Explainer: ಕೆನ್- ಬೆಟ್ವಾ ನದಿ ಜೋಡಣೆ, 44 ಸಾವಿರ ಕೋಟಿಯ ಪ್ರಾಜೆಕ್ಟ್ ಜೊತೆ ಹಸಿರಾಗಲಿದೆ ಭಾರತ!
ದೇಶದ ಮೊದಲ ನದಿ ಜೋಡಣೆ ಯೋಜನೆಗೆ ಪ್ರಧಾನಿ ಮೋದಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಈ ಯೋಜನೆಯಿಂದ ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದ ಬರಪೀಡಿತ ಪ್ರದೇಶಗಳಿಗೆ ನೀರಾವರಿ ಹಾಗೂ ಕುಡಿಯುವ ನೀರು ಲಭ್ಯವಾಗಲಿದೆ. ಆದರೆ ಈ ಯೋಜನೆಯಿಂದ ಪರಿಸರಕ್ಕೆ ಹಾನಿಯಾಗಲಿದೆ ಎಂಬ ಆತಂಕ ವ್ಯಕ್ತವಾಗಿದೆ.
ಬೆಂಗಳೂರು (ಡಿ.26): ಅದು ಅಟಲ್ ಕಂಡಿದ್ದ ಕನಸು. ಅದನ್ನೀಗ ನನಸು ಮಾಡೋದಕ್ಕೆ ಮುಂದಾಗಿರುವವರು ಅವರ ಶಿಷ್ಯ ನರೇಂದ್ರ ದಾಮೋದರ್ ದಾಸ್ ಮೋದಿ. ದೇಶದ ಮೊದಲ ನದಿ ಜೋಡಣೆಗೆ ಪ್ರಧಾನಿ ಮೋದಿ ಶಂಕುಸ್ಥಾಪನೆ ಮಾಡಿದ್ದಾರೆ. ಯಮುನಾ ನದಿಯ ಉಪನದಿಗಳಾಗಿರುವ ಕೆನ್-ಬೆಟ್ವಾ ನದಿ ಜೋಡಣೆ ರಾಷ್ಟ್ರೀಯ ಯೋಜನೆಗೆ ಗುರುವಾರ ಶಂಕುಸ್ಥಾಪನೆ ಮಾಡಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ ಮಹತ್ವಾಕಾಂಕ್ಷಿ ಯೋಜನೆ ದಶಕಗಳ ವಿಳಂಬದ ಬಳಿಕ ಕೊನೆಗೂ ನನಸಾಗಿದೆ. ವಾಜಪೇಯಿ ಅವರ 100ನೇ ಜನ್ಮದಿನವೇ ‘ನದಿ ಜೋಡಣೆ’ಗೆ ಮೋದಿ ಶಂಕು ಸ್ಥಾಪನೆ ಮಾಡಿದ್ದಾರೆ. ಕೆನ್-ಬೆಟ್ವಾ ನದಿ ಜೋಡಣೆಯಿಂದ ಯುಪಿ ಹಾಗೂ ಮಧ್ಯಪ್ರದೇಶದ ಬರಗಾಲ ಪ್ರದೇಶಕ್ಕೆ ದೊಡ್ಡ ಮಟ್ಟದ ಲಾಭವಾಗಲಿದ್ದು, ಗುರುವಾರ ಮಧ್ಯಪ್ರದೇಶ ಖುಜುರಾಹೋದಲ್ಲಿ ಪಿಎಂ ಮೋದಿ ಶಂಕುಸ್ಥಾಪನೆ ಮಾಡಿದ್ದಾರೆ.
ಬರಪೀಡಿತ ನಾಡಿಗೆ ನೀರಾವರಿ: ಮಧ್ಯಪ್ರದೇಶದಲ್ಲಿ ಹುಟ್ಟುವ ಕೆನ್ ಮತ್ತು ಉತ್ತರ ಪ್ರದೇಶದಲ್ಲಿ ಹುಟ್ಟುವ ಬೆಟ್ಟಾ ನದಿಗಳ ಜೋಡಣೆಯಿಂದ ಲಕ್ಷಾಂತರ ಜನರಿಗೆ ಕುಡಿಯುವ ನೀರು, ಕೃಷಿಗೆ ನೀರಾವರಿ ಲಭ್ಯವಾಗಲಿದೆ. ಎರಡೂ ರಾಜ್ಯಗಳ ಅತ್ಯಂತ ಬರಪೀಡಿತ ಪ್ರದೇಶಕ್ಕೆ ನೀರಾವರಿ ಸಿಗಲಿದೆ.
8 ವರ್ಷದ ಪ್ರಾಜೆಕ್ಟ್: 8 ವರ್ಷದಲ್ಲಿ ಕೆನ್-ಬೆಟ್ವಾ ನದಿ ಜೋಡಣೆ ಯೋಜನೆ ಪೂರ್ಣ ಮಾಡುವ ಗುರಿ ಇರಿಸಿಕೊಳ್ಳಲಾಗಿದೆ. ನದಿ ಜೋಡಣೆ ಯೋಜನೆಗೆ ₹44,605 ಕೋಟಿ ವೆಚ್ಚ ಮಾಡಲಾಗಿದ್ದು, ಕೇಂದ್ರ ಸರ್ಕಾರದಿಂದ ಶೇ.90ರಷ್ಟು ಅನುದಾನ ಸಿಗಲಿದ್ದು, ಉಳಿದ 10ಅನ್ನು ಎರಡೂ ರಾಜ್ಯಗಳು ಹಂಚಿಕೊಳ್ಳಲಿದೆ.
ನದಿಗಳ ಉಗಮವೆಲ್ಲಿ: ಕೆನ್ ನದಿ ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದ ಮೂಲಕ ಹರಿಯುತ್ತದೆ . ಇದು ಜಬಲ್ಪುರ್ ಜಿಲ್ಲೆಯ ಅಹಿರ್ಗವಾನ್ ಗ್ರಾಮದ ಬಳಿ ಹುಟ್ಟುತ್ತದೆ ಮತ್ತು ಉತ್ತರ ಪ್ರದೇಶದ ಫತೇಪುರ್ ಬಳಿಯ ಚಿಲ್ಲಾ ಗ್ರಾಮದಲ್ಲಿ ಯಮುನಾ ನದಿಯೊಂದಿಗೆ ವಿಲೀನಗೊಳ್ಳುತ್ತದೆ ಬೇಟ್ವಾ ನದಿಯು ಮಧ್ಯಪ್ರದೇಶದ ಭೋಪಾಲ್ ಜಿಲ್ಲೆಯಲ್ಲಿ ಹುಟ್ಟುತ್ತದೆ. ಯಮುನಾ ನದಿಯ ಸಂಗಮವು ಉತ್ತರ ಪ್ರದೇಶದ ಹಮೀರ್‌ಪುರ ಜಿಲ್ಲೆಯಲ್ಲಿದೆ.
ಎರಡು ನದಿ ಜೋಡಣೆ ಮಾಡೋದು ಹೇಗೆ: ಕೆನ್ ನದಿಗೆ ಅಡ್ಡಲಾಗಿ ಪನ್ನಾ ಹುಲಿ ಸಂರಕ್ಷಿತಾರಣ್ಯದಲ್ಲಿ ಅಣೆಕಟ್ಟು ಕಟ್ಟಲಾಗುತ್ತದೆ. ಶೇ.6.5ರಷ್ಟು ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಅಣೆಕಟ್ಟು ನಿರ್ಮಾಣ ಮಾಡಲಾಗುತ್ತದೆ. ಈ ಯೋಜನೆಯಿಂದ 10 ಹಳ್ಳಿಗಳ 2 ಸಾವಿರಕ್ಕೂ ಹೆಚ್ಚು ಕುಟುಂಬ ಸಂಕಷ್ಟಕ್ಕೆ ಈಡಾಗಲಿದ್ದು, ಇವರನ್ನು ಸ್ಥಳಾಂತರ ಮಾಡಲಾಗುತ್ತದೆ. 77 ಮೀಟರ್ ಎತ್ತರ, 2.13 ಉದ್ದ ದೌಧನ್ ಅಣೆಕಟ್ಟು ನಿರ್ಮಾಣ ಮಾಡಲಾಗುತ್ತದೆ. ಆ ಬಳಿಕ 221 ಕಿ.ಮೀ ಉದ್ದದ ಕಾಲುವೆ ನಿರ್ಮಿಸಿ ಈ ಮೂಲಕ ನೀರು ಹರಿಸಲಾಗುತ್ತದೆ. ಉತ್ತರ ಪ್ರದೇಶದಲ್ಲಿ ಹರಿಯುವ ಬೆಟ್ಟಾ ನದಿಗೆ ನೀರು ಬಿಡಲಾಗುತ್ತದೆ. ಇದರಿಂದ ಮಧ್ಯಪ್ರದೇಶ-ಉತ್ತರ ಪ್ರದೇಶದ 10 ಲಕ್ಷ ಹೆಕ್ಟೇರ್ ಭೂಮಿಗೆ ನೀರಾವರಿ ಸಿಗಲಿದ್ದು, ಮಧ್ಯಪ್ರದೇಶದ 10 ಜಿಲ್ಲೆಗಳ 44 ಲಕ್ಷ ಮಂದಿಗೆ ನೀರು ಸೌಲಭ್ಯ ಸಿಗಲಿದೆ. ಉತ್ತರ ಪ್ರದೇಶದ 21 ಲಕ್ಷ ಮಂದಿಗೆ ಕುಡಿಯುವ ನೀರು ಸಿಗಲಿದೆ. ಅದರೊಂದಿಗೆ 103 ಮೆ.ವ್ಯಾ. ಜಲ ವಿದ್ಯುತ್, 27 ಮೆ.ವ್ಯಾ. ಸೌರ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ.
ಕೇಂದ್ರ ಸರ್ಕಾರದ ಮಹತ್ವಾಂಕ್ಷಿ ಯೋಜನೆಯಾದ ಕೆನ್- ಬೆಟ್ವಾ ನದಿ ಜೋಡಣೆಗೆ ಪ್ರಧಾನಿ ಮೋದಿ ಶಂಕು
ಈ ಬಗ್ಗೆ ಮಾತನಾಡಿರುವ ಪ್ರಧಾನಿ ಮೋದಿ, '21ನೇ ಶತಮಾನದ ಬಹುದೊಡ್ಡ ಸವಾಲು ಒಂದೇ, ಅದು ಜಲ ಸುರಕ್ಷತೆ. 21ನೇ ಶತಮಾನದಲ್ಲಿ ಯಾವ ದೇಶ
ಇದನ್ನು ಸರಿಯಾಗಿ ನಿರ್ವಹಣೆ ಮಾಡುತ್ತದೆಯೋ, ಆ ದೇಶ ಗೆಲ್ಲುತ್ತದೆ. ಯಾವ ಕ್ಷೇತ್ರದಲ್ಲಿ ನೀರಿನ ಬಳಕೆ ಸರಿಯಾದ ನಿರ್ವಹಣೆ ಮಾಡಲಾಗುತ್ತೆ ಅಲ್ಲಿ ಯಶಸ್ಸು ಸಿಗಲಿದೆ. ನೀರು ಇದ್ದರೆ ಪ್ರಗತಿ ಹೊಂದಲು ಸಾಧ್ಯ ಜನರ ಖುಷಿಯಾಗಿ ಇರ್ತಾರೆ. ನೀರು ಇದ್ದರೆ ಮಾತ್ರ ಉದ್ಯೋಗ, ಕೈಗಾರಿಕೆಗಳು ಅಭಿವೃದ್ಧಿ ಹೊಂದುತ್ತವೆ. ನಾನು ಗುಜರಾತ್‌ನಿಂದ ಬಂದಿದ್ದೇನೆ, ಅಲ್ಲಿ ಹೆಚ್ಚಿನ ಪ್ರದೇಶಗಳು ವರ್ಷದ ಬಹುಪಾಲು ಬರವನ್ನು ಎದುರಿಸುತ್ತಿದ್ದವು. ಆದರೆ, ಮಧ್ಯಪ್ರದೇಶದಿಂದ ಹುಟ್ಟುವ ನರ್ಮದಾ ನದಿಯ ಆಶೀರ್ವಾದದಿಂದ ಗುಜರಾತ್‌ನ ಭವಿಷ್ಯವನ್ನು ಬದಲಿಸಿತು ಎಂದು ಹೇಳಿದ್ದಾರೆ.
Union Budget 2022 : ಕಾವೇರಿ ಸೇರಿದಂತೆ 5 ನದಿಗಳ ಜೋಡಣೆಗೆ ಸರ್ಕಾರದ ಒಪ್ಪಿಗೆ
ಹುಲಿ ಸಂರಕ್ಷಿತ ಅರಣ್ಯ ನಾಶ: ಕೆನ್-ಬೆಟ್ವಾ ನದಿ ಜೋಡಣೆಗೆ ಪ್ರಧಾನಿ ಮೋದಿ ಅಡಿಗಲ್ಲು ಹಾಕಿದ್ದಾರೆ. ಈ ಯೋಜನೆ ಪನ್ನಾ ಹುಲಿ ಸಂರಕ್ಷಿತ ಪ್ರದೇಶಕ್ಕೆ ಅಪಾಯ ಉಂಟು ಮಾಡುತ್ತೆ‘ಯೋಜನೆಯಿಂದ ಹುಲಿ ಸಂರಕ್ಷಿತ ಪ್ರದೇಶದ ಶೇ.10ಕ್ಕಿಂತ ಹೆಚ್ಚು ಮುಳುಗುತ್ತದೆ. ಹುಲಿಗಳ ವಾಸಸ್ಥಾನ ಮಾತ್ರವಲ್ಲ, ರಣಹದ್ದುಗಳಂತಹ ಇತರ ಜಾತಿಗಳಿವೆ. ಪರಿಸರ ನಾಶವಾಗಲಿದೆ, 23 ಲಕ್ಷಕ್ಕೂ ಹೆಚ್ಚು ಮರಗಳನ್ನು ಕಡಿಯಬೇಕಿದೆ. ಅಣೆಕಟ್ಟು ನಿರ್ಮಾಣದ ಚಟುವಟಿಕೆಗಳಿಗೂ ತೀವ್ರ ತೊಂದರೆಯಾಗಲಿದೆ. ಈ ಪ್ರದೇಶದಲ್ಲಿ ಮೂರು ಸಿಮೆಂಟ್ ಕಾರ್ಖಾನೆಗಳನ್ನು ನಿರ್ಮಿಸಲಾಗ್ತಿದೆ. ಈ ಯೋಜನೆಯಿಂದ ವ್ಯಾಪಕವಾದ ಪರಿಸರ ಹಾನಿ ಉಂಟು ಆಗಲಿದೆ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಹೇಳಿದ್ದಾರೆ.