Asianet Suvarna News Asianet Suvarna News

ಮಹಿಳೆಯರೂ ಏನೂ ಧರಿಸದಿದ್ದರೂ ಚಂದ ಕಾಣ್ತಾರೆ, ವಿವಾದಿತ ಹೇಳಿಕೆ ನೀಡಿದ ಬಾಬಾ ರಾಮ್‌ದೇವ್!

ಬಾಬಾ ರಾಮ್‌ದೇವ್ ಅಲ್ಲೊಮ್ಮೆ ಇಲ್ಲೊಮ್ಮೆ ಪ್ರತ್ಯಕ್ಷವಾಗಿ ವಿವಾದವನ್ನು ಮೈಮೇಲೆ ಎಳೆದುಕೊಳ್ಳುತ್ತಿರುವುದು ಹೊಸದೇನಲ್ಲ. ಆದರೆ ಈ ಬಾರಿ ತಮ್ಮ ವ್ಯಾಪ್ತಿ ಮೀರಿ ಹೇಳಿಕೆಯೊಂದನ್ನು ನೀಡಿ ಭಾರಿ ಕೋಲಾಹಲ ಸೃಷ್ಟಿಸಿದ್ದಾರೆ. ಮಹಿಳೆಯರು ಏನೂ ಧರಿಸದಿದ್ದರೂ ನನ್ನ ಕಣ್ಣಿಗೆ ಚೆನ್ನಾಗಿ ಕಾಣ್ತಾರೆ ಎಂದಿದ್ದಾರೆ. ಮಹಾರಾಷ್ಟ್ರ ಉಪಮುಖ್ಯಮಂತ್ರಿ ಫಡ್ನಿವಿಸ್ ಪತ್ನಿ ಎದುರಲ್ಲೇ ಈ ಮಾತನ್ನು ಆಡಿದ್ದಾರೆ.

In my eyes women look good even if they wear nothing Baba Ramdev controversial statement In front of Fadnavis wife ckm
Author
First Published Nov 26, 2022, 6:56 PM IST

ಮುಂಬೈ(ನ.26): ಯೋಗ ಸಿದ್ಧಿ, ಪತಂಜಲಿ ಉತ್ಪನ್ನ, ವ್ಯಾಪಾರ ವಹಿವಾಟಿನಿಂದ ಸುದ್ದಿಯಾಗುತ್ತಿದ್ದ ಬಾಬಾ ರಾಮದೇವ್ ಇದೀಗ ಒಂದಲ್ಲ ಒಂದು ವಿವಾದಗಳನ್ನು ಮೈಮೇಲೆ ಎಳೆದುಕೊಂಡು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಇದೀಗ ಮುಂಬೈನ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡ ಯೋಗ ಗುರು ರಾಮ್‌ದೇವ್, ಮಹಿಳೆಯರ ಕುರಿತು ವಿವಾದಿತ ಹೇಳಿಕೆ ನೀಡಿದ್ದಾರೆ. ಮಹಿಳೆಯರು ಸಾರಿಯಲ್ಲಿ ಚೆನ್ನಾಗಿ ಕಾಣುತ್ತಾರೆ. ಸೆಲ್ವಾರ್‌ನಲ್ಲಿ ಮತ್ತಷ್ಟು ಚೆಂದ ಕಾಣ್ತಾರೆ. ನನ್ನ ಕಣ್ಣಿಗೆ ಮಹಿಳೆಯರೂ ಏನೂ ಧರಿಸದಿದ್ದರೂ ಚೆನ್ನಾಗಿ ಕಾಣ್ತಾರೆ ಎಂದು ಬಾಬಾ ರಾಮ್‌ದೇವ್ ಹೇಳಿದ್ದಾರೆ. ಮುಂಬೈನ ಥಾಣೆಯಲ್ಲಿ ಮಹಿಳಾ ಪತಂಜಲಿ ಯೋಗ ಸಮಿತಿ ಆಯೋಜಿಸಿದ ಯೋಗ ವಿಜ್ಞಾನ ಶಿಬಿರ ಹಾಗೂ ಮಹಿಳಾ ಸಭೆಯಲ್ಲಿ ರಾಮ್‌ದೇವ್ ಈ ಮಾತು ಹೇಳಿದ್ದಾರೆ. ಈ ವೇಳೆ ವೇದಿಕೆಯಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅಮೃತ ಫಡ್ನವಿಸ್ ಸೇರಿದಂತೆ ಕೆಲ ಗಣ್ಯ ಮಹಿಳೆಯರು ಉಪಸ್ಥಿತರಿದ್ದರು. ರಾಮ್‌ದೇವ್ ಮಾತಿನಿಂದ ವೇದಿಕೆಯಲ್ಲಿದ್ದ ಮಹಿಳೆಯರು ತೀವ್ರ ಮುಜುಗರ ಅನುಭವಿಸುವಂತಾಯಿತು.

ಈ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಪುತ್ರ ಹಾಗೂ ಸಂಸದ ಶ್ರೀಕಾಂತ್ ಶಿಂಧೆ ಕೂಡ ಉಪಸ್ಥಿತರಿದ್ದರು. ಬಿಜೆಪಿ ನಾಯಕರಿದ್ದ ಸಭೆಯಲ್ಲಿ ಬಾಬಾ ರಾಮ್‌ದೇವ್ ಈ ರೀತಿಯ ಹೇಳಿಕೆ ನೀಡಿರುವುದು ಇದೀಗ ರಾಜಕೀಯ ಕೆರಸರೆರಚಾಟಕ್ಕೂ ಕಾರಣವಾಗಿದೆ. 

ಸಲ್ಮಾನ್, ಆರ್ಯನ್ ಖಾನ್ ಇಬ್ಬರೂ ಡ್ರಗ್ಸ್ ತೆಗೆದುಕೊಳ್ತಾರೆ; ಬಾಬಾ ರಾಮ್‌ದೇವ ಶಾಕಿಂಗ್ ಹೇಳಿಕೆ

ಮುಂಬೈನ ಥಾಣೆಯಲ್ಲಿ ಯೋಗ ವಿಜ್ಞಾನ ಶಿಬಿರ ಹಾಗೂ ಮಹಿಳಾ ಸಭೆಯಲ್ಲಿ ಯೋಗ ಹಾಗೂ ವಿಚಾರ ಸಂಕೀರ್ಣ ಆಯೋಜಿಸಲಾಗಿತ್ತು. ಯೋಗ ಅಭ್ಯಾಸ ಮಾಡಲು ಸೆಲ್ವಾರ್ ಹಾಗೂ ವಿಚಾರ ಸಂಕೀರ್ಣಕ್ಕೆ ಸಾರಿ ತಂದಿದ್ದರು. ಆದರೆ ಯೋಗ ಮುಗಿದ ಬೆನ್ನಲ್ಲೇ ವಿಚಾರ ಸಂಕೀರ್ಣ ಆರಂಭಗೊಂಡಿತು. ಹೀಗಾಗಿ ಮಹಿಳೆಯರಿಗೆ ಯೋಗದ ಉಡುಪು ಬದಲಾಯಿಸಿ ಸಾರಿ ತೊಡಲು ಸಮಯವಕಾಶ ಇರಲಿಲ್ಲ.  ಇದನ್ನುದ್ದೇಶಿ ಮಾತನಾಡಿದ ಬಾಬಾ ರಾಮ್‌ದೇವ್, ನಿಮಗೆ ಸಾರಿ ತೊಡುವಷ್ಟು ಸಮಯವಿಲ್ಲ ಅಂದರೆ ಪರ್ವಾಗಿಲ್ಲ, ನೀವು ಮನೆಗೆ ಮಳಿದ ಬಳಿಕ ಸಾರಿ ತೊಟ್ಟುಕೊಳ್ಳಿ ಎಂದಿದ್ದಾರೆ. ಇಷ್ಟಕ್ಕ ಮಾತು ನಿಲ್ಲಿಸಿದರೆ ಈ ವಿವಾದ ಸೃಷ್ಟಿಯಾಗುತ್ತಿರಲಿಲ್ಲ.

 

 

ರಾಮ್ ದೇವ್ ಮತ್ತೆ ಮಹಿಳೆಯರು ಸೌಂದರ್ಯ ವರ್ಣಿಸಲು ಆಡಿದ ಮಾತು ವಿವಾದಕ್ಕೆ ಕಾರಣವಾಗಿದೆ. ಮಹಿಳಯರು ಸಾರಿಯಲ್ಲಿ ಚೆನ್ನಾಗಿ ಕಾಣುತ್ತಾರೆ. ಸಲ್ವಾರ್‌ನಲ್ಲೂ ಚೆನ್ನಾಗಿ ಕಾಣುತ್ತಾರೆ. ನನ್ನ ಕಣ್ಣಿನಲ್ಲಿ ಮಹಿಳೆಯರು ಬಟ್ಟೆ ಧರಿಸದಿದ್ದರೂ ಚೆನ್ನಾಗಿ ಕಾಣುತ್ತಾರೆ ಎಂದಿದ್ದಾರೆ. ಈ ಹೇಳಿಕೆ ಇದೀಗ ಹೊತ್ತಿ ಉರಿದುಕೊಂಡಿದೆ.
 

Follow Us:
Download App:
  • android
  • ios