Asianet Suvarna News Asianet Suvarna News

ದೇವಸ್ಥಾನದ ಆವರಣದ ಒಳಗೆ ಮಟನ್‌ ಕುರ್ಮಾ ಡೆಲಿವರಿ ಮಾಡಲು ನಿರಾಕರಿಸಿದ ವ್ಯಕ್ತಿಯನ್ನು ವಜಾ ಮಾಡಿದ ಸ್ವಿಗ್ಗಿ!

ದೇವಸ್ಥಾನದ ಆವರಣದ ಒಳಗೆ ಮಟನ್‌ ಕುರ್ಮಾ ಆರ್ಡರ್‌ಅನ್ನು ಡೆಲಿವರಿ ಮಾಡಲು ನಿರಾಕರಿಸಿದ್ದಕ್ಕೆ ಡೆಲಿವರಿ ಬಾಯ್‌ಅನ್ನು ಸ್ವಿಗ್ಗಿ ಕಂಪನಿ ವಜಾ ಮಾಡಿದ ಘಟನೆ ದೆಹಲಿಯಲ್ಲಿ ನಡೆದಿದೆ. ಇದರ ಬೆನ್ನಲ್ಲಿಯೇ ದೇವಸ್ಥಾನದ ಅರ್ಚಕರು ಡೆಲಿವರಿ ಬಾಯ್‌ಗೆ  ಸನ್ಮಾನವನ್ನೂ ಮಾಡಿದ್ದಾರೆ.
 

In Delhi Swiggy fired delivery boy for refusing to deliver mutton in temple premises priests honored san
Author
First Published Mar 7, 2023, 7:03 PM IST

ನವದೆಹಲಿ (ಮಾ.7): ದೇವಸ್ಥಾನದ ಆವರಣದ ಒಳಗೆ ಮಟನ್‌ ಕುರ್ಮಾ ಆರ್ಡರ್‌ಅನ್ನು ಡೆಲಿವರಿ ಮಾಡಲು ನಿರಾಕರಿಸಿದ ವ್ಯಕ್ತಿಯನ್ನು ಸ್ವಿಗ್ಗಿ ಕೆಲಸದಿಂದ ಕಿತ್ತು ಹಾಕಿದೆ. ಕಳೆದ ವಾರ ನಡೆದ ಘಟನೆ ಇದಾಗಿದೆ. ದೆಹಲಿಯ ಕಶ್ಮೆರೆ ಗೇಟ್‌ ಬಳಿಕ ಇರುವ ಪ್ರಸಿದ್ಧ ಮರ್ಗಟ್‌ ಬಾಬಾ ಹನುಮಾನ್‌ ದೇವಸ್ಥಾನದ ಆವರಣದ ಒಳಗಿನ ಲೊಕೇಷನ್‌ನಿಂದ ಸ್ವಿಗ್ಗಿ ಅಪ್ಲಿಕೇಶನ್‌ನಲ್ಲಿ ಮಟನ್‌ ಕುರ್ಮಾ ಆರ್ಡರ್‌ ಮಾಡಲಾಗಿತ್ತು. ಆರ್ಡರ್‌ ತೆಗೆದುಕೊಂಡು ಬಂದಿದ್ದ ಡೆಲಿವರಿ ಬಾಯ್‌ ಸಚಿನ್‌ ಪಾಂಚಾಲ್‌ಗೆ ಸ್ಥಳಕ್ಕೆ ಬಂದ ಬಳಿಕ, ಮಟನ್‌ ಕುರ್ಮಾವನ್ನು ತೆಗೆದುಕೊಂಡು ದೇವಸ್ಥಾನದ ಅವರಣದ ಒಳಗೆ ಹೋಗಬೇಕು ಅನ್ನೋದು ಗೊತ್ತಾಗಿತ್ತು. ಇದು ಧಾರ್ಮಿಕ ಸ್ಥಳ ಇದರ ಒಳಗೆ ಮಾಂಸಾಹಾರವನ್ನು ನಾನು ಡೆಲಿವರಿ ಮಾಡೋದಿಲ್ಲ ಎಂದು ಆತ ಗ್ರಾಹಕನಿಗೆ ಹಾಗೂ ಕಂಪನಿಗೆ ಹೇಳಿದ್ದಕ್ಕೆ ಸ್ವಿಗ್ಗಿ ಸಚಿನ್‌ ಪಾಂಚಾಲ್‌ರನ್ನು ಕೆಲಸದಿಂದ ತೆಗೆದುಹಾಕಿದೆ. ಇನ್ನೊಂದೆಡೆ, ಈ ವಿಷಯವನ್ನು ತಿಳಿದ ಬಳಿಕ ದೇವಸ್ಥಾನದ ಅರ್ಚಕರು ಸಚಿನ್‌ ಪಾಂಚಾಲ್‌ರನ್ನು ಕರೆಸಿ ಸನ್ಮಾನ ಮಾಡಿದ್ದಾರೆ. ಮಟನ್‌ ಕುರ್ಮಾ ತೆಗೆದುಕೊಂಡು ಬಂದು ದೇವಸ್ಥಾನದ ಆವರಣದ ಹೊರಗಡೆ ನಿಂತುಕೊಂಡಿದ್ದ ಸಚಿನ್‌ ಪಾಂಚಾಲ್‌, ಇದನ್ನು ಆರ್ಡರ್‌ ಮಾಡಿದ್ದ ವ್ಯಕ್ತಿಗೆ ಕರೆ ಮಾಡಿ ಅರ್ಡರ್‌ ತೆಗೆದುಕೊಳ್ಳುವಂತೆ ಹೇಳಿದ್ದರು. ಇದು ದೇವಸ್ಥಾನದ ಆವರಣ ಇದನ್ನು ತೆಗೆದುಕೊಂಡು ಒಳಗೆ ಬರಲು ನನ್ನ ಮನಸ್ಸು ಒಪ್ಪುತ್ತಿಲ್ಲ ಎಂದಿದ್ದರು. ಆದರೆ, ಆರ್ಡರ್‌ ಮಾಡಿದ ವ್ಯಕ್ತಿ, ನಾನು ಹೊರಗೆ ಬರಲು ಸಾಧ್ಯವಿಲ್ಲ, ನೀವೇ ಒಳಗೆ ಬಂದು ತಂದುಕೊಡಿ ಎಂದು ಹೇಳಿದ್ದ.

 

ದೇವಸ್ಥಾನದ ಆವರಣದ ಕಬ್ಬಿಣದ ಬಾರ್ ಗೇಟ್‌ಗಳ ಹೊರಗೆ ಸಚಿನ್‌ ಪಾಂಚಾಲ್‌ ಕೈಯಲ್ಲಿ ಮಟನ್ ಕುರ್ಮಾ ಆರ್ಡರ್‌ ಹಿಡಿದು ನಿಂತಿದ್ದನ್ನು ಯಾರೋ ವಿಡಿಯೋ ಮಾಡಿ ಸೋಶಿಯಲ್‌ ಮೀಡಿಯಾದಲ್ಲಿ ಹಾಕಿದ್ದಾರೆ. ಡೆಲಿವರಿ ವಿಳಾಸದಲ್ಲಿ ರಾಮ್‌ ಕಚೋರಿ ವಾಲಾ, ಯಮುನಾ ಬಜಾರ್‌, ಹನುಮಾನ್‌ ಮಂದಿರ ಎಂದು ತೋರಿಸಿದೆ. ಮಾರ್ಚ್‌ 1 ರಂದು ಈ ಘಟನೆ ನಡೆದಿದ್ದು, ವಿಡಿಯೋ ವೈರಲ್‌ ಆದ ಬೆನ್ನಲ್ಲಿಯೇ ಹಿಂದು ಪರ ಸಂಘಟನೆಗಳು ರಾಮ್‌ ಕಚೋರಿ ವಾಲಾ ವಿಳಾಸದ ಅಂಗಡಿಗೆ ನುಗ್ಗಿ ಅದನ್ನು ಬಂದ್‌ ಮಾಡಿಸಿವೆ.

ಕೆಲವೊಂದು ವರದಿಯ ಪ್ರಕಾರ, ನಿಗದಿತ ವಿಳಾಸಕ್ಕೆ ಆಹಾರ ಡೆಲಿವರಿ ಮಾಡದ ಕಾರಣಕ್ಕೆ ಸಚಿನ್‌ ಪಾಂಚಾಲ್‌ರನ್ನು ಸ್ವಿಗ್ಗಿ ಕೆಲಸದಿಂದ ಕಿತ್ತುಹಾಕಿದೆ ಎಂದು ಹೇಳಿದ್ದರೆ, ಇನ್ನೂ ಕೆಲವು ವರದಿಗಳ ಪ್ರಕಾರ, ಡೆಲಿವರಿ ಬಾಯ್‌ ಸಚಿನ್‌ ಪಾಂಚಾಲ್‌ರನ್ನು ಕೆಲಸದಿಂದ ತೆಗೆದುಹಾಕಲಾಗಿಲ್ಲ ಎಂದಿದೆ.  ಘಟನೆಯ ಕುರಿತು ಮಾತನಾಡಿರುವ ಸಚಿನ್‌ ಪಾಂಚಾಲ್‌, 'ಕೆಲಸ ಇಂದಲ್ಲ ನಾಳೆ ಸಿಗುತ್ತದೆ. ನನಗೆ ನನಗೆ ಧರ್ಮದ ಆಚರಣೆಯೂ ಮುಖ್ಯ. ನನ್ನ ಪರಿವಾರದವರ ಹೊಟ್ಟೆ ತುಂಬಿಸುವ ಸಲುವಾಗಿ ನನ್ನ ಸನಾತನ ಧರ್ಮದ ಅಣ್ಣ ತಮ್ಮಂದಿರರಿಗೆ ನೋವು ಉಂಟು ಮಾಡುವ ಕೆಲಸ ಮಾಡಲು ಸಾಧ್ಯವಿಲ್ಲ' ಎಂದು ಪ್ರತಿಕ್ರಿಯಿಸಿದ್ದಾರೆ.

ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ನಿಂದ ಸ್ಯಾನಿಟರಿ ಪ್ಯಾಡ್‌ ಆರ್ಡರ್ ಮಾಡಿದ ಮಹಿಳೆ, ಬ್ಯಾಗ್‌ನಲ್ಲಿ ಇದ್ದಿದ್ದೇ ಬೇರೆ!

ಅದಲ್ಲದೆ, ಮಟನ್‌ ಕುರ್ಮಾ ಡೆಲಿವರಿ ಕ್ಷಣದ ಬಗ್ಗೆಯೂ ಅವರು ವಿವರಿಸಿದ್ದಾರೆ. ನಾನು ಆಹಾರ ತೆಗೆದುಕೊಂಡು ಹೋದಾಗ ಅದರ, ಸರಿಯಾದ ವಿಳಾಸ ದೇವಸ್ಥಾನ ಆವರಣದ ಒಳಗೆ ಎಂದು ತೋರಿಸಿತ್ತಿತ್ತು. ಬಹಳ ವರ್ಷಗಳಿಂದ ಸಂಪ್ರದಾಯ ಪಾಲನೆ ನಡೆಯುತ್ತಿದೆ. ಬಹಳ ಶ್ರೇಷ್ಠ ದೇವಸ್ಥಾನ. ಆದರೆ, ದೇವಸ್ಥಾನದ ಆವರಣದ ಒಳಗೆ ಮಾಂಸವನ್ನು ತೆಗೆದುಕೊಂಡು ಹೋಗಬೇಕಾದ ಅನಿವಾರ್ಯತೆಗೆ ನಾನು ಸಿಲುಕಿದ್ದೆ ಎಂದು ಸಚಿನ್‌ ಹೇಳಿದ್ದಾರೆ.

380 ಉದ್ಯೋಗಿಗಳನ್ನು ವಜಾಗೊಳಿಸಿದ ಸ್ವಿಗ್ಗಿ: ಸಂಸ್ಥೆಯ ಸಿಇಒ ಬರೆದ ಭಾವುಕ ಪತ್ರ ಇಲ್ಲಿದೆ

ಆರ್ಡರ್‌ ಮಾಡಿದ ಸ್ಥಳದಲ್ಲಿ ಪ್ರತಿದಿನ ಕಚೋರಿ ಹಾಗೂ ಸಿಹಿಗಳನ್ನು ತಯಾರಿಸಲಾಗುತ್ತದೆ. ಇದನ್ನು ಪ್ರಸಾದವಾಗಿ ಹನುಮಂತನಿಗೆ ನೀಡಲಾಗುತ್ತದೆ ಆ ಕಾರಣಕ್ಕಾಗಿ ಅಲ್ಲಿ ಮಾಂಸಾಹಾರ ಡೆಲಿವರಿ ಮಾಡಲು  ಸಾಧ್ಯವಿಲ್ಲ ಎಂದು ಸಚಿನ್‌ ಪಾಂಚಾಲ್‌ ಗ್ರಾಹಕನಿಗೆ ಹಾಗೂ ಕಸ್ಟಮರ್‌ ಕೇರ್‌ ಅಧಿಕಾರಿಗೆ ತಿಳಿಸಿದ್ದ. ಇನ್ನೊಂದೆಡೆ ಕಸ್ಟಮರ್‌ ಕೇರ್‌ ಅಧಿಕಾರಿ, ಗ್ರಾಹಕ ಹೇಳಿದ ಸ್ಥಳಕ್ಕೆ ಆರ್ಡರ್‌ ನೀಡುವುದು ನಮ್ಮ ನಿಯಮ ಎಂದಿದ್ದರು. ಇದರ ನಡುವೆ ಈ ಎಲ್ಲಾ ವಿಚಾರ ಗೊತ್ತಾಗಿ ದೇವಸ್ಥಾನದ ಅರ್ಚಕರು ಸಚಿನ್‌ ಪಾಂಚಾಲ್‌ರನ್ನು ಸನ್ಮಾನಿಸಿದ್ದಾರೆ.

Follow Us:
Download App:
  • android
  • ios