Asianet Suvarna News Asianet Suvarna News

Farm Laws| 700 ಮಂದಿ ಪ್ರಾಣ ಉಳಿಯುತ್ತಿತ್ತು: ಮೋದಿಗೆ ಬಿಜೆಪಿ ಸಂಸದ ವರುಣ್ ಗಾಂಧಿ ಪತ್ರ!

* ಮೂರೂ ಕೃಷಿ ಕಾಯ್ದೆ ಹಿಂಪಡೆಯುವುದಾಗಿ ಪಿಎಂ ಮೋದಿ ಘೋಷಣೆ

* ಮೋದಿಗೆ ಪತ್ರ ಬರೆದ ವರುಣ್ ಗಾಂಧಿಇ

* ಪ್ರಾಣ ಕಳೆದ 700 ರೈತರಿಗೆ ಪರಿಹಾರ ನೀಡುವಂತೆ ಮನವಿ

700 Lives BJP Varun Gandhi Needles PM On Delaying Farm Laws Rollback pod
Author
Bangalore, First Published Nov 20, 2021, 3:35 PM IST

ನವದೆಹಲಿ(ನ.20): ಕೃಷಿ ಕಾನೂನುಗಳನ್ನು (Farm laws) ಹಿಂಪಡೆಯುವ ಪ್ರಧಾನಿ ಮೋದಿಯವರ ಘೋಷಣೆಯನ್ನು ಬಿಜೆಪಿ ಸಂಸದ ವರುಣ್ ಗಾಂಧಿ (BJP MP Varun Gandhi) ಕೂಡ ಸ್ವಾಗತಿಸಿದ್ದಾರೆ. ಈ ಕುರಿತು ಪತ್ರವನ್ನೂ ಬರೆದಿರುವ ಅವರು, ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯುವ ಘೋಷಣೆಯನ್ನು ಸ್ವಾಗತಿಸುತ್ತೇನೆ ಎಂದು ಹೇಳಿದ್ದಾರೆ. ರೈತ ಬಂಧುಗಳು ಧರಣಿ ಮುಗಿಸಿ ಗೌರವಯುತವಾಗಿ ಮನೆಗೆ ಮರಳುವಂತೆ ಎಂಎಸ್‌ಪಿ (MSP) ಮತ್ತಿತರ ವಿಷಯಗಳ ಕುರಿತು ಕಾನೂನು ರೂಪಿಸುವ ಬೇಡಿಕೆಯನ್ನು ಕೂಡ ತಕ್ಷಣವೇ ತೀರ್ಮಾನಿಸಬೇಕೆಂಬುದು ನನ್ನ ವಿನಮ್ರ ವಿನಂತಿ.

ಈ ಪತ್ರದಲ್ಲಿ ಲಖಿಂಪುರ ಖೇರಿ (Lakhimpur Kheri) ಘಟನೆ ಪ್ರಜಾಪ್ರಭುತ್ವಕ್ಕೆ ಕಳಂಕವಾಗಿದೆ ಎಂದು ಬರೆದಿದ್ದಾರೆ. ಈ ಸಂಬಂಧ ಸಚಿವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇದೇ ವೇಳೆ ರಾಷ್ಟ್ರದ ಹಿತದೃಷ್ಟಿಯಿಂದ ಕನಿಷ್ಠ ಬೆಂಬಲ ಬೆಲೆಯ ಶಾಸನಬದ್ಧ ಖಾತರಿ ನೀಡಬೇಕೆಂಬ ರೈತರ ಬೇಡಿಕೆಯನ್ನು ಸರ್ಕಾರ ಒಪ್ಪಿಕೊಳ್ಳಬೇಕು. ಈ ಚಳವಳಿಯಲ್ಲಿ 700 ರೈತರು ಹುತಾತ್ಮರಾಗಿದ್ದು, ಅವರ ಕುಟುಂಬಕ್ಕೂ ಒಂದು ಕೋಟಿ ಪರಿಹಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಏನಿದು C2+50% ಫಾರ್ಮುಲಾ?

ಕೃಷಿ ವಿಜ್ಞಾನಿ ಎಂ.ಎಸ್.ಸ್ವಾಮಿನಾಥನ್ ಅವರ ಅಧ್ಯಕ್ಷತೆಯಲ್ಲಿ ರಚಿತವಾದ ರೈತರ ರಾಷ್ಟ್ರೀಯ ಆಯೋಗವು ತನ್ನ ವರದಿಯಲ್ಲಿ C2+50% ಸೂತ್ರದ ಅಡಿಯಲ್ಲಿ ರೈತರಿಗೆ ಕನಿಷ್ಠ ಬೆಂಬಲ ಬೆಲೆ (MSP) ನೀಡಬೇಕು ಎಂದು ಶಿಫಾರಸು ಮಾಡಿದೆ. ಇದರರ್ಥ ಬೆಳೆಯ ಒಟ್ಟು ವೆಚ್ಚ (C2) ಮತ್ತು ಅದರ ಮೇಲೆ 50 ಪ್ರತಿಶತ ಲಾಭ.

ವರುಣ್ ಗಾಂಧಿ ರೈತರ ಸಮಸ್ಯೆಗಳ ಬಗ್ಗೆ ನಿರಂತರವಾಗಿ ಧ್ವಿ ಎತ್ತುತ್ತಲೇ ಬಂದಿದ್ದು, ರೈತರನ್ನು ಬೆಂಬಲಿಸಿ ಟ್ವೀಟ್ ಮಾಡುವುದನ್ನು ಮುಂದುವರೆಸಿದ್ದಾರೆ. ಎಂಎಸ್‌ಪಿಯ ಯಾವುದೇ ಶಾಸನಬದ್ಧ ಗ್ಯಾರಂಟಿ ಇರುವುದಿಲ್ಲವೋ, ಅಲ್ಲಿಯವರೆಗೆ ಮಂಡಿಗಳಲ್ಲಿ ರೈತರನ್ನು ಶೋಷಣೆ ಮಾಡುವುದನ್ನು ಮುಂದುವರಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಲಖಿಂಪುರ ಖೇರಿ ಘಟನೆಯ ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು. ಇದರೊಂದಿಗೆ ತಮ್ಮ ಪಕ್ಷದ ನಿರ್ಧಾರವನ್ನು ಪ್ರಶ್ನಿಸಿದ ಅವರು, ಕೃಷಿ ನೀತಿಯ ಬಗ್ಗೆ ಮರುಚಿಂತನೆ ಇಂದಿನ ಬಹುದೊಡ್ಡ ಅಗತ್ಯವಾಗಿದೆ ಎಂದರು. ಅಷ್ಟೇ ಅಲ್ಲ, ಯೋಗಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಇಂತಹ ಸರ್ಕಾರಕ್ಕೆ ಅರ್ಥವೇನು ಎಂದು ಹೇಳಿದ್ದಾರೆ. ಪಿಲಿಭಿತ್‌ನಲ್ಲಿ ಅತಿವೃಷ್ಟಿ ಸಂದರ್ಭದಲ್ಲಿ ಆದ ಪ್ರವಾಹದ ಬಗ್ಗೆ ತಮ್ಮದೇ ಪಕ್ಷದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಜನಸಾಮಾನ್ಯರು ತಮ್ಮ ಸ್ವಂತ ಕೈಗಳಿಂದ ಬದುಕಿದರೆ, ಅಂತಹ ಸರ್ಕಾರದಿಂದ ಏನು ಪ್ರಯೋಜನ ಎಂದು ಅವರು ಹೇಳಿದರು.

Follow Us:
Download App:
  • android
  • ios