ನವದೆಹಲಿ(ಜೂ.10): ಮಂಗಳವಾರ ದೇಶಾದ್ಯಂತ 7721 ಹೊಸ ಕೊರೋನಾ ಪ್ರಕರಣಗಳು ದೃಢಪಟ್ಟಿವೆ. ಇದರೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ ಸಂಖ್ಯೆ 265498ಕ್ಕೆ ಏರಿದೆ. ಜೊತೆಗೆ 245 ಸೋಂಕಿತರು ಸಾವನಪ್ಪಿದ್ದು, ಒಟ್ಟು ಸಾವಿನ ಪ್ರಮಾಣ 7710ಕ್ಕೆ ತಲುಪಿದೆ. ಇದೆಲ್ಲದರ ನಡುವೆ ಈವರೆಗೆ ವೈರಸ್‌ಗೆ ತುತ್ತಾಗಿದ್ದ 133267 ಜನ ಗುಣಮುಖರಾಗಿ ಮನೆಗೆ ತೆರಳಿದ್ದಾರೆ.

ಮಂಗಳವಾರ ಮಹಾರಾಷ್ಟ್ರದಲ್ಲಿ 2251 ಕೇಸು ಪತ್ತೆಯಾಗಿದ್ದು, ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 90787ಕ್ಕೆ ತಲುಪಿದೆ. ಉಳಿದಂತೆ ತಮಿಳುನಾಡಿನಲ್ಲಿ 1685, ದೆಹಲಿಯಲ್ಲಿ 1007 ಹೊಸ ಪ್ರಕರಣ ದಾಖಲಾಗಿದೆ.

ಕೊರೋನಾಗೆ ಡಿಎಂಕೆ ಶಾಸಕ ಬಲಿ; ಹುಟ್ಟುಹಬ್ಬದಂದೇ ಕೊನೆಯುಸಿರೆಳೆದ ಅನ್ಬಳಗನ್!

ಜುಲೈ ಅಂತ್ಯಕ್ಕೆ ದಿಲ್ಲಿಯಲ್ಲಿ 5.5 ಲಕ್ಷ ಸೋಂಕಿತರು

ನವದೆಹಲಿ: ಜುಲೈ ತಿಂಗಳ ಅಂತ್ಯದ ವೇಳೆ ದೆಹಲಿಯೊಂದರಲ್ಲೇ ಕೊರೋನಾ ಸೋಂಕಿತರ ಪ್ರಮಾಣ 5.5 ಲಕ್ಷಕ್ಕೆ ತಲುಪುವ ಸಾಧ್ಯತೆ ಇದೆ ಎಂದು ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಹೇಳಿದ್ದಾರೆ. ಮಂಗಳವಾರ ಈ ಕುರಿತು ಮಾಹಿತಿ ನೀಡಿರುವ ಅವರು, ಪ್ರಸಕ್ತ 29000ದಷ್ಟಿರುವ ಸೋಂಕಿತರ ಸಂಖ್ಯೆ ಜೂನ್‌ 15ರವೇಳೆಗೆ 44000ಕ್ಕೆ, ಜೂನ್‌ 30ರವೇಳೆಗೆ 1 ಲಕ್ಷಕ್ಕೆ ತಲುಪುವ ಸಾಧ್ಯತೆ ಇದೆ. ಇದೇ ವೇಗದಲ್ಲಿ ಸೋಂಕಿತರು ಏರಿಕೆಯಾಗುತ್ತಾ ಹೋದಲ್ಲಿ ಜು.15ರವೇಳೆಗೆ 2.15 ಲಕ್ಷ ಮತ್ತು ಜು.31ರ ವೇಳೆಗೆ 5.5 ಲಕ್ಷಕ್ಕಿಂತ ಹೆಚ್ಚು ಪ್ರಕರಣಗಳು ದಾಖಲಾಗುವ ಸಾಧ್ಯತೆ ಇದೆ. ಅಂಥ ಸಂದರ್ಭದಲ್ಲಿ ದೆಹಲಿಗರ ಸೋಂಕು ಚಿಕಿತ್ಸೆಗಾಗಿ ಆಸ್ಪತ್ರೆಗಳಲ್ಲಿ 80 ಸಾವಿರಕ್ಕೂ ಹೆಚ್ಚು ಬೆಡ್‌ಗಳ ಅನಿವಾರ್ಯತೆ ಎದುರಾಗಲಿದೆ.

ಬಾಗಲಕೋಟೆ: ಮಹಾರಾಷ್ಟ್ರದಿಂದ ರೈಲ್ವೆ ಮೂಲಕ ಬಂದ ಮಹಿಳೆಗೆ ಕೊರೋನಾ ಸೋಂಕು

ಇದೇ ಕಾರಣಕ್ಕಾಗಿ ದಿಲ್ಲಿಯಲ್ಲಿ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳು ದೆಹಲಿ ನಿವಾಸಿಗಳಿಗಾಗಿ ಮಾತ್ರವೇ ಮೀಸಲಿಡಲು ಅನುವಾಗುವ ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ, ಈ ಆದೇಶವನ್ನು ಲೆಫ್ಟಿನೆಂಟ್‌ ಗವರ್ನರ್‌ ಅನಿಲ್‌ ಬೈಜಲ್‌ ರದ್ದುಗೊಳಿಸಿದ್ದಾರೆ. ಸರ್ಕಾರದ ಆದೇಶವನ್ನು ರದ್ದುಗೊಳಿಸಿದ ಕ್ರಮ ಮರುಶೀಲನೆಗೆ ಬೈಜಲ್‌ ಅವರು ನಿರಾಕರಿಸಿದ್ದಾರೆ. ಇದರಿಂದ ಮುಂದಿನ ದಿನಗಳಲ್ಲಿ ದೆಹಲಿಗರಿಗೆ ವಿಪತ್ತು ಕಾದಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.