ಉತ್ತರ ಪ್ರದೇಶದ ಅಮ್ರೋಹಾದಲ್ಲಿ ವಿವಾಹಿತ ಮಹಿಳೆಯೊಂದಿಗೆ ಅಫೇರ್‌ ಇರಿಸಿಕೊಂಡಿದ್ದಕ್ಕಾಗಿ ಯುವಕನ ಮೇಲೆ ಮಹಿಳೆಯ ಪತಿ ಹಾಗೂ ಕುಟುಂಬಸ್ಥರು ಹಲ್ಲೆ ನಡೆಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ನವದೆಹಲಿ (ಜ.1): ಅಚ್ಚರಿಯ ಘಟನೆಯಲ್ಲಿ, ಉತ್ತರ ಪ್ರದೇಶದ ಅಮ್ರೋಹಾದಲ್ಲಿ ವಿವಾಹಿತ ಮಹಿಳೆಯೊಂದಿಗೆ ಅಫೇರ್‌ ಇರಿಸಿಕೊಂಡ ಕಾರಣಕ್ಕೆ ಬರ್ಬರವಾಗಿ ಹಲ್ಲೆ ಮಾಡಲಾಗಿದೆ. ಗಂಡನ ಮನೆಯ ಟೆರಸ್‌ನಲ್ಲಿಯೇ ಯುವಕನೊಂದಿಗೆ ರೊಮಾನ್ಸ್‌ನಲ್ಲಿದ್ದಾಗ ಮಹಿಳೆಯ ಪತಿ ಹಾಗೂ ಆತನ ಕುಟುಂಬಸ್ಥರು ಇದನ್ನು ನೋಡಿದ್ದಾರೆ. ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದ ಹಿನ್ನಲೆಯಲ್ಲಿ ಯುವಕನ ಮೇಲೆ ಹಲ್ಲೆ ಮಾಡಲಾಗಿದೆ. ಯುವಕನಿಗೆ ಕೈಗಳಿಂದ ಗುದ್ದಿ, ಕಾಲಿನಿಂದ ಒದ್ದು ಪಾಠ ಕಲಿಸಿದ್ದಾರೆ. ಈ ಎಲ್ಲಾ ಘಟನೆಯನ್ನು ವಿಡಿಯೋ ರೆಕಾರ್ಡ್‌ ಮಾಡಲಾಗಿದ್ದು, ಈ ವಿಡಿಯೋವೀಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಆದ ಘಟನೆ ಏನು: ಅಮ್ರೋಹಾದ ಗಜ್ರೌಲಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಭಾನುವಾರ ರಾತ್ರಿ, ಯುವಕ ವಿವಾಹಿತ ಮಹಿಳೆಯನ್ನು ಆಕೆಯ ಅತ್ತೆಯ ಮನೆಯಲ್ಲಿಯೇ ಭೇಟಿಯಾಗಲು ಹೋಗಿದ್ದ. ಟೆರಸ್‌ನ ಮೂಲಕ ಆತ ಮನೆಗೆ ಪ್ರವೇಶಿಸಿದ್ದ. ಈ ವೇಳೆ ಮಹಿಳೆಯ ಪತಿ ಅನಿರೀಕ್ಷಿತವಾಗಿ ಟೆರಸ್‌ಗೆ ಬಂದಿದ್ದಾನೆ. ಪತ್ನಿಯೊಂದಿಗೆ ಇದ್ದ ಯುವಕನನ್ನು ನೋಡಿ ಸಿಟ್ಟಾದ ಆತ, ರೆಡ್‌ಹ್ಯಾಂಡ್‌ ಆಗಿ ಇಬ್ಬರನ್ನೂ ಹಿಡಿದಿದ್ದಾನೆ. ತಕ್ಷಣವೇ ಮನೆಯಲ್ಲಿದ್ದವರಿಗೆ ಈ ವಿಚಾರ ತಿಳಿಸಿದಾಗ, ಇಡೀ ಮನೆಯವರು ಹಾಗೂ ಅಕ್ಕಪಕ್ಕದವರು ಮನೆಯ ಟೆರಸ್‌ ಮೇಲೆ ಸೇರಿ, ಆತನ ಮೇಲೆ ಹಲ್ಲೆ ಮಾಡಿದ್ದಾರೆ.

ನನ್ನಿಂದ ತಪ್ಪಾಗಿದೆ, ಇನ್ನೊಂದೂ ಇಲ್ಲಿ ಬರೋದಿಲ್ಲ ಎಂದು ಆತ ಪರಿಪರಿಯಾಗಿ ಬೇಡಿಕೊಂಡರೂ, ಗುಂಪು ಮಾತ್ರ ಕೋಲು-ಬೆಲ್ಟ್‌ಗಳಿಂದ ಆತನ ಮೇಲೆ ಹಲ್ಲೆ ಮಾಡೋದನ್ನು ಮುಂದುವರಿಸಿತ್ತು. ಇದೇ ಗುಂಪಿನಲ್ಲಿರುವ ಒಬ್ಬ ವ್ಯಕ್ತಿ ವಿಡಿಯೋ ರೆಕಾರ್ಡ್‌ ಕೂಡ ಮಾಡಿದ್ದಾರೆ.

ಸಂಬಂಧಿಗಳು, ನೆರೆಹೊರೆಯವರಿಂದ ಹಲ್ಲೆ: ಹಲ್ಲೆಯಿಂದಾಗಿ ಆತನ ಮೈಪೂರ್ತಿ ರಕ್ತವಾಗಿತ್ತು. ಕೈಮುಗಿದು ತನ್ನನ್ನು ಬಿಟ್ಟುಬಿಡುವಂತೆ ಬೇಡಿಕೊಂಡಿದ್ದಾನೆ. ಹಾಗಿದ್ದರೂ ಆತನ ಮೇಲೆ ಹಲ್ಲೆ ಮಾಡಲಾಗಿದೆ. ಕೊನೆಗೆ ಗುಂಪಿನಲ್ಲಿದ್ದ ಕೆಲವರು ಹಿಂಸೆಯನ್ನು ನಿಲಿಸಲು ಮುಂದಾದರೂ ಬಳಿಕ ಆತನನ್ನು ಅಟ್ಟಾಡಿಸಿ ಹೊಡೆದಿದ್ದಾರೆ.

ನಾನು ನಂದಿನಿ ದೆಹಲಿಗೆ ಬಂದಿನೀ, ನೋಯ್ಡಾಗೆ ಹೊಂಟೀನಿ, ಮುಂದೆ ಮುಂಬೈಗೂ ಹೋಗ್ತೀನಿ!

ವಿಡಿಯೋ ವೈರಲ್‌ ಆದ ಬೆನ್ನಲ್ಲಿಯೇ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಆತನ ಮೇಲೆ ಹಲ್ಲೆ ಮಾಡಿರುವ ಬಗ್ಗೆ ತನಿಖೆ ಮಾಡುತ್ತಿರುವುದಾಗಿ ತಿಳಿಸಿದ್ದು, ಆ ಬಳಿಕ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಅವರು ವೈರಲ್ ವೀಡಿಯೊವನ್ನು ತನಿಖೆ ಮಾಡುತ್ತಿದ್ದಾರೆ ಮತ್ತು ಘಟನೆಯಲ್ಲಿ ಭಾಗಿಯಾಗಿರುವ ಸಾಕ್ಷಿಗಳು ಮತ್ತು ಜನರನ್ನು ವಿಚಾರಣೆ ನಡೆಸುತ್ತಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಬಂಧನ ಅಥವಾ ಯಾವುದೇ ಪೊಲೀಸ್ ಕ್ರಮದ ವರದಿ ಈವರೆಗೂ ಆಗಿಲ್ಲ.

Explainer: ಕೆನ್‌- ಬೆಟ್ವಾ ನದಿ ಜೋಡಣೆ, 44 ಸಾವಿರ ಕೋಟಿಯ ಪ್ರಾಜೆಕ್ಟ್‌ ಜೊತೆ ಹಸಿರಾಗಲಿದೆ ಭಾರತ!

Scroll to load tweet…