ನವದೆಹಲಿ(ಜೂ.07): ಲಾಕ್‌ಡೌನ್‌ ಸಡಿಲಗೊಂಡ ಬಳಿಕ ಕೊರೋನಾ ವೈರಸ್‌ ಹಾವಳಿ ದೇಶದಲ್ಲಿ ವಿಕೋಪಕ್ಕೆ ಹೋಗಿದೆ ಎಂಬುದನ್ನು ಅಂಕಿ-ಸಂಖ್ಯೆಗಳು ಕೂಡ ದೃಢಪಡಿಸಿವೆ. ಮೇ 1ರಿಂದ ಲಾಕ್‌ಡೌನ್‌ 3.0 ಜಾರಿಯಾದ ಬಳಿಕ ಈ ಒಂದು ತಿಂಗಳ ಅವಧಿಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದೇಶದಲ್ಲಿ ಬರೋಬ್ಬರಿ 2 ಲಕ್ಷದಷ್ಟುಏರಿಕೆಯಾಗಿದೆ!

3ನೇ ಹಂತದ ಲಾಕ್‌ಡೌನ್‌ ಜಾರಿಗೆ ಬಂದ ದಿನವಾದ ಮೇ 1ರವರೆಗೆ ದೇಶದಲ್ಲಿ 35 ಸಾವಿರ ಕೊರೋನಾ ವೈರಸ್‌ ಪ್ರಕರಣಗಳು ದಾಖಲಾಗಿದ್ದವು. ಶನಿವಾರ ಸೋಂಕಿತರ ಸಂಖ್ಯೆ 2.37ಲಕ್ಷಕ್ಕೆ ಹೆಚ್ಚಳವಾಗಿದೆ. ಅಂದರೆ 2.02 ಲಕ್ಷ ಪ್ರಕರಣಗಳು ಈ 1 ತಿಂಗಳು 7 ದಿನದಲ್ಲಿ ವರದಿಯಾಗಿವೆ. ಮೇ 1ರವರೆಗೆ ದೇಶದಲ್ಲಿ ಕೊರೋನಾದಿಂದ 1,150 ಮಂದಿ ಸಾವಿಗೀಡಾಗಿದ್ದರು. ಆದರೆ, ಈಗ ಸಾವಿನ ಸಂಖ್ಯೆ 6,858ಕ್ಕೆ ಏರಿಕೆಯಾಗಿದೆ. ಈ ಒಂದು ತಿಂಗಳ ಅವಧಿಯಲ್ಲಿ 5708 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ರಾಜ್ಯದಲ್ಲಿ 5000 ದಾಟಿದ ಕೊರೋನಾ: ಒಂದೇ ದಿನ 378 ಕೇಸು!

ಮಾ.25ರಿಂದ ಜಾರಿಯಾದ ಲಾಕ್‌ಡೌನ್‌ ಮೇ 30ರವರೆಗೆ ಕಟ್ಟುನಿಟ್ಟಾಗಿ ಜಾರಿಯಲ್ಲಿ ಇದ್ದಿದ್ದರಿಂದ ದೇಶದಲ್ಲಿ ಕೊರೋನಾ ವೈರಸ್‌ ಪ್ರಕರಣಗಳ ಸಂಖ್ಯೆ ನಿಯಂತ್ರಣದಲ್ಲಿ ಇತ್ತು. ಆದರೆ, ವಲಸೆ ಕಾರ್ಮಿಕರ ಓಡಾಟಕ್ಕೆ ಅನುಮತಿ ನೀಡಿದ್ದು ಹಾಗೂ ವಿದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರುವ ಕಾರ್ಯಾಚರಣೆ, ಅಂತರ್‌ ರಾಜ್ಯ ಸಂಚಾರ ಆರಂಭವಾದ ಬಳಿಕ ಭಾರತದಲ್ಲಿ ಕೊರೋನಾ ವೈರಸ್‌ ಪ್ರಕರಣಗಳ ಸಂಖ್ಯೆ ನಿರಂತರ ಏರಿಕೆ ಆಗಿದೆ. ಇದೀಗ ದಿನವೊಂದಕ್ಕೆ 9ರಿಂದ 10 ಸಾವಿರಷ್ಟುಪ್ರಕರಣಗಳು ದಾಖಲಾಗುತ್ತಿವೆ.

ಮಹಾರಾಷ್ಟ್ರ, ದೆಹಲಿ ಹೈರಾಣು

ಇನ್ನು ಇದೇ ಅವಧಿಯಲ್ಲಿ ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 11 ಸಾವಿರದಿಂದ 80 ಸಾವಿರಕ್ಕೆ ಏರಿಕೆಯಾಗಿದೆ. ದೆಹಲಿಯಲ್ಲಿ 3,700ರಿಂದ 26,000ಕ್ಕೆ ಹಾಗೂ ಗುಜರಾತಿನಲ್ಲಿ 4,700ರಿಂದ 19 ಸಾವಿರಕ್ಕೆ ಏರಿಕೆಯಾಗಿದೆ.

ಕರ್ನಾಟಕದಲ್ಲಿ ಸೋಂಕಿತರು ಸಂಖ್ಯೆ ತಿಂಗಳಲ್ಲಿ 4200 ಏರಿಕೆ

ಮೇ 1ರ ವೇಳೆಗೆ ಕರ್ನಾಟಕದಲ್ಲಿ ಕೇವಲ 600 ಕೊರೋನಾ ವೈರಸ್‌ ಪ್ರಕರಣಗಳು ದಾಖಲಾಗಿದ್ದವು. ಆದರೆ, ಜೂ.5ರ ವೇಳೆಗೆ ಕಾರ್ನಾಟಕದಲ್ಲಿ ಕೊರೋನಾ ವೈರಸ್‌ ಪ್ರಕರಣಗಳ ಸಂಖ್ಯೆ 4835ಕ್ಕೆ ಏರಿಕೆಯಾಗಿದೆ. ಶುಕ್ರವಾರ ಒಂದೇ ದಿನ ಅತ್ಯಧಿಕ 515 ಪ್ರಕರಣಗಳು ದಾಖಲಾಗಿವೆ.

75 ದಿನಗಳ ಬಳಿಕ ರಾಜ್ಯ 98% ಅನ್‌ಲಾಕ್‌: ಹೋಟೆಲ್, ಮಾಲ್‌ ಓಪನ್!

ದಿನಾಂಕ ಪ್ರಕರಣ ಸಾವು

ಮೇ 1| 35,000| 1,150

ಜೂ.7| 2,37,867| 6,858

ಅಹಮದಾಬಾದ್‌ನಲ್ಲಿ ಹೆಚ್ಚು, ಬೆಂಗಳೂರಿನಲ್ಲಿ ಕಡಿಮೆ ಸಾವು

ದೇಶದ ಪ್ರಮುಖ ನಗರಗಳ ಪೈಕಿ ಮುಂಬೈ ಹಾಗೂ ದೆಹಲಿಯಲ್ಲಿ ಅತಿ ಹೆಚ್ಚು ಕೊರೋನಾ ವೈರಸ್‌ ಪ್ರಕರಣಗಳು ದಾಖಲಾಗಿರುವ ಹೊರತಾಗಿಯೂ 10 ಲಕ್ಷ ಜನಸಂಖ್ಯೆಗೆ ಹೋಲಿಸಿದರೆ ಗುಜರಾತಿನ ಅಹಮದಾಬಾದ್‌ನಲ್ಲಿ ಇತರ ಎಲ್ಲಾ ನಗರಗಳಿಗಿಂತಲೂ ಸಾವಿನ ಪ್ರಮಾಣ ಅಧಿಕವಾಗಿದೆ. ಬೆಂಗಳೂರಿನಲ್ಲಿ ಸಾವಿನ ಪ್ರಮಾಣ ಅತಿ ಕಡಿಮೆ ಇದೆ. ಅಹಮದಾಬಾದ್‌ನಲ್ಲಿ ಪ್ರತಿ 10 ಲಕ್ಷ ಜನರಲ್ಲಿ 118 ಮಂದಿ ಸಾವಿಗೀಡಾದರೆ, ಬೆಂಗಳೂರಿನಲ್ಲಿ ಈ ಪ್ರಮಾಣ ಕೇವಲ 1ರಷ್ಟಿದೆ. ಉಳಿದಂತೆ ಮುಂಬೈನಲ್ಲಿ 83, ಪುಣೆಯಲ್ಲಿ 55ರಷ್ಟಿದೆ.

ನಗರ ಪ್ರತಿ 10 ಲಕ್ಷಕ್ಕೆ ಸಾವು ಸಾವಿನ ಪ್ರಮಾಣ

ಅಹಮದಾಬಾದ್‌ 118 ಶೇ.6.9

ಮುಂಬೈ 83 ಶೇ.3.1

ಪುಣೆ 55 ಶೇ.4.4

ದೆಹಲಿ 32 ಶೇ.2.6

ಕೋಲ್ಕತಾ 23 6.4

ಚೆನ್ನೈ 16 ಶೇ.0.9

ಸೂರತ್‌ 10 3.9

ಹೈದರಾಬಾದ್‌ 2 1.3

ಬೆಂಗಳೂರು 1 ಶೇ.3.3

ಗುಣಮುಖರಾದವರ ಸಂಖ್ಯೆ ಏರಿಕೆ

ಒಂದೆಡೆ ಕೊರೋನಾ ವೈರಸ್‌ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದರೆ ಅರ್ಧದಷ್ಟುಮಂದಿ ಗುಣಮುಖರಾಗಿರುವುದು ಸಮಾಧಾಕರ ಸಂಗತಿ. ಮೇ1ರವೇಳೆಗೆ 10 ಸಾವಿರ ಮಂದಿಯಷ್ಟೇ ಗುಣಮುರಾಗಿದ್ದರು. ಜೂ.5ರ ವೇಳೆಗೆ ಗುಣಮುಖರಾದವರ ಸಂಖ್ಯೆ 1.12 ಲಕ್ಷಕ್ಕೆ ಏರಿಕೆಯಾಗಿದ್ದು, 1.10 ಲಕ್ಷ ಸಕ್ರಿಯ ಪ್ರಕರಣಗಳಿವೆ.