ಚಲಿಸುತ್ತಿದ್ದ ಬಸ್‌ನಲ್ಲಿಯೇ ಮಹಿಳೆಯ ಜೊತೆ ಸೆಕ್ಸ್‌ ಮಾಡಿದ ಕಂಡೆಕ್ಟರ್‌ ಕೆಲಸ ಕಳೆದುಕೊಂಡ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಈ ಘಟನೆಯ ವಿಡಿಯೋವನ್ನು ಬಸ್‌ನ ಪ್ರಯಾಣಿಕರು ಸೋಶಿಯಲ್‌ ಮೀಡಿಯಾದಲ್ಲಿ ಹಾಕಿದ್ದು, ವೈರಲ್‌ ಆಗಿದೆ. 

ಲಕ್ನೋ (ಜು.1): ಬಸ್‌ ಕಂಡಕ್ಟರ್‌ ಚಲಿಸುವ ಬಸ್‌ನಲ್ಲಿಯೇ ಯುವತಿಯ ಜೊತೆ ಸೆಕ್ಸ್‌ ಮಾಡಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹತ್ರಾಸ್‌ ಡಿಪೋದ ಬಸ್‌ ಲಕ್ನೋಗೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಕಂಡಕ್ಟರ್‌ ವರ್ತನೆಯ ಬಗ್ಗೆ ಅನುಮಾನ ಹೊಂದಿದ್ದ ಕೆಲ ಪ್ರಯಾಣಿಕರು ಘಟನೆಯ ವಿಡಿಯೋವನ್ನು ರೆಕಾರ್ಡ್‌ ಮಾಡಿ ಅದನ್ನು ಸೋಶಿಯಲ್‌ ಮೀಡಿಯಾದಲ್ಲಿ ಹರಿ ಬಿಟ್ಟಿದ್ದಾರೆ. ಇದರ ಬೆನ್ನಲ್ಲಿಯೇ ವಿಡಿಯೋ ವೈರಲ್‌ ಆಗಿದೆ. ವಿಡಿಯೋ ಕ್ಲಿಪ್‌ನಲ್ಲಿ ಪ್ರಯಾಣಿಕನೊಬ್ಬ, ಕಂಡಕ್ಟರ್‌ ಹಾಗೂ ಯುವತಿ ಇಬ್ಬರೂ ಕುಳಿತಿರುವ ಕಡೆ ಬಂದಿದ್ದಾರೆ. ಈ ವೇಳೆ ಕಂಡಕ್ಟರ್‌ ಹಾಗೂ ಯುವತಿ ಸೀಟ್‌ನಲ್ಲಿ ಬೆಡ್‌ಶೀಟ್‌ ಹಾಕಿಕೊಂಡು ಸೆಕ್ಸ್‌ ಮಾಡುತ್ತಿರುವುದು ಕಂಡಿದೆ. ಇದನ್ನು ಗಮನಿಸಿದ ಕಂಡಕ್ಟರ್ ಕೋಪಗೊಂಡು ಪ್ರಯಾಣಿಕರ ಮೊಬೈಲ್ ಕಸಿದುಕೊಳ್ಳಲು ಮುಂದಾಗಿದ್ದಾರೆ. ಇದು ಅವನ ಮತ್ತು ಪ್ರಯಾಣಿಕರ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಗಿದೆ. ಬಸ್‌ನಲ್ಲಿಯೇ ಕಂಡಕ್ಟರ್ ಸೆಕ್ಸ್‌ನಲ್ಲಿ ತೊಡಗಿರುವುದನ್ನು ಪ್ರಯಾಣಿಕರು ಕೆಲಕಾಲ ಗಮನಿಸಿದ್ದಾರೆ. ಆದರೆ, ಇದು ಆತನ ಗಮನಕ್ಕೆ ಬಂದಿರಲಿಲ್ಲ. ಇದನ್ನೇ ಈಗ ವಿಡಿಯೋ ಮಾಡಿ ಶೇರ್‌ ಮಾಡಿಕೊಳ್ಳಲಾಗಿದೆ.

ವಾಗ್ವಾದದ ವೇಳೆ, ಒಂದು ಗಂಟೆಗೂ ಹೆಚ್ಚು ಕಾಲ ಈತ ಸೆಕ್ಸ್‌ ನಡೆಸುತ್ತಿದ್ದ ಎಂದು ಪ್ರಯಾಣಿಕರೊಬ್ಬರು ಹೇಳಿರುವುದು ವಿಡಿಯೋದಲ್ಲಿದಾಖಲಾಗಿದೆ. ಆಲಂಬಾಗ್ ತಲುಪಿದ ನಂತರ ಬಸ್ ಕಂಡಕ್ಟರ್ ವಿರುದ್ಧ ದೂರು ನೀಡಲು ನಿರ್ಧಾರ ಮಾಡಿದ್ದರು. ಆದರೆ, ಕಾರಣಾಂತರಗಳಿಂದ ದೂರು ಕೊಡಲು ಸಾಧ್ಯವಾಗಿರಲಿಲ್ಲ. ಸದ್ಯ ವೀಡಿಯೋ ವೈರಲ್ ಆದ ಬೆನ್ನಲ್ಲೇ ಕಂಡಕ್ಟರ್‍ನನ್ನು ಕೆಲಸದಿಂದ ವಜಾ ಮಾಡಲಾಗಿದೆ. ಈ ಘಟನೆ 10 ದಿನಗಳ ಹಿಂದೆ ನಡೆದಿದ್ದಾಗಿ ಅಲ್ಲಿನ ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.

ಹಲವಾರು ಪ್ರಯಾಣಿಕರು ಕಂಡಕ್ಟರ್‌ನ ದುರ್ವರ್ತನೆಯನ್ನು ಗಮನಿಸಿ ಘಟನೆಯನ್ನು ರೆಕಾರ್ಡ್ ಮಾಡಲು ಪ್ರಾರಂಭಿಸಿದರು. ಸ್ಥಳೀಯ ವರದಿಗಳ ಪ್ರಕಾರ ಈ ಘಟನೆಯು 10 ದಿನಗಳ ಹಿಂದೆ ಸಂಭವಿಸಿದೆ ಎಂದು ವರದಿಯಾಗಿದೆ.

Scroll to load tweet…

ಕೊನೆಗೂ ಚಿತ್ರಮಂದಿರಕ್ಕೆ ಬರ್ತಿದ್ದಾರೆ 'ಹಾಸ್ಟೆಲ್ ಹುಡುಗರು'; ಯಾವಾಗ?

ಘಟನೆಯ ನಿಖರವಾದ ಸ್ಥಳವನ್ನು ವೀಡಿಯೊ ಬಹಿರಂಗಪಡಿಸಿಲ್ಲ. ಆದರೆ, ಪ್ರಯಾಣಿಕರಲ್ಲಿ ಒಬ್ಬರು ಇನ್ನು ಅರ್ಧಗಂಟೆಯಲ್ಲಿ ಬಸ್‌ ಸ್ಟೇಷನ್‌ಗೆ ತಲುಪಲಿದೆ ಎಂದು ಹೇಳಿರುವುದನ್ನು ನೋಡಿದರೆ, ಇದು ಲಕ್ನೋಗೆ ಸಮೀಪದ ಪ್ರದೇಶ ಎನ್ನಲಾಗಿದೆ. ಅಧಿಕಾರಿಗಳು ಪ್ರಯಾಣಿಕರ ದೂರನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಆರಂಭಿಸಿದ್ದಾರೆ.

ನಟಿಯರಾದ ಕಾಜಲ್​ ಅಗರ್ವಾಲ್​, ಸಮಂತಾ ರುತ್​ ಪ್ರಭು ಫ್ರೆಂಡ್​ಷಿಪ್​ ಹೀಗಿದ್ಯಾ?