Asianet Suvarna News Asianet Suvarna News

ಕಳೆದ 7 ವರ್ಷಗಳಲ್ಲಿ ದೇಶವು ಅನಗತ್ಯವಾದ ಕಾನೂನುಗಳನ್ನು ತೊಡೆದುಹಾಕಿದೆ : ಪ್ರಧಾನಿ ಮೋದಿ!

*ವಿಡಿಯೋ ಸಂದೇಶದ ಮೂಲಕ ಮೋದಿ ಮಾತು
*ನಾವು ಒಗ್ಗಟ್ಟಿನಿಂದ ಇದ್ದರೆ ಮಾತ್ರ ನಮ್ಮ ಗುರಿಗಳನ್ನು ಮುಟ್ಟಲು ಸಾಧ್ಯ
*ಭಾರತದ ಎಲ್ಲ ರಾಜ್ಯಗಳು ಪ್ರಗತಿಯ ಹಾದಿಯಲ್ಲಿವೆ!
*ಸರ್ದಾರ್ ವಲ್ಲಭಭಾಯಿ ಪಟೇಲ್‌ರಿಗೆ ಪ್ರಧಾನಿ ಶೃದ್ಧಾಂಜಲಿ 

In the last 7 years the country got rid of unwanted laws said PM Narendra Modi
Author
Bengaluru, First Published Oct 31, 2021, 2:22 PM IST
  • Facebook
  • Twitter
  • Whatsapp

ನವದೆಹಲಿ (ಅ. 31) : ಭಾನುವಾರ ಸರ್ದಾರ್ ವಲ್ಲಭಭಾಯಿ ಪಟೇಲ್ (Sardar Vallabhbhai Patel) ಅವರ ಜನ್ಮದಿನದಂದು ಪ್ರಧಾನಿ ನರೇಂದ್ರ ಮೋದಿ ಶ್ರದ್ಧಾಂಜಲಿ ಸಲ್ಲಿಸಿದರು. ಇಟಲಿ (Italy) ಮತ್ತು ಯುಕೆ (UK) ಭೇಟಿಯ ನಡುವೆಯೇ ವಿಡಿಯೋ ಸಂದೇಶದ ಮೂಲಕ ರಾಷ್ಟ್ರೀಯ ಏಕತಾ ದಿನದಂದು ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, 'ಏಕ್ ಭಾರತ್, ಶ್ರೇಷ್ಠ ಭಾರತ'ಕ್ಕಾಗಿ ತಮ್ಮ ಪ್ರಾಣವನ್ನು ನೀಡಿದ ಸರ್ದಾರ್ ಪಟೇಲ್ ಅವರಿಗೆ ಇಂದು ರಾಷ್ಟ್ರವು ಗೌರವ ಸಲ್ಲಿಸುತ್ತಿದೆ ಎಂದು ಹೇಳಿದರು.

ಕಳೆದ 7 ವರ್ಷಗಳಲ್ಲಿ ದೇಶವು ಅನಗತ್ಯವಾದ ಕಾನೂನುಗಳನ್ನು ತೊಡೆದುಹಾಕಿದೆ!

"ಸರ್ದಾರ್ ಪಟೇಲ್ ಅವರು ಇತಿಹಾಸದಲ್ಲಿ ಮಾತ್ರವಲ್ಲದೇ ಎಲ್ಲಾ ಭಾರತೀಯರ ಹೃದಯದಲ್ಲಿಯೂ ನೆಲೆಸಿದ್ದಾರೆ .ಇಂದು, ಅವರ ಸ್ಫೂರ್ತಿಯಿಂದಾಗಿ, ಭಾರತವು ಎಲ್ಲಾ ರೀತಿಯ ಬಾಹ್ಯ ಮತ್ತು ಆಂತರಿಕ ಸವಾಲುಗಳನ್ನು ಎದುರಿಸಲು ಸಮರ್ಥವಾಗುತ್ತಿದೆ. ಕಳೆದ 7 ವರ್ಷಗಳಲ್ಲಿ ದೇಶವು ದಶಕಗಳಷ್ಟು ಹಳೆಯ ಅನಗತ್ಯವಾದ ಕಾನೂನುಗಳನ್ನು (Laws) ತೊಡೆದುಹಾಕಿದೆ" ಎಂದು ಹೇಳಿದರು.

ನಾವು ಒಗ್ಗಟ್ಟಿನಿಂದ ಇದ್ದರೆ ಮಾತ್ರ ನಮ್ಮ ಗುರಿಗಳನ್ನು ಮುಟ್ಟಲು ಸಾಧ್ಯ!

ಭಾರತವು ಕೇವಲ ಭೌಗೋಳಿಕ ಪ್ರದೇಶವಲ್ಲ, ಇದು ಆದರ್ಶಗಳು, ದೃಡ ಸಂಕಲ್ಪ, ನಾಗರಿಕತೆ, ಸಂಸ್ಕೃತಿಗಳಿಂದ ತುಂಬಿರುವ ರಾಷ್ಟ್ರವಾಗಿದೆ. 135 ಕೋಟಿ ಭಾರತೀಯರು ವಾಸಿಸುವ ಭೂಮಿ ನಮ್ಮ ಆತ್ಮ, ನಮ್ಮ ಕನಸುಗಳು, ನಮ್ಮ ಆಕಾಂಕ್ಷೆಗಳ ಅವಿಭಾಜ್ಯ ಅಂಗವಾಗಿದೆ. ನಾವು ಒಗ್ಗಟ್ಟಿನಿಂದ (Unity) ಇದ್ದರೆ ಮಾತ್ರ ನಮ್ಮ ಗುರಿಗಳನ್ನು ಮುಟ್ಟಲು ಸಾಧ್ಯ. ಸರ್ದಾರ್ ಪಟೇಲ್ ಅವರು ಯಾವಾಗಲೂ ಭಾರತವು ಬಲಿಷ್ಠ ಮತ್ತು ಅಭಿವೃದ್ಧಿಯ ರಾಷ್ಟ್ರವಾಗಬೇಕೆಂದು ಬಯಸಿದ್ದರು. ಅವರು ಯಾವಾಗಲೂ ರಾಷ್ಟ್ರದ ಹಿತಾಸಕ್ತಿಗೆ ಪ್ರಾಮುಖ್ಯತೆ ನೀಡಿದ್ದರು ಎಂದು ಪ್ರಧಾನಿ ಹೇಳಿದ್ದಾರೆ.

ಪ್ರಧಾನಿ ಮೋದಿ ಆಡಳಿತ ಮಾದರಿ Management Schoolಗಳಲ್ಲಿ ಪಠ್ಯವಾಗಲಿ : ರಾಜನಾಥ್ ಸಿಂಗ್!

 

 

ಭಾರತದ ಎಲ್ಲ ರಾಜ್ಯಗಳು ಪ್ರಗತಿಯ ಹಾದಿಯಲ್ಲಿವೆ!

ಸರ್ದಾರ್ ಪಟೇಲ್ ಅವರು ನೀಡಿದ ರಾಷ್ಟ್ರೀಯ ಏಕತೆಯ ಆದರ್ಶಗಳು ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿವೆ. ಅದು ಜಮ್ಮು ಕಾಶ್ಮೀರ (Jammu and Kashmir), ಈಶಾನ್ಯ ರಾಜ್ಯಗಳು (Eastern states) ಅಥವಾ ಹಿಮಾಲಯದ (Himalaya) ಯಾವುದೇ ಹಳ್ಳಿಯಾಗಿರಲಿ, ಇಂದು ಎಲ್ಲರೂ ಪ್ರಗತಿಯ ಹಾದಿಯಲ್ಲಿದ್ದಾರೆ. ತನ್ನ ಹಿತಾಸಕ್ತಿಯನ್ನು ಭದ್ರಪಡಿಸಿಕೊಳ್ಳಲು, ಭಾರತವು 'ಆತ್ಮನಿರ್ಭರ್' ಎಂಬ ಹೊಸ  ಪ್ರಯಾಣವನ್ನು ಪ್ರಾರಂಭಿಸಿದೆ ಎಂದು ಮೋದಿ ಹೇಳಿದ್ದಾರೆ. "ಸತತ ಪ್ರಯತ್ನದಿಂದ ನಾವು ದೇಶವನ್ನು ಹೊಸ ಹಿರಿಮೆಗೆ ಏರಿಸಬಹುದು ಆದರೆ ಒಗ್ಗಟ್ಟಿನ ಕೊರತೆಯು ನಮ್ಮನ್ನು ವಿಪತ್ತುಗಳನ್ನು ಎದುರಿಸುವಂತೆ ಮಾಡುತ್ತದೆ" ಎಂಬ ಸರ್ದಾರ್ ಪಟೇಲ್ ಅವರ ಮಾತನ್ನು ದೇಶದ ನಾಗರಿಕರು ನೆನಪಿಸಿಕೊಳ್ಳಬೇಕೆಂದು ಪ್ರಧಾನಿ ಒತ್ತಾಯಿಸಿದರು.

ವೋಕಲ್‌ ಫಾರ್‌ ಲೋಕಲ್‌ ಸಾಕಾರಗೊಳಿಸಿ!

ದಶಕಗಳ ಹಿಂದೆ  ಸರ್ದಾರ್ ಪಟೇಲ್ ಅವರು ಪುರುಷರು, ಮಹಿಳೆಯರು ಮತ್ತು ಪ್ರತಿಯೊಂದು ವರ್ಗ- ಪಂಗಡಗಳ ಸಾಮರ್ಥ್ಯವನ್ನು ಒಂದುಗೂಡಿಸುವ ಮೂಲಕ ಚಳವಳಿಯನ್ನು ಪ್ರಾರಂಭಿಸಿದ್ದರು.ಇಂದು ನಾವು 'ಏಕ್ ಭಾರತ್' ಬಗ್ಗೆ ಮಾತನಾಡುತ್ತೇವೆ. ಆದರೆ ಅದರ ಸ್ವರೂಪ ಹೇಗಿರಬೇಕು ಎಂದು ನಾವು ಯೋಚಿಸುವಾಗ,  "ಭಾರತೀಯ ಮಹಿಳೆಯರಿಗೆ ಸಮಾನ ಅವಕಾಶಗಳು ಮತ್ತು ಕನಸು ಕಾಣುವ ಹಕ್ಕುಗಳಿವೆ ಹಾಗೂ ಅದರ ಫಲಿತಾಂಶವೇ 'ಏಕ್ ಭಾರತ್ ಎಂಬುದನ್ನು ನಾವು ಅರಿಯಬೇಕು" ಎಂದು ಪ್ರಧಾನಿ ಹೇಳಿದರು.

ಕಾಂಗ್ರೆಸ್‌ನಿಂದಾಗಿ ಮೋದಿ ಬಲಶಾಲಿ: ದೀದಿ ಭವಿಷ್ಯ

ವೋಕಲ್‌ ಫಾರ್‌ ಲೋಕಲ್‌ (Vocal for Local) ಬಗ್ಗೆ ಮಾತನಾಡಿದ ಪ್ರಧಾನಿ "ನಾವು ಒಟ್ಟಿಗೆ ಇರುವುದೆಂದರೆ ಸಾಮಾನ್ಯ ಗುರಿಯತ್ತ ಸಾಗುವುದು ಎಂದರ್ಥ, ಆದ್ದರಿಂದ ಜನರು ಏನನ್ನಾದರೂ ಖರೀದಿಸಲು ಹೋದಾಗ ಅವರು ಭಾರತವನ್ನು ಸ್ವಾವಲಂಬಿ ಮಾಡುವ ಧ್ಯೇಯವನ್ನು ನೆನಪಿನಲ್ಲಿಟ್ಟುಕೊಂಡು ಭಾರತೀಯ ಮಾರಾಟಗಾರರಿಂದಲೇ ಸರಕುಗಳ ಖರೀದಿ ಮಾಡಬೇಕು ಎಂದು ಪ್ರಧಾನಿ ಮೋದಿ ಆಗ್ರಹಿಸಿದ್ದಾರೆ. 

Follow Us:
Download App:
  • android
  • ios