Asianet Suvarna News Asianet Suvarna News

ಸಿಕ್ಕಿಂ ಪ್ರವಾಹದಲ್ಲಿ ಕೊಚ್ಷಿ ಹೋಗಿ ನದಿ ತೀರದಲ್ಲಿ ಸ್ಫೋಟಗೊಂಡ ಸೇನಾ ಶಸ್ತ್ರಾಸ್ತ್ರ: ವೀಡಿಯೋ ವೈರಲ್‌

ಸಿಕ್ಕಿಂ ಪ್ರವಾಹದಲ್ಲಿ  23 ಯೋಧರ ಜೊತೆ ಸೇನೆಯ ಭಾರೀ ಪ್ರಮಾಣದ ಶಸ್ತ್ರಾಸ್ತ್ರವೂ ಈ ಪ್ರವಾಹದಲ್ಲಿ ಕೊಚ್ಚಿ ಹೋಗಿತ್ತು. ಹೀಗೆ ಕೊಚ್ಚಿ ಹೋದ ಶಸ್ತ್ರಾಸ್ತ್ರಗಳು ನದಿ ತೀರದಲ್ಲಿ ಹೋಗಿ ಸೇರಿದ್ದು, ಅಲ್ಲಿ ಸ್ಫೋಟಗೊಂಡ ವೀಡಿಯೋ ಈಗ ವೈರಲ್ ಆಗುತ್ತಿದೆ. 

In Sikkim floods, Kochi went to Kochi and an army weapons exploded on the river bank: Video goes viral akb
Author
First Published Oct 8, 2023, 1:07 PM IST

ಗ್ಯಾಂಗ್ಟಕ್‌: ಮೇಘಸ್ಫೋಟ ಸಂಭವಿಸಿದ ಕಾರಣದಿಂದಾಗಿ ತೀಸ್ತಾ ನದಿ ಉಕ್ಕೇರಿ ಹರಿದ ಪರಿಣಾಮ ಸಿಕ್ಕಿಂನಲ್ಲಿ ದೊಡ್ಡ ಅನಾಹುತವೇ ಸಂಭವಿಸಿದೆ, 23 ಯೋಧರ ಜೊತೆ ಸೇನೆಯ ಭಾರೀ ಪ್ರಮಾಣದ ಶಸ್ತ್ರಾಸ್ತ್ರವೂ ಈ ಪ್ರವಾಹದಲ್ಲಿ ಕೊಚ್ಚಿ ಹೋಗಿತ್ತು. ಹೀಗೆ ಕೊಚ್ಚಿ ಹೋದ ಶಸ್ತ್ರಾಸ್ತ್ರಗಳು ನದಿ ತೀರದಲ್ಲಿ ಹೋಗಿ ಸೇರಿದ್ದು, ಅಲ್ಲಿ ಸ್ಫೋಟಗೊಂಡ ವೀಡಿಯೋ ಈಗ ವೈರಲ್ ಆಗುತ್ತಿದೆ. 

ಪ್ರವಾಹದಲ್ಲಿ ಕೊಚ್ಚಿ ಹೋಗಿ ತೀಸ್ತಾ ನದಿ (Teesta River) ಸೇರಿದ ಶಸ್ತ್ರಾಸ್ತ್ರಗಳು ಅಲ್ಲಿ ಸ್ಫೋಟಗೊಂಡ ದೃಶ್ಯ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ರವಾಹ ಸಂಭವಿಸಿದ ನಂತರ ಕೋಚ್ಚಿ ಹೋದ ಶಸ್ತ್ರಾಸ್ತ್ರಗಳು ಸಾರ್ವಜನಿಕರಿಗೆ ಸಿಕ್ಕಿದರೆ ಅದರ ಸಮೀಪ ಹೋಗದಂತೆ ಸೇನೆಯೂ ಪ್ರಕಟಣೆ ಹೊರಡಿಸಿತ್ತು, ಸ್ಫೋಟಿಸುವ ಅಪಾಯಗಳಿರುವುದರಿಂದ ಅದರ ಸಮೀಪ ಹೋಗದಂತೆ ಸೇನೆ ಎಚ್ಚರಿಕೆ ನೀಡಿತ್ತು. ಅದೇ ರೀತಿ ಈಗ ಶಸ್ತ್ರಾಸ್ತ್ರಗಳು ಸ್ಫೋಟಗೊಳ್ಳುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆ ಆಗಿದೆ.

ಹಮಾಸ್ ಉಗ್ರರಿಂದ ಯುವತಿಯ ಕಿಡ್ನಾಪ್ : ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

ಇತ್ತ ಈ ಪ್ರವಾಹದಿಂದ ಸಂಭವಿಸಿರುವ ಅವಘಡದಲ್ಲಿ ಸಾವಿಗೀಡಾದವರ ಸಂಖ್ಯೆ 56ಕ್ಕೆ ಏರಿಕೆಯಾಗಿದೆ. ಈ ಪೈಕಿ ಸಿಕ್ಕಿಂನಲ್ಲಿ 7 ಮಂದಿ ಸೈನಿಕರು ಸೇರಿ 26 ಜನರ ಮೃತದೇಹಗಳು ಪತ್ತೆಯಾಗಿದೆ. ಹಾಘೆಯೇ ಪಶ್ಚಿಮ ಬಂಗಾಳದ (West Bengal) ತೀಸ್ತಾ ನದಿ ಜಲಾನಯನ ಪ್ರದೇಶದಲ್ಲಿ 30 ಶವಗಳು ಸಿಕ್ಕಿವೆ.

ಇನ್ನು ಸೇನಾ ಸಿಬ್ಬಂದಿ ಸೇರಿದಂತೆ ಉಳಿದ 142 ಜನರಿಗೆ ಸಿಕ್ಕಿಂ ಹಾಗೂ ಬಂಗಾಳದ ತೀಸ್ತಾ ನದಿ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಇನ್ನು ಪ್ರವಾಹದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 4 ಲಕ್ಷ ರು. ಹಾಗೂ ಸದ್ಯ ಪರಿಹಾರ ಕೇಂದ್ರಗಳಲ್ಲಿರುವ ಜನರಿಗೆ ತಲಾ 2,000 ರು. ತಕ್ಷಣದ ಪರಿಹಾರವನ್ನು ಮುಖ್ಯಮಂತ್ರಿ ಪ್ರೇಮ್‌ ಸಿಂಗ್‌ ತಮಾಂಗ್‌ ಘೋಷಿಸಿದ್ದಾರೆ. ಜಲಪ್ರಳಯದ ಬಳಿಕ 23 ಮಂದಿ ಸೈನಿಕರು ಕಾಣೆಯಾಗಿದ್ದರಾದೂ ಈವರೆಗೆ 7 ಸೈನಿಕರ ಮೃತದೇಹಗಳು ಮಾತ್ರ ಪತ್ತೆಯಾಗಿವೆ.

ಹಮಾಸ್ ಉಗ್ರರಿದ್ದ ಬಹುಮಹಡಿ ಕಟ್ಟಡ ಹೊಡೆದುರುಳಿಸಿದ ಇಸ್ರೇಲ್ ಸೇನೆ: ವೀಡಿಯೋ ವೈರಲ್

ಸಿಕ್ಕಿಂ ಪ್ರವಾಹದಿಂದ ಈವರೆಗೆ 25,000ಕ್ಕೂ ಹೆಚ್ಚು ಜನರು ಬಾಧಿತರಾಗಿದ್ದರೆ, 1,200ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಅಲ್ಲದೇ 13 ಸೇತುವೆ ಸೇರಿದಂತೆ ಬಹುತೇಕ ರಸ್ತೆಗಳು ಹಾಗೂ ಇತರ ನಿರ್ಮಾಣಗಳು ಕೊಚ್ಚಿ ಹೋಗಿವೆ. ಈವರೆಗೆ 2,413 ಜನರನ್ನು ರಕ್ಷಣೆ ಮಾಡಲಾಗಿದ್ದು 6,875 ಜನರು ರಾಜ್ಯದ 22 ವಿವಿಧ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. ಇನ್ನು ಸಿಕ್ಕಿಂನಲ್ಲಿ ಸಿಲುಕಿದ್ದ 26 ಮೇಘಾಲಯದ ವಿದ್ಯಾರ್ಥಿಗಳನ್ನು ಯಶಸ್ವಿಯಾಗಿ ಸ್ಥಳಾಂತರಿಸಲಾಗಿದೆ.

 

ಕಳಪೆ ಕಾಮಗಾರಿ ಡ್ಯಾಂ ಒಡೆದು ದುರಂತ

ಸಿಕ್ಕಿಂನಲ್ಲಿ ಭಾರೀ ಮೇಘಸ್ಫೋಟದಿಂದ ಹರಿದುಬಂದ ನೀರಿನ ರಭಸಕ್ಕೆ ಕೊಚ್ಚಿ ಹೋಗಿರುವ ಚುಂಗ್ತಾಂಗ್‌ ಅಣೆಕಟ್ಟನ್ನು (Chungthang Dam) ಹಿಂದಿನ ಸರ್ಕಾರ ಭಾರೀ ಕಳಪೆ ಗುಣಮಟ್ಟದಿಂದ ನಿರ್ಮಿಸಿತ್ತು. ಹೀಗಾಗಿಯೇ ಅಣೆಕಟ್ಟು ನಾಶವಾಗಿದೆ ಎಂದು ಮುಖ್ಯಮಂತ್ರಿ ಪ್ರೇಮ್‌ ಸಿಂಗ್‌ ತಮಾಂಗ್‌ (Chief Minister Prem Singh Tamang) ಆರೋಪಿಸಿದ್ದಾರೆ. ‘1200 ಮೆಗಾವ್ಯಾಟ್‌ ಜಲವಿದ್ಯುತ್ ಉತ್ಪಾದನಾ ಕೇಂದ್ರವಾಗಿದ್ದ ಚುಂಗ್ತಾಂಗ್‌ ಅಣೆಕಟ್ಟು ಸಂಪೂರ್ಣ ನಾಶವಾಗಿದ್ದು, ಕೊಚ್ಚಿ ಹೋಗಿದೆ. ಇದು 20 ಜನರನ್ನು ಬಲಿ ತೆಗೆದುಕೊಂಡಿದೆ ಈ ಹಿಂದೆ 24 ವರ್ಷ ಆಡಳಿತದಲ್ಲಿದ್ದ ಡೆಮಾಕ್ರಟಿಕ್‌ ಫ್ರಂಟ್ (Democratic Front) ಸರ್ಕಾರವೇ ಇದಕ್ಕೆ ಕಾರಣ ಎಂದು ತಮಾಂಗ್‌ ಹೇಳಿದ್ದಾರೆ. ಇನ್ನು ತೀಸ್ತಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ 13 ಸೇತುವೆಗಳು ಕೊಚ್ಚಿ ಹೋಗಿವೆ.

ಇಸ್ರೇಲ್‌ನಲ್ಲಿ 18 ಸಾವಿರ ಭಾರತೀಯರ ವಾಸ, ಇವರಲ್ಲಿ 6 ಸಾವಿರಕ್ಕೂ ಹೆಚ್ಚು ಕೇರಳಿಗರು

ಪ್ರವಾಹ ಸಂಭವಿಸಿದ್ದು ಹೇಗೆ?
ಈಶಾನ್ಯ ರಾಜ್ಯ (northeastern state) ಸಿಕ್ಕಿಂನಲ್ಲಿ ಹಿಂದೆಂದೂ ಕಂಡು ಕೇಳರಿಯದ ಭೀಕರ ಮೇಘಸ್ಫೋಟ ಸಂಭವಿಸಿದೆ. ಮೇಘಸ್ಫೋಟ ಸಂಭವಿಸಿದ್ದು ಉತ್ತರ ಸಿಕ್ಕಿಂನಲ್ಲಾದರೆ ಅಣೆಕಟ್ಟೆ ಒಡೆದಿದ್ದು ಮಧ್ಯ ಸಿಕ್ಕಿಂನಲ್ಲಿ ಹಾಗೂ 22 ಸೈನಿಕರು ಸೇರಿದಂತೆ ನೂರಾರು ಸೈನಿಕರು ಕೊಚ್ಚಿ ಹೋಗಿದ್ದು ದಕ್ಷಿಣ ಸಿಕ್ಕಿಂನಲ್ಲಿ. ಇದೆಲ್ಲ ಸಂಭವಿಸಿದ್ದು ಕೇವಲ 5-6 ತಾಸಿನ ಅವಧಿಯಲ್ಲಿ. ಅಂದರೆ ಈ ಪ್ರವಾಹದ ಭೀಕರತೆ ಹೇಗಿತ್ತು ಎಂದು ಅರ್ಥವಾದೀತು,

ಬುಧವಾರ ತಡರಾತ್ರಿ 1 ಗಂಟೆಯ ಸುಮಾರಿಗೆ, ಸಿಕ್ಕಿಂನ ಮೇಲ್ಭಾಗದಲ್ಲಿರುವ ನೀರ್ಗಲ್ಲು ಸರೋವರವಾದ ದಕ್ಷಿಣ ಲೊನಾಕ್ ಸರೋವರದಲ್ಲಿ (South Lonak Lake) ಮೇಘಸ್ಫೋಟ ಸಂಭವಿಸಿದೆ. ಸಾಮಾನ್ಯವಾಗಿ ನೀರ್ಗಲ್ಲು ಪ್ರದಶದಲ್ಲಿ ಮೇಘಸ್ಫೋಟ ಅದರೆ ಸಾಮಾನ್ಯವಾಗಿ ಹೆಚ್ಚಿನ ಮಳೆಯಿಂದ ಉಂಟಾಗುವ ಪ್ರವಾಹಕ್ಕಿಂತ ಹೆಚ್ಚು ಹಾನಿ ಮತ್ತು ವಿನಾಶ ಸಂಭವಿಸುತ್ತದೆ. ಇದರಿಂದ ಮೇಘಸ್ಫೋಟದ ರಭಸಕ್ಕ ಲೊನಾಕ್‌ ಸರೋವರದ ದಂಡೆಗಳು ಒಡೆದಿವೆ. ಇದರಿಂದ ಏಕಾಏಕಿ ಅದರಲ್ಲಿನ ಶೇ.65ರಷ್ಟು ನೀರು ಮುನ್ನುಗ್ಗಿದೆ.

ಭಾರಿ ಪೂರ್ವ ತಯಾರಿಯೊಂದಿಗೆ ಇಸ್ರೇಲ್ ಮೇಲೆ ಮುಗಿಬಿದ್ದಿದ್ದ ಹಮಾಸ್ ಉಗ್ರರು

ಈ ಎಲ್ಲಾ ನೀರು ಕೆಳಮುಖವಾಗಿ ಹರಿದಿದೆ. ಈ ಹಿನ್ನೆಲೆಯಲ್ಲಿ ಸಿಕ್ಕಿಂನ ಅತಿದೊಡ್ಡ ಜಲವಿದ್ಯುತ್ ಯೋಜನೆ (hydroelectric project) ಎನ್ನಿಸಿಕೊಂಡ ಚುಂಗ್‌ಥಾಂ ಅಣೆಕಟ್ಟು ಒಡೆದಿದೆ. ಇದರಿಂದಾಗಿ ಇದರಿಂದ ಆವರೆಗೆ ಅಪಾಯ ಮಟ್ಟಕ್ಕಿಂತ ಕೆಳಮಟ್ಟದಲ್ಲಿ ಹರಿಯುತ್ತಿದ್ದ ತೀಸ್ತಾ ನದಿ, ದಿಢೀರನೆ ಅಪಾಯ ಮಟ್ಟ ಮೀರಿ ಉಕ್ಕೇರಿದೆ. ಪ್ರವಾಹ ಯಾವ ಮಟ್ಟಿಗೆ ಉಂಟಾಯಿತು ಎಂದರೆ ಬರೀ ನೀರು ಮಾತ್ರ ನುಗ್ಗಿಲ್ಲ. ಅದರ ಜತೆಗೆ ನೀರಿನ ರಭಸಕ್ಕೆ ದಾರಿಯುದ್ದಕ್ಕೂ ಇದ್ದ ಕಲ್ಲು ಬಂಡೆಗಳು, ಹೂಳು, ಗಿಡಮರಗಳು, ಮರದ ದಿಮ್ಮಿಗಳು ಹಾಗೂ ಇತರ ಭಗ್ನಾವಶೇಷಗಳು ಮುನ್ನುಗ್ಗಿವೆ.

ಇಸ್ರೇಲ್‌- ಪ್ಯಾಲೆಸ್ತೀನ್‌ ಸಂಘರ್ಷ : ಅಮೆರಿಕ ಮಧ್ಯಪ್ರವೇಶಕ್ಕೂ ಬಗೆಹರಿಯದ ಯಹೂದಿ ಅರಬ್ಬರ ಬಿಕ್ಕಟ್ಟು

ಇದರಿಂದಾಗಿ ಅಲ್ಲಿಂದ ನೂರಾರು ಕಿ.ಮೀ. ದೂರದಲ್ಲಿದ್ದ ಬರ್ದಂಗ್‌, ಮಂಗನ್, ದಿಕ್ಚು, ಸಿಂಗ್ಟಾಮ್ ಮತ್ತು ರಂಗ್ಪೋ ಸೇರಿದಂತೆ ನದಿಯ ಎಲ್ಲಾ ಕೆಳಭಾಗದ ಪ್ರದೇಶಗಳಲ್ಲಿ ತೀವ್ರ ಹಾನಿಯಾಗಿದೆ. ಬೆಳಗ್ಗೆ 6-7 ಗಂಟೆ ಸುಮಾರಿಗೆ ಬರ್ದಂಗ್‌ನಲ್ಲಿದ್ದ 22 ಸೇನಾ ಸಿಬ್ಬಂದಿ ಕೊಚ್ಚಿ ಹೋಗಿದ್ದಾರೆ. ಅಂದರೆ ಬುಧವಾರ ನಸುಕಿನ 1 ಗಂಟೆ ಲೊನಾಕ್ ಸರೋವರ ಒಡೆದು ಮುನ್ನುಗ್ಗಿದ ಪ್ರವಾಹದ ನೀರು, ಸುಮಾರು 200 ಕಿ.ಮೀ. ದೂರದ ಬರ್ದಂಗ್‌ ತಲುಪಲು ಕೇವಲ 6 ತಾಸು ತೆಗೆದುಕೊಂಡಿದೆ. ಅಂದರೆ ಆ ಮಟ್ಟಿಗೆ ಪ್ರವಾಹ ಉಂಟಾಗಿದೆ ಎಂದು ಕೇಂದ್ರ ಜಲ ಆಯೋಗ ತಿಳಿಸಿದೆ.

2013ರಲ್ಲೇ ಸುಳಿವು:

ಈ ನಡುವೆ ತಜ್ಞರು ಇಲ್ಲಿ ಪ್ರವಾಹ ಸಂಭವಿಸಬಹುದು ಎಂದು 2013ರಲ್ಲೇ ತಜ್ಞರು ಮುನ್ಸೂಚನೆ ನೀಡಿದ್ದರು ಎಂದು ತಿಳಿದು ಬಂದಿದೆ.

Follow Us:
Download App:
  • android
  • ios