ’ಯ ಮುಖ್ಯಮಂತ್ರಿಯಾಗಿದ್ದರು.