Asianet Suvarna News Asianet Suvarna News

Lakhimpur Kheri: ಪುತ್ರನ ಬಗ್ಗೆ ಕೇಳಿದ್ದಕ್ಕೆ ಪತ್ರಕರ್ತರ ಹುಚ್ಚರು ಎಂದ ಸಚಿವ ಮಿಶ್ರಾ!

* ಸಚಿವ ಅಜಯ್‌ ಮಿಶ್ರಾ ವಜಾಕ್ಕೆ ವಿಪಕ್ಷಗಳ ಪಟ್ಟು

* ಸದನದ ಬಾವಿಗಿಳಿದು ಭಿತ್ತಿಪತ್ರ ಪ್ರದರ್ಶಿಸಿ ಪ್ರತಿಭಟನೆ

* ವಿಪಕ್ಷಗಳ ಬೇಡಿಕೆ ತಿರಸ್ಕರಿಸಿದ ಆಡಳಿತಾರೂಢ ಬಿಜೆಪಿ

In Lakhimpur Kheri MoS Ajay Kumar Mishra abuses journalist when asked about jailed son pod
Author
Bangalore, First Published Dec 16, 2021, 5:54 AM IST

ನವದೆಹಲಿ(ಡಿ.16): ತಮ್ಮ ಪುತ್ರನ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಆಕ್ರೋಶಗೊಂಡ ಕೇಂದ್ರ ಸಚಿವ ಅಜಯ್‌ ಮಿಶ್ರಾ, ಪತ್ರಕರ್ತರನ್ನು ಹುಚ್ಚರು, ಕಳ್ಳರು ಎಂದು ಹರಿಹಾಯ್ದ ಘಟನೆ ಬುಧವಾರ ಇಲ್ಲಿ ನಡೆದಿದೆ. ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಲಖೀಂಪುರ ಖೇರಿಗೆ ಆಗಮಿಸಿದ್ದ ಮಿಶ್ರಾ ಅವರನ್ನು ಸ್ಥಳೀಯ ಪತ್ರಕರ್ತರೊಬ್ಬರು, ಜೈಲಿನಲ್ಲಿ ಪುತ್ರನ ಭೇಟಿ ಮಾಡಿ ಬಂದ ಬಗ್ಗೆ ಪ್ರಶ್ನಿಸಿದಾಗ, ‘ನಿಮಗೆಲ್ಲಾ ಹುಚ್ಚು ಹಿಡಿದಿದೆಯಾ? ನೀವೆಲ್ಲಾ ಕಳ್ಳರು’ ಎಂದು ಕೂಗಾಡಿದರು.

ಅಲ್ಲದೆ ಮೈಕ್‌ ಆಫ್‌ ಮಾಡುವಂತೆ ಆಗ್ರಹಿಸಿ ಪತ್ರಕರ್ತನೊಬ್ಬನ ಮೇಲೆ ದಾಳಿ ನಡೆಸಿದರು. ಅಜಯ್‌ ಮಿಶ್ರಾರ ಪುತ್ರನ ವಾಹನ ಹರಿದು 4 ರೈತರು ಸಾವನ್ನಪ್ಪಿದ ಘಟನೆ ಲಖೀಂಪುರ ಖೇರಿಯಲ್ಲಿ ನಡೆದಿತ್ತು. ಈ ಪ್ರಕರಣದಲ್ಲಿ ಸಚಿವರ ಪುತ್ರ ಆಶಿಶ್‌ ಮಿಶ್ರಾ ಜೈಲು ಸೇರಿದ್ದಾನೆ.

Lakhimpur Kheri Case: 'ರೈತರ ಸಾವು ಅಪಘಾತವಲ್ಲ, ಪೂರ್ವನಿಯೋಜಿತ ಕೊಲೆ!'

ಸಚಿವ ಅಜಯ್‌ ಮಿಶ್ರಾ ವಜಾಕ್ಕೆ ವಿಪಕ್ಷಗಳ ಪಟ್ಟು

ನಾಲ್ವರು ರೈತರು ಸೇರಿದಂತೆ ಒಟ್ಟಾರೆ 8 ಮಂದಿಯ ಬಲಿಗೆ ಕಾರಣವಾದ ಲಖೀಂಪುರ ಹಿಂಸಾಚಾರ ದುರಂತವು ಪೂರ್ವ ನಿಯೋಜಿತ ಕೃತ್ಯ ಎಂಬ ವಿಶೇಷ ತನಿಖಾ ತಂಡದ ವರದಿಯು ಬುಧವಾರದ ಸಂಸತ್ತಿನಲ್ಲೂ ಪ್ರತಿಧ್ವನಿಸಿದೆ. ಈ ಹಿನ್ನೆಲೆಯಲ್ಲಿ ಬುಧವಾರದ ಲೋಕಸಭೆ ಕಲಾಪವು ಪ್ರತಿಪಕ್ಷ ಮತ್ತು ಆಡಳಿತಾರೂಢ ಸದಸ್ಯರ ಗದ್ದಲ-ಕೋಲಾಹಲಕ್ಕೆ ಬಲಿಯಾಗಿದೆ.

ಎಸ್‌ಐಟಿ ವರದಿ ಪ್ರಸ್ತಾಪಿಸಿದ ವಿಪಕ್ಷಗಳ ಸದಸ್ಯರು, ಈ ಸಂಬಂಧ ಚರ್ಚೆಗೆ ಅವಕಾಶ ನೀಡಬೇಕು. ಅಲ್ಲದೆ ಘಟನೆಯ ಆರೋಪಿ ಆಶಿಶ್‌ ಮಿತ್ರಾನ ತಂದೆ ಅಜಯ್‌ ಮಿಶ್ರಾ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು.

ಆದರೆ ವಿಪಕ್ಷಗಳ ಕೋರಿಕೆಯನ್ನು ಸರ್ಕಾರ ತಿರಸ್ಕರಿಸಿತು. ಈ ಪ್ರಕರಣದ ಆರೋಪಿಯಾದ ಸಚಿವರ ಪುತ್ರ ಈಗಾಗಲೇ ಜೈಲಿನಲ್ಲಿದ್ದಾನೆ. ಸುಪ್ರೀಂ ಕೋರ್ಟ್‌ ಕಣ್ಗಾವಲಿನಲ್ಲಿ ತನಿಖೆ ನಡೆಯುತ್ತಿದೆ. ಆದರೆ ಸಚಿವರ ರಾಜೀನಾಮೆ ಪಡೆಯಬೇಕು ಎಂಬ ಪ್ರತಿಪಕ್ಷಗಳ ಈ ಒತ್ತಾಯವು ಸರಿಯಲ್ಲ ಎಂದು ಸಚಿವ ಪಿಯೂಶ್‌ ಗೋಯೆಲ್‌ ವಿಪಕ್ಷಗಳ ವಿರುದ್ಧ ಕಿಡಿಕಾರಿದರು.

Farmer Protest : ಪ್ರಧಾನಿ ಬೇಡಿಕೆಗೆ ಒಪ್ಪಿದರೆ ಹೋರಾಟ ವಾಪಸ್‌: ಟಿಕಾಯತ್‌

ಲಖೀಂಪುರ ಖೇರಿ ಹಿಂಸಾಚಾರ ಕುರಿತಾಗಿ ಸಂಸದ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್‌ ಸದಸ್ಯರು ನಿಲುವಳಿ ಸೂಚನೆ ಮಂಡಿಸಿದರು. ಆದಾಗ್ಯೂ, ಪ್ರಶ್ನೋತ್ತರ ಕಲಾಪ ಮುಂದುವರಿಯಿತು. ಇದರಿಂದ ಕೆರಳಿದ ಕಾಂಗ್ರೆಸ್ಸಿಗರು ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆಗಿಳಿದರು. ಈ ವೇಳೆ ವಿಪಕ್ಷ ಸದಸ್ಯರು ಸದನದ ಬಾವಿಯಲ್ಲಿ ಗುಂಪಾಗಿ ಸೇರಿದ್ದಾರೆ. ದಯಮಾಡಿ ಅವರಿಗೆ ಕೊರೋನಾ ಮಾರ್ಗಸೂಚಿಯಂತೆ ಮಾಸ್ಕ್‌ ಧರಿಸಲು ಸೂಚಿಸುವಂತೆ ಸ್ಪೀಕರ್‌ ಅವರಲ್ಲಿ ಸಚಿವ ಪ್ರಹ್ಲಾದ್‌ ಜೋಶಿ ಅವರ ಮನವಿಯು ಗಮನ ಸೆಳೆಯಿತು.

ಈ ವೇಳೆ ಸ್ಪೀಕರ್‌ ಸ್ಥಾನ ಅಲಂಕರಿಸಿದ್ದ ರಾಜೇಂದ್ರ ಅಗರ್‌ವಾಲ್‌ ಅವರು, ‘ನಿಮ್ಮದೇ ಒತ್ತಾಯದ ಬಹುಮುಖ್ಯವಾದ ಬೆಲೆ ಏರಿಕೆ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಆದರೆ ಇಂಥ ಸಂದರ್ಭದಲ್ಲಿ ಪ್ರತಿಭಟನೆ ತರವಲ್ಲ. ದಯಮಾಡಿ ನಿಮ್ಮ ಸ್ಥಾನಕ್ಕೆ ಹೋಗಿ ಕುಳಿತುಕೊಳ್ಳಿ’ ಎಂದು ವಿಪಕ್ಷಗಳ ನಾಯಕರಲ್ಲಿ ಮನವಿ ಮಾಡಿದರು. ಆದರೆ ಏನೂ ಪ್ರಯೋಜನವಾಗಲಿಲ್ಲ.

ಈ ಬಗ್ಗೆ ಸಂಸತ್ತಿನ ಹೊರಗೆ ಮಾತನಾಡಿದ ರಾಹುಲ್‌ ಗಾಂಧಿ, ‘ಅಜಯ್‌ ಮಿಶ್ರಾ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಬೇಕು ಅಥವಾ ಅವರೇ ರಾಜೀನಾಮೆ ಸಲ್ಲಿಸಬೇಕು. ತನ್ಮೂಲಕ ಲಖೀಂಪುರ ಹಿಂಸಾಚಾರದ ಸಂತ್ರಸ್ತರ ಕುಟುಂಬಗಳಿಗೆ ನ್ಯಾಯ ಒದಗಿಸಬೇಕು ಎಂಬುದು ನಮ್ಮ ಒತ್ತಾಯ. ಆದರೆ ಸರ್ಕಾರ ನಮ್ಮ ಧ್ವನಿಯನ್ನು ಆಲಿಸುತ್ತಿಲ್ಲ. ಇದೇ ಕಾರಣಕ್ಕೆ ಸಂಸತ್ತಿನ ಕಲಾಪಕ್ಕೆ ಅಡ್ಡಿಯಾಗುತ್ತಿದೆ’ ಎಂದು ಹೇಳಿದರು.

Farm Laws| 700 ಮಂದಿ ಪ್ರಾಣ ಉಳಿಯುತ್ತಿತ್ತು: ಮೋದಿಗೆ ಬಿಜೆಪಿ ಸಂಸದ ವರುಣ್ ಗಾಂಧಿ ಪತ್ರ!

ರಾಜ್ಯಸಭೆಯಲ್ಲಿ ವಿಪಕ್ಷಗಳ ಗದ್ದಲ ಮುಂದುವರಿಕೆ

ಇನ್ನು ರಾಜ್ಯಸಭೆಯಲ್ಲೂ ವಿಪಕ್ಷಗಳ 12 ಸದಸ್ಯರ ಮೇಲಿನ ಅಮಾನತು ಆದೇಶ ಹಿಂಪಡೆಯಬೇಕು ಎಂದು ಒತ್ತಾಯಿಸಿ ಪ್ರತಿಪಕ್ಷ ನಾಯಕರು ಪ್ರತಿಭಟನೆ ಮುಂದುವರಿಸಿದರು. ಈ ಹಿನ್ನೆಲೆಯಲ್ಲಿ ರಾಜ್ಯಸಭೆ ಕಲಾಪವನ್ನೂ ಸಭಾಪತಿ ವೆಂಕಯ್ಯನಾಯ್ಡು ಅವರು ಗುರುವಾರಕ್ಕೆ ಮುಂದೂಡಿದರು.

Follow Us:
Download App:
  • android
  • ios