ಕೊಚ್ಚಿ(ಸೆ.17): ಜನರಿಗೆ ಕೊರೋನಾ ಸೋಂಕು ಬಂದಿದೆಯೇ ಎಂದು ತಿಳಿದುಕೊಳ್ಳಲು ಕೇರಳ ಸರ್ಕಾರ ಕಾಫಿ ಪೌಡರ್‌ ಪರೀಕ್ಷೆಯ ಮೊರೆ ಹೋಗಿದೆ.

ವ್ಯಕ್ತಿ, ವಾಸನೆ ಗ್ರಹಣ ಶಕ್ತಿಯನ್ನು ಕಳೆದುಕೊಳ್ಳುವುದು ಕೊರೋನಾದ ಲಕ್ಷಣದಲ್ಲಿ ಒಂದು. ಹೀಗಾಗಿ ಕಾಫಿ ಪೌಡರ್‌ ಅನ್ನು ಮೂಸಿದಾಗ ಯಾರಿಗೆ ವಾಸನೆ ಗೊತ್ತಾಗುವುದಿಲ್ಲವೋ ಅಂಥವರಿಗೆ ಕೊರೋನಾ ಸೋಂಕು ತಲುಲಿದೆ ಎಂದು ಅರ್ಥ. ಜೈಲಿನಲ್ಲಿ ಕೈದಿಗಳಿಗೆ ಕೊರೋನಾ ಬಂದಿದೆಯೇ ಎಂದು ತಿಳಿಯಲು ಆರೋಗ್ಯ ಸೇವೆಗಳ ನಿರ್ದೇಶನಾಲಯ ಕಾಫಿ ಪೌಡರ್‌ ಟೆಸ್ಟ್‌ಗೆ ಸೂಚನೆ ನೀಡಿದೆ.

ಈ ಪರೀಕ್ಷೆಗೆ ಒಳಗಾದ 4,298 ಕೈದಿಗಳ ಪೈಕಿ 683 ಮಂದಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ. ಕಾಫಿ ಪೌಡರ್‌ ಪರೀಕ್ಷೆಯ ವೇಳೆ ರೋಗದ ಲಕ್ಷಣ ಕಾಣಿಸಿಕೊಂಡವರಿಗೆ ಕೊರೋನಾ ಪರೀಕ್ಷೆ ನಡೆಸಲಾಗುತ್ತದೆ.

ಒಂದು ವೇಳೆ ಫಲಿತಾಂಶ ನೆಗೆಟೀವ್‌ ಬಂದರೂ ರೋಗ ಲಕ್ಷಣ ದೂರ ಆಗುವವರೆಗೆ ಅವರ ಆರೋಗ್ಯದ ಮೇಲೆ ನಿಗಾವಹಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.